ಈ ಆಟಕ್ಕೆ ಕನಿಷ್ಠ ಇಬ್ಬರಾದರೂ ಬೇಕು. ಹೊಇಗೆ ವಿಪುಲವಾಗಿರುವಲ್ಲಿ ಕುಳಿತುಕೊಂಡು ಮೊದಲು ಒಬ್ಬನು ಮಣ್ಣಿನ ಒಡ್ಡನ್ನು ಏರಿಸುತ್ತಾನೆ. ಇದಕ್ಕೆ ಗುಪ್ಪೆಯೆನ್ನುವರು. ಗುಪ್ಪೆಯನ್ನು ಒಂದು ಅಥವಾ ಬಳೆಯ ತುಂಡು, ಇಲ್ಲವೇ ಕಡ್ಡಿಯನ್ನು ಅದರಲ್ಲಿ ಯಾರಿಗೂ ಕಾಣಿಸದಂತೆ ಅಡಗಿಸುವನು. ಉಳಿದವರಲ್ಲಿ ಯಾರೊಬ್ಬರು ಅಥವಾ ಇಬ್ಬರು ತಮ್ಮ ಕೈಗಿಂಚು ಹಾಕಿ, ವಸ್ತು ಇರಬಹುದಾದ ಸ್ಥಳವನ್ನು ಊಹಿಸಿ, ಆ ಒಡ್ಡಿನ ಮೇಲೆ ಇಡುವರು. ಅವರು ಕೈ ಇಟ್ಟ ಸ್ಥಳದಲ್ಲಿ ವಸ್ತು ಇದ್ದರೆ, ಅವರು ಗೆದ್ದಂತೆ, ಗೆದ್ದವರು ಮತ್ತೆ ಮೇಲಿನಂತೆಯೇ ಗುಪ್ಪೆ ಕಟ್ಟಿ ವಸ್ತುವನ್ನು ಅಡಗಿಸುವರು. ಹೀಗೆಯೇ ಆಟ ಮುಂದೆ ಸಾಗುವದು.