ಏಳುರಸಕ್ರಿಮಿದೋಷಗಳುಮ
ತ್ತೇಳುವಾಯ್ಮುರೋಗಭೇದವ
ಪೇಳುವೆನುತಿಳಿವಂತೆಚೇಷ್ಟಾವಿಭೇದದಲೀ ||

ತರುಳಮರೆಯಿಡೆಕೇಳ್ದುಕಂಭದೊ
ಳಿರಲುಮುಂಭಾಗದಲಿಅರುಹಿಸಿ
ದುರುಳಹಿರಣ್ಯಕಸ್ಯಪನಮುಂದಕೆತುಡಕಿಪಿಡಿದೆಳದೂ
ಬೆರಳತುತಿಯಿಂದೊಡಲಬಗೆದ
ಕರುಳತೆಗದೊನಮಾಲೆಯೆಂದದಿ
ಕೊರಳೊಳಾಂತ್ತಹೋಬಲಾದ್ರಿನೃಸಿಂಹಸಲಹೆನ್ನಾ || ||

ಚರಣಗಳುನಾಲ್ಕರಲಿಕಪ್ಪಿನ
ಪರಿಯಗಂಟುಗಳುದಿಸಲದುಪಾ
ನಿರಸವೆಂಬುದುಸರ್ವಸಂದುಗಳಲ್ಲಿಗಂಟುಗಳೂ
ಭರದಲುಬ್ಬಿರಲನುಮಧುಪಂ
ಕರಸವೆಂಬುದುನಾಲ್ಕುಕಾಲರ
ಲಿರುವಗಂಟೆಗೆಕುಣಿವೆರಸೆಗತಿಭಂಗರಸವೆನಿಕುಂ|| ||

ಖುರದವಳಪಾಡಿನಲಿಕೀವನು
ಸುರಿಸೆತಳಶಸ್ತ್ರಾಭ್ರರಸವೂ
ಇರುವಸಂದುಗಳಲಿಗಂಟುಗಳೊಡದುರೊಜೀಳಿಯೇ
ಮರುತಪಂಕರಾಸಾಖ್ಯವೆನಿಪುದು
ಚರಣಗಳಮುಂದಕೆನಿವಾರಿಸಿ
ಕೊರಳಮೇಲಕೆನೆಗಹಿದರೆಮನಸ್ತಂಭವಾಯುಕಣಾ|| ||

ಹಿಂದೆತತ್ತರಗೊಂಡುಕಾಲುಗ
ಳಿಂದಧಡಧಡಿಸಲುತ್ರಿಕರರಸ
ವೆಂದುಪೇಳುವದೀಪರಿಯಕ್ರಿಮಿದೋಷರಸವೇಳೂ
ಮುಂದೆಸರ್ವಾಂಗದಲಿಗಂಟುಗಳ್
ನೊಂದುಶ್ರೋಣಿತಸುರಿಯಲದುರಸ
ಕುಂದಲಿಯುಗಂಟೆದ್ದುಒಡೆಯದಿರಲೈಕರಕುಳಿಯೂ|| ||

ಗೋಣುಕೈಕಾಲುಗಳುಬಿಗದಿಹ
ಠಾಣದಲಿಹಿಂಗಾಲಮಡಿಚುತ
ವೇಣುಕಣ್ಣಿವೆಮುಚ್ಚಲಾರದೆದವಡೆಳಕುತಿರಲೂ
ಜಾಣರಿದರುತ್ಕರಣವಾಯುವು
ಮಾಣದೆಂಬರುನಾರಿಕೆಳಪ್ರ
ಮಾಣವೃಷಣಗಳೆರಡುಬಾಯಲ್ಕಂಠವಾಯುಕಣಾ|| ||

ಎರಡುಹಿಂಗಾಲೊಡೆದುಸುರಿಯಲು
ಪರೆಇಹರಿಸುವಡಸಾಧ್ಯಬಾತು
ಬ್ಬಿರಲುಸಾಧ್ಯವದಕ್ಕೆಪೆಸರೇಕಾಂಗವಾಯುಕಣಾ
ಉರವಕಂಪಿಸುತೇಳಲಲುಗುತ
ಶರಿಯನಿಟ್ಟಂತಲ್ಲಿಎನಾದರಲ್
ಉರಕರ್ನಿಕಿಯದೆಂಬುದುವಾಯುದೊಷದಲೀ|| ||

ಒಂದುವೃಷಣವುಮೇಲಕೇರದೆ
ಕಂದುಕದವೋಲಿರ್ದುಹಿಂಗಾ
ಲೊಂದೆತೆಗೆದಿಕ್ಕುತ್ತಶಲೆಗಾಲಂತೆನಡವುತಿರೇ
ಹೊಂದುವುದುಪೆಸರದಕೆಏವಿಲ
ನೆಂದುವಾಯುಕಣಾನಿರಂತರ
ದಿಂದನಾಲ್ಕಡಿಬಾಹುತಿರೆಚೂರಂಗವಾಯುವದೂ|| ||

ಅಂಗದೊಳುಗಂಟುಗಳುತೋರುತ
ಗಿಂಗಾಲೊಡದಿರಲಾವಾಯುಯುಗ್ಮತು
ರಂಗಸಾಸ್ಯವುಬಾತುತುಟಿಜೋಲಲೈಮುಖರೋಗಾ
ಕಂಗೊಳಿಸುತಿಹಗೋಣಕೆಳಗಿ
ಕ್ಕಂಗಯಿಸೆಬಾಗಿಸುತಿರಲುಮುನಿ
ಪುಂಗವನುಪೇಳಿದಗಳಗ್ರಹರೋಗವೆಂದದನೂ|| ||

ಒಡನೆವೃಷಣದಬೀಜಮಧ್ಯದಿ
ತೊಡಕಿಕರುಳಿಳಿದಿರಲುಅಂಡದ
ಬುಡದಿಮೃದವಾಗಿಹದುಬಿರುಸಾಗಿಹದುಮೇಗಡೆಯಾ
ಹಿಡದುಹಿನಕಲುಕೈಗೆಹಗ್ಗವು
ತಡದವೋಲಾನುವದುತುರಗವು
ಪೊಡವಿಯಲಿತಾಬೀಳುತೇಳುತ್ತಿಹುದುಬೆವರುವದೂ|| ||

ಅಡಿಗಳನುಮೇಲ್ಕೆತ್ತಿಹೊಟ್ಟೆಗೆ
ಬಡಿದುಕೊಂಬದುಮೂಗಿನಿಂದಲಿ
ಬಿಡದೆಅಂಡವಮೂಷಿನೋಡುವರೈದುತಿರಲದಕೇ
ತಡವಮಾಡದೆತಕ್ಕವೈದ್ಯವ
ಕೊಡಲುಗುಣವಹದರ್ಧಯಾಮದ
ಗಡುವಮೀರಲುಕರುಳುಬಾವುದಸಾಧ್ಯಕೇಳೆಂದ|| ೧೦ ||

ಬಾಲವನುಮುರಿಮಾಡುತವನಿಗೆ
ಬೀಳುತೇಳುತಹೊರಳಿನೆರೆಹಿಂ
ಗಾಲಝಾಡಿಸೆನೆಲವಮುಂಗಾಲಿಕೆದರುತಿರೇ
ಪೇಳುವದುತಾಮೂತ್ರಸಿಕ್ಕಿನ
ಚಾಳಿಯೆಂದದಿನರಿದುಬೇಗದಿ
ಕಾಲಮೀರದೆವೈದ್ಯವನುಮಾಡಲ್ಕೆಗುಣವಹುದು|| ೧೧ ||

ಧರೆಗಧಿಕವುತ್ಸಂಗಿದುರ್ಗದಿ
ಮೆರೆವದುರ್ಗಾಂಬಿಕೆಯಸಿರಿಪದ
ಸರಸಿಜಭ್ರಮರಾಯಮಾನಕವೀಂದ್ರಹಿರಿಯಣ್ಣನೂ
ವಿರಚಿಸಿದಹಯರತ್ನಶ್ರೇಣಿಯೊ
ಳೊರೆದಕ್ರಿಮಿರಸವಾಯುದೋಷವ
ಪರಿಗೆಸಂದುದುಸಂಧಿಐದುಯುಗಾಷ್ಟಪದಸಂಖ್ಯೇ|| ೧೨ ||

ಅಂತುಸಂಧಿ೫ಕ್ಕಂಪದನು೯೧ಕ್ಕಂ
ಮಂಗಳಮಹಾಶ್ರೀಶ್ರೀಶ್ರೀ||