ಆಟಗಾರರಲ್ಲಿ ಒಬ್ಬರು ತಮ್ಮ ಕೈಗಳೆರಡನ್ನು ಪರಸ್ವರ ಎದುರುಬದುರಾಗಿ ಅಂದರೆ ಬಲಗೈ ಬೆರಳು ಎಡಮೊಣಕೈ ಸಂದನ್ನೂ ಎಡಗೈಬೆರಳು ಬಲಮೊಣಕೈ ಸಂದನ್ನು ಮುಟ್ಟುವಂತೆ ಹಿಡಿದಿರುತ್ತಾರೆ. ಉಳಿದ ಆಟಗಾರರು ಒಬ್ಬೊಬ್ಬರಾಗಿ ಆ ಕೈಗಳನ್ನು ತುಸು ತುಸು ಹಿಂದಕ್ಕೆ ಎಳೆಯುವರು. ಕೊನೆ ಕೊನೆಗೆ ಎಳೆಯುವವರು. ಬಂದು ಕೊನೆಗೆ ಎದುರುಬದುರಾಗಿ ಬಂದು ಬೇರೆಯಾಗುವುವು. ಯಾರಿಂದ ಕೈಗಳು ಅಗಲುವಂತಾಯಿತೋ ಅವರೇ ಕಳ್ಳರು

ಆಟಗಾರರು ಕಳ್ಳನ ಹತ್ತರ “ಹಾಲಕ್ಕೋ? ಹತ್ತಕ್ಕೊ? ಮುತ್ತಕ್ಕೊ? ಎಂದು ಕೇಳುವರು. (ಹಾಲು, ಹತ್ತಿ, ಮುತ್ತು ಇವು ಅನುಕ್ರಮವಾಗಿ ೬, ೧೦,೩ ರ ಸಾಂಕೇತಿಕ ಶಬ್ದಗಳು) ಅಥವಾ ಎಷ್ಟು ಸಿದ್ದೆ ಅಕ್ಕಿ ಬೇಕು? ಎಂದು ಕೇಳುವರು. ಆಗ ಕಳ್ಳ ಹಾಲು, ಹತ್ತಿ, ಮುತ್ತು ಎಂಬ ಶಬ್ದಗಳಲ್ಲಿ ಒಂದನ್ನಾಗಲೀ ಹೇಳುವನು. ಕಳ್ಳನು ಎಷ್ಟು ಸಾರೆ ಅಥವಾ ಎಷ್ಟು “ಸಿದ್ದೆ ಅಕ್ಕಿ” ಅನ್ನುತ್ತಾನೆಯೋ ಅಷ್ಟು ಸಾರೆ ಕಳ್ಳರನ್ನು ಹುಡುಕುವ ಅವಕಾಶ ಪಡೆಯುತ್ತಾನೆ.

ಇದಾದ ನಂತರ, ಆಟಗಾರರಲ್ಲಿ ಒಬ್ಬರು ಒಂದು ಕಾಳನ್ನು ಅಥವಾ ಒಂದು ಚಿಕ್ಕ ಕಲ್ಲನ್ನು ಕಳ್ಳನ ಎದುರಿಗೆ ನಿಂತಿರುವ ಅಥವಾ ಕುಳಿತಿರುವ” ಆಟಗಾರರಲ್ಲಿ ಒಬ್ಬನ ಕೈಯಲ್ಲಿ ಇಟ್ಟು, ಇನ್ನೊಬ್ಬನ ಕೈಯಲ್ಲಿಟ್ಟಂತೆ ನಟಿಸಿ, ಮತ್ತೆ ಉಳಿದೆಲ್ಲರ ಕೈಗೂ ಬರಿಗೈಯನ್ನೇ ಇಟ್ಟು, ಇನ್ನೊಬ್ಬನ ಕೈಯಲ್ಲಿಟ್ಟಂತೆ ನಟಿಸಿ ಮತ್ತೆ ಉಳಿದೆಲ್ಲರ ಕೈಗೂ ಬರಿಗೈಯನ್ನೇ ಇಟ್ಟು, ಆದರೆ ಆ ವಸ್ತುವನ್ನೇ ಇಟ್ಟಂತೆ ನಟಿಸಿ, ಕಲ್ಲು (ಅಥವಾ ಕಾಳು) ಯಾರ ಕೈಯಲ್ಲಿದೆ? ಎಂದು ಕೇಳುವನು. ಕಳ್ಳ ತಪ್ಪು ವ್ಯಕ್ತಿಯನ್ನು ತೋರಿಸಿದರೆ ಕಲ್ಲು ಇದ್ದವರು “ಕೆಮ್ಕೋಚ್” ಎನ್ನುತ್ತಾ ತಮ್ಮ ಕೈಯಲ್ಲಿದ್ದ ಕಳ್ಳನ್ನು ತೋರಿಸುತ್ತಾರೆ. “ಕೇಮ್ಕೋಚ್” ಎಂದವರು ಮತ್ತೆ ಕಲ್ಲನ್ನು ಇತರರ ಕೈಯಲ್ಲಿ ಮೊದಲಿನಂತೆಯೇ ಅಡಗಿಸುತ್ತಾರೆ. ಹೀಗೆಯೇ ಕಳ್ಳ ಈಗಾಗಳೇ ತಾನು ಕೇಳಿದಷ್ಟು ಅವಕಾಶದಲ್ಲಿ ಕಲ್ಲು ಇದ್ದವರನ್ನು ಗುರುತಿಸಲಾಗದೆ ಹೋದರೆ, ಕಲ್ಲನ್ನು ನೆಲದ ಮೇಲೆಯೇ ಒಂದೆಡೆ ಅಡಗಿಸಿ ಇಡುವರು. ಕಳ್ಳ ಹುಡುಕಿ ತಂದರೆ ಹೊಸ ಕಳ್ಳನನ್ನು ಆರಿಸಿ, ಅವನು ಎಷ್ಟು ಅವಕಾಶ ಕೇಳುವನು – ಎಂದು ತಿಳಿದು ಮತ್ತೆ ಆಟ ಆರಂಭಿಸುವರು. ನೆಲದಮೇಲೆ ಇಟ್ಟ ಕಲ್ಲನ್ನೂ ಹುಡಕದೆ ಇದ್ದಲ್ಲಿ ಕಳ್ಳನಿಗೆ ಆತನೇ ಮತ್ತೆ ಬೇರೆ ಅಥವಾ ಸಿದ್ದೆ ಅಕ್ಕಿ ಕಳುವನು ಕಲ್ಲು ಇದ್ದವರನ್ನು ಸರಿಯಾಗಿ ಊಹಿಸಿದಾಗ ಆತ ಗೆದ್ದಂತೆ, ಕಲ್ಲು ಇದ್ದವರು ಮುಂದಿನ ಆಟಕ್ಕೆ ಕಳ್ಳರಾಗುವರು,