ಹಿರಿ ಹುದ್ದರಿ ಅಜ್ಜಿಯನ್ನು ಕಣ್ಣು ಕಟ್ಟಿಸಿ ಕೊಳ್ಳುವವರನ್ನೂ ಎಂಜಲು ಉಗುಳುವ ವಿಧಾನದಿಂದ ಆರಿಸುವರು. ಪರಸ್ವರ ಒಪ್ಪಿಗೆಯಿಂದಲೂ ಆರಿಸಬಹುದು.

ಅಜ್ಜಿ ಕಣ್ಣು ಕಟ್ಟಿಸಿಕೊಳ್ಳುವವರ ಕಣ್ಣು ಕಟ್ಟಿ,
“ಕಣ್ಣೇ ಕಟ್ಟೇ
ಕಾರೇ ಮುಳ್ಳೇ
ಮೂರ್ ಶಿದ್ದಕ್ಕಿ
ತಣ್ಣೆ ಅನ್ನಾ
ಉಂಬರೆಲ್ಲಾ
ಕು ಹೂss ಯ್”

ಎಂದು ಹೇಳಿ ಮುಗಿಸುವುದರೊಳಗೆ ಉಳಿದವರು ತಮ ತಮಗೆ ಇಷ್ಟ ಬಂದ ಸ್ಥಳದಲ್ಲಿ ಅಡಗಿಕೊಳ್ಳುವರು. ಕಣ್ಣು ಕಟ್ಟಿಸಿ ಕೊಂಡವರು ಅಡಗಿ ಕೊಂಡವರನ್ನು ಹಿಡಿಯಲು ಹೋಗುವರು ಮೊದಲು ಮುಟ್ಟಿಸಿಕೊಂಡವರು ಅಜ್ಜಿಯನ್ನು ಮುಟ್ಟುವ ಮೊದಲೇ ಮುಟ್ಟಲು ಹೋದವರು ಮುಟ್ಟಬೇಕು. ಯಾರನ್ನು ಮುಟ್ಟಲು ಸಾಧ್ಯವಾಗದೇ ಇದ್ದರೆ ತಿರುಗಿ ಅವರೇ ಕಣ್ಣು ಕಟ್ಟಿಸಿಕೊಳ್ಳಬೇಕು, ಮುಟ್ಟುವವ ಉಳಿದವರನ್ನು ಮುಟ್ಟಲೆಂದು ಅಜ್ಜಿ ಹತ್ತರವೇ ನಿಲ್ಲಬಾರದು, ನಿಂತರೆ ಆಟಗಾರರು:

ಅಜ್ಜೀ ಕಾಲಿಗ್ ಗೆಜ್ಜೆ ಕಟ್ಟದ್ರೆ ಅದ್ದುಂದ್ (ಉ) ರುಪಾಯ
ಅಮ್ಟಿ ಮರಕೆ ಗುಮ್ಟಿ ಕಟ್ಟಿದ್ರೆ ಅದ್ದುಂದ್ (ಉ) ರುಪಾಯ

ಎಂದು ಹಾಡಿ ಟೀಕಿಸಿ,ಮುಟ್ಟುವನನ್ನು ಅಲ್ಲಿಂದ ದೂರ ನಿಲ್ಲ ಹಚ್ಚವರು,