ಸಿದ್ದಾರೂಢಮಠ:

ಇದೊಂದು ಪ್ರಸಿದ್ಧ ಧಾರ್ಮಿಕ ಸಂಸ್ಥೆ ಮತ್ತು ದೇವಸ್ಥಾನವಾಗಿದೆ. ನಗರದಿಂದ ೨ ಕಿ.ಮೀ. ದೂರದಲ್ಲಿದೆ. ಸ್ವಾಮಿ ಸಿದ್ದಾರೂಢರು ಅದ್ವೈತ ಸಿದ್ಧಾಂತವನ್ನು ಬೋಧನೆ ಮಾಡಿದ್ದಾರೆ. ಈ ಮಠಕ್ಕೆ ಎಲ್ಲ ಜಾತಿ ಮತ್ತು ಧರ್ಮದ ಕರ್ನಾಟಕ, ಮಹಾರಾಷ್ಟ್ರ ಮತ್ತು ನೆರೆ ರಾಜ್ಯಗಳ ಸಾವಿರಾರು ಜನರು ಭಕ್ತರಾಗಿದ್ದಾರೆ.

 

ಮೂರುಸಾವಿರ ಮಠ:

ಈ ಮಠವು ೧೨ನೇ ಶತಮಾನದಲ್ಲಿ ವೀರಶೈವ ಧರ್ಮದ ಧಾರ್ಮಿಕ ಕ್ಷೇತ್ರವಾಗಿ ಸ್ಥಾಪಿಸಲ್ಪಟ್ಟಿತು. ಶ್ರೀಚನ್ನಬಸವಣ್ಣ ಮತ್ತು ಅವರ ೩೦೦೦ ಅನುಯಾಯಿಗಳು (ಶರಣರು) ಉಳವಿಯನ್ನು ಬಿಟ್ಟು ಇಲ್ಲಿಗೆ ಬಂದು ನಾಡಿನೆಲ್ಲೆಡೆ ಧರ್ಮಪ್ರಚಾರವನ್ನು ಕೈಗೊಂಡರು.

 

ಬೆಂಗೇರಿ:

ಹುಬ್ಬಳ್ಳಿ ಬಸ್‌ಸ್ಟ್ಯಾಂಡಿನಿಂದ ೫ ಕಿ.ಮೀ. ಅಂತರದಲ್ಲಿ ಬೆಂಗೇರಿಯಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರ, ಪ್ರಾಕೃತಿಕ ಚಿಕಿತ್ಸಾಕೇಂದ್ರ ಹಾಗೂ ಯೋಗಕೇಂದ್ರಗಳು ನೋಡತಕ್ಕವುಗಳಾಗಿವೆ. ಈ ಖಾದಿಗ್ರಾಮೋದ್ಯೋಗ ಕೇಂದ್ರ ೧-೧೧-೧೯೫೭ ರಲ್ಲಿ ಪ್ರಾರಂಭವಾಯಿತು. ಶ್ರೀ. ವ್ಹಿ.ಟಿ. ಮಾಗಡಿಯವರು ಅದರ ಚೇರಮನ್ನರಾಗಿದ್ದರು. ಮುಖ್ಯವಾಗಿ ಇಲ್ಲಿ ರಾಷ್ಟ್ರಧ್ವಜಗಳ ತಯಾರಿಕೆ ಆಗುತ್ತದೆ. ಖಾದಿ ವಸ್ತ್ರಗಳು, ಸೀರೆ, ಶಾಲುಗಳು ಮುಂತಾದವುಗಳನ್ನು ತಯಾರಿಸುತ್ತಾರೆ. ಪ್ರಾಕೃತಿಕ ಚಿಕಿತ್ಸಾಕೇಂದ್ರಗಳಲ್ಲಿ ನಿಸರ್ಗ ಚಿಕಿತ್ಸೆಯೊಂದಿಗೆ ಯೋಗತರಬೇತಿಗಳು ನಡೆಯುತ್ತವೆ.

 

ಇಂದಿರಾ ಗಾಜಿನ ಮನೆ:

ಹುಬ್ಬಳ್ಳಿ ಬಸ್‌ಸ್ಟ್ಯಾಂಡಿನಿಂದ ಎಡಭಾಗದಲ್ಲಿ ಇಂದಿರಾ ಗಾಜಿನ ಮನೆ ಇದೆ. ಸುಂದರವಾದ ಹೂದೋಟಗಳಿಂದ ಕೂಡಿದ ಉದ್ಯಾನವನ ಎಲ್ಲರ ಮೆಚ್ಚುಗೆ ಗಳಿಸುವಂತ ಸ್ಥಳ.

ಉನ್ನತ ಮಟ್ಟದ ಸಭೆ ಸಮಾರಂಭಗಳು, ರಾಜ್ಯೋತ್ಸವ ಸನ್ಮಾನಗಳು ಈ ಗಾಜಿನ ಮನೆಯಲ್ಲಿ ನಡೆಯುವುದು ವಾಡಿಕೆ. ಹಾಗೂ ಖಾದಿ ವಸ್ತುಗಳ ಮಾರಾಟದ ವೇದಿಕೆ. ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುವ ತಾಣ ಇದಾಗಿದೆ.

 

ಸಾಯಿಮಂದಿರ:

ಇದು ಬಸ್‌ಸ್ಟ್ಯಾಂಡಿನಿಂದ ೫ ಕಿ.ಮೀ. ದೂರದ ಶಿರಡಿ ನಗರದಲ್ಲಿ ಕಾಣಸಿಗುತ್ತದೆ. ಈ ಮಂದಿರದಲ್ಲಿ ಅಮೃತಶಿಲೆಯಲ್ಲಿ ಕೆತ್ತಲಾಗಿರುವ ಶ್ರೀ ಸತ್ಯ ಸಾಯಿ ಮೂರ್ತಿಯು ಅತ್ಯಂತ ಮನಮೋಹಕವಾಗಿದೆ. ಇದು ಸ್ವಲ್ಪ ಎತ್ತರ ಸ್ಥಾನದಲ್ಲಿರುವುದರಿಂದ ವಾಯುವಿಹಾರಕ್ಕೆ ಹೋದವರಿಗೆ ಅನುಕೂಲ, ಆರೋಗ್ಯದಾಯಕ ಸ್ಥಳವಾಗಿದೆ.

 

ಕೆ.ಎಂ.ಸಿ

ಹುಬ್ಬಳ್ಳಿಯ ಬಸ್‌ನಿಲ್ದಾಣದಿಂದ ಧಾರವಾಡಕ್ಕೆ ಬರುವ ಮಾರ್ಗದಲ್ಲಿ ಸಿಗುವ ಕೆ.ಎಂ.ಸಿ ಇಂದಿನ ಕಿಮ್ಸ್‌ಒಂದು ಉತ್ತರ ಕರ್ನಾಟಕದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆಯಾಗಿದೆ.

 

ವಸತಿ ಸ್ಥಳಗಳು:

೧. DIET ಧಾರವಾಡ

೨. ಹೆಣ್ಣು ಮಕ್ಕಳ ಟ್ರೇನಿಂಗ್‌ ಕಾಲೇಜು ಧಾರವಾಡ