ಜಗ ಪಾವನ ಮಾಡ ಜಗದಂಬೆ
ನಿನ್ನ ಸೇವೆ ಮಾಡುತ ನಾನು ಬಂದೇ        ಪಲ್ಲ

ಸುತ್ತಿನ ಜಾತ್ರೆ ಬರುವುದು ವನ ಚಂದ
ರಂಭಿ ಸತ್ತೆವ್ವ ನಿನ್ನ ಗುಡಿಮುಂದ             ೧

ಗುಡಿಯ ಸುತ್ತ್ಯಾರವ್ವ ಏನ ಚಂದ
ಅಲ್ಲಿ ಕಾಯ ಒಡೆದಾರ ದೇವಿ ಕಂಡ           ೨

ಎಣಿಗೊಂಡದಾಗವ್ವ ನಿನ್ನ ಜಳಕ
ಪೂಜೆ ನಡೀತದ ಬೆಳ್ಳಬೆಳತನಕ              ೩

ಏಳ ಕೊಳ್ಳದಾಗವ್ವ ನಿನ್ನ ಬೆಳಕ
ಸುತ್ತಿಸಾರುವರು ದೂರದೂರ ತನಕ          ೪

ದೇಶದೊಳು ಉಗರಗೊಳ್ಳ ಅಲ್ಲಿ ಗ್ರಾಮ
ಎಲ್ಲನಗೌಡಗಾದೆವ್ವ ಸ್ವಾಧೀನ                ೫