ತಿಳಿ ನಿನ್ನಯ ಜಾತಕ
ಕಳೆ ಪೂರ್ವದ ಸೂತಕ
ತೊಳೆ ತನುವಿನ ಪಾತಕ ಆಗ
ಒಳಗೆ ಆಯ್ತು ಸಾರ್ಥಕ    || ತಿಳಿ ||

ಮಾತೃ ಬಂಧುಗಳಿಲ್ಲವೋ
ನಿನ್ನ ನೇತ್ರ ಮನದೊಳಗಿರುವುದೋ
ಕ್ಷೇತ್ರಕೆಲ್ಲ ಘನವಿದೊ
ನಿತ್ಯ ನಿರ್ಮಲ ಶೂನ್ಯವೋ || ತಿಳಿ ||

ಮುನ್ನ ಮಾಡಿದ ಪಾಪವೋ
ಇದು ಹೊನ್ನು ಕೊಟ್ಟರು ತೀರದು
ತನ್ನ ನಿಜವನು ತಿಳಿದುರ್ಪುದು
ತನ್ನ ಸುಕೃತ ತೋರ್ಪುದು || ತಿಳಿ ||

ನಿಷ್ಠ ಜಾತಕ ಸೀತೆ
ನಿನ್ನ ಅಷ್ಟ ಮದಗಳು ಹೋಯಿತೇ
ಕಷ್ಟವು ಕೋಪಿಸಿ ಆಯಿತೇ
ನಿನಗಿಷ್ಟು ಸುಖ ಬಂದೊದಗಿತೊ    || ತಿಳಿ ||

ಉರುಗ ತೋರಲು ಹುತ್ತವು ನೀವು ಎರಗಲೇತಕೆ
ಸಾಯುವಿರಿ ಮರುಳ ಡಂಭದ
ಮನುಜನು ಈ ಶರೀರ ಹಿಡಿದು ಜಪಿಪರು     || ತಿಳಿ ||

ಜಾತಕವ ತಿಳಿದಾತನು
ಜಾತಿಗೆಲ್ಲ ಅತಿ ಸಾಧನ
ಜಾತಕವ ತಿಳಿದಾತನು
ಜಾತಿಗೆಲ್ಲಾ ಮತಿ ಹೀನನು || ತಿಳಿ ||

ಜಾತ್ಯಸ್ಯಂ ಮರಣಂ ಧ್ರುವಂ
ಶಾಸ್ತ್ರ ಸಮ್ಮತಂ ಇದಂ ನಿಜಂ
ಗುರುವು ತೋರಿದ ಕಾರಣ
ಪಾಪವೆಲ್ಲಾ ನಾಶನ        || ತಿಳಿ ||