ಈ ಪುಸ್ತಕ ರೂಪುಗೊಳ್ಳಲು ಹಲವಾರು ಮಂದಿ ಕಾರಣರಾಗಿದ್ದಾರೆ. ಅವರಲ್ಲಿ ಕನ್ನಡ ವಿಶ್ವವಿದ್ಯಲಯದ ಕುಲಪತಿಗಳಾದ ಡಾ. ಬಿ.ಎ.ವಿವೇಕ ರೈ ಪ್ರಮುಖರು. ಅವರ ಸಹಕಾರವಿಲ್ಲದಿದ್ದರೆ ಈ ಪುಸ್ತಕ ಹೊರಬರುತ್ತಿರಲಿಲ್ಲ. ಅವರ ಸಹಕಾರಕ್ಕೆ ಕೃತಜ್ಞತೆಗಳು. ಇನ್ನು ನನ್ನ ಎಲ್ಲ ತೊಂದರೆ ಸಹಿಸಿಕೊಂಡು ಪುಸ್ತಕ ಬರೆಸಿದವರೆಂದರೆ ಪ್ರೊ. ರಹಮತ್ ತರೀಕೆರೆಯವರು. ಅವರ ತಾಳ್ಮೆ, ಪ್ರೋತ್ಸಾಹ ಯಾವತ್ತೂ ಮರೆಯೋಲ್ಲ. ನನ್ನ ತೊಂದರೆಗಳನ್ನು ಬೇರೆ ಯಾರಾಗಿದ್ದರೂ ಸಹಿಸಿಕೊಳ್ಳುತ್ತಿರಲಿಲ್ಲವೊ ಏನೋ. ತರೀಕೆರೆಯವರಿಗೆ ಕೃತಜ್ಞತೆಗಳು. ಅಧ್ಯಯನಕ್ಕೆ ಸಹಕರಿಸಿದ ಮತ್ತೊಬ್ಬರೆಂದರೆ ಈಟಿವಿಯ ಜಿ.ಎನ್. ಮೋಹನ್. ಬೇಕೆಂದಾಗಲೆಲ್ಲಾ ಅವರು ನನಗೆ ರಜೆ ಕೊಟ್ಟಿದ್ದಾರೆ. ಇವರೊಂದಿಗೆ ಕೆಲಸ ಮಾಡುವುದೇ ಒಂದು ಸಂತಸದ ವಿಷಯ. ಇವರಿಗೆ ಧನ್ಯವಾದಗಳು. ಲೋಹಿಯಾ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಕೆ. ಫಣಿರಾಜ್, ಪ್ರೊ. ಕಾಳೇಗೌಡ ನಾಗವಾರ ಅವರಿಗೆ ಧನ್ಯವಾದಗಳು.

ಈ ಪುಸ್ತಕದಲ್ಲಿನ ಪ್ರಮುಖ ವ್ಯಕ್ತಿ ನೀಲಗಂಗಯ್ಯ ಪೂಜಾರ್ ಅವರು ನನಗೆ ಯಾವತ್ತಿಗೂ ಆದರ್ಶ. ಹೆಬ್ಬಳ್ಳಿ ಭೂಹೋರಾಟದ ಕುರಿತು ಅವರು ಅಪಾರ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಅವರಿಗೆ ಕೃತಜ್ಞನಾಗಿದ್ದೇನೆ. ಈ ಪುಸ್ತಕವನ್ನು ಈ ಹಿರಿಯ ಜೀವಕ್ಕೆ ಅರ್ಪಿಸುತ್ತಿದ್ದೇನೆ. ಮಾಹಿತಿ ನೀಡಿದವರು ಇನ್ನು ಹಲವರಿದ್ದಾರೆ. ಅವರುಗಳೆಂದರೆ ಶ್ರೀಯುತರಾದ ಜಿ.ಟಿ. ಪದಕಿ, ಪಾಂಡುರಂಗರಾವ್ ಹೆಬ್ಳೀಕರ್, ಜಿ.ಎಸ್. ಪಾಟೀಲ್ ಕುಲಕರ್ಣಿ, ಸುಹಾಸ್ ಹೆಬ್ಳೀಕರ್, ಶ್ರೀಶೈಲ ರೋಣದ, ವಿ.ವಿ. ಪಾಟೀಲ, ಸೂರ್ಯವಂಶಿ ಇವರೆಲ್ಲರಿಗೂ ಕೃತಜ್ಞ. ಕನ್ನಡ ವಿಶ್ವವಿದ್ಯಾಲಯದಲ್ಲಿ ನನ್ನ ಗುರುಗಳಾದ ಡಾ. ವೆಂಕಟೇಶ್ ಇಂದ್ವಾಡಿ ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ.

ಕಚೇರಿಗಳಲ್ಲಿ ಈ ಸಂಬಂಧ ಕಡತಗಳನ್ನು ಪರಿಶೀಲಿಸುವಾಗ ಸಹಕರಿಸಿದ ಧಾರವಾಡ ಉಪಸಂಸ್ಥಾಪನಾಧಿಕಾರಿ ನೂರ್ ಮನ್ಸೂರ್ ಅವರಿಗೆ, ಜಿಲ್ಲಾ ಲೋಕಾಯುಕ್ತರಾದ ಎಚ್. ಮಂಜಪ್ಪ ಅವರಿಗೆ ನನ್ನ ಧನ್ಯವಾದಗಳು.

ಅಧ್ಯಯನದುದ್ದಕ್ಕೂ ನನ್ನೊಂದಿಗಿದ್ದ ಅರುಣ್ ಜೋಳದ ಕೂಡ್ಲಿಗಿ, ಪೀರಬಾಷಾ, ನಿಂಗಪ್ಪ ಹೊಸಳ್ಳಿ ಹಾಗೂ ಶ್ವೇತಾಗೆ ಧನ್ಯವಾದಗಳು. ನನ್ನ ಕುಟುಂಬ ವರ್ಗಕ್ಕೆ, ಈಟಿವಿ ಗೆಳೆಯರಿಗೆ ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.

ಡಾ. ಸತೀಶ್ ಪಾಟೀಲ