ಒಬ್ಬನು ’ಕೋಲ್ ಕೊಚ್’ ಹುಡುಕುವವ. ಅವನೇ ಒಂದು ಪಕ್ಷ: ಉಳಿದವರೆಲ್ಲ ಒಂದು ಪಕ್ಷ. ಹುಡುಕುವವ ತನ್ನ ಬೊಗಸೆ ತುಂಬ ಮಣ್ಣು ಹಿಡಿದುಕೊಳ್ಳುತ್ತಾನೆ. ಹಾಗೂ ಅದರಲ್ಲಿ ಎಂಜಲು ತೂಕುತ್ತಾನೆ. ಎಂಜಲ ಬಿದ್ದಲ್ಲಿ ಸುಮಾರು ಎರಡು ಇಂಚು ಉದ್ದದ ಕೋಲಿನ ತುಂಡನ್ನು ನೆಡುತ್ತಾನೆ. ಕೋಲಿನ ತುಂಡನ್ನು ಹುಡುಕುವವ ಸರಿಯಾಗಿ ನೋಡಿಕೊಂಡ ಮೇಲೆ ಇನ್ನೊಬ್ಬನು ಅವನ ಕಣ್ಣು ಕಟ್ಟಿ ಮನೆಯ ಕಂಪೌಂಡಿನಲ್ಲಿ ಅತ್ತ ಇತ್ತ ತಿರುಗಾಡಿಸುತ್ತಾನೆ. ನಿಂತಲ್ಲಿಯೇ ಪ್ರದಕ್ಷಣೆ ಹಾಕಿಸಿ, ಬೊಗಸೆಯಲ್ಲಿದ್ದ ಕೋಲು ತುಂಡು, ಮಣ್ಣು ಕೆಳಗೆ ಬೀಳಿಸುವಂತೆ ಹೇಳುತ್ತಾನೆ. ಅದಾದ ಮೇಲೆ ಮತ್ತೆ ಅತ್ತ ಇತ್ತ ತಿರುಗಿಸಿ ಆಟ ಪ್ರಾರಂಭಿಸಿದ ಸ್ಥಳಕ್ಕೆ ತಂದುಬಿಡುತ್ತಾನೆ. ಕಡ್ಡಿ ಹುಡುಕುವವ ತಾನು ಚಲಿಸಿದ ಸ್ಥಳವನ್ನು  ಅಂದಾಜಿನಿಂದ ಕಂಡುಹಿಡಿಯಲು ಪ್ರಯತ್ನಿಸುತ್ತಾನೆ. ಈ ಮೊದಲೇ ಕರಾರು ಮಾಡಿದಂತೆ ನೂರೋ ಇನ್ನೂರೋ ಹೇಳುವುದರೊಳಗೆ ಆತ ಕಡ್ಡಿ ಹುಡುಕಿ ತರಬೇಕು. ಅಸಮರ್ಥನಾದರೆ ಬೇರೊಬ್ಬರು ಕಡ್ಡಿ ತರುವರು, ಕಡ್ಡಿ ತರಲು ಸೋತವರೇ ಮತ್ತೆ ಹುಡುಕುವರಾಗುವರು. ಗೆದ್ದರೆ ಬೇರೆ ಯಾರಾದರೂ ಹುಡುಕುವವರಾಗಬಹುದು