ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೧೮ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೮ ಕಿ.ಮೀ

ಚಾಕೇನಹಳ್ಳಿ ಕಟ್ಟೆ :-

ಚಾಕೇನಹಳ್ಳಿ ಕಟ್ಟೆ ಜಿಲ್ಲಾ ಕೇಂದ್ರವಾದ ಹಾಸನಕ್ಕೆ ತಾಲ್ಲೂಕು ಕೇಂದ್ರವಾದ ಹೊಳೆನರಸೀಪುರಕ್ಕೆ ೧೮ ಕಿ.ಮೀ ಸಮಾನಾಂತರ ದೂರದಲ್ಲಿದೆ. ೧೯೫೬-೧೯೫೭ರಲ್ಲಿ ಶಂಕುಸ್ಥಾಪನೆಯಾದ ಈ ಕಟ್ಟೆ ೧೯೭೧ರಲ್ಲಿ ಜಮೀನುಗಳಿಗೆ ನೀರುಣಿಸತೊಡಗಿತು. ೫೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಕಟ್ಟೆಗೆ ೧.೬ ಟಿ.ಎಂ.ಸಿ. ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇದೆ. ೪೦ ಅಡಿಗಳ ಆಳ ೧೮೦ ಅಡಿಕಟ್ಟೆಯ ಏರಿಯಾದ ಉದ್ದವನ್ನು ಹೊಂದಿದ್ದು, ೯ ಬಾಗಿಲುಗಳನ್ನು ಹೊಂದಿದೆ. ಬಾಗಿಲುಗಳು ೨೦ x ೧೫ ಅಡಿ ಉದ್ದಗಲ ಹೊಂದಿದೆ. ಹಿನ್ನೀರು ೩ ಕಿ.ಮೀ ವ್ಯಾಪಿಸುತ್ತದೆ. ಎರಡೂ ಬದಿಗೆ ಎರಡು ನಾಲೆಗಳಿವೆ. ಇವನ್ನು ಎಡಬಲ ನಾಲೆಗಳೆನ್ನುವರು. ೨೮೦೦ ಎಕರೆಗೆ ಈ ನಾಲೆ ನೀರುಣಿಸುತ್ತದೆ. ಈ ಕಟ್ಟೆಯಲ್ಲಿ ಕಾಟ್ಲಾಕೋಹುಮೃಗಾಲು ಗ್ರಾಸ್ ಕಾರ್ಪ, ಸಾಮಾನ್ಯ ಗೆಂಡೆ ಇತ್ಯಾದಿಯನ್ನು ಬೆಳೆಸಲಾಗಿದೆ. ೧೦ ಲಕ್ಷ ಮೀನು ಮರಿಗಳನ್ನು ಪ್ರತಿಂμಂಜ ಇಲ್ಲಿ ಬೆಳೆಸಲಾಗುತ್ತದೆ.

 

ಮಳಲಿ ಮಾವನೂರು

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೧೮ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೩ ಕಿ.ಮೀ

ಈ ಊರುಗಳು ತಾಲ್ಲೂಕು ಕೇಂದ್ರವಾದ ಹೊಳೆನರಸೀಪುರ ಜಿಲ್ಲಾ ಕೇಂದ್ರವಾದ ಹಾಸನಕ್ಕೆ ೧೮ ಕಿ.ಮೀ. ದೂರದಲ್ಲಿದೆ. ಮಳಲಿಯಲ್ಲಿ ಗ್ರಾಮದೇವತೆಯಾದ ಮಳಲಿಯಮ್ಮ ಪ್ರಖ್ಯಾತಿಯನ್ನು ಪಡೆದಿದ್ದಾಳೆ.

ಮಾವನೂರಿನಲ್ಲಿ ಮೂಗುಮಲ್ಲಪ್ಪನ ಬೆಟ್ಟವೂ ಊರೊಳಗೆ ಊರು ಮಲ್ಲಪ್ಪನ ದೇವಾಲಯವೂ ಇದೆ. ಇಲ್ಲಿ ವರ್ಷಕ್ಕೊಮ್ಮೆ ಓಡು ಮಲ್ಲಪ್ಪನ ಜಾತ್ರೆ ನಡೆಯುತ್ತದೆ. ಕರಗ ಅಥವಾ ಗುಂಬ ಹೊರುವುದು ಎನ್ನುವರು.

ಈ ಎರಡು ಗ್ರಾಮಗಳು ಸಾಂಸ್ಕೃತಿಕವಾಗಿ ವಿಭಿನ್ನವಾಗಿದೆ. ಮಳಲಿಯಲ್ಲಿ ಶಕ್ತಿ ದೇವತೆಯನ್ನು ಆರಾಧಿಸಿದರೆ, ಮಾವನೂರಿನಲ್ಲಿ ಶಿವನನ್ನು ಆರಾಧಿಸಲಾಗುತ್ತದೆ.

ಈ ಎರಡು ಗ್ರಾಮಗಳಲ್ಲಿ ಜಾನಪದವನ್ನು ಮೈಗೂಡಿಸಿಕೊಂಡಿವೆ. ಗ್ರಾಮದೇವತೆಯ ಹಾಡುಗಳು (ಸೋಬಾನೆ) ಕೋಲಾಟ ವಿಶಿಷ್ಟವಾದುದು ಜಂಪ್ ಕೋಲು, ಜಡೆಕೋಲು, ಕೊರವಂಜಿ ಕೋಲು ಇನ್ನೂ ಮೊದಲಾದ ಬಗೆಬಗೆಯ ಕೋಲಾಟ ಲಾವಣಿ ಪ್ರಖ್ಯಾತವಾದುದು.

ಇತ್ತೀಚಿಗೆ ಮಾವನೂರು ಮಲ್ಲಪ್ಪನ ಬೆಟ್ಟದಲ್ಲಿ ಪವನ ವಿದ್ಯುತ್ತನ್ನು ಉತ್ಪಾದನೆ ಮಾಡಲಾಗುತ್ತದೆ. ಈ ವಿದ್ಯುತ್ ಜಿಲ್ಲಾ ಕೇಂದ್ರವಾದ ಹಾಸನವನ್ನು ಬೆಳಗುತ್ತಿದೆ.

 

ಶ್ರೀರಾಮ ದೇವರ ಕಟ್ಟೆ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೨೮ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೪ ಕಿ.ಮೀ

ತಾಲ್ಲೂಕು ಕೇಂದ್ರವಾದ ಹೊಳೆನರಸೀಪುರ ಜಿಲ್ಲಾ ಕೇಂದ್ರವಾದ ಹಾಸನಕ್ಕೆ ಸುಮಾರು ೧೪ ಕಿ.ಮೀ. ದೂರದಲ್ಲಿದೆ. ಈ ಕಟ್ಟೆಯನ್ನು ೧೮೭೦ರಲ್ಲಿ ನಿರ್ಮಿಸಲಾಗಿದೆ. ಈ ಕಟ್ಟೆಗೆ ಎಡಬಲ ನಾಲೆಗಳಿವೆ. ಸುಮಾರು ೨೦,೦೦೦ ಎಕರೆಗೆ ನೀರಾವರಿ ಸೌಲಭ್ಯವಿದೆ. ದಪ್ಪ ದಪ್ಪ ಬಂಡೆಗಳನ್ನು ಸೀಳಿ ಡ್ಯಾಂ ನಿರ್ಮಿಸಲಾಗಿದೆ. ನೀರು ಕಲ್ಲುಗಳ ಸಂದಿಯಲ್ಲಿ ನುಸುಳಿ ಹೋಗದಿರಲೆಂದು ಗಾರೆಗಚ್ಚು ಬಳಸಲಾಗಿದೆ.

ಇತ್ತೀಚೆಗೆ ೨೦೦೦ನೇ ಇಸವಿಯಲ್ಲಿ ಜಲವಿದ್ಯುತ್ತನ್ನು ಕೂಡ ತಯಾರಿಸಲಾಗುತ್ತಿದೆ. ವಿದ್ಯುತ್ತನ್ನು ಹಾಸನ ನಗರದ ಅಭಿವೃದ್ಧಿಗೆ ಬಳಸಲಾಗುತ್ತದೆ.

 

ಗುಂಜೇವು ಮಾರನಾಯಕನಹಳ್ಳಿ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೨ ಕಿ.ಮೀ

ಇಲ್ಲಿ ಪೂರ್ವಕ್ಕೆ ಹರಿಯುತ್ತಿದ್ದ ಹೇಮಾವತಿ ನದಿ ಪಶ್ಚಿಮಕ್ಕೆ ಹರಿಯುತ್ತದೆ ಇದನ್ನು ಸಹಜ ಪಶ್ಚಿಮವಾಹಿನಿ ಎನ್ನುವರು. ಹೊಳೆನರಸೀಪುರದ ನರಸಿಂಹನಾಯಕನ ಅಧೀನ ಪಾಳೆಯಗಾರನಾಗಿದ್ದ ಮಾರನಾಯಕನೆಂಬುವವನು ಈ ಸುತ್ತ ಹತ್ತಾರು ಗ್ರಾಮ ಗಳ ಪಾಳೆಯಗಾರನಾಗಿದ್ದ ಈತ ತುಂಬಾ ದರ್ಮಿಷ್ಟನಾಗಿದ್ದು ತನ್ನ ಪ್ರಜೆಗಳ ಅನುಕೂಲಕ್ಕಾಗಿ ಊರುಗಳನ್ನು ಕಟ್ಟಿಸಿದ. ದೇವಾಲಯಗಳನ್ನು ನಿರ್ಮಿಸಿದ. ಕೆರೆ ಕಟ್ಟೆಗಳನ್ನು ನಿರ್ಮಿಸಿದ.

ಇಲ್ಲಿ ಪ್ರಕೃತಿ ರಮ್ಯತಾಣವಿದೆ ಪಶ್ಚಿಮ ವಾಹಿನಿಯಲ್ಲಿ ಬ್ರಹ್ಮದೇವಾಲಯ ವಿಷ್ಣು ದೇವಾಲಯ, ಶಿವಾಲಯಗಳಿವೆ. ಚಾರಣ ಮಾಡುವವರಿಗೆ, ೧೭೫೦ ಅಡಿ ಎತ್ತರದ ಬೆಟ್ಟವಿದೆ. ದೇವರ ಹಿಂಬದಿಯಲ್ಲಿ ಬಾವಿ ಇದೆ. ಇಲ್ಲಿ ಒನಕೆ ಒಣೆದರೆ ಕವಡಳ್ಳಿ ಬೀರನಹಳ್ಳಿ ಹಳ್ಳದಲ್ಲಿ ಬರುತ್ತದೆ ಎಂಬ ನಂಬುಗೆ ಇದೆ. ಗುಜಾಲಕ್ಷ್ಮೀನರಸಿಂಹಸ್ವಾಮಿಯ ಜಾತ್ರೆ ಪ್ರಖ್ಯಾತವಾದುದು.

ಮಾರನಾಯಕ ಕಟ್ಟಿಸಿರುವ ಡ್ಯಾಮುಗಳ ನೋಡುಗರಿಗೆ ಅಚ್ಚರಿಯನ್ನು ಉಂಟು ಮಾಡುತ್ತದೆ. “ಗಾಣದಹಳ್ಳಿ ಕಟ್ಟೆ” ಸೋಮನಹಳ್ಳಿ ಕಟ್ಟೆ, ಇವು ವಿಶಿμಂಔವಾಗಿ ನಿರ್ಮಿಸಲ್ಪಟ್ಟಿವೆ. ಗುಂಜೇವು ಬೆಟ್ಟದಲ್ಲಿ ಭಾರಿಗಾತ್ರದ ಚಪ್ಪಡಿಗಳನ್ನು ಸೀಳಿ ಗಾರೆಗಚ್ಚು ಬಳಸದೆ ಮರಗಳನ್ನು ಜಾಯಿಂಟ್ ಮಾಡುವ ಹಾಗೆ ಕಲ್ಲುಗಳನ್ನು ಜಾಯಿಂಟ್ ಮಾಡಿ ನೀರು ಸೋರದ ಹಾಗೆ ಸೀಸವನ್ನು ತುಂಬಿ ಕಟ್ಟೆಯನ್ನು ನಿರ್ಮಿಸಲಾಗಿದೆ. ಬಹುಷಃ ಕಾಲ ನೀರುಣಿಸಿದ ಈ ಕಟ್ಟೆಗಳು ೧೯೬೨ರಲ್ಲಿ ಬಂದ ಭಾರಿ ಪ್ರವಾಹದಿಂದಾಗಿ ಭಗ್ನಗೊಂಡು ಅವಶೇಷಗಳು ಉಳಿದಿವೆ.

 

ಸಸ್ಯಕ್ಷೇತ್ರ ಗನ್ನಿಕಡ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೪೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೨ ಕಿ.ಮೀ

ಇದು ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರ ತಾಲ್ಲೂಕುಗಳಿಗೆ ಸಮಾನಾಂತರ ದೂರದಲ್ಲಿದೆ. ೧೨ ಕಿ.ಮೀ ಹೊಳೆನರಸೀಪುರ ತಾಲ್ಲೂಕು ಭಾಗಕ್ಕೆ ಸೇರುವ ಸಸ್ಯಕ್ಷೇತ್ರವನ್ನು ಗನ್ನಿಕಡ ಸೋಷಿಯಲ್ ಫಾರೆಸ್ಟ್‌ಅಂತಲೂ, ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿರುವ ಭಾಗಕ್ಕೆ ರೆಗ್ಯುಲರ್ ಫಾರೆಸ್ಟ್ ಅಂತಲೂ ಕರೆಯುತ್ತಾರೆ. ಈ ಭಾಗವನ್ನು ಸೇರಿಸಲು ನದಿಗೆ ಎರಡು ಜೋಡಿ ಸೇತುವೆಗಳಿವೆ. ಇದು ಹೊಳೆನರಸೀಪುರ ಚನ್ನರಾಯಪಟ್ಟಣ ರಸ್ತೆಯಲ್ಲಿದೆ. ಈ ಸಸ್ಯ ಕ್ಷೇತ್ರಗಳಲ್ಲಿ, ತೇಗ, ಬೀಟೆ, ಸಿಲ್ವರ್ ಹೊನ್ನೆ ಹಲಸು, ಹುಣಸೆ, ಬೇವು ಮಾವು ಸಂಪಿಗೆ ಹೊಂಗೆ ಚೆರ್ರಿ ನೇರಳೆ ಗಸಗಸೆ ಅಕೇಶಿಯಾ ಗಂಧ ಅಶೋಕ ಗೋಲ್ಡ್‌ಮಾರ್, ರೈನ್ ಟ್ರೀ, ನೀಲಗಿರಿ ಬಸರಿ, ಆಲ, ಗೋಳಿ, ಸಪೋಟ, ಕರಿಬೇವು, ನುಗ್ಗೆ ಕಾಯಿ, ಬಸವನಪಾದ, ಅರಳಿ ಟಾಕಂ, ಬಿದಿರು ಅತ್ತಿ ಅರಳೆ, ಕಾಚಿ, ಕಳ್ಳಿ, ಪೆತ್ರೋಡಿಯಾ ಬಾಗೆ ತಬಸಿ ಇನ್ನೂ ಮೊದಲಾದ ಸಸ್ಯಗಳನ್ನು ಬೆಳೆಸಿ ರೈತರಿಗೆ ಸರ್ಕಾರಿ ಇಲಾಖೆಗೆ ನೀಡಲಾಗುತ್ತದೆ.

 

ಮಾವಿನ ಕೆರೆ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೨೫ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೦ ಕಿ.ಮೀ

ಇದು ಜಿಲ್ಲಾ ಕೇಂದ್ರವಾದ ಹಾಸನಕ್ಕೆ ತಾಲ್ಲೂಕು ಕೇಂದ್ರವಾದ ಹೊಳೆನರಸೀಪುರಕ್ಕೆ ಸುಮಾರು ೧೪ ಕಿ.ಮೀ. ದೂರದಲ್ಲಿದೆ. ಇಲ್ಲಿ ರಂಗನಾಥಸ್ವಾಮಿ ಬೆಟ್ಟವಿದ್ದು ಅಲ್ಲಿ ರಂಗನಾಥಸ್ವಾಮಿಯ ದೇವಾಲಯವಿದೆ. ಬೆಟ್ಟ ಹತ್ತಿದ್ದರೆ, ಪ್ರಕೃತಿಯ ರಮ್ಯ ತಾಣ ಸವಿಯಬಹುದಾಗಿದೆ.

ಇಲ್ಲಿ ಹೇಮಾವತಿ ನದಿ ಎಡದಡೆನಾಲೆಗೆ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಎರಡು ಮೇಲ್ಸೇತುವೆಗಳಿದ್ದು, ೧ ಕಿ.ಮೀ. ಉದ್ದದ ಈ ಸೇತುವೆಯಲ್ಲಿ ನೀರು ಹರಿಯುವ ರಭಸವನ್ನು ನೋಡಲು ಕಣ್ಣು ಸಾಲವು.

ಇಲ್ಲಿನ ಅತಿ ವಿಶಿಷ್ಟತೆ ಎಂದರೆ “ರಾಜೀವಗಾಂಧೀ ನವೋದಯ ಶಾಲೆ’’ ಇದೆ. ಗ್ರಾಮಾಂತರ ಪ್ರತಿಭೆಗಳನ್ನು ಬೆಳೆಸುತ್ತಿರುವ ಈ ಜ್ಞಾನದೇಗುಲ ಜಿಲ್ಲೆಗೆ ಒಂದೇ ಇರುವುದು ಇದು ಇಲ್ಲಿನ ವಿಶೇಷ.

 

ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೩೫ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೫ ಕಿ.ಮೀ

ಹಾಸನ ಜಿಲ್ಲೆಯ ಜೀವನದಿ ಎನಿಸಿರುವ ಹೇಮಾವತಿ ತಟದಲ್ಲಿ ಕಂಗೊಳಿಸುವ ಪಟ್ಟಣ ಸಿರಿಯನ್ನು ಹೊಂದಿದ ಹೊಳೇನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಭಕ್ತರ ಆಕರ್ಷಣೆಯ ಕೇಂದ್ರಬಿಂದು.

ವಶಿಷ್ಟ ಮಹಾ ಋಷಿಗಳ ತಪೋಸಿದ್ದಿಗೆ ಒಲಿದ ವಿಷ್ಣುವಿನ ಅವತಾರಗಳಲ್ಲಿ ಒಂದಾದ ಶ್ರೀ ಲಕ್ಷ್ಮೀ ಸಮೇತ ನರಸಿಂಹಸ್ವಾಮಿಯ ಆರಾಧನೆಗೆಂದೇ ಸ್ಥಾಪಿತವಾದ  ಅಂಗರಕಡ್ಡಿ ಮಂಟಪವೇ ದೇವಾಲಯದ ಮೂಲ ಎನ್ನುವ ಐತಿಹಾಸಿಕ ಹಿನ್ನಲೆ ಇಲ್ಲಿನದು. ಹೇಮಾವತಿ ಹೊಳೆ ಹರಿಯುತ್ತಿರುವ ಮತ್ತು ನೃಸಿಂಹ ದೇವಾಲಯದ ಸಂಗಮ ಕ್ಷೇತ್ರವಾದ್ದರಿಂದ ಹೊಳೆನರಸೀಪುರಎಂಬ ಹೆಸರಿನಿಂದ ಪ್ರಚಲಿತವಾಗಿದೆ.

೧೦೦೫ ರ ಸುಮಾರಿಗೆ ಇಲ್ಲಿ ಹೊಯ್ಸಳ ಸಾಮ್ರಾಜ್ಯದ ಸಾಮಂತ ನರಸಿಂಹನಾಯಕ ಎಂಬ ಪಾಳೇಗಾರನ ಆಳ್ವಿಕೆ ಕಾಲದಲ್ಲಿ ನಿರ್ಮಾಣಕಂಡಿದೆ. ೧೧೬೭ ರಲ್ಲಿ ಪ್ರಜಾರಕ್ಷಣೆಯ ಉದ್ದೇಶದಿಂದ ಕೋಟೆ ನಿರ್ಮಾಣ ಕಂಡಿದ್ದು, ನಂತರ ೧೧೯೯ ರಲ್ಲಿ ಹೊಯ್ಸಳ ದೊರೆಗಳ ಪೈಕಿ ೩ ನೇ ನರಸಿಂಹನು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಅಭಿವೃದ್ದಿಗೊಳಿಸುವ ಹಿನ್ನಲೆಯಲ್ಲಿ ಮೂರು ಪ್ರತ್ಯೇಕ ಗರ್ಭಗುಡಿಯನ್ನು ಸ್ಥಾಪಿಸಿ ಉತ್ತರಾಭಿಮುಖವಾಗಿ ಶ್ರೀಮನ್ನಾರಾಯಣಸ್ವಾಮಿ, ಉತ್ತರಾಭಿಮುಖವಾಗಿ ಶ್ರೀವೇಣುಗೋಪಾಲಸ್ವಾಮಿ ಹಾಗೂ ಪಶ್ಚಿಮಾಭಿಮುಖವಾಗಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿದನು. ಇದರಿಂದಾಗಿಯೇ ಮೂರು ದೇವರುಗಳ ತ್ರಿಕೂಟಾಚಲ ಸನ್ನಿದಿ ಎಂಬ ಹಿರಿಮೆಗೆ ಪಾತ್ರವಾದದ್ದು. ಹೊಯ್ಸಳ ಸಾಮ್ರಾಜ್ಯದ ಫತನದ ನಂತರ ಆಳ್ವಿಕೆಗೆ ಬಂದ ವಿಜಯನಗರ ಅರಸರ ಆಸ್ಥಾನದ ಮಹಾಮಂತ್ರಿ ಮಲ್ಲರಸ ೧೪೩೮ ರಲ್ಲಿ ದೇವಾಲಯದ ಮುಖ್ಯ ದ್ವಾರದಲ್ಲಿ ವಿಮಾನಗೋಪುರ ಹಾಗೂ ಗರ್ಭಗುಡಿಗಳ ಮೇಲ್ಬಾಗದಲ್ಲಿ ರಜಗೋಪುರಗಳನ್ನು ಕಟ್ಟಿಸಿ ದೇವಾಲಯದ ಆಕರ್ಷಣೆ ಮೆರೆದಿತು.