ಯೋಗದಲಿ ಕುಳಿತಿಹನು ಕೃಷ್ಣಾಜಿನದ ಮೇಲೆ
ಗಿರಿಯ ದಟ್ಟಡವಿಯಲಿ ವರತಪಸ್ವಿ;
ಮುಂದೆ ಮಂಜುಳನಾದದಿಂದೋಡುವಳು ಗಂಗೆ
ಸುಳಿಸುಳಿದು ಬಳುಕುತ್ತ ಜಾರಿ ಹಾರಿ.
ಸುತ್ತಲುಂ ತುದಿಯನರಿಯದ ಶಿಖರಗಳು ಹಬ್ಬಿ,
ಬಿಳಿದಾಗಿ ಹೊಳೆಯುತಿಹವೈಕಿಲಿಂದೆ.
ಕಾಲದೇಶಾತೀತನಾದವನ ಮುತ್ತಿಹವು
ಹುತ್ತಗಳು ಪಿಣಿಲಾದ ಜಡೆಯವರೆಗೆ!

ಹೊಳೆದಳಿಯುವುವು ರಾಜ್ಯಗಳು ಮಿಂಚಿನಂತೆ;
ಕೊಳುಗುಳದ ಕೋಲಾಹಲವು ಕನಸಿನಂತೆ
ಜಾರುವುದು: ಮೂಡದು ತಪಸ್ವಿಗಿಹಚಿಂತೆ!
ತಪಸಿಯ ತಪಸ್ಸೂ ಕನಸಲ್ಲದೇನಂತೆ?

೫-೮-೧೯೨೮