ಮೂಡುವನು ರವಿ, ಮೂಡುವನು ಶಶಿ;
ಕಾಲ ಜಾರುತಿದೆ.
ಮುಳುಗುವನು ರವಿ; ಮುಳುಗುವನು ಶಶಿ;
ಯಾವದಿನ, ತರಳೆ?”

“ವರುಷವಾಗಲಿ; ವರುಷವಾಗಲಿ.”
“ಮುದುಕರಾಗುವೆವು.”
“ತಿಂಗಳಾಗಲಿ; ತಿಂಗಳಾಗಲಿ.”
“ದೂರ, ಬಹುದೂರ!”

“ವಾರ ಕಳೆಯಲಿ; ವಾರ ಕಳೆಯಲಿ.”
“ಅನಿತು ತಡವೇಕೆ?”
“ಸ್ವಲ್ಪ ಇರು, ಇರು; ಸ್ವಲ್ಪ ಇರು, ಇರು;
ಹೇಳು ಎಂದೆಂದು?”

“ನಾಳೆಯಾಗಲಿ, ತರಳೆ, ನಾಳೆಯೆ;
ಅದುವೆ ಯುಗ ನನಗೆ!”
ಅವಳ ಬಳಿ ಸುಳಿ; ಬೆಳಗು, ನೇಸರೆ,
ಮನ್ನಿಸಿಡಿದಿನವ!

೨೩-೯-೧೯೨೮