ಈ ಅಡಗಾಟದಲ್ಲಿ ಅಜ್ಜಿ ಹಾಡುವುದಿಲ್ಲ, ಅಜ್ಜಿ ಒಬ್ಬನ ಕಣ್ಣು ಕಟ್ಟಿದಾಗ, ಅವನು ತನ್ನ ಅಂಗೈ ಜೋಡಿಸಿ ಮುಂದೆ ನೀಡುತ್ತಾನೆ. ಉಳಿದ ಆಟಗಾರರು ಒಬ್ಬೊಬ್ಬರಾಗಿ ಬಂದು ನೀಡಿದ ಅಂಗೈ ಮೇಲೆ “ಅಪ್ಳೇ ತುಪ್ಳೇ ” ಎಂದು ಹೇಳುತ್ತಾ ತಮ್ಮ ಕೈಯಿಂದ ಬಡಿಯುವರು. ಎಲ್ಲರೂ ಅಡಗಿಕೊಂಡ ಮೇಲೆ ತಾವು ಅಡಗಿ ಕೊಂಡುವರ ಸಂಕೇತವೆಂದು ಕೂ   ಅನ್ನುವರು. ಆಗ ಅಜ್ಜಿ ಕಟ್ಟಿದ ಕಣ್ಣನ್ನು ಬಿಡುವಳು, ಮುಂದಿನ ಭಾಗವೆಲ್ಲ ಮೇಲಿನಂತೆಯೇ ಇರುತ್ತದೆ.