18
ದುಷ್ಟ ಪಾರ್ವತಿ ಎಷ್ಟ ಹೇಳಲಿ ನಿನಗ
ಬಿಟ್ಟವನಲ್ಲಾ ಶ್ರೀ ಕೃಷ್ಣ ಕೇಳಲೇ ಪಾರ್ವತಿ ನಿನಗ ॥
ತಿಳಿಯಾದ ಮುಂದಿನ ಮಾತ ಇಳೆ ಭಾರ ಕೃಷ್ಣ ಇಳುವವನು
ಕಲಹ ನಾವು ತಿಳಿಯದೆ ಅವನ
ಅವನ ಕೂಡ ವರ್ಮವೇನು
ಅಂಬಿ ಕೇಳ ಎನ್ನ ಮಾತಾ ಗಂಭೀರ ಕೃಷ್ಣನ ಕೂಡ
ಹುಂಬತನದ ಲಡಾಯಿ ಮಾಡುವರೇನ
ಹೀಂಗಂತ ಶಿವನು ಶಂಭೋವಿಗೆ ಉತ್ತರ ಕೊಟ್ಟಾನ ತಾನು
ರಕ್ಷಣಕೆ ಅಧಿಕಾರ ಪಕ್ಷಿವಾಹನ ಶ್ರೀಹರಿ
ಕುಷಿಯೊಳು ತ್ರಿಜಗವನು ಇಟ್ಟಕೊಂಡು
ಸಾಕ್ಷಾತ್ ಸಾಕಿ ಸಲಹುವನು
ಬಿಟ್ಟವನಲ್ಲ ಶ್ರೀ ಕೃಷ್ಣ ಹೀಂಗೆಂದು
ಸೃಷ್ಟಿ ಬಸವೇಶನ್ನ ನೆನೆದಾನೋ ॥
19
ಪಾಪ ನನ ಕಡೆ ಇಲ್ಲ ತಪ್ಪ ನಂದಾಗಿಲ್ಲ
ಗೋಪಿ ಕೃಷ್ಣ ಮುನಿದಾನೋ
ಪನ್ನಗಾಸಿ ನಾ ಇನ್ನೂ ತಿಳಿಯುತ
ಶ್ರೀಹರಿ ಹರಿಯಾ ಅನ್ನದಲಿ ಶಪ್ತ ಮಾಡಿದನೋ
ನನ್ನ ಮ್ಯಾಲ ಶ್ರೀಹರಿ ಹರಿಯೇ ಯಾರಿಗೆ ಹೇಳಿದರೇನು
ಹರಣ ಕಾಯ್ದರಯ್ಯ ಶ್ರೀ ಹರಿ ಶ್ರೀ ಹರಿಯಾ ॥
ಮೀರಿ ಬಂತೆನ್ನ ಉಳವಯ್ಯ ಶ್ರೀ ಹರಿ ಶ್ರೀ ಹರಿಯಾ
ಧರಿ ಭಾರ ಇಳಿಸುವ ಹರಿಗೇ ನಾ ಈಡಲ್ಲೇ ಶ್ರೀ ಹರಿ ಹರಿಗೆ
ಚಾರು ಬಂಕನಾಥ ಮುನಿದಾನೋ ಶ್ರೀ ಹರಿ ಶ್ರೀ ಹರಿರಾಯಾ ॥
ಗೋಪಾಲಕೃಷ್ಣ ಮುನಿದಾನೋ ನನ್ನ ಪ್ರಾಣ
ಕೋಪದಲಿ ಕೊಂದಬಿಡತಾನೋ
20
ತುಟ್ಟ ತುದಿಯಿಂದ ಕೈಯ ಬಿಟ್ಟಂಗ ಮಾಡಿದನೋ
ಗಟ್ಟಿ ಮಾತ ಆಗೋದಿಲ್ಲ ಅಂದ ॥
ಹರ ಶರ ಶಂಕರ ಪಾಪ ಪರಿಹಾರಾ ಮಾಡಾವ ದೂರ ಶಿವ
ಹರಶೂರ ಉಳಿಸಿದಿ ಜಲ್ಮಾ ॥
ಮಾರ ಸಂಹರ ಸೂರ್ಯನ ಧರಿಸಿ ಸೋಮಾ ॥
ಸಾವಿರ ಹೆಡಿ ಸರ್ಪಿಗೆ ನಿಲಕಲಿಲ್ಲ ನಿಮ್ಮ ನಾಮ
ಶಾಂಭವಿಕಾಂತನೇ ನಿನ್ನ ನಂಬಿದೇನ ಕಾಯ ಕಾಯೋ
ಹಂಬಲಿಟ್ಟ ಬಂದೇವ ಮಾಡೋ ಕ್ಷಮಾ ॥
ನನಗ ಇಂಬ ಕೊಡಬೇಕ್ರಿ ಸ್ವಾಮಿ ಪರಮಾತ್ಮಾ
ವನಗೌರಿ ರಮಣ ಮುರಗೇ ನಾಮ
ತ್ವರದಿಂದ ಎನಗ ಪ್ರಾಣ ದಾನ ಕೊಡು ಕೇಳ
ಉರಗಭೂಷಣ ನನ್ನ ಕೇಡು
ಧನ್ಯ ಧನ್ಯ ಶ್ರೀ ಪಾರ್ವತಿಪತಿ ಆಗಿದಿ
ಅನ್ಯ ಇಲ್ಲ ನನ್ನ ಹಂತೆ
ಹೊಟ್ಟಿಯೊಳಗಿನ ಕೂಸಿಗೆ ಆಹಾರ
ಕೊಟ್ಟ ಸಂರಕ್ಷಣ ಮಾಡೋ
ಕೃಷ್ಣ ಶಂಕರ ಕೇಳೋ ನನ್ನ ಹೊಡೊ ನೇಮಾ
ಎಂಟ ದಿವಸದೊಳಗ ಮಾಡಿದಾನೋ ಶಾಮಾ
ನನ್ನ ಸಂಕಟ ಪರಿಹರಿಸಯ್ಯ ರಾಮರಾಮಾ ॥
ಗಟ್ಟಿ ಮಾತ ಆಗೂದುಲ್ಲಂತ ಗಯಾ ಕೇಳಿ
ಸೃಷ್ಟಿಗೆ ಹೊರಳಿ ಅಳತಾನಾ ॥
21
ಋಷಿಯ ನಾರದ ನನಗ ವಶವಾಗೋದು ಹೆಂಗ ಇನ್ನ
ರಸಕಸಿಯಲ್ಲಿದ್ದಾನು ॥
ಎಲ್ಲಿ ಇದ್ದಾನು ಬಲ್ಲ ನಾರದರಲ್ಲಿ ಹೋಗಿ ಸಂಕಷ್ಟಾ
ನಾ ಹೇಳಬೇಕ ದುರ್ಘಟಾ
ಇಳಿದಾನೋ ಕೈಲಾಸ ಪೂರಾ ಬಿಟ್ಟಾ
ಹಕ್ಕಿ ಹಲಬಿದಂತಾ ಆ ಭಾಳ ಸಂಕಷ್ಟಾ
ತಿರುಗುತ್ತ ದೇಶ ಮರಗುತ್ತ ಬಂದಾನಾ
ವರಮುನಿ ನಾರದ ಬಹಳ ಪೈಟಾ
ಬಂದ ಸ್ವರ್ಗದ ಬಾಗಿಲ ಮುಕ್ಕಟ್ಟಾ
ಗಯಾಮುನಿ ನೋಡಿ ಚಿಂತಿ ಬಿಟ್ಟಾ
ಬಡವಗ ಭಾಗ್ಯದ ಕೊಡವು ದೊರೆದಂತೆ
ಕುರುಡಗ ನೇತ್ರ ಬಂದಂಗಾತಿ ಸಂತುಷ್ಟಾ
ಹುಡುಕು ಔಷದ ಕಾಲತೊಡರಿದಂತೆ
ನೋಡಿ ಗಯಾಗೆ ಆದೀತ ಶಾಂತಿ
ತೇಜಿ ನಡಿಯದವಗ ದೊರೆದಂತೆ
ಬಂಜಿ ಅವಳಿ ಜವಳಿ ಹಡೆದಂತೆ
ಹಂಬಲ ಇಟ್ಟಾಂಗ ತುಂಬಿದ ನಾರದ
ತಂಬೂರಿ ಹಿಡಕೊಂಡ ವಾರಿ ನೋಟ ನೋಡಿ
ಸಂಭ್ರಮದಿ ನಗತಾನೋ ಕದನದಾಟಾ ಬೆಳೆಸೋ
ನೆಂಬುತ ಮನದೊಳು ಹಾಕಿ ಗಂಟಾ
ದಿಕ್ಕ ತಪ್ಪಿ ದುಃಖ ಮಾಡುತ ಹಕ್ಕಿ ಹಲಬಿದಂತ ಆಟಾ
ಭಾಳ ಸಂಕಷ್ಟಾ
ರಸಕಸಿಯಲ್ಲಿಂದ ಆ ಗಯನು ಬರುವಾಗ
ಹಸುವಾಗಿ ಭೇಟಿ ಆದಿತೋ ॥
22
ಹತ್ತು ಅವತಾರ ಹರಿಯು ಉತ್ಕೃಷ್ಟ ತಾಳಿದಾನೋ
ಪೃಥ್ವಿಯ ಭಾರ ಇಳಿಸಿದನು ॥
ಹೆಂತ ಹೆಂತ ದೈತ್ಯರನ್ನೆಲ್ಲಾ ಕಂತುಪಿತಾ ಸಂಹರಿಸಿದಾ
ಪಂಥ ಮಾಡಿದ ಮ್ಯಾಲ ಬಿಡಾವಲ್ಲಾ
ಕೇಳ ಗಯಾ ಸ್ವಂತ ನನ್ನ ಕಡಿಲಿಂದ ಆಗೋದಿಲ್ಲಾ ॥
ಆಪತ್ತ ಬಂದಾಗ ನಮಗ ಗೋಪಾಲನು ಕುಮ್ಮಕ್ಕತಿ
ತ್ರಿಪುರ ಸಂಹಾರ ಪ್ರಭು ಅಲ್ಲಾ
ವಕ್ಕಟ್ಟ ಬಿಟ್ಟು ವಿಪರೀತ ಆದೀತ ಬಂತೊ ಕಾಲಾ ॥
ಸಾವಕಾಶದಿಂದಲಿ ರಾಜ ಲೋಪವಾಗಿ ಅಡವಿ ಸೇರಿ
ಶ್ರೀಪತಿ ಕಾಯಲಿಲ್ಲಾ
ವಿಧಿ ಉಳಿದ ಹರಹರಾ ವಿಧಿಗಿ ಈ ಪರಿ ಮಾಡಿದೋ ಶಿವಶಿವ ಅಂದು ॥
ಪೃಥ್ವಿಯ ಭಾರ ಇಳವಿದನೋ ಏನೋ ಗಯನೆ
ಕುತ್ತಿಗೆ ಬಂತ ಗತಿಯೇನು
23
ಅಂಜಿ ಸುರಪತಿ ಅಂದಾ ಕಂಜನಾಭವ ಹೊಡೆತಕ್ಕ
ರುಂಜಿ ದಾಟುವರು ಯಾರಿಲ್ಲಾ ॥
ಯಾರಿಗೆ ಹೇಳಲಿ ಗೋರ ಪರಿಹಾರ ಮಾಡುವವರು ಇಲ್ಲ ಇನ್ನೂ
ಮರಿ ಮರಿಗೆ ಅಲ್ಲೇ ಹೊರಳ್ಯಾನೋ
ಗಯಾ ಕರಗಿ ನೀರ ಸುರಿಸ್ಯಾನೋ
ಬಂದ ಇಂದ್ರಗೆ ವಂದನೆ ಮಾಡಿದ
ತಂದಿ ಸುರಪತಿ ಕೇಳಿನ್ನು ಬಹಳ ನೊಂದೇನೋ
ಸುರರು ಅಸುರರು ಮುರಾರಿಗೀಡಲ್ಲೋ
ಮುರಾರಿ ನನಗ ಒಲಿದಾನೊ ಯಾರ ಮಾಡುದೇನೋ ॥
ಅಮರಾವತಿಗೆ ಗಮನ ಮಾಡಿದ
ಸಮರ ಮಾಡುವೆನೆಲ್ಲೋ ನಾನು
ಅಗದಿ ಸುಮಾರ ಕಂಡೇನ ಗತಿ ಏನು
ನನ್ನ ದುಮಾರ ಮಾಡಿ ಬಿಡುತಾನೋ
ಬಂದ ಇಂದ್ರಗ ವಂದನೆ ಮಾಡಿದ
ತಂದೆ ಸುರಪತಿ ಕೇಳಿನ್ನ ಭಾಳ ನೊಂದೆನೋ ॥
ಸಭಾ ಮಿಕ್ಕಿದ ಇಂದ್ರನೇ ನೋಡೋ
ನನ್ನ ದುಃಖದ ಪರಿಹಾರ ಮಾಡೋ
ತೆಕ್ಕಿ ಹಾದಾನೋ ರಿಕ್ಕಾಗಿ ದವಡು
ಕಂಟಕ ಬಂದಿತ ಮುಖ್ಯ ಅವಗಾಡೋ
ಸುರಪುರದೊಡೆಯಗೆ ಉರಪ ಬಿದ್ದೇತ
ತಾರೀಪ ಆದಿತು ಹೇಳಲಿನ್ನಾ
ಅವನ ದರ್ಪಿಗ್ಯಾರ ಎದರಿನ್ನೂ
ಪಂಥ ಸೈರಿಸಿ ಎನ್ನ ಮಾಡ್ಯಾನೋ
ಸುರರು ಅಸುರರು ಮುರಾರಿಗೀಡಲ್ಲಾ
ಮುರಾರಿ ಮುನಿದಾನೋ ಯಾರ ಮಾಡುವದೇನೋ ॥
ರುಂಜಿ ದಾಟವರ ಯಾರಿಲ್ಲ ನನ ಮ್ಯಾಲ
ಕುಂಜರವೈರಿ ಮುನಿದಾನೋ ॥
24
ಧಿಟ್ಟ ನಾರದನನ್ನು ನೆಟ್ಟಾಗ ನೋಡಿದನೋ
ತಟ್ಟನೇ ಪಾದಕೆರಗಿದನೋ
ಬ್ರಹ್ಮಿ ಬಡದೀತಯ್ಯ ನನಗ ಬ್ರಹ್ಮಪುತ್ರ ಕೇಳೋ ಇದ
ಒಮ್ಮೆ ಉಳವಿಕೊಳ್ಳೋ ದಯಮಾಡಿ
ಶ್ರೀ ಕೃಷ್ಣ ದೇವರ ಹಮ್ಮ ಮುರಿಯವರಿಲ್ಲ ಯಾವ ಕಡಿ
ಉತ್ತಮ ತೇಜವನೇರಿ ಸತ್ತರ ಲೋಕಕ್ಕ ನಾನು
ಮತ್ತ ಹೋಗತಿನ್ನೆ ಎತ್ತಾರ ಮಾಡಿ
ನನ್ನ ಕುದರಿ ಬಾಯಾನ ಹತ್ತರ ಜೊಲ್ಲಾ ಬಿದ್ದಿತ ಕೃಷ್ಣನ ಕಡೆ ॥
ಜೊಲ್ಲ ಸಲ್ಲಿಸಿದವನ ಈಗ ನಿಲ್ಲದೆ ಕೊಲ್ಲುವೆನೆಂದು
ಬಲ್ಲಂಗ ಮಾಡಿದೋ ಶಪ್ತವನ್ನು ॥
ಅವನ ಶಪ್ತಕ ತಲ್ಲಣಿಸುವೆನಯ್ಯ ದೇವಾ ನಾನು ॥
ತಟ್ಟನೇ ಪಾದಕ್ಕೆರಗಿದನೋ ಬಾಗೋಡಿ ಶ್ರೇಷ್ಠ
ಬಸವೇಶಾ ಮುನಿದಾನೋ ॥
25
ಮುನಿನಾಥಾ ಕೇಳಯ್ಯ ಹನಿ ಜೊಲ್ಲ ಬಿದ್ದುದಕ
ಘನಕೋಪಾ ತಾಳಿ ಶ್ರೀ ಕೃಷ್ಣ ॥
ಕುದರಿ ಜೊಲ್ಲಾ ಕರದೊಳು ಬಿತ್ತು ಚದುರ ಕೃಷ್ಣ ಮಾಡಿದ ಪಂಥಾ
ಅದರಿಂದ ಹಾಕಿದೊ ಹಿಂತಾವಾಣಿ
ನಾ ಅರಿಯನಯ್ಯ ಒಮ್ಮಿಂದೊಮ್ಮೆಲೆ ಆದೀತ ಆಕಾಶವಾಣಿ ॥
ಹಲ್ಲ ಕಡಿದ ಹರಿ ಆಗ ತಲ್ಲಣಿಸಿ ಮಾಡಿದೋ ಪಂಥಾ
ಕೊಲ್ಲದಿದ್ದರ ನಮ್ಮ ತಂದಿ ಆಣಿ
ಎಂಟ ದಿವಸ ಮೀರಿದರ ಹೋಗಿ ಬೀಳುವನು ಅಗ್ನಿ ॥
ಕೇಳಿನ್ನ ಕಳವಳಗೊಂಡು ಹೇಳತಾನ ಇಂದ್ರಗ ಹೋಗಿ
ತಾಳಲಾರೆನಯ್ಯ ಕೃಷ್ಣನಗಿನ್ನ
ದುಃಖ ಮಾಡುತ ಹೊಡಮರಳಿ ಬ್ರಹ್ಮನಂತೇಕ ಬನ್ನಿ ॥
ಘನಕೋಪ ತಾಳಿ ಶ್ರೀಕೃಷ್ಣ ಕೊಲ್ಲುವನು
ವನದೇಶ ಬಂತೋ ವರಮುನಿಯೇ ॥
26
ಆಗುದಿಲ್ಲ ನನ್ನಿಂದ ಹೋಗೋ ಅಂದಾನೋ ಬ್ರಹ್ಮ
ಸಾಗಿದನೋ ಆಗ ಕೈಲಾಸಕ ॥
ಮಾರವೈರಿಯಾ ಮಾರಿ ನೋಡಿ ಈಗ ಚಾರು ಚರಣ ಹಿಡಿದೆನು
ಮೀರಿ ಗೋರ ದುಃಖದಿ ಗರಗರದೆನೋ
ವರ ಪರಮೇಶ್ವರ ಹೊರಗ್ಹಾಕ್ಯಾನೋ ಯಾರ ಮುಂದ ಹೋಗಿ
ಹೇಳಲಿನ್ನೂ ॥
ತಾಯಿ ಪಾರ್ವತೆಮ್ಮ ಕೊಟ್ಲು ನನಗ ಧೈರ್ಯವನ್ನು ॥
ಮುನಿಯ ಕೇಳೋ ಎನ್ನ ಜನನಿ ಪಾರ್ವತಿ
ನಿನ್ನ ಮುಂದ ಹೋಗಿ ಹೇಳಂತ ತಾನು
ಕಳಿವ್ಯಾಳೋ ಘನಮುನಿ ನಾ ಸಾವತೇನೋ
ನಿನ್ನ ಕಡಿ ವಿನಂತಿ ಬೇಡಿಕೋತೇನು
ಏನ ಹೇಳಂತ ಯುಕ್ತಿಯನ್ನು ಕಾಣ ಕಾಣ ದಿನಮಾನ
ಸನೇಕ ಬಂತಿನ್ನು ॥
ಸಾಗಿದನೋ ಆಗ ಕೈಲಾಸಕ ಕೇಳಲಿಲ್ಲಾ
ನಾಗಶೈನನು ನುಗಿಸಿದನೋ ॥
27
ಕೊಟ್ಟ ವಚನಕ ಗಟ್ಟಿ ಶಕ್ತಿ ಅವರಲ್ಲಿ ಉಂಟು
ಯುಕ್ತಿ ನಾ ನಿನಗ ಹೇಳುವೆನು
ದುರ್ಯೋಧನನ ಕೂಡ ಆಡಿ ಸರ್ವ ಐಶ್ವರೆಲ್ಲಾ ಸೋತ
ಪೂರ ಬಿಟ್ಟ ವನದೇಶಾಗಿ
ಅವರೀಗ ಇರುವದು ಕಾಮಿಕವನದೊಳು ಹೋಗಿ ॥
ಸರಿಯಾರಿಲ್ಲ ಭೀಮ ಪಾರ್ಥಗ ಧರಿಮ್ಯಾಲ ವಚನಕ ಗಟ್ಟಿ
ಸಾರತಾವೋ ಶೃತಿ ಪ್ರಸಿದ್ಧಾಗಿ
ಅರ್ಜುನನ ಹೊರತ ಇದರ ಆದವರಿಲ್ಲ ಭಾಳವಾಗಿ ॥
ಸ್ವಂತ ಯುದ್ಧ ಮಾಡತಾರೋ ಕುಂತೀಪುತ್ರರೈವರು
ಅವರಂತವರ್ಯಾರಿಲ್ಲೊ ಯುದ್ಧದ ಬಗಿ
ತಿಳದಾವ ಪಾರ್ಥ ಪಂಥಾ ಬಿಡಾವಲ್ಲೊ ಎಂದೆಂದಿಗೂ
ಯುಕ್ತಿ ನಾ ನಿನಗ ಹೇಳುವೆನು ಅವರವರ
ರಕ್ತ ಅಲ್ಲಲ್ಲಿ ತೋರುವದು ॥
28
ಒಡದ ಹೇಳಲಿ ಬ್ಯಾಡ ಕೊಡುವ ತನಕ ವಚನವನು
ಪೊಡವಿ ಪತಿ ನರನು ಕ್ರಿಯೆ
ಯುದ್ಧ ಮಾಡಿ ಈಶ್ವರನ ಗೆದ್ದ ಬಾಣ ಪಡದಾನಾಗಾ
ಸದ್ಯ ಯಾರೂ ಇಲ್ಲ ಅರ್ಜುನಗ ಇದರ
ಹಿಂಗಂತ ಜಿದ್ದ ಮಾಡಿ ಬಿರ್ದಾವನ್ನು ಸಾರುವದಾ ॥
ಬಿದ್ದವನನ್ನು ಕೊಡುವದಿಲ್ಲ ಅವರು
ಅರ್ಜುನನ ಹೊರ್ತು ಯುದ್ಧ ಮಾಡುವರಿಲ್ಲ ಯಾರ್ಯಾರು
ಹೋದ ಕ್ಷಣಕ ಅರ್ಜುನನ ಪಾದ ಹಿಡಿ ಪ್ರಾಣ ದಾನ
ಕಾಯ್ದು ರಕ್ಷಿಸಂತ ನೀ ಕೂಡ್ರೋ
ಒಳಗಾ ಆದಂತಾ ಹೇಳದೆ ಸುಮ್ಮನಿರು ॥
ಪೊಡವಿಪತಿ ನರನು ಕ್ರಿಯೆ ಕೊಟ್ಟಮ್ಯಾಲ
ಒಡದ ಹೇಳ ನಿನ್ನ ವೃತ್ತಾಂತ ॥
ಯಾಕ ಅಳತೀಯೋ ಮಗನೆ ಲೋಕದೊಳಗ ಅವರsಂತ
ಜ್ವಾಕಿ ಮಾಡವರು ಯಾರಿಲ್ಲಾ ॥
29
ಧರ್ಮರಾಜನ ಆಣಿ ಕೊಟ್ಟ ಕರಣದಿ ಹೇಳಿದ ಮ್ಯಾಲ
ಸರ್ವ ವಿಸ್ತಾರವೆಲ್ಲಾ ನೀ ಉಸುರು
ಹೋಗೋ ಹೋಗೋ ಗಯಾ ಹರುಷದಿಂದ ಪ್ರಾಣ ಕಾಯುವರು
ಹರಿಯ ಆಣೆ ಕೊಟ್ಟ ಮ್ಯಾಲ
ಒರಿಯೋ ನಿನ್ನ ದುಃಖವೆಲ್ಲಾ
ಭರದಿಂದ ಹೋಗಿನ್ನ ಇಲ್ಲೆ ಇದ್ದಾರೋ ಕಾಮಿಕ ಬನದೋಳು
ಐವರು ಪಾಂಡವರ ಹೊಕ್ಕಿದಾರೋ ಪುತ್ರ ಗಯಾ ನೀ ಕೇಳೋ
ನೇತ್ರದಿ ನೀರ ಯಾಕ ತಂದಿ
ಒತ್ತರ ಮಾಡಿ ಹೋಗೋ ಐವರು
ಸತ್ಯದಿಂದ ಪೃಥ್ವಿಮ್ಯಾಲ ಇಲ್ಲ ಯಾರ್ಯಾರು ॥
ಜ್ವಾಕಿ ಮಾಡವರು ಯಾರಿಲ್ಲಾ ನಾ ನಿನಗ
ಬೇಕಂತ ಅಲ್ಲೇ ಕಳಹುವೆನು ॥
30
ಮುನಿಯ ಪಾದಕೆರಗಿ ಘನ ಹರುಷದಿಂದಲೇ
ವನಕೆ ಹೊಂಟಾನು ಆ ಗಯನು
ರಾಮರಾಮರು ಋಷಿಯ ನಾರದಾ ಗತಿಯ
ನಿಮ್ಮ ಪಾದದಂತೆ ಕರುಣವಿರಲಿ
ಬಿದ್ದಾನ ಎತ್ತಿ ಚರಣದಲ್ಲಿ
ಎದ್ದ ನಡದೋ ಭಾಳ ಅವಸರದಲ್ಲಿ ಹುಡುಕುತ
ಕಾಮಿಕ ವನ ಒಡಿಯ ಅರ್ಜುನ ಇದ್ದ ಅಲ್ಲಿ
ಅರ್ಜುನ ಇದ್ದ ಅಲ್ಲಿ
ಯೋಗಿ ನಾರದ ಧ್ಯಾನ ಮಾಡುತ ಬಂದ ಹುಡುಕುತ
ಕಾಮಿಕವನವನ್ನು
ಸುತ್ತವರದ ಹುಡುಕತಾನೋ ಗಯಾ ಸ್ವಾಮಿ ನಿರ್ಧಯಾ
ನನಗ ಮಾಡ್ಯಾನೋ ನನಗ ಮಾಡ್ಯಾನೋ
ಸನೇ ಬಂದಿತ ಕಾಮಿಕವನವಿನ್ನು ವನವಿನ್ನು
ಸಂತೋಷ ಆದಾನ ಕಂಡ ಕ್ಷಣ ಕೇಳೋ ಕ್ಷಣ
ಎಲ್ಲಿ ಇದ್ದಾನಯ್ಯ ಪಾರ್ಥಾ ಮರ್ತ ವಿಪರೀತಾ
ಯಾವಾಗ ಹೇಳೇನು
ಎಂದ ವಚನ ನನಗ ಕೊಟ್ಟಾನೋ
ಹಿಂಗಂತ ಗೇನಸತಾನೋ ಹಂಬಲಿಸುತ ಹೋಗಿ ಅರ್ಜುನನ
ಹೊಕ್ಕ ಕಾಮಿಕ ವನವ ದುಃಖದಲಿ ಆ ಗಯನು
ಸಿಕ್ಕನು ಪಾರ್ಥ ಹರುಷಾದ ॥
31
ನಡದಾನ ಕಾಮಿಕ ವನ ಹುಡುಕುತ ಅರ್ಜುನನ ಕಂಡ
ಹಿಡದಾನೋ ಪಾದವ ಮಾಡಿ ಅವಸರಾ ॥
ಗಯಾ ನುಡಿದಾನ ಹಿಂಗ ದುಃಖ ಮಾಡೋ ನಂದು ದೂರ
ಕಾಯೋ ನುಡಿದಾನ ಹಿಂಗ ದುಃಖ ಮಾಡೋ ನಂದು ದೂರ
ಕಾಯೋ ಪೊಡವಿಪತಿ ನನಗ ಬಂದಿತೋ ಗೋರ
ಹೊರಳಾಡಿ ಅಳತಾನ ಗಯಾ
ಉರಳಾಡಿ ಸಂತಾಪದಿಂದ ಇರುಳು ಹಗಲ
ನಿದ್ರೆಯಿಲ್ಲ ನೀರಾರ
ನಿಮ್ಮನ್ನ ಹುಡುಕುತ ಬಂದೇವ ಮಹಾ ಸತ್ಯಕ
ಪಾಂಡವರೊಳಗೆ ಪರಾಕ್ರಮಿ ಪುಂಡ ಅರ್ಜುನ ನಿನ್ನ ನಾಮಾವಳಿ
ಹಿಂಗ ಹೊಗಳತಾನ ಹಗಲಿ ಇರಳಿ
ಮಧ್ಯೆ ಪಾಂಡವ ನಿನ್ನ ಬಿರದಾ
ಮೂರು ಲೋಕದೊಳಗ ಸಾರುವದಾ ॥
ಬೇಡಿಕೊಂತೇನ ಕೈಮುಗದ ನನ್ನ ಪ್ರಾಣದಾನ ಕೊಡರೆಂತ
ಸ್ವರ್ಗ ಮರ್ತ್ಯ ಪಾತಾಳೆಲ್ಲ ತಿರಗೀನಯ್ಯ ನಿಮ್ಮ ಭೇಟಿ
ನಿಮಗ ನಮೋ ನಮೋ ಅಂತೇನ ತೀವ್ರ
ನನ್ನ ಮರಗ ಕೇಳರಿ ನೀವು ದೊಡ್ಡವರು
ಅಂತ ತಿಳಿವಳ್ಕಿ ಮಾಡುವೆನು ನಮಸ್ಕಾರಾ ॥
ಸಿಕ್ಕನು ಪಾರ್ಥ ಹರುಷಾದ ನನ್ನ ಪ್ರಾಣ
ದಕ್ಕಿತಂತ ಧೈರ್ಯ ಮಾಡಿದನು ॥
32
ಇಂದ್ರನಂದನನು ಕಂದ ಗಯನೇ ಕೇಳೋ
ಬಂದ ಸಂಕಟವು ನನಗ್ಹೇಳೋ ॥
ನೋಡಿದ ಅರ್ಜುನ ಮುಖವು ಬಾಡಿತ್ಯಾಕ ಗಯಾ ನಿಂದು
ಓಡಿ ಬಂದ ಬಗಿಯಾ ಇಷ್ಟ ದೂರಾ
ಕಾಡಡವಿಯೊಳಗ ನಾವು ಇದ್ದವರು
ಆಡಿದ ವಚನಕ್ಕ ಕೇಡ ಮಾಡವರಲ್ಲಾ
ಬೇಡಿದ ಬೇಡಿಕಿ ಕೊಡಾವಾ
ಬಿಡ ನಿನ ಚಿಂತಿ ದೂರ ಮಾಡಾವಾ ॥
ಬಿಗಿದಪ್ಪಿ ಏ ಮಗನೇ ನಗಿ ಮುಖವು ಬಳಿ ಆದವು
ನಗದವರ ಕೃಪಾಬಲ ಪೂರಣಾ
ನಮ ನಮಗ ಇರಲಿ ಆಸರಾ ॥
ಬಂದ ಸಂಕಟವು ನನಗ್ಹೇಳೊ ಇಂಚಲದ ತಂದೆ
ಬಂಕನಾಥನ ದಯದಿಂದ ॥
33
ಪಾಂಡುಪುತ್ರನೇ ಕೇಳೋ ಮಂಡಲದೊಳು ನನ್ನಕಿಂತ
ಚಂಡಾಲಿಗೋಳ್ಯಾರಿಲ್ಲಾ
ಬಂತೆನ್ನ ವಧ ವನಕೆ ಸ್ವಂತ ನಾ ಹುಡುಕೀನಿ
ಅರ್ಜುನ ಅರ್ಜುನನೇ
ಕಾಂತಾರದೊಳು ಕಡಿಯಾಲಿಸೋ ಅರ್ಜುನ ಅರ್ಜುನನೆ
ಏನ ಹೇಳಲಿ ನಾನು ಪ್ರಾಣ ದಾನ ಬೇಡುವೆ ಅರ್ಜುನ ಅರ್ಜುನನೇ
ಕಾಂತಾರದೊಳಗ ಕಡಿಯಾಲಿಸೊ ಅರ್ಜುನ ಅರ್ಜುನನೇ
ನಿನ್ನ ಹೊರತ ನನಗ ಇನ್ನ್ಯಾರು ಗತಿಯಿಲ್ಲಾ ಅರ್ಜುನ ಅರ್ಜುನನೇ
ಬೆನ್ನ ಬಿದ್ದೆನೊ ಮನ್ನಿಸೋ ಅರ್ಜುನ ಅರ್ಜುನನೇ
ಮೂರಲೋಕದ ಗಂಡ ಸಾರುವದಾ ನಿನ್ನ ಬಿರ್ದಾ ಅರ್ಜುನಾ
ಹರನ ಗೆದ್ದಂತ ನರ ಅರ್ಜುನ ಅರ್ಜುನನೇ
ಪಾಂಚಾಲ ರಾಜನ್ನ ಮುಂಚೆ ಹಿಡಿದಂತಾ ಅರ್ಜುನ ಅರ್ಜುನನೇ
ವಂಚನೆಯ ಮಾಡಿದರೊ ನನ್ನ ಮ್ಯಾಲೆ ಅರ್ಜುನ ಅರ್ಜುನನೇ ॥
ಚಂಡಾಳಿಗಳೋ ಯಾರಿಲ್ಲಾ ನನ್ನ ಪ್ರಾಣ ನಿನ್ನ
ಕಂಡಕ್ಷಣ ಕಾಣೋ ದೂರಾಯ್ತು ॥
34
ಗಯನೇ ಕೇಳೆನ್ನ ಮಾತಾ ಭಯವು ಪಡಿಯಲಿ ಬ್ಯಾಡಾ
ಅಭಯ ಇಟ್ಟಾನೋ ಅರ್ಜುನನು ॥
ನಿನ್ನ ದುಃಖ ಪರಿಹರಿಸುವೆ ಅಣ್ಣ ಧರ್ಮರಾಜನ ಆಣೆ
ಪನ್ನಂಗಶಯನಾಣೆ ಇಂದಿಗೆ
ನನ್ನ ವಚನ ಹಾನಿ ಅಲ್ಲೋ ಎಂದೆಂದಿಗೆ ॥
ಚಂದ್ರ ಸೂರ್ಯರೆಮ್ಮೆ ತಮ್ಮ ಇಂದ್ರ ದಿಕ್ಕವು ಬಿಟ್ಟ
ಬಂದ ಮೂಡ್ಯಾರ ಪಶ್ಚಿಮ ದಿಕ್ಕಿಗೆ
ಎಂದೆಂದಿಗೂ ಕುಂದ ಬರಲಿಕ್ಕಿಲ್ಲ ನಮ್ಮ ಪಾಲಿಗೆ ॥
ಅಂಜದೆ ಹೇಳ್ಯಾನೋ ಗಯಾ ಕೇಳೋ ಕೇಳೋ ಧನಂಜಯಾ
ಕಾಳಿಮರ್ಧ ಯಮನಾ ನದಿಗೆ ಹೋಗಿ
ಬಲರಾಮ ಕೃಷ್ಣ ಕಾಳವೈರಿಗೆ ಅರ್ಗ್ಯೆ ಬಿಡುವಾಗ್ಗೆ ॥
ಅಭಯ ಇಟ್ಟಾನೋ ಅರ್ಜುನನು ಹೀಂಗೆಂದು
ಉಭಯತರ ಮಾತಾನು ಆಡಿದನೋ $�S:ap]f��h-hansi-theme-font: minor-latin;mso-ansi-language:EN-US;mso-fareast-language:EN-US;mso-bidi-language: KN’>ನಾರದಲ್ಲಿಗಿ ಹೋಗಿ ಸಾರಯ್ಯ ದುಃಖವ ಆತ
ತೋರಿ ಶ್ಯಾನೋ ಏನಾದರೂ ಯುಕ್ತಿಯನ್ನು
ಸುಳ್ಳ ಮಾರಿ ನೋಡಕೊಂತ ನಿಂತರೇನು ತ್ರಿಲೋಕ
ಸಂಚಾರಿ ತ್ರಿಭುವನದೊಳಗ ನಾರದರ ಯುಕ್ತಿವಾನ ॥
ನೀ ಹೋಗಿ ಬೀಳೋ ಅವನ ಬೆನ್ನಾ
ಹೋಗೋ ಲಗು ಋಷಿನ್ನ ಹುಡಕ್ಯಾಡಿ
ತಡ ಆಗತೈತಿ ನಡಿ ನಡಿ ಭಾಳ ಹೇಳೋ ದುಃಖ ಮಾಡಿ ಮಾಡಿ
ದಾಕ್ಷಾಯಿಣಿ ಪಾದಕ ಬಿದ್ದ ಆ ಕ್ಷಣಾ ಕೈಲಾಸ ಇಳದ
ತಕ್ಷಕಭರಣ ಕೈ ಬಿಟ್ಟಾನೋ
ಆ ಪಕ್ಷಿ ವಾಹನಾ ನನ್ನ ಹೊಡಿಯುವನೋ
ಈ ಕ್ಷಣ ನಾರದ ನನಗ ದೊರದಾನೋ ॥
ಸಾಧು ಸಂತರಿಗೆ ಪರಿಪಾಲಿಸೋ ಶಂಕರನೇ
ಕಾದು ಸಲುವೈ ಕಡಿತನಕಾ ॥
Leave A Comment