ಇಬ್ಬರು ಆಟಗಾರರಿರುತ್ತಾರೆ. ಆಟ ಪ್ರಾರಂಭಿಸುವ ಮೊದಲು ಪಾಟಿಯ ಎಡಕ್ಕು ಬಲಕ್ಕು ೧ – ೧೦ ರ ವರೆಗೆ ಸಂಖ್ಯೆಗಳನ್ನು ಬರೆದಿಟ್ಟುಕೊಳ್ಳುತ್ತಾರೆ. ಎಡದ ಸಾಲು ಒಬ್ಬನದು, ಬಲದ ಸಾಲು ಇನ್ನೊಬ್ಬನದು. ಆಟ ಪ್ರಾರಂಭಿಸಿದವರು ಎಡಗೈ ಮರೆಮಾಡಿ ಬಲಗೈಯಿಂದ ತನ್ನ ಸಾಲಿನಲ್ಲಿರುವ ಒಂದು ಸಂಖ್ಯೆಯನ್ನು ಬರೆದು, ಬರೆದ ಸಂಖ್ಯೆ ಯಾವುದು ಎಂದು ಕೇಳುತ್ತಾರೆ. ಎದುರಾಳಿ ಅದನ್ನು ಸರಿಯಾಗಿಯೇ ಹೇಳಿದರೆ ಆಟ ಬಿಡಬೇಕು. ಹೇಳಿದ್ದು ತಪ್ಪಾದರೆ ಆ ಅಂಕಿಯನ್ನು ಒರೆಸಬೇಕು; ಅಂದರೆ ಅದರ ಮೇಲೆ ಗೆರೆ ಎಳೆಯಬೇಕು ಹೀಗೆ ತೆಗೆದು ಹಾಕಿದ ಸಂಖ್ಯೆಯನ್ನು ಆಡುವವರು ಬರೆಯಬಾರದು ಎಲ್ಲ ಸಂಖ್ಯೆಗಳನ್ನೂ ಯಾರು ಗೆರೆ ಹಾಕಿ ಮುಗಿಸಿಕೊಂಡರೋ ಅವರು ಎದುರಾಳಿಯ ಮೇಲೆ “ಹಂಡಿ” ಮಾಡಿದಂತೆ, ಕೆಲವೊಮ್ಮೆ ಹೆಚ್ಚು ಕಾಲ ಆಡುವ ಉದ್ದೇಶದಿಂದ ಪ್ರತಿಯೊಬ್ಬರೂ ಗೆರೆ ಎಳೆದು ಪೂರ್ಣಗೊಳಿಸಿದ ಮೇಲೆ, ಮುಂದಿನ ಸಂಖ್ಯೆಗಳನ್ನು ಕ್ರಮವಾಗಿ ಬರೆದುಕೊಳ್ಳೂತ್ತ ಹೋಗುವರು. ಹೀಗೆ ೧೦೦ ರ ವರೆಗೂ ಬರೆದುಕೊಂಡು ಆಡುವರು.