ಆಟಗಾರರೆಲ್ಲ ಸಾಲಾಗಿ ನಿಂತುಕೊಂಡು ತಮ್ಮ ಕೈಗಳನ್ನು ಹಿಂಬದಿಯಲ್ಲಿ ಗಿಂಚು ಹಾಕಿ ನಿಂತುಕೊಳ್ಳುತ್ತಾರೆ. ಉಳಿದ ಇಬ್ಬರಲ್ಲಿ, ಒಬ್ಬ ಹರಳು ಹಾಕುವವ, ಇನ್ನೊಬ್ಬ ಕೇಳುವವ. ಹರಳು ಹಾಕುವವನು ಹರಳನ್ನು ಒಬ್ಬರ ಕೈಯಲ್ಲಿಟ್ಟು ಇನ್ನೊಬ್ಬರ ಕೈಯಲ್ಲಿಟ್ಟಂತೆ ನಟಿಸುತ್ತಾನೆ. ಕೇಳುವವನು ಹರಳಿದ್ದವರನ್ನು ಅವರ ಮುಖಭಾವದಿಂದಲೇ ಕಂಡುಹಿಡಿಯಲು ಪ್ರಯತ್ನಿಸುತ್ತಾನೆ. ಮುಖಭಾವ ಪರೀಕ್ಷಿಸಲೆಂದು ಹಾವೊ? ಕಪ್ಯೋ? ಎನ್ನುತ್ತಾನೆ. ಕೆಲವರು ಹಾವು ಎಂದರೆ ಮತ್ತೆ ಕೆಲವರು ಕಪ್ಪೆ ಅನ್ನುತ್ತಾರೆ. ಕೆಲವರು ನಕ್ಕರೆ,ಕೆಲವರು ಹರಳಿದ್ದವರ ಹಾಗೆ ಗಂಭೀರವಾಗಿ ನಿಂತುಕೊಳ್ಳುತ್ತಾರೆ. ಹೀಗಾಗಿ ಹರಳಿದ್ದವರನ್ನು ಹುಡುಕುವದು ಸುಲಭವಲ್ಲ. ಕೇಳುವವರು ಹರಳಿದ್ದವರನ್ನು ಸರಿಯಾಗಿಯೇ ಗುರುತಿಸಿದರೆ ಹರಳಿದ್ದವರು ಕೇಳುವವರಾಗುವರು: ಹಾಗೂ ಗುರುತಿಸಿದವರು ಹರಳು ಹಾಕುವವರಾಗುವರು. ಹಿಂದಿನ ಹರಳು ಹಾಕುವವರು ಆಟಗಾರರಾಗಿ ಸಾಲಿನಲ್ಲಿ ನಿಲ್ಲುವರು. ಹರಳು ಇದ್ದವರನ್ನು ಕೇಳುವವನು ಗುರುತಿಸದೇ ಹೋದರೆ, ಕೇಳುವವ ಹಾಗೂ ಹರಳು ಹಾಕುವವ ಬದಲಾಗುವುದಿಲ್ಲ.