೧. ಮೊದಲನೇ ಲೇಖನ “ಪೌರಾತ್ಯವಾದದ ಮರು-ಚಿಂತನೆ: ಕ್ರೈಸ್ತ ಪಾದ್ರಿಗಳು, ಪಾಶ್ಚಾತ್ಯ ಆಡಳಿತಗಾರರು ಮತ್ತು ಲಿಂಗಾಯತ ಪುರಾಣಗಳು” ಇಂಗ್ಲಿಷ್ ಮೂಲದ್ದು. ಇದನ್ನು Translation in Asia (೫ನೇ ಮಾರ್ಚ್‌ನಿಂದ ೬ನೇ ಮಾರ್ಚ್, ೨೦೦೯) ಎಂಬ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮೊದಲು ಮಂಡಿಸಲಾಯಿತು. National University of Singapore, Singapore ಅವರು ಈ ಸಂಕಿರಣವನ್ನು ನಡೆಸಿದರು. ಸಂಕಿರಣದ ಸಂಯೋಜಕರು ಈ ಲೇಖನವನ್ನು ಅತಿ ಶೀಘ್ರದಲ್ಲಿ ಪ್ರಕಟಿಸಲಿದ್ದಾರೆ.

೨. ಎರಡನೇ ಲೇಖನ “ಅಳಿವರ ಉಳಿವರ ಸುಳಿವರ ನಿಲವ ನೋಡಿ ಕಂಡು’: ಆಧುನಿಕ ಇತಿಹಾಸಕ್ಕೆ ಅಲ್ಲಮನ ಪ್ರವೇಶ” ಕನ್ನಡ ಲೇಖನ. ಇದನ್ನು ಸಂಕ್ರಮಣದಲ್ಲಿ (ಸಂ. ೪೫, ಸಂಖ್ಯೆ ೦೨, ೨೦೧೦) ಪ್ರಕಟಿಸಲಾಗಿದೆ.

೩. ಮೂರನೇ ಲೇಖನ “‘ಹಿಂದೆ ಎಷ್ಟು ಪ್ರಳಯ ಹೋಯಿತ್ತೆಂದರಿಯೆ’: ವಸಾಹತುಶಾಹಿ ಮತ್ತು ಲಿಂಗಾಯತ ಸಮುದಾಯ”ವೂ ಸಹ ಕನ್ನಡ ಮೂಲದ್ದು. ಇದನ್ನು ಪ್ರಥಮ ಬಾರಿಗೆ ಕನ್ನಡ ಅಧ್ಯಯನದಲ್ಲಿ (ಸಂ. ೧೪, ಸಂಖ್ಯೆ ೧, ೨೦೦೮) ಪ್ರಕಟಿಸಲಾಗಿದೆ. ಈ ನಿಯತಕಾಲಿಕದಲ್ಲಿ ನನ್ನ ಅನೇಕ ಲೇಖನಗಳನ್ನು ಪ್ರಕಟಿಸಲು ಪ್ರೋತ್ಸಾಹಿಸಿದ ರಹಮತ್ ತರೀಕೆರೆ ಮತ್ತು ಅಮರೇಶ್ ನುಗಡೋಣಿಯವರಿಗೆ ನನ್ನ ಧನ್ಯವಾದಗಳು.

೪. ನಾಲ್ಕನೇ ಲೇಖನವು “ಯಜಮಾನಿಕೆಗಾಗಿ ಭಾಷಾಂತರ: ವಸಾಹತುಶಾಹಿ ಮತ್ತು ಬಸವಣ್ಣನವರ ವಚನಗಳ ಭಾಷಾಂತರ” ಇಂಗ್ಲಿಷ್ ಮೂಲದ್ದು. ಇದನ್ನು ಕನ್ನಡಕ್ಕೆ ಭಾಷಾಂತರಿಸಿ ಸಂಕ್ರಮಣದಲ್ಲಿ (ಸಂ. ೩೮, ಸಂಖ್ಯೆ ೪, ೨೦೦೩) ಪ್ರಕಟಿಸಲಾಗಿದೆ.

೫. ಐದನೇ ಲೇಖನ ‘“ಹಿಂದಣ ಹೆಜ್ಜೆಯನ್ನರಿಯದೆ ಮುಂದಣ ಹೆಜ್ಜೆ ಇಡಲಾಗದು’: ಹಳಕಟ್ಟಿ, ವಚನಗಳು ಮತ್ತು ಲಿಂಗಾಯತರು” ಇಂಗ್ಲಿಷ್ ನಲ್ಲಿ ಬರೆಯಲ್ಪಟ್ಟಿದ್ದು, ಇದು Journal of South Asian Studies (ಸಂ. ೩೩, ಸಂಖ್ಯೆ ೨, ೨೦೧೦)ನಲ್ಲಿ ಪ್ರಕಟವಾಗಿದೆ.

೬. ಆರನೇ ಲೇಖನ “ ‘ಹಿರಿಯರ ಹಿರಿಯತನ ಹಿಂದೇನಾಯಿತು?’ : ಬಸವಣ್ಣನ ಪೂರ್ವಾಪರದ ಬಗ್ಗೆ ಮತ್ತಷ್ಟು…” ಕನ್ನಡ ಮೂಲದ್ದು. ಇದನ್ನು ಕನ್ನಡ ಅಧ್ಯಯನದಲ್ಲಿ ಪ್ರಕಟಿಸಲಾಗಿದೆ (ಸಂ. ೧೩, ಸಂಖ್ಯೆ ೦೨, ೨೦೦೭).

೭. ಏಳನೇ ಲೇಖನ “ಸಾಹಿತ್ಯ ವಿವಾದಗಳು: ಯಾಕೆ, ಹೇಗೆ, ಏನು ಮತ್ತು ಯಾವಾಗ” ಇಂಗ್ಲಿಷ್ ಮೂಲದ್ದು ಮತ್ತು ಅಪ್ರಕಟಿತ. ಇದನ್ನು ನನ್ನ ಪಿಎಚ್.ಡಿ. ಮಹಾಪ್ರಬಂಧದಿಂದ ಆಯ್ಕೆ ಮಾಡಲಾಗಿದೆ.

೮. ಎಂಟನೇ ಲೇಖನ “ಇತಿಹಾಸದ ಭಾಷಾಂತರ: ಸಾಹಿತ್ಯ ವಿವಾದ, ಕಾದಂಬರಿ ಮತ್ತು ಮತೀಯ ಓದು” ಇಂಗ್ಲಿಷ್ ಮೂಲದ್ದು ಮತ್ತು ಅಪ್ರಕಟಿತ. ಇದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಮಂಡಿಸಲು (೨೧ನೇ ಜನವರಿ, ೨೦೦೨ರಂದು) ಬರೆಯಲ್ಪಟ್ಟ ಲೇಖನ.

೯. ಒಂಬತ್ತನೇ ಲೇಖನ “ಪ್ರಮಾಣಿಕೃತ ಕೃತಿ, ವರ್ಚಸ್ಸು ಮತ್ತು ಒಡಕು: ವಸಾಹತೋತ್ತರ ಕಾಲದಲ್ಲಿ ೧೨ನೇ ಶತಮಾನದ ವಚನಗಳ ಇಕ್ಕಟ್ಟು-ಬಿಕ್ಕಟ್ಟು” ಇಂಗ್ಲಿಷ್ ಮೂಲದ್ದು. ಹೈದರಾಬಾದ್‌ನ ಓಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ನಡೆಯಬೇಕಿದ್ದ Vanishing Border? Cultures in the Age of Globalism (೪ನೇ ಮಾರ್ಚ್ ರಿಂದ ೬ನೇ ಮಾರ್ಚ್, ೨೦೧೦) ಎಂಬ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ತಯಾರಿಸಿದ ಲೇಖನ.

೧೦. ಹತ್ತನೇ ಮತ್ತು ಕೊನೆಯ ಲೇಖನ “ವೀರಶೈವ ಚಳುವಳಿಯ ಹುಟ್ಟು” ಇಂಗ್ಲೀಷಿನಿಂದ ಭಾಷಾಂತರಗೊಂಡ ಲೇಖನ. ಮಾರ್ಕ್ಸಿಸ್ಟ ಚಿಂತಕರಾದ ಆರ್. ಎನ್. ನಂದಿಯವರ Origin of Virashaiva Movement ಇದರ ಮೂಲ. ಇದನ್ನು ಕನ್ನಡ ಅಧ್ಯಯನ (ಬಿಸಿಲು ಸಂಚಿಕೆ, ೨೦೦೦) ದಲ್ಲಿ ಪ್ರಕಟಿಸಲಾಗಿದೆ.