ಹಲುಸೀನ್ಹಣ್ಣಿನಂತೇss ಹಸ್ದ ಬಂದಾss ನಲ್ಲsನೇss
ಅಸುಮಾನಾssದ್ಹೆಣ್ಣೇsss ವಳಗಿssರೂss || ಕತ್ತೀಯs
ಮಸ್ದುss ನುಂಗ್ವವನಾsss ಮಗ ಬಂದಾsss|| ||೧೮೬||
ಉಪ್ಪರಗೀs ವಳಗೇsss ಉತ್ತುಮರ್ ವರಗಾsರೆs
ಯಾವs ಬಣ್ಣದಲ್ಲೇsss ಯಬಸ್ಯಾಲಿssss ? || “ಕೊಡೆಯಳದs
ಕಾಗದ ಬಂದದ್ಯೇsss ನಿಮಗಾಗೀsss” ||೧೮೭||
“ಕಾಗದ ಬಂದರ ಬರಲಿss ನಾಳಿಗ್ ವೋದಿಸಿಕಂಬಾss
ಕಾಗದ ತಂದರಗೇsss ಉಳೂsssಲ್ ಹಾಕುssss ” || ||೧೮೮||
ಹೂಗಿನ ಚೆಂದ ಕಂಡೀsss ಲ್ಹೂಗ ಕೊವ್ವಲ್ಹೋದೇss
ಶಂತೊಶು ನೋಡ್ವssರೂsss ಮನೀssಲಿಲ್ಲಾsss
ಶಂತೋಶು ನೋಡ್ವರೂsss ಮನಿಲಿಲ್ಲsಲತ್ಯsಮ್ಮsss,
ಯೆಲ್ಲಿಗ್ಹೋದಾssರೇssss ಪುರಿssಶssರುsss ? || ||೧೮೯||
ಗೋವೀಗ್ ಹೊಗುಲಿಲ್ಲ ಸೋಸಿಯೇs, ಗುತ್ತೀಗ್ ಹೋಲಿಲ ಸೊಸಿಯೇss,
ಮುತ್ತೂss ಗೆಲುತಾನೇssss ನೀನುssಗಾಗೀsss ” ||೧೯೦||
“ಯಾವೂರೀಗ್ ಹೋಗೀರೀss ಯಾವ್ ಹೂಂಗss ಕೊಯ್ದೀರಿsss ?
ಯಾರsss ತೋಳಲ್ಲೀssss ವsರುssಗೀsರೀsss ? ||೧೯೧||
“ಯಾವೂರೀಗ್ಹೋಲಿಲ್ಲಾssss ಯಾವ್ ಹೂಂಗೂss ಕೊಯ್ಲಿಲ್ಲಾss
ಯಾರss ತೋಳಲ್ಲೀssss ವsರೂssಗಿಲ್ಲಾsss || ಮಡದೀ, ಕೇಳುss
ಸುರಗೇs ಮರನಡಗೇsss ವsರೂಗೀದೇss || ಮಡದೀ, ಕೇಳುss
ಸುರುಗಿs ಹೂಂಗಲದೀssss ಈಸಾಳುಕ್ಕೀss || ಮಡುದೀ, ಕೇಳುs
ಸಾವಾಡಾsಲೆಲ್ಲಾsss ಪರಿsssಮಾಳಾssss” || ||೧೯೨||
ವಳ್ಳೊಳ್ಳ ಹೂಂಗ್ ಕೊಯ್ದೀss ಬಿಳ್ಳೀ ಗಿಂಡೀಲಿಟ್ಟಿs
ಕುಟ್ಟಿs ಬಾs ಗಿಳಿಯೇss ನೆsಡsದ್ಹೋಗೀs || ಕೋಡಿಯಾಳದs
ಬೂಮೀs ಪಾಲಿsಕsನಾsss ಮssಗssಳೀಗೇss ||೧೯೩||
ಯಸಳೂss ಮೂಗುತಿಯಳೇss ಕಿಸ್ತ್ರೀsತೀಲಕದೊಳೇsss
ಕಸ್ತುರೀ ಬೊಟ್ಟುsss ಹಣಿಯಲ್ಲಿ || ಇಟ್ಟಂತಳಾss
ಇಸ್ತರಕು ರಾಯಾsss ಮರುಳಾದಾsss || ||೧೯೪||
ಕಯ್ಯss ಕಂಕಣದವಳೇsss, ಮಯ್ಯಾss ವೂಸಣದವಳೇss,
ವಯ್ಯಾsರದಲಿ ಸಣ್ಣಾsss ದನಿಯವಳೇsss || ತಂಗಮ್ಮಾsss,
ವಯ್ಯಾsರಾss ಬಿಡೂsss ದೊರಿ ಬಂದಾssss ||೧೯೫||
“ಗಿಡ್ಡೀss ಗಿಡ್ಡೀs” ಯಂದಾsss “ಮುದ್ರೇsದುಂಗಿಲ” ವಂದಾss
“ಮದ್ದಾನೀ”ss ಯಂದಾsss ಮಡುದೀಗೇs||
ಮದ್ದಾನೀಯಂದಾss “ಮಡುದೀ, ಮಂಚಕ್ ಬರುವಾss ||೧೯೬||
ಬದ್ರೇs ನೀನಾರೂss ಮಗುನಂದೀs || (ದೇ) ತೊಟ್ಟಿದಾs
ಶಿಶುವಾss ಮುದ್ದಾಡೀsss ನೆಗುತಾರೇsss || ||೧೯೭||
ಮೋವsದs ಗಂಡಾ ನ್ಯೇವಳದಲ್ ಹೊಡದೀದಾss
ನೋವಿಲ್ಲಾss ಅತ್ತೆss, ಉರಿ ಬಾಳುsss || ನಿನು ಮಗುದಿರು
ಮೋವsಕೊಂದು ಪೆಟ್ಟಾssss ಹೊಡದಿರುssss || ||೧೯೮||
ಅಸ್ವಂತ ಮಾರಯ್ರಾss ಹೆಸುರ್ಹೇಂಗೆ ಹೇಳssಲೀ ?
ಪಟ್ಟೇs ಜೋತಿರವಾsss ಹೊಗುಲಲಿ || ಲಿಟ್ಟಿಕಂsಡೀss
ಪಟ್ಟssಣಲಾಡೀssss ಬರವsರುsss || ||೧೯೯||
ಗಂಡಾss ಸೇಗಿಮುಳ್ಳುss ಕೊಂಡವೆ ನನ ಕಪ್ಡಾವಾss
ದಂಡವಾss ಕೊಡ್ತೇsss ಬಿಡ ಮುಳ್ಳೇss, || ನನು ಕಪ್ಪಡವಾss
ತಂದವ್ರಾsಯುಸವೇsss ಹೆರಿದಾಲೀss || ||೨೦೦||
ಹಾದೀಲಿರವಾsರೂ ಆದ್ ಅಡ್ಗೀs ಉಂಬ್ವsರೂss
ಸೋದಿsಸೀ ಬೆಳಿಯೆಲಿಯಾss ಮೆಲವsರುs || ಅವರೊಳ್ಳಾs
ಸೋದರತ್ತೀಯಾsss ಮಗುದಿರುsss || ||೨೦೧||
ಸೋದರsತ್ತೀ ಮಕ್ಕsಳುss ಹೋದರೆ ಪರುದೇಸಕೇss
ಗಾಳೀಯಾss ಬಿಸಲೂsss ಹೆರಗಾಗೂs || ಚಂದರುದಾss
ದಾಳಿಂಬದಾss ಮರನೇss ನೆಳಲಾsಗುss || ||೨೦೨||
ಕೋಣೀ ಮನಿಯಾಗೂsss ಜಾಣಾss ಹಿಂಡುತಿಯಾಗೂss
ಜಾರೂsಜೂರಂಬೂsss ಕದವಾಗೂs ದ್ಯೇವsರೇs,
ಯೇಳ್ ದೆನ್ಕ್ ವಂದ್ ಪಟ್ಟೇsss ಬೆಳಗಾಗೂsss || ||೨೦೩||
“ನೆಳ್ಳೂತೇ ನೆರಕೂತೇss ಮೂರೋಟಾss ಉಂಬದೂsss
ಗಂಡನ ಕೋಡ್ ಹೋಗೀss ಕುಸರೂದೂs ||
ಗಂಡನ ಕೋಡ್ ಹೋಗೀsss ಯೇನ್ಹೇಳೀ ಕುಸರೂದೂss ? ||
ಅನ್ನ ಪತ್ಯವೂsss ನೆಡಿಲೆಲ್ಲsss ||” ||೨೦೪||
ಗಡ್ಯ ಹವ್ಬಕೇ ಹೊಡ್ಯ ಆಡಿದಿ ಕೊಡುವೇ
ಮಡದೀ, ನಿನ ಪತ್ಯ ಮುಡಗೀಸು || (ನಿನ್ನಲೂ)
ನಾದುನಿಗೆ ಪತ್ಯ ನೆಡ್ಯಲಿ || ||೨೦೫||
ಗಂಡs ಗುಣುಕಾಗೀss ಗಿಂಡಿಲಿ ನೀರಾss ಕೊsಟ್ಟುss
ಕಡುಗಣ್ಣಲಿ ನೀರಾssss ಬಿsಡೂssವಾssಳೂs
“ಕಡುಗಣ್ಣಲಿ ಹನಿ ಯಾಕೇss? ಕಡುದುಕ್ಕಾs ನಿನುಗ್ಯಾಕೆ ?
ನಿನುಗ್ಯಾರೇ ಕುಂದಾss ನಡುದಾರೂss ?” ||೨೦೬||
“ಕಡುಗಣ್ಣಲ್ ಹನಿಯಿಲ್ಲಾss ಕಡುದುಕ್ಕಾ ನನುಗಲ್ಲಾss
ನನಗ್ಯಾರs ಕುಂದಾssss ನುಡಿssಲಿಲ್ಲಾss || ಪತಿ, ಕೇಳೀss
ಸೋಳೀs ಸಂಗಾವಾsss ಬಿಡೂಬೇಕೂss ||೨೦೭||
“ಕಟ್ಟಾಣೀ ಮುತ್ತೇss, ಉಪ್ಪಿದೆ ನಿನು ಮಾsತೀಗೆs
ಬೆಟ್ಟೇs ತಾನೆರಡೂss ಜsನುಮಕ್ಕೇss”
“ಬಿಟ್ಟೇ ಬಿಟ್ಟಂದೇss ಬಾಯೀಲ್ ಹೇಳೂಬೇಡೀss
ಬಲುಗೈಯಲಿ ಬಾಶೀsss ಕೊsಡುsಬೇಕು” ||೨೦೮||
“ಬಲುತೈಯೆಂಜ್ಲಗೈಯೀss ಯೆಡುಗೈ ನಂಬುಗಿ ಶಾಲs
ಕೈ ತುಳುದೆs ಹೆರುಗೇsss ಬsರುತೇನೇs || ಕೊಲ್ಲೂರಾs
ಮೂಕಾಂಬೀ ಯಾಣಿsss ಶಿsವsನಾsನೀsss || ಕೊಲ್ಲೂರಾs
ಗಜಮೂಕsದಾಣೇsss ಬಿsಡೂsತೇನೇsss ||೨೦೯||
ಸೋಳೀಗ್ಹೋಗ್ವವ್ನಾsss ಸೋವ್ಯಾರೂss ಬಲ್ಲರೇsss ?
ತಾನಲ್ಲಾss ತನ್ನಾsss ತೌರಲ್ಲಾss || ನೆರ್ಮನೀss
“ನಾದುನೀ, ನೀ ಕದ್ವಾssss ತೆಗಿ” ಯಂದಾssss ||೨೧೦||
ಯಾಲಕ್ಕೀ ರಾಣಿss ಯೆಲಿಗೆ ಸುಣ್ಣ ರಾಣೀss
ಜೇರೂಗೀ ರಾಣಿss ಮೆಣಸಾಣೀsss || ಮೆತ್ತಿಯಾಣಿss
ಜಾಣss ಊಟಕೇsss ಬರಲೆಲ್ಲಾsss || ||೨೧೧||
ದಿಂಬ ದಿಂಬ ದಾಟೀss ಕಂಬಿಡಿದಿ ನಾ ಬಂದರೂs
ಉಂಗಿಲ ತಂದರೆs ಬೆರಳಿಗೆs | ಮಾವನ ಮಗಳೆs,
ಪೇಚಾಡಿಸಬೇಡs ಬಿಡು ಕೈಯಾs || ||೨೧೨||
ಗಂಡನರ ಮನ್ನೇsss ಕಾಜಿನ ನೆಲಗಟ್ಟುs
ನೀರಂsದಿ ನಾರಿsss | ಬೆದರೂದೂ || ಕೋಡಿರುವs
ನಲ್ಲ, ನೀ ಹೇಳುss ನೆಲ ನೆಂಪುsss || ||೨೧೩||
ನೆಲ ನೆಂಪೇಳುಕೇsss ಹಳ್ಳಿsಲ್ಲs ಹೊಳಿಯಿಲ್ಲs
ಅಪ್ಪಯ್ಯ ಕಟ್ಟಿಸವ್ನೇsss ಅರಮsನೆs | ಮಾಳಿಗೆಯೊಳಗೆs
ಬಲಗಾಲ ಮುಂದಾಗೀsss ಬರಬೇಕುs || ||೨೧೪||
ದಂಡಿಗೆ ಹೋಗುತೇsss ಅನ್ನಾs ಗಾಡಾsಗಲೇs
ಶಿಕ್ಕsದಾss ಬೆಣ್ಣೀss ಕರುಗsಲೇs || ಮಡದೀ, ಕೇಳೇs
ದಂಡಾs ಕಾsದೀ ಮನುಗೇsss ಬರುವೇನೇsss ||೨೧೫||
ಸಂಜಿಗೆ ಬರುವವನೇss ಅಂಜೂಕಿಲ್ಲಾದವ್ನೇsss
ಅಂಗೆಲ್ಲssವೇನೋsss ಮಯಿsನಾsಗೇss?
ಅಂಗೆಲ್ಲವೇನೋss ಮೈಮೇನೆನೀ ತಂದಾss
ಮಡದೆಲ್ಲssವೇನೋsss ಮನೀಯಲ್ಲೀsss ? ||೨೧೬||
ಬೇಡಾs ಬೇಟೀಗೋಗೀss ಕಾಡೆಮ್ಮೇss ಹೊಡ್ತಂದಾss
ನೋಡತ್ತೇss, ನಿನ್ನಾss ಮಗದೀರಾsss || ನೆರ್ಮನೀss
ಬೇಡುಗ್ತಿಗೆ ಬಳಿಯಾಸಸ ಇಡ್ವದಾsss|| ||೨೧೭||
ಅಂಗೀs ಮೇನಂಗೀss ಶಾನsssಬಾವ್ನ ತಂಗೀsss
ಯೇನಾss ಬೇಡಳೇsss ಚದುರಂಗೀss?
ಯೇನಾss ಬೇಡಳ್ಯೇsss ಚದುರಂಗೀs ಲಾsನಾರೀs? ||೨೧೮||
ತೋಳಾss ಬೇಡದ್ಯೇsss ತಲsದಿಂಬೂss
ತೋಳಾss ಬೇಡಾsಳೇss ತಲಿದಿಂಬಾsಲಾs ನಾರೀs
ಮತ್ತೇss ಬೇಡssಳೇsss ಕಮಿವಂಟೀsss || ||೨೧೯||
ಅಂಗೀ ಮೇನಂಗೀsss ಚೆಂದಕೆ ತಟ್ಟಿದಾsರೆs
ರಂಬಿಮನೆ ರಂಬೇss ರತ್ರಂಬೇss || (ಬೀಗ್) ಹೋಗ್ವೋರಾs
ನಂಬೂಗೀ ನನುಗ್ಯೆಂತಾssss ಬರವಸೂsss ?|| ||೨೨೦||
“ಯಾವೂರಿಗ್ಹೋಗೀದೇsss ? ಯಾವ್ ಹೂಂಗಾss ಮುಡ್ಡೀದೇss ?
ಯಾವಳ ತೋಳ್ನಲ್ಲೀsss ವರಗೀದೇsss || (ತಮ್ಮಯ್ಯಾsss,
ಸಾವೀsರದ್ಹಣವಾssss ಶರಮಾಡೀsss || ತಮ್ಮಯ್ಯಾss,
ಉಟ್ಟಾ ಪಾವುಡವೇ ಪರಿಮಾಳಾ) || ||೨೨೧||
“ಯಾವೂರೀಗ್ಹೋಲೆಲ್ಲಾssss ಯಾವ್ ಹೂಂಗಾss ಮುಡಿಲೆಲ್ಲಾss
ಯಾವಳ ತೋಳ್ನಲ್ಲೀsss ವರ್ಗಲಿಲ್ಲss || ಅಕ್ಕಾ, ಕೇಳೇss
ಸಾವssರದ್ಹಣವಾss ಶರ್ ಮಾಡೀsss || ತಂದಂತಾsss
ಮಡದೀಯಾs ತೋಳ್ನಲ್ಲೀsss ಮರಗೀದೇss || ಅಕ್ಕ ಕೇsಳೇss,
ಉಟ್ಟಾss ಪಾವುಡವೇsss ಪರಿಮಾಳಾsss ||” ||೨೨೨||
ಸೂಳಗಾರ್ನ ಮಂಡೀsss ಸುಳುದಾರೇss ಪರಿಮsಳಾss
ಮಾಮಾದೂಗಾರಾssss ಹೆರಿಯಣ್ಣಾss || (ಣ್ನಾs) ಮಂಡೀಯಾss
ಸೂಳಗಾರ ಸಂಪೂಗೀssss ಪರಿಮಳಾssss || ||೨೨೩||
ಪದಾರ್ತಗ್ ಉಂಬವ್ಗೇsss ಮೇಗರದಾss ಗೊಡವೇಕೋsss ?
ಹಾಲನಂತಾss ಮಡದೀsss ವಳsಗsದೇs ||
ಹಾಲನಂತಾs ಮಡುದಿಗಿsss ವಳುಗsದೇ ಲಣ್ಣಯ್ಯಾsss,
ವಾರನ ನಾರ್ಯವ್ರಾ ಗೊಡವ್ಯಾಕೋssss ?|| ||೨೨೪||
ಇಸಲಾತೀs ಮಳಿ ಹೊಯ್ದೀsss ಸಕಲಾತೀs ಕೆರತುಂಬೀss
ಲಾ ನೀರಾs ಮಿಂದೀsss ಮೈ ಬಂದೀsss ||
“ಲಾ ನೀರಾs ಮೀಯಬೇಡಾss ಲಾsಹೂಂಗಾs ಮುಡಿಬೇಡಾss
ನೀನೂ ನಮ್ಮನಿಲೀsss ಇರಬೇಡಾsss” || ||೨೨೫||
ಅಟ್ಟೊಂದಾss ಮಾತಾsss ಕೇಳಳೆ ಆ ಹೆಣ್ಣುsss
ಹೂಡೂವಾs ಬಯ್ಲಗೂss ನೆಡುದಾಳೂsss || ಆ ಹೆಣ್ಣೂsss
“ಹೂಡೂವಾs ವಾರ್ಲಾsss ಬಿಟ್ ಹೊಡಿರೀss” || ಲಂದಾಳೂsss ||೨೨೬||
ಲೀಸೂ ನೇಗಿಲವಾsss ಹೊಳಿಲಿಡೀsss || ಲಂದಾಳೂss
ನಾ (ವ್) ಹೋಗ್ವ ಲಾsರಣದಾsssಲಡವೀಗೂsss” ||
“ಅಕ್ಕsತಂಗದೀರೂsss ನಾಳೀಗ್ ವಂದಾಗೂರೀssss
ನಾsವಂದೂ ಮಳ್ಳಾsss ಪರದೇಸೀsssss || ||೨೨೭||
ತಟ್ಟೀsಮನಿಯsಳೇsss, ಸರಪೂಳೀ ಕವಿಯೋಳೇss
ಸರಕಂsದರೆ ಕದವಾsss ತೆಗವಳೇs || ಲತ್ತೂಗೀss
ಸರಕಾsರ್ಕ್ ಹೋದಣ್ಣಾssss ಬರಲೆಲ್ಲಾsss || ||೨೨೮||
ನಾಗsಬೆತ್ತದ ಕೋಲೂsss ಹುರ್ಯs ಬಳ್ಳಿ ಜೋಡೂsss
ಬೆನ್ನೂರೀss ಅತ್ತೇss, ಬುಜಊರೀss
ಬೆನ್ನೂರೀ ಅತ್ತೆsss, ಬೊಜುಊರೀ ನಿನ ಮಗುದೀsರೂss
ಯಾತಾsರಿಂದ್ ಹೊಡುದಾsss ಕಲಿಬೀಮಾsss? ||೨೨೯||
ಆತಾನಾss ಕೋಡೇsss ಮಾತೊಂದಾsಡಾsದೀರೂss
ಯಾತುsರಿಂದ್ ಹೊಡುದಾsss ನಿನು ಮssಗಾsss ?”
“ಪಾಗರ ಮೇನೀನಾsss ಪಾರೀsಜಾತದ ಹೂಗೂsss
ದ್ಯೇವsರಂತವ್ನೇsss ನನು ಮsಗಾsss” || ||೨೩೦||
ಯೇನೆ ನನು ಗೆಣತೀsss, ದೇಸದ ಮೆನೆ ತಿರಗೂತೇsss?
ಬೆಟ್ಯೇನೇs ನನ್ನಾsss ಗೆಣsತsನಾss ?|| ಕಬ್ಬೀನಾss
ಕಾಕಂಬೀs ಕೊಡುತೇsss ಬಿಡುಬೇಡಾssss || ||೨೩೧||
“ಪಾರೀಜಾತದ ಹೂಂಗೂss ಮೇನೇs ತೂಗಾಡ್ವಾಗೇss
ನೋಡವ್ವಾss ಅವನಾsss ಜುಲಮಿsಯಾss | |(ಮೀ) ಕಂಡsರ್ಹೆಣ್ಣಾsss
ಬಂಡಾss ಮಾಡೂವಾsss ಬಗ್ಯೇನೇss ?|| ||೨೩೨||
ಮುಡುವದು ಜಾಜಿಜೂಜಿsss ನಡೆವದು ಕಲ ದಾsರಿs |
ದೊರೆಯು ತಾನೆದ್ದsss ಮದುವೆಗೆs || ಹೋಗುವಾsಗs
ಮಡದಿ ಹೋಗಿ ಸೆರಗsss ಒಗುವದುss || ||೨೩೩||
“ಸೆರಗ ಬಿಡು ಮಡದಿs, ಸೆರಮುತ್ತs ಹೊಯ್ಯುsವೇs
ಬಿಡು ಮಡದಿs, ಒಡಲs ವೈರತs | ಬಿಟ್ಟರೆs
ತಂಗಿಯ ತರುತೆನೇss ನಿನsಗೊಂದs” || ||೨೩೪||
Leave A Comment