ಹೊಇಗೆ ಭೂಮಿ ಇಲ್ಲವೆ ಹುಡಿಮಣ್ಣಿನ ನೆಲ ಬೇಕು, ಕಡಿಮೆಯೆಂದರೆ ಐದಾರು ಆಟಗಾರರು ಇರಬೇಕು.

ನೆಲದಲ್ಲಿ ಒಂದು ಇಂಚಿನಷ್ಟು ಕುಳಿ ತೆಗೆದು, ಒಂದು ಚಿಪ್ಪಿಯನ್ನು ಡಬ್ಬಿಟ್ಟು ಹುಗಿಯುತ್ತಾರೆ. ಆ ಚಿಪ್ಪಿಯ ಮೇಲೆ ಆಟಗಾರರು ಒಬ್ಬೊಬ್ಬರಾಗಿ ಬಂದು ಒಂದೇ ಬಾರಿಗೆ “ಆಟ್ಟಕ್ಕಿ ಗಂಧ ಸಾಲಕ್ಕಿ” ಎನ್ನುತ್ತ ತುಸು ತುಸು ಮಣ್ಣು ಚೆಲ್ಲುವರು. ಆ ಮೇಲೆ ಒಬ್ಬರ ನಂತರ ಇನ್ನೊಬ್ಬರಂತೆ ಊಬ್ಸಿ ಊಬ್ಸಿ ಚಿಪ್ಪಿಯ ಮೇಲಿದ್ದ ಮಣ್ಣನ್ನು ಹಾರಿಸುವರು, ಎಲ್ಲರೂ ಮುಗಿದ ಮೇಲೆ ಮತ್ತೆ ಒಬ್ಬರ ನಂತರ ಇನ್ನೊಬ್ಬರನ್ನು ಊದುವರು, ಯಾರು ಊದಿದಾಗ ಚಿಪ್ಪಿ ಕಾಣುತ್ತದೆಯೋ ಅವರನ್ನು ಇತರರು ಚಿಪ್ಪಿ ಕಾಣಿಸಿದ ಹುಡುಗ ಎಂದು ನಗೆಯಾಡುವರು. ಹುಡುಗನಿದ್ದರೆ ಹೆಂಡ್ತಿ ಕಾಣಿಸ್ದಾ” ಎಂತಲೂ ಹುಡಿಗೆಯಾದರೆ “ಗಂಡ್ನ ಕಾಣಿಸ್ತಾ” ಎಂತಲೂ ಛೇಡಿಸಿ ನಗುವರು. ನಗೆಯಾಟದಲ್ಲಿ ಇದೊಂದು ಹೊಸ ಬಗೆಯದು.