ಪೂತು ಭೀಷ್ಮ ಪರಮ ಶೌರ್ಯ ಮೋಹರ
ವ್ರಾತದೊಳ್ ಕಾಣೆನೆಂಬುತ ಕೃಷ್ಣನು ಅತಿ
ಭೀತಿಯಿಂ ಪೇರ್ಗಿಡಿಕಾರಿದನು ಮಹಾ
ನೂತನಾಸ್ತ್ರದ ಮಳೆ ತೂರಿದನು ಗಣ
ಜಾತ ಘಾಯದಿನೊಂದು ಮೈ ಮರೆವುತಲಿ ವ
ರೂಥದಿ ಮಲಗಿದ ರಣದ ಮಂಡಲಲಿ ॥
ಧುರದೊಳಬ್ಬರಿಸುತ ಬಲರಾಮ ಭೀಮಗೆ
ದುರುಳ ಗಯನ ಕೊಟ್ಟು ತೆರಳುವದು ಬಹಳ
ಪರಿಣಾಮವದೆ ನೋಡು ನೀ ತಿಳಿದು ನಿನ್ನ
ಕರುಳುನಗಿವೆ ತಳ್ಳಿ ಯಾಕೆಮ್ಮದು ನಿನ್ನ
ಕರುಳನುಗಿವೆ ತಳ್ಳಿ ಯಾಕೆಮ್ಮದು ನಿನ್ನ
ಕೊರಳನುಳುಹಿಕೊಂಡು ಹೋಗೆಂದು ಹೊಯ್ದನು
ಭರದಿಂದ ಮಾರುತಿ ಮ್ಯಾಲದೇನೆಂಬೆ ॥
ಬಿದ್ದ ಪೆಟ್ಟಿಗೆ ಬೆದರದೆ ಭೀಮ ನುಡಿದನು
ಯುದ್ಧವ್ಯಾತಕೆ ಪೋಗು ನೀನೆನುತ ಇಲ್ಲೆ
ಗದ್ದೆ ಹೊಲಗಳಿಲ್ಲ ನೋಡೆನುತ ನೀನು
ಬಿದ್ದ ಭೂಮಿಗೆ ಹೋಗಿ ಹೂಡೆನುತ ನಮ್ಮ
ಸುದ್ದಿ ಯಾತಕೆಯೆಂದು ಉದ್ರೇಕದಿಂದಲಿ
ಗುದ್ದಿದನಾಗ್ಹಲಧರ ನಾನೇನೆಂಬೆ ॥
ಹಿಡಿದಂಥ ವನಕಿಗೆ ರಾಶಿ ಭತ್ತಗಳಿಲ್ಲ
ಹೊಡೆವಿ ಯಾರಿಗೆ ನೀನು ಕಡುಮೂರ್ಖನು ಬಹಳ
ಕೆಡರೆಂಬುತಲಾಗ ಕೌರವನು ಕಾಡ
ಅಡವಿ ಸೇರಿಸಿಬಿಟ್ಟ ತಿಳಿ ನಿಮ್ಮನು ಒಬ್ಬ
ಮಡದಿಗೈವರು ಗಂಡರೆನಲು ಲೋಕದಿ ಕೈಯ
ಹೊಡೆದು ನಗುವರೆಂದು ಹೋದನಾ ರಾಮ ॥
ಉದ್ಧತ ವೀರಭೀಮನು ಬಂದು ರಾಮನ
ಗುದ್ದಲು ಲಕ್ಷ್ಮೀಶನಗ್ರಜನು ಮರ
ಳೆದ್ದು ಹೊಯ್ಯಲು ಆಗ ಮರುತಜನು ಕೆಳಗೆ
ಬಿದ್ದು ಧರೆಯೊಳು ಮೂರ್ಛಿತನಾದನು ಕಂಡು
ಯುದ್ಧವಾಗಲಿ ಘಟೋದ್ಗಜ ರಭಸದಿ ಧರೆ
ಗದ್ದಲಿಸಿತು ಆಗದೇನ ಪೇಳುವೆನು ॥
ತಂದೆಯೊಡನೆ ಕಾದಿ ಗೆಲಿದಂಥ ಗರ್ವವ
ಒಂದರೆಕ್ಷಣದಲಿ ನಿಲಿಸುವೆನು ನೋಡು
ಎಂದು ಬೊಬ್ಬಿಲೆ ಮಹಶರಗಳನು ರೌದ್ರ
ದಿಂದೆದ್ದೆಚ್ಚಡಾಗರಾ ರಾಮನನು ಬಲ
ಗುಂದಿ ಬೆದರಿ ಧೈರ್ಯಗೆಡೆ ನಕುಲ್ ಸಹದೇವ
ರಂದು ರಥವನೇ ಹೆಣಗಲೊಂದಿಗಿಗೆ ॥
ಎಣಿಕೆಯಿಲ್ಲದೆ ಸಹದೇವ ನಕುಲರಾಗ
ರಣದೊಳು ಗಣೆಗಳ ತೂರುತಲಿ ಇರೆ
ಕ್ಷಣವೊಂದರೊಳು ರಾಮನೇಳುತಲಿ ಯಮ
ನಣುಗನಾಕ್ಷಣ ಪಿಡಿದೆಳೆವುತಲಿ ಭೀಮ
ನನುಜರು ಹೆಣಗಿ ಶೌರ್ಯದಿ ಬಂದು ಬಿಡಿಸಿದರೆ
ದಣಿಯೆ ಸೆರೆಯ ಶ್ರಮವಡೆದರೇನೆಂಬೆ ॥
ಭರದಿ ಸಾತ್ಯಕಿ ಬಂದು ದ್ರುಪದರಾಯನ ತೆಕ್ಕಿ
ವರಿದಾಗ ಪಿಡಿದತಿ ನೋಯಿಸಿದನು ಆಗ
ಉರವಣಿಸುತ ಬಂದು ರಾಮನನು ವಾಯು
ತರಳನನುಜರ ಕೈಸೆರೆಗೊಂಡನು ಮತ್ತೆ
ಕೊರಳ ಕೊರೆವುತಿರಲಾಗ ಕಾಣುತ ಕೃಷ್ಣ
ಹರಿತಂದು ಬಿಡಿಸಿದ ಧುರದ ಮಂಡಲಲಿ ॥
ಮೀರಿದ ಕೋಪದಿಂದಡಹಾಯ್ದು ಭೀಮನು
ವಾರಿಜಾಂಬಕ ನಿನ್ನ ಬಗೆ ಬಲ್ಲೆನು ಚೆಲ್ವ
ನಾರಿಯರೊಳು ಒಡನಾಡಿದನು ಹೋಗಿ
ಬೋರತನದಿ ಬೆಣ್ಣೆ ತಿಂಬುವನು ನಿನ
ಗೀ ರಣವ್ಯಾಕೆಂದು ಹೊಡೆಯಲಾಕ್ಷಣ ಕೃಷ್ಣ
ಭೂರಿ ನೋಯಲು ರಾಮ ಬಂದು ಕೂಡಿದನು ॥
ರಾಮಕೃಷ್ಣರ ಕೂಡ ಕಾದಿ ಧುರದಿ ಕಲಿ
ಭೀಮ ಧಾರುಣಿಯೊಳು ಉರುಳಿದನು ತಾನು
ದ್ಧಾಮ ವಿಕ್ರಮ ಕಲಿ ಪಾರ್ಥನನು ಕಾಣ
ಲಾ ಮಹಾರಥವೇರಿ ನೋಡಿದನು ಆಗ
ತಾ ಮೂರ್ಛೆ ತಿಳಿದೆದ್ದು ಭರದಿ ಮಾರುತಿ ಬಂದು
ರಾಮನೊಡನೆ ಯುದ್ಧವೆಸಗಿದ ಮರಳಿ ॥
ಇಳೆಪತಿ ಕೇಳು ದ್ರುಪದ ಘಟೋದ್ಗಜನ
ಕುಲವಳಿದರು ಮತ್ತಿದ್ದ ಮೋಹರವ ಒಬ್ಬ
ರುಳಿಯದೆ ಕೊಂದ ರಾಮನ ಬಲವ ಮತ್ತೆ
ನಳಿನಾಕ್ಷನೊಳಗಿದ್ದ ಮಹಾರ್ಬಲವ ಕೃಷ್ಣ
ನುಳಿಸಿ ಯಾದವರ ಪಡೆಯನೆಲ್ಲ ತಡೆಯದಿ
ನ್ನಳಿಸಿದ ಭೀಮನದೇನ ಪೇಳುವೆನು ॥
ಪರಿವಾರವೆಲ್ಲವು ಒರಸಿ ನುಗ್ಗಾಗಲು ನರ
ಹರಿಯರೆದ್ದರದೇನೆಂಬೆನು ಕೃಷ್ಣ
ಪರಮ ವರೂಥವನೇರಿದನು ಮ್ಯಾಲೆ
ಹರಿ ಪಥದೊಳು ಸುತ್ತಿ ಸುಳಿಸಿದನು ಕಂಡು
ವರದಿವ್ಯ ರಥಕಡರುತ ಭಾನುಮಂಡಲ
ಸರಿಯೊಳು ಸುಳಿಸಿ ತೋರಿದ ಧನಂಜಯನು ॥
ಒಂದು ಕಡೆಗೆ ಹನುಮನು ಚೀರ್ವಘೋಷ ಮ
ತ್ತೊಂದು ಕಡೆಯೊಳ್ವಾದ್ಯ ರಭಸಗಳು ಬಿಡ
ದೊಂದು ಕಡೆಗೆ ವೀರಬೊಬ್ಬೆಗಳು ಆಗ
ಲೊಂದು ಕಡೆಗೆ ದಿವ್ಯನಾದಗಳು ಭರ
ದಿಂದೆಂಟು ದಿಕ್ಕುಗಳ್ ತುಂಬಿ ಸಂದಣಿಸಿತು
ಒಂದರೆಕ್ಷಣದೊಳದ್ಭುತವೇನೆಂಬೆ ॥
ಹರಿ ತನ್ನ ಚಕ್ರವ ತಿರುವಲಾಕ್ಷಣ ಮಹ
ಶರಧಿ ಕುದಿದು ನಿಲ್ಲದುಕ್ಕಿತದು ಅಷ್ಟ
ಗಿರಿ ಕುಲವೆಲ್ಲಾಗ ಬೆದರಿತದು ಮತ್ತೆ
ಧರೆಯ ಮಂಡಲವಲ್ಲಾಡಿತದು ತೋರ್ಪ
ಸುರಿವ ಕೆಂಗಿಡಿ ತನಿಗೆಂಡ ಚೂಣಿಯೊಳಾಗ
ಇರದೆಂಟು ದಿಕ್ಕಿನೊಳ್ ಹರಿದವೇನೆಂಬೆ ॥
ಕಡು ರೋಷದಿಂದ ಕೆಂಪಡರಿ ಕಣ್ಣಾಲಿಗಳ್
ಕಿಡಿಯಿಡೆ ಮುಖದಿಂದ ಫಲ್ಗುಣನು ಧನು
ವಿಡಿದಾಗ ಪಾಶುಪತಾಸ್ತ್ರವನು ಹೂಡಿ
ಸಿಡಿಲಂತರ್ಭಡಿಸಿ ಧನಂಜಯನು ರಥ
ನಡಸೂತ ಜನಜಾಕ್ಷನಿದುರಿಗೆ ಬಾಣವ
ಹೊಡೆದನಾಕ್ಷಣ ಧರೆ ನಡುಗಿತೇನೆಂಬೆ ॥
ಪಾಂಡುಸುತರು ಸತ್ಯವಂತರೆಂಬುತ ಜನ
ಕೊಂಡಾಡುತಿಹರೈ ತಿಳಿಯದಲಿ ನೀವು
ಉಂಡ ಮನೆಗೆ ಎರಡೆಣಿಸುತಲಿ ಇಂಥ
ಭಂಡರೆಂಬುದ ಬಲ್ಲೆ ಲೋಕದಲಿ ಇಟ್ಟು
ಕೊಂಡಂಥ ಗಯನಟ್ಟಿ ಕಳುಹೆಂದ ರೋಷ ಕೈ
ಕೊಂಡೆತ್ತಿ ಹೊಡೆದನು ಪುಂಡರೀಕಾಕ್ಷಣದಿ ॥
ಬಿಡ ಬಿಡದೀರ್ವರು ವಾದದಿಂದಿರೆ ನರ
ಹಿಡಿ ಹಿಡಿಯೆಂದ ಕೈಯೊಳು ಬಿಲ್ಲನು ಮತ್ತೆ
ತೊಡು ತೊಡುಯೆಂದ ಶರಂಗಳನು ಸಧ್ಯ
ಕೊಡು ಕೊಡುಬಾಣ ಸಂಧಾನವನು ಎಂದು
ಘುಡಿ ಘುಡಿಸುತಲಿಂದ್ರ ತನುಜನರ್ಭಾಟದಿ
ಹೊಡೆ ಹೊಡೆದನು ಗಣೆ ತಡೆಯೆಂದ ಹರಿಗೆ 111
ಸರಸಿಜಾಂಬಕನಗ್ನಿ ಶರವನಾತನು ಮತ್ತೆ ನರ
ವರುಣಾಸ್ತ್ರವ ಧರಿಸಿದನು ಮುರ
ಹರ ತೊಟ್ಟ ಫಣಿಪತಿ ಬಾಣವನು ಪಾರ್ಥ
ಗರುಡ ಗಣಿಯನಾಗ ಕೈಕೊಂಡನು ಹರಿ
ಗಿರಿಯೆಂಬ ಫಲ್ಗುಣ ವಜ್ರಾಯುಧದಿಯವ
ರಿರದೆಯೆಚ್ಚಾಡಿದರ್ ಧುರದೊಳೇನೆಂಬೆ ॥
ವಸುಧಿಪ ಕೇಳಯ್ಯ ಎಸುಗೆಯಂತುಂಟೊ ನರ
ನಸಮಯವಾದ ತಾಮಾಸ್ತ್ರವನು ಹೂಡಿ
ಎಸೆದಾಗ ಕತ್ತಲೆಗವಿಸಿದನು ರವಿ
ಶಶಿಗತಿಯೆತ್ತಲೆಂದೆನಿಸಿದನು ಕಂಡು
ಬಿಸಜಾತಯಿನನಂಬ ತೊಟ್ಟತಿಶೌರ್ಯದಿ
ಪಸರಿಸಿದನು ಪ್ರಭೆ ಬಲದೊಳಾಕ್ಷಣದಿ ॥
ಶಿತಕಂಠನಿತ್ತಂಥ ಪಾಶುಪತಾಸ್ತ್ರವ
ಶಿತದಾಹ ಹೂಡಿದ ಕಿವಿವರೆಗೆ ಮಹಾ
ಖತಿಯಿಂದಲೆಚ್ಚನು ಶ್ರೀಹರಿಗೆ ಮೂರ್ಛೆ
ಯುತನಾಗಿ ಬಿದ್ದನು ಧಾರುಣಿಗೆ ರಣ
ಕ್ಷಿತಿಯೊಳು ಕಂಡು ಧನಂಜಯನತಿ ಚಿಂತಿ
ಸುತ ಕರೆದನು ಬಾಣವೊಗೆದನು ಧರೆಗೆ ॥
ಆಗಿಂದ್ರತನಯನಿಲ್ಲದೆ ಪೋಗಿ ಶ್ರೀಹರಿ
ಮ್ಯಾಗ ಬಿದ್ದುರುಳಿದ ಶೋಕದಲಿ ಅಯ್ಯ
ಈ ಗಯ ಖೂಳನ ದೆಸೆಯಿಂದಲಿ ಇಂದು
ನಾ ಗಣೆಯಿಟ್ಟೆನು ಕೋಪದಲಿ ಸ್ವಾಮಿ
ನಾಗಶಯನನಸುವಳಿದನಕಟ ಮುಂದೆ
ನೀ ಗತಿ ಶಿವಶಿವಯೆಂದನರ್ಜುನನು ॥
ಕುಂತಿದೇವಿಯು ಕೊಂದ ಸುದ್ದಿಯ ಕೇಳಲು
ಚಿಂತಿಯಿಂದೆಷ್ಟೊಂದು ನೋಯುವಳು ದುಃಖ
ಸಂತಾಪದಿಂ ಮುಳಿಗೇಳುವಳು ಪ್ರಾಣ
ವಂತಕವೆಂದು ನಿಶ್ಚೈಸುವಳು ಅಯ್ಯ
ಕಂತುಜನಕ ನಿನ್ನ ಕೈಯೊರೆ ಕೊಂದೆ ನಾ
ನಂತ ಶೋಕದಿ ಮಿಡುಮಿಡುಕಿದ ನರನು ॥
ದೇವ ಕೃಷ್ಣ ನಿನ್ನ ಆಲಯದೊಳು ವಸು
ದೇವ ದೇವಕಿನ್ನಿರುವವರು ಸತ್ಯ
ಭಾಮೆಯು ರುಕ್ಮಿಣಿದೇವಿಯರು ಸೋಳ
ಸಾವಿರ ನೆರೆದ ಗೋಪಾಲಿಯರು ಸಧ್ಯ
ಸಾವರು ಕೇಳದಾಕ್ಷಣ ಶಿವಶಿವ ಮುದ್ದು
ಭಾವಯ್ಯ ಮಾತಾಡು ಎಂದನರ್ಜುನನು ॥
ಬಾಳಲಾರೆನು ಭೂಮಿಯೊಳು ನಿನ್ನನಗಲಿ ನಾ
ತಾಳಲಾರೆನು ದುಃಖ ಭಾವನನೆ ಬಿಟ್ಟು
ಏಳಲಾರೆನು ಎನ್ನ ಜೀವನನೆ ತೋರಿ
ಹೇಳಲಾರೆನು ಸುದ್ದಿ ದೇವನನೆ ಇಂದು
ಬೀಳಲಾರೆನು ಸ್ವಾಮಿದ್ರೋಹದೊಳಗೆ ಚಿಂತಿ
ಕೀಳಲಾರೆನು ಎಂದು ಕರಗಿ ಫಲ್ಗುಣನು ॥
ಹ್ಯಾವ ಸುಡಲಿ ನನ್ನದೆಂದು ಗಯನು ಬಂದು
ಜೀವದಾನವ ಬೇಡೆ ಭಾಷೆಯನು ಕೊಟ್ಟೆ
ಅವುದು ಗತಿಯಯ್ಯ ನಮಗೆಂದನು ಬಂದ
ನೋವು ವಿಪತ್ತತಿ ಕಾಲವನು ಸಧ್ಯ
ಕಾವವರಾರಯ್ಯ ಕರುಣನಿಧಿಯೆ ಪ್ರಾಣ
ವೀವುದೆ ಸಾಕ್ಷಿ ನಿನ್ನೊಡನೆ ನೋಡೆಂದ ॥
ಕೃಷ್ಣನ ಮೊಗದೊಳು ಮೊಗವಿಟ್ಟು ಪಾರ್ಥ ತಾ-
ನೆಷ್ಟು ದುಃಖದಿ ಮುದ್ದನಿಡುತಿರಲು ಮತ್ತೆ
ಅಷ್ಟರೊಳಗೆ ಮೂರ್ಛೆ ತಿಳಿದೇಳಲು ಕಲಿ
ಧಿಟ್ಟ ಕಿರೀಟಿ ಸಿಡಿದು ನಿಲ್ಲಲು ಮಹಾ
ಸಿಟ್ಟಿಲಿ ಶ್ರೀಹರಿ ನಿಂತ ಕಾಳಗಕಾಗ
ಸೃಷ್ಟೀಶ ಕೇಳವರೀರ್ವರ ಧುರವ ॥
ಜಲಜಾಕ್ಷಪಾರ್ಥರು ಮರಳಿ ಮುನ್ನಿನಕಿಂತ
ಬಲು ಸತ್ವದಲಿ ಹೆಣಗಾಡುತಲಿ ಕೃಷ್ಣ
ಚಲಬಾಣ ಹೂಡೆಚ್ಚ ಶೀಘ್ರದಲಿ ನರ
ಕುಲಿ ಶಸ್ತ್ರದಿಂದಲಿ ಕಡಿವುತಲಿ ಹರಿ
ಛಲದಿಂದಗ್ನಿಯ ಶರಹೂಡಿ ಹೊಡೆಯಲಾಗ
ಫಲ್ಗುಣ ವಾರಣಂಬಿನಲಿ ನಂದಿಸಿದ ॥
ಒಬ್ಬರೊಬ್ಬರು ಧನುಶರಗಳಿಂ ಹೆಣಗಿ ಮ
ತ್ತಿಬ್ಬರು ದಣಿಯದಿರಲು ನರನು ಆಗ
ಲಬ್ಬರಿಸುತ ಕೊಂಡ ಗಧೆಯವನು ರಣ
ಬೊಬ್ಬೆಗರೆದು ಸಿಂಹನಾದವನು ಮಾಡ
ಲರ್ಭಡಿಸುತಲಬ್ಜಲೋಚನ ಕೂಗಿ ಮೈ
ಯುಬ್ಬು ಪಿಡಿದ ತಾನಂಥ ವರ ಗಧೆಯ ॥
ನೋಡುವರೊಮ್ಮೆ ಛಪ್ಪರಿಸಿ ಮುಂಡೆಯ ಮೀಸಿ
ತೀಡುವರೊಮ್ಮೆಗೆ ಶೌರ್ಯದಲಿ ಹೊಯಿ
ದಾಡುವರೊಮ್ಮೆ ತಾ ವೀರ್ಯದಲಿ ಮಾ
ತಾಡುವರೊಮ್ಮತಿ ಧೈರ್ಯದಲಿ ಹೆಣ
ಗಾಡುವರಗಲಿ ತಾ ಕೂಡುವರ್ಕಲಿಗಳು
ಮಾಡುವರ್ಯುದ್ಧವನೇನ ಬಣ್ಣಿಪೆನು ॥
ಇದರಿಂದ ಹೆಣಗಿ ಹೊಯ್ದಡಿ ತೀರದೆ ಮತ್ತೆ
ಗದೆಯ ಚೆಲ್ಲಿದನಾಗ ಕೃಷ್ಣನನು ರಣ
ಚದುರ ಹಿಡದ ನೋಡು ಖಡ್ಗವನು ಪಾರ್ಥ
ನದ ಕಂಡು ತಾ ಧನುಬಾಣವನು ಕೊಂಡು
ವೊದಗಿಯೆಚ್ಚಾಡಿದರ್ ಗದಗದಿಸಿತು ಭೂಮಿ
ಹುದಗಿದ ಶೇಷ ಕುಲಾದ್ರಿಗಳ್ ನಡುಗೆ ॥
ಶಂಕೆಯಿಲ್ಲದೆ ಸಮರದಿ ಕಾದಲೀರ್ವರು
ಪಂಕಜನಾಭತಿ ಕೋಪಿಸುತ ಎನ
ಗಂ ಕರವಶನಾಗನಲ್ಲೆನುತ ಮುನ್ನ
ಶಂಕರ ಕೊಟ್ಟಂಥ ಚಕ್ರವ ತಾ ಬಿರು
ದಂಕ ಫಲ್ಗುಣನಿಗೆ ಹೊಡೆಯಲಾಕ್ಷಣ ಮೂರ್ಛೆ
ಯಿಂ ಕಣ್ಣು ಮುಚ್ಚುತ ಬಿದ್ದನಾ ಧಾರುಣಿಗೆ ॥
ಕಂಡೋಡಿ ಬಂದು ಶ್ರೀಕೃಷ್ಣ ತಾ ಗಾಬರಿ
ಗೊಂಡು ಪಾರ್ಥನ ಮೇಲೆ ಹೊರಳಿದನು ಅಯ್ಯ
ಭಂಡ ಗಯನನಿಂದ ಕೋಪವನು ಕೈ
ಕೊಂಡು ಹೊಡಿದೆನಲ್ಲೊ ಚಕ್ರವನು ಹಿಮ
ಮಂಡಲದೊಳು ಮಹಾಪಾಪಿ ನಾನೆಂಬುತ
ಪುಂಡರೀಕಾಕ್ಷನ ದುಃಖವೇನೆಂಬೆ ॥
ಎನ್ನ ಸಂಜೀವನೆ ಎನ್ನ ಪ್ರಾಣದ ಗುಟ್ಟೆ
ಎನ್ನ ಮೈದುನ ಚೆಲ್ವ ಗುಣಮಣಿಯೆ ಹಾ ಹಾ
ಎನ್ನ ಮೋಹದ ಪರುಷದಖಣಿಯೆ ಕಲಿ
ಎನ್ನುವರಿಗೆ ನೀ ಶಿಖಾಮಣಿಯೆ ಅಯ್ಯ
ಎನ್ನ ಪ್ರೀತ್ಯಾಸ್ಪದ ಕಣ್ತೆರೆದು ನೋಡಿರಿ
ದೆನ್ನುತ ಶೋಕದಿಂದಳಲಿದ ಹರಿಯು ॥
ಹರಹರ ಏನಾಯಿತು ಅಕಟ ಸಮರದಿ
ನರ ನಿನ್ನ ಕೊಂದೆಂತು ಜೀವಿಸಲಿ ಎನ್ನ
ನೆರೆ ತಂಗಿಗೇನು ಉತ್ತರಕೊಡಲಿ
ಧರೆ ಪೊರೆವದಿನ್ನಾರಿಗಿಂದಿದು ಸುಡಲಿ ಮುನ್ನ
ಪರಮ ಪಂಥವನ್ಯಾಕೆ ಮಾಡಿದೆನಯ್ಯಯ್ಯ
ದುರುಳ ಗಯನ ದೆಸೆಯಿಂದೆಂದ ಕೃಷ್ಣ ॥
ದ್ರೌಪತಿ ಕುಂತ ಸಹದೇವ ನಕುಲ ಧರ್ಮ
ಭೂಪತಿಯಾ ಭೀಮಸೇನನು ರಣ
ದೀ ಪಾರ್ಥ ಮಡಿದಂಥ ಸುದ್ದಿಯನು ಕೇಳಿ
ಆ ಪರಿಯಳಲ್ವರೊ ಪೇಳಲೇನು ಸ್ಮರ
ರೂಪನೆ ಜಗಿದ ಪ್ರಖ್ಯಾತನೆಂಬುತಲಿ ಪ್ರ-
ಳಾಪದಿಂದೊರಗಿದನಂತ ಶೋಕದಲಿ ॥
ನಳಿನಾಕ್ಷ ತಾನಿಂತು ಅಳಲುತಿರಲು ಮನ
ದೊಳಗಾಗದೇನೆಂಬೆ ಫಲ್ಗುಣನು ಮೂರ್ಛೆ
ತಿಳಿದೆದ್ದು ಹಿಡಿದ ಬಿಲ್ವಾಣವನು ಕೊಳ
ಗುಳಕೆ ತಾನನುವಾಗಿ ನಿಂತಿಹನು ಮತ್ತೆ
ತಿಳಿದ ನಿನ್ನೊಂದು ಯೋಚನೆ ಕೃಷ್ಣಕಾಪಟ್ಯ
ವೊಳಿತಲ್ಲ ಕಡೆಗೆ ಗಯನ ಬಿಟ್ಟಿರೆಂದ ॥
ಭರವಸೆ ಸಾಲದಿನ್ನೆನುತಲಿ ಕೂರ್ಮನು
ಗಿರಿಯೆತ್ತಿ ಧರಿಸಿದ ಪರಿಯಿಂದಲಿ ಪಾರ್ಥ
ತರುಳ ಗಯನ ಕಟ್ಟಿ ಬೆನ್ನಿನಲಿ ಮತ್ತೆ
ಉರವಣಿಸುತಲಿದಿರಾಗುತಲಿ ಇದ
ರಿರವ ತಿಳಿದು ಕೃಷ್ಣ ಮನದೊಳು ಯುದ್ಧವ
ನೆರೆ ನಾನು ಯೆಸಗಲು ದಿನ ಮೀರ್ವುದೆಂದ ॥
ಧುರದೊಳಗೀರ್ವರು ಕಾದುತಿರಲು ಆರು
ಅರಿಯಂದಲಿ ಶ್ರೀಕೃಷ್ಣನವ ಮುನ್ನ
ಪರಮೇಶ ಕೊಟ್ಟ ಸುದರ್ಶನವ ಕೊಂಡು
ಪರಮ ಕಾಪಟ್ಯದಿ ಪೇಳ್ದನವ ಪಾರ್ಥ
ಧರಿಸಿಹ ಬೆನ್ನಲಿ ದುರುಳ ಗಯನ ಶಿರ
ಹರಿದು ತಾಯೆಂದು ಚಕ್ರವ ಬಿಟ್ಟನಾಗ ॥
ಭೂಪತಿಯಾದ ಪರೀಕ್ಷಿತ ಕೇಳಯ್ಯ
ಮಾಪತಿ ಯಾರಿಗೆ ಸಿಲ್ಕುವನು ಕೃಷ್ಣ
ಕಾಪಟ್ಯದಲಿ ಬಿಟ್ಟ ಚಕ್ರವನು ಬಿಡದೆ
ಪೋಪ ಗಯನ ಶಿರಸವನು ಹರಿ
ಆ ಪರಿಯಾಗಿ ತಿಳಿದಿರಲು ಹರಿ
ಏ ಪಾರ್ಥ ಸಾಕು ಸಂಗರ ತಿರುಗೆಂದ ॥
ನಾಗಶಯನ ಮುಗುಳ್ನಗೆಯೊಳಾಡಿದ ಮತ್ತಿ
ನ್ನಾಗದೈ ಫಲ್ಗುಣ ಸಮರವನು ಇನ್ನು
ಪೋಗಯ್ಯ ಸಾಕೆಂದ ಕೃಷ್ಣನನು ದಿನ
ಹೋಗಿದೆ ಬೀಳು ನೀನಗ್ನಿಯನು ಎನ
ಲಾಗ ಪಾರ್ಥನಿಗೆಂದನಚ್ಚುತ ಎನ್ನ ಕೈ
ಸಾಗಿತು ತಿರುಗಿ ನೋಡೆಂದನರ್ಜುನಗೆ ॥
ನರನಾಗಿ ತಿರುಗಿ ನೋಡಲು ಗಯನೊರ
ಸಿರ ಹರಿದಿರಲಾಗಳಲಿದ ಮನದಿ ಸೈಸೈ
ಮುರಹರ ನೀ ಗುಣ ತೋರಿಸಿದಿ ಜಗ
ವರಿವಂತೆ ಸಾಯೆಂದು ಭಾವಿಸಿದಿ ಮುನ್ನ
ಹರಹರ ತರುಳಗಾಣಿಯ ಕೊಟ್ಟು ಕೊಲ್ಲಿಸಿ
ಇರುವದುಚಿತವಲ್ಲವೆಂದು ನೇಮಿಸಿದ ॥
ಮುರಾರಿ ಸ್ತುತಿಸುತಲಾಗಗ್ನಿ ಕೊಂಡವ
ಸಾರಿ ಬೀಳುದಕನುವಾಗಿರಲು ದಿವ್ಯ
ಮೂರುತಿ ಗೌರಿಯರ್ನಿಜದೋರಲು ಪಾರ್ಥ
ಪೂರ ನಿನ್ನಿಚ್ಛೆಯ ಬೇಡೆನಲು ಈ ಕು
ಮಾರನ ಪ್ರಾಣವನೀವುದೈ ಎನಲಾಗ
ತೋರಿದ ಶಿವಮಹಿಮೆ ಗಯನಸುವಿತ್ತು ॥
ಅವರವರ್ಯೋಚನವ ಸಲ್ಲಿಸಭಯವಿತ್ತು
ಶಿವನು ಕೈಲಾಸಕ್ಕ ತಿರುಗಿದನು ದ್ವಾರ
ಕವ ಪೊಕ್ಕನಾಗಲೆ ಮುರಹರನು ಪಾರ್ಥ
ತವಕದಿಂದಾಶ್ರಮ ಸೇರಿದನು ಮುನಿ
ಅವನಿಪಗೊರೆದಂತೆ ವರ ಕುಂದಗೋಳದ
ತವೆ ಗುರುಕರುಣದಿಂದುಸುರ್ದೆ ಸಾರವನು ॥
ಮೇಲ್ಮಾತಿದೊಂದ ಕೇಳಿರಿ ಸುತ್ತ ದೇಶಕ್ಕೆ
ಮೇಲ್ಮತ್ತ ಹುಬ್ಬಳ್ಳಿ ಶ್ಯಾರದಲಿ ತೋರ್ಪ
ಮಾಲ್ಮನೆಯದರೋಳ್ ಶೃಂಗಾರದಲಿ ಸಾಲು
ಸಾಲ್ಮಳಿಗೆಗಳು ವಿಸ್ತಾರದಲಿ ಚೆಲ್ವ
ಲೋಲ್ಮಾರನರ ಮನೆಯ ಶೋಭಿಸುವ ವಿ
ಶಾಲ್ಮನೆ ಮಾಲ್ಗತ್ತಿಯವರದೇನೆಂಬೆ ॥
ಇಂತು ಮಾಲ್ಮನೆಯೊಳಗೊಪ್ಪುವ ನೀ ಗುಣ
ವಂತ ಪುಣ್ಯಾತ್ಮ ತಿಮ್ಮೇಂದ್ರನನ ಘನ
ಶಾಂತಿ ಸೈರಣೆಗುಣ ಸಾಂದ್ರನನ ಮುಖ
ಕಾಂತಿ ಪೊಳೆವ ಪೂರ್ಣಚಂದ್ರನನ ಮನ
ಸಂತಸವೀವ ಸದ್ಭಾವದಿಂದಿರುವಂಥ
ಕಾಂತಿಯಂ ಮಾಜವ್ವ ಯೆಸೆದಳಾತನಿಗೆ ॥
ವಸುಧೆಯೊಳಗೆ ರವಿಶಶಿಗಳು ಮಾಜವ್ವ
ನೆಸೆವ ಗರ್ಭಾಬ್ದಿಯೊಳ್ ಜನಿಸಿದರು ಪ್ರಭೆ
ಪಸರಿಸಿ ಜಗದೊಳು ತೋರಿದರು ತಮ್ಮ
ಕುಶಲ ಗುಣಾಢ್ಯವ ಬೀರಿದರು ದಿಟ
ರಸಿಕ ಕೆಂಚೇಂದ್ರ ಶಿರ ಸಮಾಂಕರೀರ್ವರು
ಜಸವಡೆದರು ಲೋಕದೊಳಗದೇನೆಂಬೆ ॥
* * *
�Va>X�i�?pan lang=KN style=’font-size:12.0pt;line-height:115%;font-family:Tunga;mso-ascii-font-family: Calibri;mso-ascii-theme-font:minor-latin;mso-fareast-font-family:”Times New Roman”; mso-fareast-theme-font:minor-fareast;mso-hansi-font-family:Calibri;mso-hansi-theme-font: minor-latin;mso-ansi-language:EN-US;mso-fareast-language:EN-US;mso-bidi-language: KN’>ಭೂರಿ ಶಕ್ತಿಯ ತೆರದಿ ಭೀಷ್ಮ ಕೊಂದನು ಎರ
ಡಾರು ಸಾವಿರ ಮತ್ತತುರಗವನು ಆಗ
ನೂರೆಂಟು ಸಾವಿರ ಆನೆಯನು ಬಿಡ
ದಾರಾರು ಸಹಸ್ರ ವರೂಥವನು ಪರಿ
ವಾರದೊಳಗಣಿತ ನೆರೆಗೊಂಬುತಲಾಗ
ಚೀರಿ ಬೊಬ್ಬಿರಿದನದ್ಭುತವೇನೆಂಬೆ ॥
Leave A Comment