ಸುಳಿಯುಉತ್ತಮವಾದಲಕ್ಷಣ
ಗಳನುಪೇಳುವೆಜನಕೆಶುಭಮಂ
ಗಳವೆನಿಸಿಸಾಸ್ತ್ರೋಕ್ತಸಮ್ಮತವಾಗಿತಿಳಿವಂತೇ|| ಪದ ||

ತಲೆಲಲಾಟಗಳುದರುಸ್ಥಳ
ಗಳವಿವೈದರಮುಂದಗಡೆಯಲಿ
ಸುಳಿಯೆರಡುನಾಲ್ಕಿರಲುಜಯಮಂಗಳನುತಾನೆಕುಂ
ಘಳಿಲನುತ್ಸಹವೇದವಾದ್ಯಂ
ಗಳನುತಾನೇನಡಸಿಕೊಂಬದು
ತಿಳಿವುದೀಹಯವಿಜಯಮಾಳ್ಪದುರಾಜಯೋಗ್ಯಮದೂ|| ||

ತುರಗದುಪರಂಧ್ರದಲಿಸಪ್ಯಾ
ವರಣಸುಳಿಯುಳ್ಳದ್ದು, ಮುಖಾಳಿಯು
ಪರಿಪರಿಯಸುಖವಿತ್ತುಒಡೆಯಗೆಜಯವತೋರುವದೂ
ಖುರದಮೇಲುದಿಸಿರಲುಕೂದಲು
ಪರಮಭಾಗ್ಯವನೀವುದದುಮ
ತ್ತೊರವೆಮುಪ್ಪುರನೇತ್ರತ್ರಿಭುವನದಲ್ಲಿಸುಪವಿತ್ರ|| ||

ಪಾರುವನಹಿಂಗಾಲದೊಡೆಯೊಳು
ತೋರೆಒಳಭಾಗದಲಿಮಚ್ಛೆಯು
ಧಾರುಣೀಶ್ವರರದಕೆಚಿಂತಾಮಣಿಯೆನುತ್ತಿಹರೂ
ಆರಮನೆಯಲಿಹುದುಅವರ್ಗೆಕೈ
ಸೇರುವದುಮಹಾಲಕ್ಷಿಭೃತ್ಯರ
ಪಾರಪಡುವನುಪುತ್ರಮಿತ್ರಕಳತ್ರಪಶುವೃದ್ಧೀ|| ||

ಹಯಕೆಕಂಠಾಭರಣವಿರಲು
ಚ್ಛ್ರಾಯವುಒಡೆಯನಿಗಹದುರಣದಲಿ
ಜಯವಪಡುವನುಮಕ್ಕಳಾಹರುದೇವಮಣಿಯಿರಲು
ಬಯದದುರ್ಲಕ್ಷಣವನೆಲ್ಲವ
ಕ್ಷಯವಮಾಳ್ಪರುಮುಂದೆಭಾಗ್ಯೋ
ದಯವುಕೈಸೇರುವದುಸತ್ಯವಿದೆಂದನಾಮುನಿಷಾ|| ||

ಕಾಲುನಾಲ್ಕುವೃಕ್ಷವದನವು
ಬಾಲವದುಬಿಳುಪಿರ್ದುವೃಷಣದ
ಮೇಲೆಮಿಶ್ರಮದಾಗೆಪೆಸರದಕಷ್ಟಮಂಗಳನೂ
ಫಾಲಪದನಾಲ್ಕರಲಿಬೀಳ್ಪುವಿ
ಶಾಲಮಾಗಿಹತುರಗವದುಭೂ
ಪಾಲಕರಿಗತಿಯೋಗ್ಯಮೆಂಬುದುಪಂಚಕಲ್ಯಾಣೀ|| ||

ಬೆನ್ನಹುರಿಯಲ್ಲೆಸವದೆರಡರ
ಉನ್ನತದಬಲಮುರಿಯಸುಳಿಇ
ರ್ದಿನ್ನುಫಾಲದಲೊಂದುಸುಳಿತಾಪರಿಯಹುಲ್ವಿನೊಲು
ನನ್ನಿಯಿಂದಲಿಪದರಪದರದ
ಬೆನ್ನತೋರುತ್ತಿರುವತುರಗವ
ಮನ್ನಿಸುವದಭಿಮಾನಶುಭಮಂಗಳನೆತ್ತದನೂ|| ||

ಇನ್ನುಜಾತಿಚತುಷ್ಟಭೇದಗಳೂ :

ದ್ವಿಜನುಪಾತಪ್ರಕೃತಿಸಾತ್ವಿಕ
ನಿಜಗುಣದದೆಸೆಯಿಂದಿಹುದುಬಾ
ಹುಜನುಪಿತ್ಥಪ್ರಕೃತಿರಾಜಸಗುಣದಿವರ್ತಿಪುದೂ
ರುಜೆಕಷಪ್ರಕೃತಿಯಹಯಗಳ್
ರುಜನುತಾಮಸಗುಣಯುತನುಪಾ
ದಜನುಮಿಶ್ರಪ್ರಕೃತಿಮಿಶ್ರಗುಣಂಗಳೇಸದಿಹುದೂ|| ||

ಉದಕಶಂಖೆಯಮಾಡಲೋಸುಗ
ಮದಲುಘರ್ಜಿಸಿಮೂತ್ರಗೈವುದು
ರದನಗಳಕಡಿಯುತ್ತಸಂಬಾಳಿಸುವದನಿತರಲೀ
ಕದುಗಿಚಂಚಲವೈದಿಕೋವಿದ
ಲೊದರಿಕರ್ಕಶವಾಗುತಿಹಹಯ
ವದುಕಣಾಬ್ರಾಹ್ಮಣನುವಾತಪ್ರಕೃತಿಸತ್ವಗುಣಾ|| ||

ನೋಡುತಿಹುದುವಿಶಾಲನಯನದಿ
ಓಡುತೋಡುತನಿಲ್ಲವದುನೆಲ
ಗಾಡಿನಲ್ಲಿಮಲಗುವದುಮಹಾಘರ್ಜಿಪುದುವೆಸನಕ್ಕೆ
ಕಾಡುವದುದುಶ್ಛಿತ್ತದಲಿಹರಿ
ದಾಡುವದುತಾಸಗಣೆತಿಂಬುದು
ರೂಢಿಗಿದುಕ್ಷತ್ರಿಯರಜೋಗುಣಪ್ರಕೃತಿಪ್ರತ್ಯಕವೂ|| ||

ಬೇಗನಡೆವದುಕರದರವರೆಡೆ
ಗಾಗಿಬಾಹದುಚಮ್ಮಿಡಿಕೆಯಿಂ
ಬೇಗದಲಿಕೊಲ್ಲಿಸಿಕೊಳದೆರಾಹುತನಮನದಂತೆ
ಹೋಗುವದುತನ್ನಿಚ್ಛೆಯಲಿಘನ
ವಾಗಿಮೇಯದುಮೈಒಣಗುವದು
ಈಗುಣದಹಯವೈಶ್ಯತಾಮಸಪ್ರಕೃತಿಶ್ಲೇಷ್ಮಗುಣಾ|| ೧೦ ||

ವಾತಪಿತ್ಥಶ್ಲೇಷ್ಮಲಕ್ಷಣ
ರೀತಿವಳಗೊಂದೊಂದುಗುಣವಿ
ಖ್ಯಾತವಾಗಿರಲುತ್ರಿದೋಷಪ್ರಕೃತಿಶೂದ್ರಕಣಾ
ಈತೆರದಗುಣಲಕ್ಷಣಂಗಳು
ಜಾತಿಭೆದದಲುಳ್ಳತುರಗವ
ರಾತಿಗಳಜೈಸುವವುನೃಪರಿಗೇವಿಜಯವಾಜಿಗಳೂ|| ೧೧ ||

ಆಯುಷ್ಯರೇಖೆಯಲಕ್ಷಣ :

ಇನ್ನೊಡವೆನಾಯುಷ್ಯರೇಖೆಯ
ಹೊನ್ನಬಣ್ಣದತೆರದಸುಳಿಯರ
ಡುನ್ನತದಛಾಯೆಯಲಿತೋರಲದಾಯುರಭಿವೃದ್ಧೀ
ನನ್ನಿಯಿಂದಲಿದುಂಡುಮಲ್ಲಿಗೆ
ಯನ್ನುಹೋಲುವರೇಖೆಸುಳಿಯುಪ್ರ
ಸನ್ನವಾಗಿರಲಧಿಕಬಳುವದೆಂದನಾಮುನಿಪಾ|| ೧೨ ||

ಕೋಳಿಹಕ್ಕಿಯಕಾಲಿನುಗುರ್ಗಳ
ಹೋಲಿಕೆಯಸುಳಿರೇಖೆಇರಲದು
ಬಾಳುವದುಬಹುಕಾಲಧನುರಾಕೃತಿಯರೇಖೆಯಿರೇ
ಹೇಳುವದುದೀರ್ಘಾಯುವೆಂದದ
ಮ್ಯಾಲೆಮಕ್ಷುಕಶಿರದಸಂದಿನ
ಸೀಳಿನೊಳ್ಥರಥರದಲಿರಲುಚಿರಾಯುವಾಗಿಹುದೂ|| ೧೩ ||

ಧ್ವನಿಯುಭೇರಿಯತೆರದಲಿರಲದು
ಘನತರದಲಾಯುಷ್ಯವೆಂಬುದು
ಇನಿತುಲಕ್ಷಣವಿಲ್ಲದಿರಲದುಅಲ್ಪಾಯುವೆನಿಸುವವೂ
ಇನನವಾರವಖಂಡತಿಥಿಯ
ಸ್ವಿನಿಯತಾರೆಯಲಶ್ವಲಕ್ಷಣ
ವನುನೀರೀಕ್ಷಿಪುದೆಂದುಪೆಳ್ದನುಶಾಲಹೋತ್ರಮುನೀ|| ೧೪ ||

ರದನಗಳುಸಂಘಟಿಸಿಹೊಂದುವ
ಬದಿಯವಳಪಾಡಿನೊಳುಬಲ್ಲವ
ರದರಚಿನ್ಹಗಳಿಂದಲಂಜನಗಳನುಕಲ್ಪಿಸುವಾ
ಕುದುರೆಗಿನಿತಬ್ದಂಗಳಾಯ್ತೆಂ
ಬುದವಿಚಾರಿಸಿನೋಡಿಪಂಜಾ
ರ್ಶಿದಬಳಿಕಮೂರಾರುಹಕೊಂದಂಜನಸರಿವುತಿಹುದು|| ೧೫ ||

ಕತ್ತುರಿಯಲಿರೆಕಾಳಿಕಾಂಜನ
ಮತ್ತೆಮಕ್ಷುಕಪಕ್ಕದೋಲ್ಕ
ಪ್ಪೆತ್ತಿರಲುಕಾಮಾಕ್ಷಿಕಾಂಜನಹೇಮರೋಚನವಾ
ಮೆತ್ತಿದೋಲ್ಹರಿಣಾಂಜನವುಶಂ
ಖೊತ್ತುಮಧೃತಿಶಂಕತಾಂಜನ
ಮುತ್ತಿನಪ್ರಭೆಯಂತೆಶುಕ್ಲಾಂಜನವುತೋರುವದೂ|| ೧೬ ||

ಒಸಡುತೆರದಿರೆವ್ಯಾಪ್ತಕಾಂಜನ
ದಶನವಗಳಿರೆಛಿದ್ರಿಕಾಂಜನ
ಮಿಸುಕಲಲ್ಲಾಡಲ್ಕೆಅದುತಾನುಧೃತಾಂಜನವೂ
ನಸಿದುಬೀಳುತ್ತಿರುವದಂತಕೆ
ಪೆಸರುಚುತಿಕಾಂಜನವುತಿಳಿಯಲ್
ಕುಸುರಿದನುನವವಿಧಹಯಾಂಜನಗಳುಮುನಿವರ್ಯಾ || ೧೭ ||

ಗ್ರಂಥ :

ಕಾಳಿಕಾಮಕ್ಷುಕಾಚೈವ | ಹರಿಣಾಶಂಖತ್ತೊತ್ತಮ
ಶುಕ್ಲಾಚವ್ಯಾಪ್ತಿಕಾಛಿದ್ರಂಚಾದ್ಯವ್ಯಧೃತಿಕಾಂಜನ|| ೧೮ ||

ಧರೆಗಧಿಕವುತ್ಸಂಗಿದುರ್ಗದಿ
ಮೆರೆವದುರ್ಗಾಂಬಿಕೆಯಸಿರಿಪದ
ಸರಿಸಿಜಭ್ರಮರೋಪಮಾನಕವೀಂದ್ರಹಿರಿಯಣ್ಣ
ವಿರಚಿಸಿದಹಯರತ್ನಶ್ರೇಣಿಯೊ
ಳೊರದಶುಭಲಕ್ಷಣವಿಚಾರದ
ಪರಿಗೆಸಂದುದುದ್ವೀತಿಯಸಂಧಿಶರಾಬ್ಧಪದಸಂಖ್ಯೆ|| ೧೯ ||

ಅಂತುಸಂಧಿ೨ಕ್ಕಂಪದಗಣನೆ೪೮ಕ್ಕಂ
ಮಂಗಳಮಸ್ತುಶ್ರೀಶ್ರೀಶ್ರೀ ||