ತುರಗದಂಗದಿಶೂಲಿವಾಯು
ಜ್ವರವುಮೂಲವ್ಯಾಧಿಮೊದಲಾ
ಗಿರುವನಾನಾವಿಧದರೋಗಾವಳಿಯವಿವರಿಸುವೇ|| ಪಲ್ಲವಿ ||

ಜ್ವರಗಳೆಂಟಶ್ವಕ್ಕೆಶೂಲಿಯು
ಪರಿಯುಹದಿನೆಂಟೇಳುವಾಯುಗ
ಳಿರುವಮೂಲವ್ಯಾಧಿನಾಲ್ಕಂಟೇಳುಕ್ರಿಮಿದೋಷಾ
ಹೊರಗೆಶಕೆಗರಚರಮಹೊಡೆಯ
ಶಿರಗಳೊಂದೊಂದಿರದಭೇದದ
ಪರಿಕಿಸಲುತಿಳಿವಂತೆಪೇಳ್ದವೆನ್ನದರಚೇಷ್ಟೆಯಲೀ|| ||

ನೆಲಕೆಬೀಳುತ್ತಳೇಹೊಯ್ವು
ತ್ತಲಸಿದೋಲ್‌ ತೇಕುವದುತಾನೆ
ತಲೆಗೆಸ್ತನ್ಯಾವರ್ತನೆಂಬುದುಮೊದಲಶೂಲಿಕಣಾ
ಇಳೆಯಮೂಶಿರದಳೇಹೊಯ್ವುತ
ತಲೆತಿರುಗುತಿರೆಮೂತ್ರಶೂಲಿಯು
ಘಳಿಲನೆರಡನೆಯೆಂದುದುಕಣಾಚೇಷ್ಟಿಭೇದದಲೀ|| ||

ನಡುಗುತಲಿಬಾಯಿಂದಭುಜವನು
ಕಡಿದುಕೊಂಡರೆಮತ್ತೆಕಂಪಿಸಿ
ದಡೆಸದಾವರ್ತಾಖ್ಯಶೂಲಿಯುಮೂರನೆಯದೆಂದಾ
ಒಡನೆಬಿದ್ದುರುಳುತ್ತಭೂಮಿಯ
ಬಿಡದಿರಲುಅತಿದಾಹಶೂಲಿಯ
ಬೆಡಗಭಾವಿಸಿನಾಲ್ಕನೆಯದೆಂದುಸುರಿದನುಮನಿಪಾ|| ||

ಎರಡುಮೂಗಿನೊಳೊಸರೆರಕ್ತವು
ವರಪುದದುರಕ್ತಪ್ರಮೇಯದಾ
ಪರಿಯಶೂಲಿಯದೆಂದುಹೊಕ್ಕುಳಹೊಟ್ಟೆಯನುಹೊಯ್ದು
ನರಳಿದೇಹವಕಚ್ಚಿಕೊಂಡರೆ
ಭರದಲದುಕ್ರಿಮಿದೋಷಶೂಲಿಯು
ವಿರಚಿಸಿದೆನೀಎರಡನೈದಾರನೆಯನೇಮದಲೀ|| ||

ಬೀಳುತಿಳೆಯಲಿನಾಲ್ಕುಕಾಲನು
ಮೇಲುಮಾಡುತಬಿಗಿದುಹೊಟ್ಟೆಯ
ಮೇಲೆಒತ್ತಲುಶೂಲಿಯುಸದಾವರ್ತನೇಳನೆಯಾ
ಏಳುವದುಬೆದರಿದವೋಲವನಿಗೆ
ಜೋಲುವದುತುಟಿಯಿಂದಧರಣಿಯಾ
ಧೂಳಿಯನುಸವರಿದರೆಬಿಂಬಾವರ್ತನೆಂಟನೆಯಾ|| ||

ತಾಪಿಸುತಕಣ್ಮುಚ್ಚಿನಿಲ್ಲುವ
ದಾಪನಿತುಕಂಪಿಸುತಮೆಲುವದು
ಈಪರಿಯುತ್ರಿಭ್ರಮಕೆಶೂಲಿಯುಗಣನೆಒಂಭತ್ತೂ
ತೇಕುವದುಗಳದೊಳಗೆಘರುಘುರು
ವ್ಯಾಪಿಸುತನೆಲಕುರುಳಲದುಮ
ತ್ತಾಪರಮಮುನಿಪೇಳ್ದಖಾಸಾವರ್ತಹತ್ತನೆಯಾ|| ||

ಬೆವರುತಲಿಬಾಯೊಳುಹರಿದ್ರ
ಛನಿಯುನೀರಿಳಿಯಲ್ಕೆಮುನಿಪೇ
ಳುವನುಹನ್ನೊಂದರಸುಭಾವರ್ತಾಖ್ಯಶೂಲಿಯನೇ
ಅವನಿಗಾಗಿಂದಾಗಬೀಳುತ
ಅವಸರದಿಮೈಮುರಿವುತುದರದಿ
ಜವುಗದುವುಗಟ್ಟಿಲುಗಳಾಪ್ರಾಣಿಕವುಹನ್ನೆರಡೂ|| ||

ಹೊಟ್ಟೆಯುಭಾರವಾಗಿಜಲಮಲ
ಕಟ್ಟಿಕೊಂಡರೆಪುತ್ರತೆಯಪೆಸ
ರಿಟ್ಟುಕರವದುಮತ್ತೆಹದಿಮೂರನೆಯಶೂಲಿಯನೂ
ಬಟ್ಟೆಯೊಳಗೊಟ್ಟದಲಿದಣಿದುದ
ನಿಟ್ಟುಸುರತುಂಬಿಸದೆನೀರೊಳು
ಬಿಟ್ಟುಕುಡಿಸಲ್ಪಟ್ಟುವದುಪಾನೀಯನೀರೆಳೂ|| ||

ಕೆದರುವದುಮುಂಗಾಲಿನಲಿನೆಲ
ವದದುಭೂಮಿಯಕಚ್ಚುತಿರೆಮ
ತ್ತದುಕ್ಷುದಾವರ್ತಾಖ್ಯಹದಿನೈದನೆಯಶೂಲಿಕಣಾ
ಉದರದೊಳುಗಡಬಡಿಸುತೊಯ್ಯನೆ
ಪುದಗಿಕಾಲ್ಗಳಬಿಗಿದುಕೊಂಡಿರೆ
ಅದುವೆಗುಲ್ಮಾವರ್ತಶೂಲಿಯುಗಣನೆಹದಿನಾರೂ|| ||

ತಿಣುಕುತವನಿಗೆಬೀಳುತೇಳುತ
ದಣಿವುತುದರವುಹರಿದುರಕ್ತವ
ನೆಣಿಕೆಯಿಲ್ಲದಮಲದೊಡನೆಹಾಕುತ್ತಲಿರಲದಕೇ
ಗುಣಯುತರುಪೇಳುತ್ತಲಿಹರಂ
ಜನಿಯಶೂಲಿಯಿದೆಂದುಕಂಡಾ
ಕ್ಷಣವೇಹದಿನೆಳನೆಯದೆಂದನುಶಾಲಿಹೋತ್ರಮುನೀ|| ೧೦ ||

ತೇಕುತಿಳೆಯೊಳುಬಿದ್ದುಕಾಲಿಲೆ
ನೂಕಿಹೊಟ್ಟೆಯನೂರಿಕೊಂಡವಿ
ವೇಕಿಯೆಂತುದರದಲಿಬದಿಯನುಒರಸಿಕೊಳುತಿರಲೂ
ಈಕುರುಹುತೋರಿದಡೆಸಾದ್ಯವ
ದಾಕುದುರೆತುಟಿಯಿಂದಬದಿಯನು
ಸೋಕಿಸಿದರೆಗುಣವಹುದುಹದಿನೆಂಟನೆಕ್ರಿಮಿಶೂಲೇ|| ೧೧ ||

ಒರೆದೆನೂಹದಿನೆಂಟುಶೂಲಿಯ
ಪರಿಯಲಕ್ಷಣಗಳನುಮತ್ತಾ
ತುರಗಚೇಷ್ಟಿಯನೋಡಿವೈದ್ಯವಮಾಡೆಗುಣವಹುದೂ
ವಿರಚಿಸುವೆಮುಂದಾತುರಂಗಕೆ
ಜ್ವರಗಳೆಂಟೆಂಟುಪ್ರಕಾರದಿ
ಪರಿಕಿಸುವಡರಿವಂತೆದೇಹಪ್ರಕೃತಿಬಗೆಯಿಂದಾ|| ೧೨ ||

ಜ್ವರಗಳಲಕ್ಷಣ :

ಬಾಯೊಳತಿದುರ್ಗಂಧನಾರುತ
ಕಾಯದೊಳಗುರಿತೋರಿನಡುಗ
ಲ್ಕೀಯವಸ್ಥೆಯತಿಳಿಯಲತಿಜ್ವರವೆಂದುಪೇಳುವದು
ಮೈಯ್ಯಲಳಕುತತತ್ತರಿಸಿಬಿ
ಳ್ವಾಯತವುತೋರುತ್ತಗಾದರೆ
ಮೈಯೊಳಿದ್ದರೆಹಯಕೆವಾತಜ್ವರವದೆಂಬುವದೂ|| ೧೩ ||

ತನುಮಹೋಷ್ಟ್ರತೆಯೆಂತುನೆರೆಮೂ
ಗಿನಲಿಸಿಂಬಳಸುರಿಯೆಮಧುತಾ
ಕೊನೆಗೆಶ್ಲೇಷ್ಮಜ್ವರವುದೆಂಬುವರಶ್ವಪಂಡಿತರೂ
ಶನದಲುಪವಾಸದೆಲ್ಲಿದ್ದರೆ
ಜನಿಸುವದುದೇಹದಲಿತಾಪದ
ಘನತೆಯದುಲಗುಣಜ್ವರಂಹಯವೆಂದನಾಮುನಿಷಾ|| ೧೪ ||

ಅಳ್ಳಿರಿತುಊಷ್ಣಪ್ರಕೋಪದಿ
ಗುಳ್ಳಿಬಾಯೊಳಗೆದ್ದುನೀರೊಳು
ಕುಳ್ಳಿರೆಳಸುತ್ತಸುರಿಯುತಾಕಣ್ಣಿನಲಿನೀರಿಳಿಯೇ
ಹಳ್ಳಿಗಳತಿರುಗುತ್ತಲೋಟದಿ
ಹಳ್ಳವನುನೆಸಗಲ್ಕೆಈಕುರು
ಹುಳ್ಳಡಾಹುದುವದವೆಶಂಖಜ್ವರವದೆಸುವದೂ|| ೧೫ ||

ಕಣ್ಣುಮುಚ್ಚುತಮೇವುಮೇಯಲಿ
ಸನ್ನಿಪಾತಜ್ವರವದೆಂಬುದು
ಮನ್ಮಥಜ್ವರಹುಟ್ಟುವದುಬಹುಕಾಲವೆಸನವನೂ
ಮನ್ನಿಸದೆಬಿಡುಮೈಒಣಮೇವು
ತಿನ್ನದಲೆಭೇದದಲಿಬರೆಬರೆ
ಸಣ್ಣಿಸುತಲದುಶಿಕ್ಕುಮೂತ್ರವುಮಾಡುತಿಹುದೆಂದಾ|| ೧೬ ||

ತೆಗೆದುಮೇಯದೆಬಳಲಿದೇಹವ
ಬಿಗಿದುಕೊಳ್ಳುತಮೈಒಣಗುತಿಹ
ಬಗೆಯುತಾನಷ್ಟಜ್ವರವುತಿಳಿಯಂದನಾಚರಿಯಾ
ಸುಗುಣರೀಪರಿಯಿಂದಲರಿದ
ಶ್ವಗಳಿಗೌಷಧಿಯನ್ನೂಮಾಳ್ಪದು
ಜನಕೆಹಿತಕರವಾಗಿಪೇಳ್ದನುಶಾಲಿಹೋತ್ರಮುನೀ|| ೧೭ ||

ಧರೆಗಧಿಕವುತ್ಸಂಗಿಗಿರಿಯೊಳು
ಮೆರೆವದುರ್ಗಾಂಬಿಕೆಯಸಿರಿಪದ
ಸರಸಿಜಭ್ರಮರಾಯಮಾನಕವೀಂದ್ರಹಿರಿಯಣ್ಣಾ
ವಿರಚಿಸಿದಹಯರತ್ನಶ್ರೇಣಿಯೊ
ಳೊರೆವಶೂಲಿಜ್ವರವಿಚಾರವ
ಪರಿಗೆಸಂದುದುನಾಲ್ಕುಸಂಧಿಯುಗಾದಿಪದಸಂಖ್ಯೆ|| ೧೮ ||

ಅಂತುಸಂಧಿ೪ರಲ್ಲಿಪದ೧೮
ಆದ್ಯಂತಪದ೭೯ಕ್ಕೆ
ಮಂಗಳಮಹಾಶ್ರೀಶ್ರೀಶ್ರೀ||