ಶ್ರೀಮದಜಹರಿರುದ್ರವರಸು
ತ್ರಾಮಮುಖ್ಯಾಮರವಿನುತಪದ
ತಾಮರಸಯುಗಪಾಶಮೋದಕದಂತಶ್ರುಣಿಧರನಾ
ಚಾಮರಾಯತಕರ್ಣಾಕರಿಮುಖ
ಸಾಮಗಾನಪ್ರಿಯಗಣೇಶ
ತ್ವಾಮಹಂಪ್ರಣತೋಸ್ಮಿಮೀಕುರುವಿಘ್ನೇಶಮನಂಭೋ|| ||

ಸುರಮಕುಟಮಂಡಿತಮಣಿವ್ರಜ
ಕಿರಣರಜಸಂಯುಕ್ತಪದಪಾ
ರಿರುಹಯುಗಳೆಶರತ್ಸುಅಧಾರಕರಪೂರ್ಣಾನಿಭವದನೀ
ಪರಮಪಾವನವುತ್ಸವಾಂಗೀ
ಗಿರಿನಿಲಯೆದುರ್ಗಾಂಬೆವರಶಂ
ಕರಿಮಹೇಶ್ವರಿಪಾಹಿಮಾಂಸತತಂಕೃಪಾಸಿಂಧೂ|| ||

ಸಿಂಧುದೇಶದಿರಾಜಋಷಿಗಳು
ಬಂದುಯಜ್ಞವಮಾಡಲೋಸುಗ
ಛಂದದಿಂಧರಣಿಯನುಮಥನಿಸಿಪಡದರ್ಹುತವಹನ
ತಂದುದಕ್ಷಿಣಗಾರ್ಹೈಪತ್ತೆಗ
ಳಿಂದಪುಟಗೊಳಿಸಲ್ಕೆತುಂಬಿದು
ದಂದುಧೂಮಜ್ವಾಲೆಶಾಲಾವಲಯದಗಲದಲೀ|| ||

ನೆರೆದಯಾಚಕಅಕ್ಷಿಯುಗಳದ
ಲೊರತುಜಲವಿಳಿಯಲ್ಕೆತಮ್ಮಯ
ಬೆರಳಲಿಂಮ್ಮಿಡಿದಿಳಿಗೆಬಿಸುಡಲುಜನ್ಮಿಸಿದವಾಗಾ
ತುರಗರತ್ನಗಳೇಡಬಲಂಗಳ
ಲೆರಡುಸ್ತ್ರೀಪುರುಷತ್ವರೂಪವ
ಧರಿಸಿಕಾಣಿಸೆಬೆರಗನಾಂತದುಸಕಲಋಷಿನಿಚಯಾ|| ||

ಅಶ್ವಲಾಯನಮುನಿಪನುತ
ನ್ನಶ್ವಪಾತದಿಜನ್ನಿಸಿದವೆಂ
ದಶ್ವನಾಮವನಿಟ್ಟುವರಮುನಿಶಾಲಿಹೋತ್ರಂಗೇ
ವಿಶ್ವದೊಳಗೀರತ್ನವನುನೀ
ನೀಶ್ವರಾನುಗ್ರಹದಿ
ಕಾಶ್ರಯವಮಾಡೆಂದುಪೇಳುತಲಿತ್ತನರ್ಥಿಯಲೀ|| ||

ಶಾಲಿಹೋತ್ರಮುನೀಂದ್ರನಗಜಾ
ಲೋಲನಂಘ್ರೀಯಭಜಿಸಿಕೇಳಲು
ಪೇಳಿದನುಘೋಟಕದದುರ್ಗುಣಸುಗುಣಲಕ್ಷಣವಾ
ಮೇಲೆಸುಳಿವರ್ಣಾಂಜನಂಗಳ
ಕೀಳುಮೇಲೆಂಬಶ್ವರೇಖೆಯ
ಜಾಲವನುತದ್ರೋಗಚೇಷ್ಟಿಚಿಕಿತ್ಸಕಾದಿಗಳಾ|| ||

ಶಿವನುತನಗೊರದನಿತುತದ್ವಾ
ರುವನಲಕ್ಷಣವೆಲ್ಲವನುತ್ರೈ
ಭುವನಜನುಕುಪಕಾರಗೋಸುಗಗ್ರಂಥರೂಪಿನಲೀ
ವಿವರಿಸಿದವರಶಾಲಿಹೋತ್ರನು
ಕವಿಗಳಾವದುಯೆನಲುಮಿಗೆಮ
ತ್ತವಕೆಪ್ರಾಕೃತಭಾಷಿಣಂವಿಸ್ತರಿಪೆನಾನೀಗಾ|| ||

ಶೃಂಗಿವಾಳಾಂಜನಿಕರಾಳಿಕು
ಚಾಂಗಿಕಾಳಾಮುಖಿವಿಕಾಳಿಕೃ
ಶಾಂಗಿಪಂಚಖರಿತ್ರಿಕರ್ಣಿವಿದಿಕ್ಶೃತಿಗಳೆಂಬಾ
ಅಂಗದೊಳಗೀರೈದುಬಗೆಯತು
ರಂಗವಿವುದೇಶಾಧಿಪತಿಗಳ
ಭಂಗಬಡಿಸುವವಧಿಕಖೋಡಿಗಳೆಂದಾನಾಮುನಿಪಾ|| ||

ಉದರದಲಿಬಳಿಕಾಂಜನವುಬಲ
ಬದಿಎಲುವಿನಲಿಪಾಂಡುರಂಜನ
ವದನವಳೀಯಮೇಲೆಪದ್ಮಾಂಜನವುಎಡಗಡೆಯಾ
ತುದಿಯಲಳೀಯಲೆಸೆವಕೃಷ್ಣಾಂ
ಕದಮಹಾಂಜನವಿರಲುಕ್ರಮದಿಂ
ವದೆವೆಧಾಸ್ತ್ರೀನಾಶವದುಕ್ಷೀಣವಿಂತಿಹುದೂ|| ||

ಏರದನಾಲ್ಕಂಜನಗಳೊಳಗೊಂ
ದಿರಲುಎಡಬಲದಸ್ತಿಯಲಿತ
ತ್ತುರಗದೊಡೆಯಗೆದುಃಖಮಪ್ಪುದುಕೆಂಪುಮಚ್ಚೆಯಿಹಾ
ಕರಿಯವಾಜಿಯುಕೃಷ್ಣವಾಳವು
ಹಿರಿಯರಶಿಮೃತವಾಹಳೆಂಬುದ
ನರಿದುಬಿಡುವದುಬಲ್ಲವರುಬಿಡದಿರಲುಕೇಡಹುದೂ|| ೧೦ ||

ದಂತಹೀನಾಧಿಕನುರಿಹಿಸುಳಿ
ಯಾಂತತ್ರೈಕಾವರ್ಣವಿವುಪತಿ
ಗಂತಕನದೆಂದರಿದುಬಿಡುವದುಬಿಡದಿರಲ್ಕಿವನಾ
ಸಂತತಿಯನವಹರಿಸುವವುಫಣ
ದಂತೆಮುಖವಿರೆಅಳಮಸುಳಿಯೆಂ
ದಿಂತಿವನುಬಿಡುದುಃಖಹೇತುಗಳೆಂದನಾಮುನಿಪಾ|| ೧೧ ||

ಒಂದುನಿರ್ಮಲನಯನಲಿರ್ದಿ
ನ್ನೊಂದುಪೆಂಗಾಳಿಯನಯನಲಿಹ
ಸೈಂಧವಗಳವಮಂಗಳಾಖ್ಯವುಕೇಡುಬಯಸುವವೂ
ಛಂದದಿಂಸುಳಿರೇಖೆರೋಮಗ
ಳಂದವನುಪರಿಶೋಧಿಸದೆತಾ
ಮಂದಮತಿಯಿಂಕೊಳ್ಳಲಾಗದುರಾಜವಾಹನಕೇ|| ೧೨ ||

ಎಂಟುಪರಿಸುಳಿರೇಖೆರೋಮದ
ಲುಂಟುಕಮಲದೊಳಪ್ರದಕ್ಷಿಣ
ವೆಂಟೆನಿಸುವಪ್ರದಕ್ಷಿಣಾಕೃತಿಕರವುನೆಕ್ಕಿದೊಲೂ
ಅಂಟಿದೆಮ್ಮಿಯಚೇಳಿನೋಪ್ಲರ
ಒಂಟಿಬಟ್ಟಿಯಬಣಜಿಗನವೋಲ್
ನಾಂಟಿಹವುಶಾವಂತಿಗೆಯವೋಲ್ಶಿಂಪಿಗನೋಲಿಸಿತು|| ೧೩ ||

ಎರಡುಗೇಣುನ್ನತವುಸುಳಿಮಡ
ಮುರಿವಿತೊಂದೆಕಡಿಗೆತೋರಲು
ಅರಿಯಬೇಕದುಎಮ್ಮೆಚೇಳೆಂದುಸುಳಿವದೇರೇಖೆ
ಬೆರಳೆರಡರಳತಿಯಲಿರಲ್ಕದ
ರಿರವುಬುಟ್ಟಿಯಬಣಜಿಗನಸುಳಿ
ಮುರಿಯತೋರದರೇಖೆಯಂತಿರೆಸಮತಾನೆನಿಕುಂ|| ೧೪ ||

ಪಾದಪುಷ್ಟೋದರಹೃದಯಪದ
ನಾದಿದೇಹದೊಳೆಮ್ಮೆಚೇಳೋ
ಪಾದಿಯಲಿಸುಳಿಯಿರಲುಒಡೆಯಗೆತಪ್ಪದದುಮೃತ್ಯೂ
ಆದಿಯಲಿಪೇಳ್ದೆಂಟುಗೆರಿಗಳ
ಹಾದಿಒಂದೇಪರಿಯಫಲಮ
ತ್ತಾದರೆಯುಸಿಂಪೆಮ್ಮೆಚೇಳಿರೆಮುಟ್ಟಲನುವಲ್ಲಾ|| ೧೫ ||

ಹಲ್ಲಣದಕೆಳಗಿರಲುಸುಳಿತಾ
ಹೊಲ್ಲೆಯವುತಾಕುವದುನಡುಬೆ
ನ್ನಲ್ಲಿಸುಳಿಯಿರೆಆಸನಕ್ರಮದೆಂದುಕಂದಕದಾ
ಝೆಲ್ಲಿಯಲಿಸುಳಿತಾಕೆಹಿಂದೆಲಿ
ಯೆಲ್ಲಿಕಂಡರೆರವಿಗೆರಗಿಕರ
ದಲ್ಲಿಮುಟ್ಟಿದರೆಸಚೇಲಸ್ನಾನದಿಂಶುದ್ಧೀ|| ೧೬ ||

ಆವಕುದುರೆಗಳಬಾಲಾದ್ಹಣೆಗಳ
ಠಾವಿನಲ್ಲಿಸುಳಿಯಿರಲುಒಡೆಯಗೆ
ಸಾವುಕೇಡಹುದುದರಕಂದಕದಲ್ಲಿರೋಮಗಳೂ
ನ್ಯಾವರಿಸಿದಂತೆರಡುಪಾರ್ಶ್ವವ
ನಾವರಿಸಿಕೊಂಡುದ್ವಿಭಾಗವ
ಭಾವಿಸುತ್ತಿರೆಭಾಳಲೋಚನನೆನಿಪುದಶುಭಕರಾ|| ೧೭ ||

ಮೂರುಭಾಗದಿಮುಖದಪಟ್ಟಿಯು
ವಾರುವಗಳಪವಿತ್ರಕವುಕೈ
ಸೇರಲಾಗದುಗಂಗೆದೊಗಲೋಪಾದಿಕೊರಳಿನೊಳೂ
ತೋರಲದುತಾಸರ್ಪನೆನಿಪ್ಪುದು
ಪಾರಕೇಡಹುದದರಶಿರದಿಶಿ
ರೋರುಹಗಳಿಲ್ಲದಿರೆಬಲುಖೋಡಿಮುಂಡಿತಾನಹುದು|| ೧೮ ||

ಮುಂದಲೆಯಲೆಡಬಲದಭಾಗದ
ಲೊಂದುಸುಳಿಯಿರೆಸೂನ್ಯಮಸ್ತಕ
ವೆಂದುಪೇಳ್ವದುನಡುವಿರಲುಬಾಸಿಂಗಸುಳಿಯೆನಿಕುಂ
ಹೊಂದಿಬೆನ್ನೊಳುಬಿಳಿಯಪಟ್ಟಿಯು
ಛಂದದಿಂದಪರಾರವಿರಲದ
ರಂದವೇಹರಿನಾಗಯಿದರಫಲಂಗಳನುಪೇಳ್ವೆ|| ೧೯ ||

ಶೂನ್ಯಮಸ್ತಕೆಬಂಧುಗಳುಸಹ
ಬನ್ನಬಡಿಸುವವದನುಕೊಂಡವ
ರನ್ನುಸಂಕೋಲೆಯಿಂದಕೊಲ್ಲಿರೇಅಲ್ಪಬಾಳುವದು
ಇನ್ನುಕೆಳಬಾಸಿಂಗಸುಳಿವರ
ಕನ್ಯೆಯಳಿವಳುಮದುವೆಯಾಹದು
ಚೆನ್ನಿಗರರಣಭಂಗಮಾಡ್ವದುಅದುವೆಹರಿನಾಗಾ|| ೨೦ ||

ಎರಡುಮೂಗಿನಮಧ್ಯದಲಿಬಿಳು
ಪಿರಲುಸರಬೊಕ್ಕಣವೆಸುವದು
ಪರಮದುಃಖವನೀವುದೆಡದಳ್ಳಿಯಲಿಸುಳಿಯಿರಲೂ
ಪಿರಿದುಚಿಂತಿಗಳೆಂದುತಿಳಿಮ
ತ್ತೊರೆವೆಶೋಕಾವರ್ತಮೊದಲಾ
ಗಿರುವಖೋಡಿತುರಗಗಳನಾವರ್ತನಾಮದಲೀ|| ೨೧ ||

ವರ್ತಿಸಲುಸುಳಿರೇಖೆಹೃದಯಾ
ವರ್ತಹೃದಯದಿನಾಭಿನಾಭ್ಯಾ
ವರ್ತವೃಷಣಾವರ್ತವೃಷಣದಿತಂಗುಬಿಗುವಡೆಯಾ
ಹತ್ತಿರೆಗಳಾವರ್ತಘೋಟೀ
ವರ್ತಹೊಟ್ಟೆಯೊಳಕ್ಷಿನೇತ್ರಾ
ವರ್ತವಳ್ಳಿಯಸಂದುಕಾಕಾವರ್ತವೆನಿಸುವದು|| ೨೨ ||

ಇರಲುಮುಂದಣಜಾನುಗಳಮೇ
ಲೊರವೆಗೂಢಾವರ್ತಸುಳಿತ
ತ್ಸರಿಸಿಸಂದಿನೊಳಿರಲುಕೀಲಾವರ್ತಭಗಮೇಡ್ರಾ
ಎರಡುಗುಹ್ಯಾವರ್ತಹೊಳ್ಳಿಯ
ಹೊರಗೆನಾನಾವರ್ತಮುಂದಣ
ಚರಣದ್ವಯಗಳಚಪ್ಪೆಯಲಿಅಂಗಾವರ್ತವೆನಿಸುವವೂ|| ೨೩ ||

ಮೂಗಿನನೊಳಹೊಳ್ಳಿಯೆಲಿಸುಳಿಯಿರ
ಲಾಗಿಜನ್ಮವರ್ತವೆನಿಪುದು
ತಾಗಿಹುಬ್ಬಿನನಡುವೆಭ್ರೂರಾವರ್ತವೆನಿಸುವದೂ
ಸ್ವಾಗೆಗಣೀಂದಿಳಿವನೀರ್ಪನಿ
ಹೋಗಿಬೀಳುವಹಾಗೆಮಧ್ಯದ
ಭಾಗದಲ್ಲಿರಲಶ್ವಪಾವರ್ತಾಖ್ಯವಾಜಿಕಣಾ|| ೨೪ ||

ಸುಳಿಯುಕರ್ನಾವರ್ತಶ್ರೋತ್ರಂ
ಗಳಲಿರಲುಭೂಮಿಯಲಿಜನ್ಮಿಸಿ
ಬೆಳೆಬೆಳೆಯಲೊಡೆಯಂಗೆಬಲವನುಮುರಿದುಕೆಡಿಸುವದೂ
ಬಲಯುತಗೆಬಾಲದಲಿಸುಳಿಯಿರೆ
ವಳಿತುಪುಚ್ಚಾವರ್ತವದುಮ
ತ್ತಿಳಿಯೊಳಬಲಗಂಧಿಕದುಃಖಗಳೆಂದನಾಮುನಿಪಾ|| ೨೫ ||

ಎಡಬಲಾಂಗದಿಸುಳಿಗೊಂದೆ
ಕಡಿಗೆಹೆಚ್ಚಿರಲಾತುರಂಗವು
ಒಡನೆವಿಷಮಾವರ್ತನೆಂಬುದುಒಡೆಯಗತಿಹೀನಾ
ಅಡಿಅಶಿತಮಾದಡೆಯುಬಿಳ್ಪಾ
ದಡಿಯುಮೂರೊಂದಿರಲುಮತ್ತಾ
ವೆಡೆಯಳವುಕಾಣಿಸದಿರಲ್ಕಿದುಖೋಡಿವಿಷಯಾಂಗೀ|| ೨೬ ||

ತುರಗಮುಂಗಾಲಿನಲಿಸುಳಿಹು
ಟ್ಟರೆತಳಾವರ್ತಾಖ್ಯಮದುವಂ
ದಿರುವಚೇರಿನಕುದುರೆತಾನೇಕಾಂಡನೆನಿಸುವದೂ
ಇರುತಿರುತ್ತೊಡೆಯಂಗೆಮಹದೈ
ಶ್ವರ್ಯವನುಪರಿಹರಿಸಿಕಡೆಯಲಿ
ತಿರಿದುಣಿಸುವದುತಲಾವರ್ತಕಾಖೋಡಿಏಕಾಂಡೀ|| ೨೭ ||

ಒಂದುಭಾಗದಲ್ಲಿದ್ದಸುಳಿಮ
ತ್ತೊಂದುಭಾಗದಿಲ್ಲದಿರ್ದೊಡೆ
ನಿಂದ್ಯವದುತಾನೆರಡುಭಾಗದಿಜಾಬುಸುಳಿಯಿರಲೂ
ಹೊಂದದವಗುಣಅವಕೆಸುರಮಣಿ
ಯಿಂದಕಂಠಾಭರಣದಿಂದಲು
ಕುಂದುತೋರದುಕೋಟಿದುರ್ಲಕ್ಷಣವಿರಲುಹಯಕೇ|| ೨೮ ||

ಧರೆಗಧಿಕವುತ್ಸಂಗಿಗಿರಿಯಲಿ
ಮೆರೆವದುರ್ಗಾಂಬಿಕೆಯಸಿರಿಪದ
ಸರಸಿಜಭ್ರಮರಾಯಮಾನಕವೀಂದ್ರಹಿರಿಯಣ್ಣಾ
ವಿರಚಿಸಿದಹಯರತ್ನಶ್ರೇಣಿಯ
ಲೊರದದುರ್ಲಕ್ಷಣವಿಚಾರದ
ಪರಿಗೆಸಂದದುಸಂಧಿಒಂದುಗಜಾಕ್ಷೀರದಸಂಖ್ಯೇ|| ೨೯ ||

ಪ್ರಥಮಸಂಧಿಯೊಳ್ಪದಸಂಖ್ಯೆ೨೯ಕ್ಕೆ
ಮಂಗಳಮಹಾಶ್ರೀಶ್ರೀಶ್ರೀ||