ಸೂಚನೆ :

ತೇಜಿಗಳುಜನ್ಮಿಸಿದಲಕ್ಷಣಮ
ತ್ತೋಜೆಯಲಿಗ್ರಹಿಕಿಗೆವಿಲಕ್ಷಣ
ಮಾಜಿಕೊಂಡಿಹಗುಪ್ತಖೋಡಿಗಳನ್ನೂಬಣ್ಣಿಸುವೇ|| ಪದ ||

ಹುಟ್ಟಿದಾಗಳೆಮರಿಗೆಪಲ್ಲಳು
ಹುಟ್ಟಿರಲುಒಡೆಯಂಗೆಬಹುವಿಧ
ಕಷ್ಟಮಪ್ಪುದುಕಿರಿದುದಿನಬದುಕುವದುಖೋಡಿಕಣಾ
ತ್ವಷ್ಟತಾರಿಯಲಶ್ವವನುಮನಿ
ಗಟ್ಟಿತಂದರೆಹಾನಿತಪ್ಪದು
ಕೆಟ್ಟುಹೋಹನುಹಗಲುಜನ್ಮಿಸಿದಲದರಯಜಮಾನಾ|| ||

ಶ್ರಾವಣದಿಹಯಪ್ರಸವವಾಗಲು
ಸಾವುತಪ್ಪದುಮನೆಯಒಡೆಯಗೆ
ಆವವಿಪ್ರಂಗಾದಡೆಯುತುರುಗವನುಮರಿಯೊಡನೆ
ಗೋವುಸಹಿತಹಿರಿಣ್ಯದಾನವ
ನೀವುದಾಕ್ಷಣಇಲ್ಲದಿದ್ದಡೆ
ಭಾವಮೈದುನಸೋದರಳಿಯರಿಗಿತ್ತುಬಿಡುವದಿದ|| ||

ಭಾದ್ರಪದಮಾಸದಲಿಹುಟ್ಟಲು
ಹೊದ್ದಿಪುದುಅಪಕೀರ್ತಿಒಡೆಯಗೆ
ಬುದ್ದಿದೋಷವುಮೂಲದಲಿಜನ್ಮಿಸಲುದೀನತನಾ
ಬುದ್ದಿಸಲುದರ್ಶದಲಿಜನಿಸಿದ
ರಿದ್ರತಪ್ಪದುಕೊಂಡವಗೆಕೊ
ಟ್ಟಿದರ್ವವಗೆದಶಗೇಡುಧೈರ್ಯವಿಹನಧನಹಾನೀ|| ||

ಗ್ರಹಕಿಲಕ್ಷಣ :

ಗ್ರಹಕಿಯಕ್ರಿಯಸುವಡೆಪರಿಕಿಸೆ
ತಾಹಪರಿಯಂತೆನಲುಪೇಳುವೇ
ನಾಹಯದಮುಖವಾಸನೆಯನುವಿಚಾರಿಸಿದಬಳಿಕಾ
ಮೇವುಗಳಭುಂಜಿಸುವಭೇದವ
ನೂಹಯಲಿಬಗೆಯರಿದುಬೇಗದಿ
ದೇಹನಲ್ವಿರಲುಕಾಂಬುವದೇರಿನೋಡುವದೂ|| ||

ಗ್ರಹಕಿಯಕಾಣುತ್ತಘರ್ಜಿಸಿ
ಮೇವುತಿನುತುಲ್ಲಾಸಪಟ್ಟುಸು
ನೇಹದಿಂದೊದರಲ್ಕೆಶುಭವದುಲಾಭತೋರುವುದೂ
ಮೋಹದಲಿಮೂಸಿರದುಲಂಘಿಸಿ
ಸಾಹಸದಿಹಾರುತ್ತಮುಂದಕೆ
ಆಹಯವುಬಲಗಾಲನಿಟ್ಟುದಕಾಣೆಶುಭಶಕುನಾ|| ||

ಹಯವನೋಡುವಸಮಯವಾಗಲಿ
ಕ್ರಯವಮಾಡುತ್ತಿರಲಿಮತ್ತೊ
ಘೆಯನುಪಿಡಿದಡಿಯಿಡುತಲಿರೆಮನೆಗದನುತರುತಿರಲೂ
ಜಯವಹುದುಮಲಮೂತ್ರಗಳನೋ
ಚೆಯಲಿಮಾಡಲುತಂದವಗೆಹಾ
ದಿಯಲಿಶುಭಶಕುನಂಗಳಾದರುಲಾಭತೋರುವುದು|| ||

ನಿಂತಠಾಣದಿಹಯವುಮದಸಿದ
ದಂತಿಯಂತ್ತೊಂದುಕಡಿಗೇಶಿರ
ವಾಂತುತೂಗಲುಖುರನೆಲನಬಿಟ್ಟೇಳದಿರಲದರಿಂ
ಅಂತರಿಸುವಳುಲಕ್ಷ್ಮಿಯೆಡಬಲ
ಮಂತೊನದುಕೊಳುತಡಿಗಳೇಳಲು
ಚಿಂತೆಮ್ಯಾಡೊಳಿರೆಂದುಪೇಳ್ದನುಶಾಲಿಹೋತ್ರಮುನೀ|| ||

ನೋಡುಯೆಡೆಯೊಳುಬೆನ್ನುಶಿರಗಳ
ಝಾಡಿಸಿದರೆಮಹಾವಲಕ್ಷಣ
ಕೂಡೆದೇಹವಕಚ್ಚಿಕೊಂಡರೆಹಾನಿಯಡಪಾದವಾ
ನೀಡಿಮುಂದೆನಿವಾರಿಸಲ್ಕಿದು
ಖೋಡಿತನದೇಹವನುಒಡಮುರಿ
ಮಾಡಿದರೆಆಕಳಿಸಿದರೆಸೀತರೆಯುಕೇಡಹುದೂ|| ||

ದ್ವಾದಶವಿಧಗುಪ್ತಖೋಡಿಗಳೂ :

ಹನ್ನೆರಡುವಿಧಗುಪ್ತಖೋಡಿಗ
ಳನ್ನೂಪೇಳುವೆನವನುಗ್ರಹಿಕಿಯ
ಮುನ್ನರಿಯನವುಮನೆಗೆಬಂದರೆಬಳಿಕಮನನಹವೂ
ಕಣ್ಣಿನಲಿನೀರಿಳಿವುತಿಹದಿರ
ಳ್ಗಣ್ಣುಕಾಣದುಗುಧಭಗಂಗಳೊ
ಳಿನ್ನುಹರಿವುದುರಕ್ತಬಾಯೊಳುನೀರುಸೋರುವದೂ|| ||

ಪಿತ್ತಗಾದರೆಯಂತೆಗಂಟುಗ
ಳೊತ್ತುವವುಮೈಯೆಲ್ಲಕ್ಷಯಿಸುವ
ದೊತ್ತಿಮೈಯದುಪಕ್ಷಮಾಸಕೆ
ಶೂಲಿಕೆರಳುವುದೂ
ನೆತ್ತಿನೇತ್ರಕಪೋಲಶೂಲಿಗ
ಳೆತ್ತವವುಡಗ್ಗುವದುಕಣ್ಮು
ಚ್ಚುತ್ತಸಂತಾಪಿಸುವದದುಒದರುವುದುಗರಹೊಡೆದಂತೆ|| ೧೦ ||

ಮೋರೆಬಾವುದುರಕ್ತವನುತಾ
ಸ್ವಾರೆಯಲಿಮುಕ್ಕುಳಿಸುವುದುಸುವಿ
ಕಾರದಿಂಕಚ್ಚವಡೇಹೋಹದುಮತ್ತನಾಗುವದು
ತೋರಿಸುವದೇಕಾಂಗವಾಯುವಿ
ಚಾರಿಸಲ್ಕೀರಾರುಭೇದವ
ಆರಮನೆಯಲ್ಲಿಹದವಗೆಕಾಣಿಸುವುದನವರತ|| ೧೧ ||

ಈಪರಿಯಲಿಹಗುಪ್ತಖೋಡಿಸ್ವ
ರೂಪಗಳುಗ್ರಹಿಕಿಗೆತಿಳಿಯವೂ
ವ್ಯಾಪಿಸಿರ್ದೊಂದೆರಡುತಿಂಗಳುಪರಿಕಿಸಿದಬಳಿಕಾ
ಭೂಪತಿಗಳೇರುವೆಡೆಸುಗುಣಕ
ಲಾಪರಶ್ವವಕೊಂಡುತಹದೆಂ
ದಾಪರಮಮುನಿಶಾಲಿಹೋತ್ರನುಪೇಳ್ದನೊಲವಿನಲೀ|| ೧೨ ||

ಧರೆಗಧಿಕವುತ್ಸಂಗಿದುರ್ಗದಿ
ಮೆರೆವದುರ್ಗಾಂಬಿಕೆಯಸಿರಿಪದ
ಸರಸಿಜಭ್ರಮರಾಯಮಾನಕವೀಂದ್ರಹಿರಿಯಣ್ಣಾ
ವಿರಚಿಸಿದಹಯರತ್ನಶ್ರೇಣಿಯ
ಲೊರದದುಶ್ಚೇಷ್ಟಿಯವಿಚಾರದ
ಲಿರಲುಸಂದದುಸಂಧಿಮೂರನೆಗಾರ್ದಪದಸಂಖ್ಯೇ|| ೧೩ ||

ಅಂತುಸಂಧಿ೩ಕ್ಕೆಪದ್ಯಗಳು೬೧ಕ್ಕೆ
ಮಂಗಳಮಹಾಶ್ರೀಶ್ರೀಶ್ರೀ||