ಹೊತ್ತರ ಮುಂಚೆದ್ದೀsss ಕೌಲೀ ಕೊಡುಗಿಗೆ ಹೋssದೇ
ಯಾಕವ್ವss ಕೌಲೀss ವರುಗೀದೇsss?
ಯಾಕವ್ವss ಕೌಲೀss ವರುಗೀದೇsss ನಿನ್ವೊಡಿಯಾss
ಹಾಲಿಲ್ಲssದುಣ್ಣss ಹಗಲೂsಟs

ಹಾಲಿಲ್ಲssದುಣ್ಣsss ಹಗಲೂsಟss ಅವರೊಡತೀ
ಗಿಂಡೀ ತುಂಬ್ಹಾಲsss ಕರದsಳು
ಗಿಂಡೀ ತುಂಬ್ಹಾಲsss ಕರದsಳು ಲವ್ರೊಡುತೀ
ಕಾಲ್ಕೊಟ್ಟೀ ಹಾಲs ಕಳಕೊಯ್ದೀsss

ಕಾಲ್ಕೊಟ್ಟೀ ಹಾಲ ಕಳಕೊಯ್ದೀsss ಲವ್ರೊಡಂತೀ
ಗಿಂಡೀ ಗಿಂಡ್ಕೆಲ್ಲs ಜರುದೀತೇss
ಗಿಂಡೀ ಗಿಂಡ್ಯೆಲ್ಲs ಜರುದೀತು ಲವ್ರೊಡುತೀ
ಮುತ್ತಿನ ಕಣಿ ದಾಬ ಕಳುಚೌssದೇss

ಮುತ್ತಿನ ಕಣಿ ದಾssಬ ಕಳುಚೌssದೇss ಲವ್ರೊಡುತೀ
ಮುತ್ತಿನವ್ ಬೇಲಿs ಹೆsರಗ್ಹೊಡುದೀsss
ಮುತ್ತಿsನವ್ ಬೇಲಿss ಹೆರಗ್ಹೊಡುದೀ ಸಿರಿ ಕೌಲಿs
ಗುಡ್ಡಿಮೊಕವಾssಗೀss ನೆಡುದೀತೇss

ಗುಡ್ಡಿಮೊಕವಾssಗೀss ನೆಡುದೀತೇss ಸಿರಿ ಕೌಲಿs
ತಾಮೇವೂ ಹೊಲುಕೇ ನೆsಡುದsಳು
ತಾಮೇವೂ ಹೊಲುಕೇ ನೆsಡುದsಳೇ ಸಿರಿ ಕೌಲಿs
ಗುಡ್ಡೀ ಮೇಲಿನ ಹುಲ್ಲs ಮಡು ಮಡುದೀ ಮೆಲುವಾsಗೇ
ಕಡುಗಣ್ಣಲಿ ಕಂಡsss ಹುಲಿರಾಯ
“”ಮುರಿದರೆ ಮುರಿಯಪ್ಪs ಹುಲಿರಾಯ, ನೀ ಕೇಳೋ
ನನ್ ಬಾಲsಲೈದನಿಯೊ ಮನಿಯಲ್ಲೀ
ನನ್ ಬಾಲಯ್ಯs ಹುಟ್ಟಿಲಿಂದೇಳು ದಿವಸ

ನನ್ನ ಬಾಲsನ ಸುಳಿಯೇ ಬಲಿಲಿಲ್ಲs
ನನ್ನ ಬಾಲsನ ಸುಳಿಯೇ ಬಲಿಲಿಲ್ಲs ಹುಲಿರಾssಯ,s
ನನ್ನ ಬಾಲsಗಿಟ್ಟು ಮೊಲಿಯಾss ಕೊಟಿಬತ್ತೇs”
ಅಟ್ಟಂಬೂ ಮಾsತಾ ಕೇಳೀತ್ತೇs ಸಿರಿಕೌಲೀ

ಕಾಳೀ ಮೇವ್ ಹೊಲಕೇss ಬರುವಾssದುs
“”ಕಾಳೀ, ಕಾಳೀ, ಕೇಳೇ ಕಾಳೀಯ ಕರು, ಕೇಳೇ
ನನ್ ಬಾಲsಗಿಟು ಮೊಲಿಯ ಕೊಡಿರsವ್ವs
ನನ್ ಬಾಲಯ್ಯs ಹುಟ್ಟೀಲಿಂದೀಗೆಳು ದಿವಸs

ನನ್ನ ಬಾಲsನ ಸುಳಿಯೇ ಬಲಿಲಿಲ್ಲs”
ಬಾಲsನ ಸುಳಿಯೇ ಬಲಿಲಿಲ್ಲsಲಂದ್ಹೇಳೀs
ಬೋಳೀ ಮೇವ ಹೊಲಕೆ ನಡೆದಾsಳು
“”ಬೋಳೀ ಬೋಳೀ, ಕೇಳೆ ಬೋಳೀಯ ಕರು, ಕೇಳೇ

ನನ್ನ ಬಾಲsಗಿಟ್ಟು ಮೊಲಿಯs ಕೊಡಿರವ್ವs
ಬೋಳೀ ಮುಂದಾssಗೀ ಬೋಳಿ ಕsರು ಹಿಂsದಾಗೀ
ಹಾಳೀ ಮೆನೆ ಮೊಲಿಯss ಕೊsರಿsರವ್ವs
ಹಾಳೀ ಮೆನೆ ಮೊಲಿಯss ಕೊಡಿರವ್ವಾss ನೀವೀಗೇ

ಹುಲಿರಾಯಗೆ ಬಾಶೀ ಕೊsಟ್ಟ ಬಂದೇ”
ಅಟ್ಟಂಬೂ ಮಾತಾs ಹೇಳಿತೇ ಸಿರಿಕೌಲೀss
ಹಿಂತಿರುಗರಮನಿಗೇs ಬsರುವದುss
ಹಿಂತಿರುಗರಮನಿಗೇs ಬsರುವಾssದೇ ಸಿರಿಕೌಲೀ

ಕಣ್ಣಲ್ಲೇ ನೀರುs ತsರುವದು
ಕಣ್ಣಲ್ಲೇ ನೀರುs ಸೊರುದಂತಾ ಕಾಲುದಲ್ಲೀs
ಮುತ್ತೀನವುಬೇಲಿs ವಳುಗೇ ಬಂದೀsss
ಮುತ್ತೀನವುಬೇಲಿs ವಳ್‌ಗೇ ಬಂದೀ ಲವ್ರೊಡುತೀsss

ಹಂಡೀ ತುಂಬ್ಹಾsಲs ಕsರುsದೀತುs
ಹಂಡೀ ತುಂಬ್ಹಾsಲs ಕರುದೀತೇ ಲವ್ರೊಡುತೀs
ಮುತ್ತೀನ ಕಣಿ ದಾsಬs ಲಿsಡುsವsದುs
“”ಇಂದೀನಾs ಹಾಲs ಚೆಂದದಿಂದೇ ಕುಡಿಬಾssಲss,

ನಾಳೀಗನ ಹಾsಲುs ನಿsನsಗಲ್ಲss
ನಾಳೀಗsನ್ಹಾಲೂs ನಿನುಗಲ್ಲss ನನುಬಾssಲss,
ಹುಲಿರಾssಯಗೆ ಬಾಶೀss ಕೊsಟೀ ಬsಂದೆss”
ಹಾಳೀ ಮೇನಿನ ಹುಲ್ಲ ಮೊಡುಮಡುದೀ ಮೆಲುವಾssಗೇ

ಕಡುಗಣ್ಣಲಿ ಕಂಡss ಸsರುಪರಾsಯss
“”ಬಡವರು ಗsದ್ದಿಯ ಮಾಡೀ ಮುಳ್ಳುs ಬೇಲಿಯ ಮಾಡೀss
ಹೋಗsದಿರು ಬಾssಲ, ಕsಳsದೀರುs
ಹೋಗsದಿರು ಬಾssಲ, ಕಳುಬೇಡ ಲವ್ರು ನಿನುಗೇss

ಕವಣೇ ಕವಣ್ಯಲ್ಲೀss ಹೊಡುವಾssರುss
ರಾಗೀ ಕುಮುರಿಯ ಮಾಡೀ ಮುಳ್ಳು ಬೇಲಿಯ ಮಾಡೀss
ಹೊಕ್ಕsಬೇಡ ಬಾssಲ, ಕsಳುಬೇss
ಹೊಕ್ಕsಬೇಡ ಬಾssಲ, ಕsಳುಬೇಡss ಲವ್ರೂ ನಿನುಗೇss

ಗುಂಡುs ಗುಂಡಿನಲ್ಲೀ ಹೊಡುವೋರು
ಚಂದೀ ಮುಂದಾsಗೀss ಚಂದಿ ಕsರs ಹಿಂದಾsಗೀs
ಹಾಳೀ ಮನೆ ಮೊಲಿಯs ಕೊsಡುsವsರೊs
ಹಾಳೀ ಮೆನೆ ಮೊಲಿಯs ಕೊಡುವರು ಮಗುನೇ, ಕೇsಳೊss

ಅಳ್ಳದಿರೊ ನೀನು ಇರಬೇಕು
ಬಸ್ವಾ ಮಂದಾಗೀ ಬಸ್ವನ ಕರು ಹಿಂದಾಗೀ
ಬಾಲ ನನ ಮಗುನೇ ನೆಡುಗಾಗೀ
ಬಾಲ ನನ ಮಗುನೇ ನೆಡುಗಾಗೀ ಹೋಗ್ವಾಗೇ

ಹಾಳೀಮನೆ ಮೊಲಿಯss ಕೊsಡುವsರೊs
ಹಾಳೀಮನೆ ಮೊಲಿಯss ಕೊಡುವsರೊ ಮಗುನೇ, ಕೇsಳೊss
ಕುಡ್ಡೀ ಸಂsತೊಸಿನಲ್ಲಿರಬೇssಕುs
ಕುಡ್ಡೀ ಸಂsತೊಸಿನಲ್ಲಿರಬೇssಕು ಮಗುನೇ, ಕೇಳು

ತಾಯsಲ್ಹಂಬಲವಾs ಮsರಿsಬೇಕುss
ತಾಯs ಹಂಬಲವಾ ಮರುತೀ ನೀನಿದ್ದsರೇs
ಸಂತೋಸsಪಡುವೇs ಮsನsದಲ್ಲೀss
ಅಟ್ಟಂಬೂ ಮಾsತಾss ಕೇಳೀsತೆ ಸಿರಿಕೌಲೀs

ಹುಲ್ಯsಪ್ಪಗ್ಯೇsನ ನುsಡುsದದೇs?
“”ಮುರುದರೆ ಮುರಿಯsಪ್ಪ ಹುಲಿಯsಣ್ಣs, ನೀ ಕೇಳೋ
ನನ್ ಬಾಲssಗೆss ಮೊಲಿಯs ಕೊsಟ್ಟೆsಬಂsದೇs”
ಅಟ್ಟಂಬೂ ಮಾತs ಕೇಳಿsದ ಹುಲಿರಾssಯs

ಕಣ್ಣೀರ ಸುರಿಸುತ್ತೇ ಬರುವಾನೇssss
“”ಕೇಳಲೆ ಕೇಳಲ್ಲೇ ಸತ್ಯುಳ್ಳss ಸಿರಿಕೌಲೀss,
ನಾನೂ ನಿನ್ನೀಗೇsss ಮುsರುsದಿಲ್ಲss
ನಾನೂ ನಿನ್ನೀಗೇsss ಮುsರುsದಿಲ್ಲss ಸಿರಿಕೌಲಿss,

ನಿನ್ ಬಾsಲsಗೇ ಮೊಲಿಯs ಕುsದಿsಸಂ”ದss
“”ನಿನ್ ಬಾsಲsಗೆ ಮೊಲಿಯs ಕುಡಿ”ಸಂದs ಹುಲಿರಾssಯs
ತಾ ಮೇವೂ ಹೊಲಕೇs ನಡೆದssನೇss
ಲಟ್ಟಂಬೂ ಮಾsತs ಕೇಳೀತೇs ಸಿರಿಕೌsಲೀs

ಗುಡ್ಡೀ ಮೊಕುವಾಗೀs ನೆಡುsದೀತ್ತೇ
ಗುಡ್ಡೀ ಮೇಲಿನ ಹುಲ್ಲs ಮೊಡುಮೊಡುದೀ ಮೆಲುವಾsಗೇs
ಕಾಲೇ ಜಾsರೀತೇ ಸಿರಿಕೌssಲೀs
ಕಾಲುs ಜಾsರೀತುs ಸಿರಿಕೌಲೀಗೇಗಿನ್ನೇss

ಹಳ್ಳದ ಕೊಡುಲಲ್ಲೇ ಮುರುದೇ ಬಿsತ್ತೇs
ಹಳ್ಳದ ಕೊಡುಲಲ್ಲೀ ಮುರ್ದೆಬಿsತ್ತೆ ಸಿರಿಕೌಲೀs
ಹಂಡ್ಹುಲಿ ತಿಂದಿ ನೀರss ಕುಡಿತಕ್ಕೆs
“”ಚೆಂದೀ, ಚೆಂದೀ, ಬಂದೆ ಚೆಂದೀಯಾs ಕರು ಬಂsದೇs

ಸಿರಿಕೌಲಿನ್ಯಾsಕೇ ಬsರಲಿಲ್ಲssss?
ಬೋಳೀ, ಬೋಳೀ, ಬಂದೆ ಬೋಳಿಯs ಕರುಬಂsದೇs
ಸಿರಿಕೌಲಿನ್ಯಾsಕೇs ಬsರಲಿಲ್ಲsss?”
“”ನಾವೂ ಕಾಣಲಿಲ್ಲ ನಾವು ನೋಡsಲಿಲ್ಲs

ನಾವ್ ಮೇವೂ ಹೊಲಕೇ ಬsರಲಿಲ್ಲs
ನಾವ್ ಮೇವೂ ಹೊಲಕೇ ಬರುಲೆಲ್ಲs ನಮ್ಮೊಡುತೀss,
ಹುಲಿ ತಿಂದೀ ನೀರs ಕುsಡಿsತಕ್ಕೂs”
“”ಬಸ್ವs, ಬಸ್ವs, ಬಂದೆ ಬಸ್ವsನ ಕುರುಬಂsದೇs

ಸಿರಿಕೌಲಿನ್ಯಾsಕೇ ಬsರಲಿಲ್ಲss?”
“”ನಾವೂ ಕಾಣsಲಿಲ್ಲ ಸಿರಿಕೌಲಿ ನೋಡsಲಿಲ್ಲs
ನಾ ಮೇವೂ ಹೊಲುಕೇ ಬsರsಲಿಲ್ಲs
ನಾ ಮೇವೂ ಹೊಲುಕೇ ಬರಲಿಲ್ಲ ನನ್ನೊಡುತೀss,

ಹುಲಿತಿಂದು ನೀರs ಕುಡಿತsಕ್ಕೂs”
“”ನೀವೂ ಇರುವೋರುs ಐವsರು ಮಕ್ಕಳಿರುss
ನನ್ ಬಾಲsನಿನ್ನೇಗೇ ಕಾದೆಕsಣಿss
ಬಡವರು ಗsದ್ದಿಯ ಮಡೀ ಮುಳ್ಳುs ಬೇಲಿಯ ಮಾಡೀ

ಹೊಕ್ಕಬೇಡ ಬಾಲ, ಕಳುಬೇಡ
ಹೊಕ್ಕಬೇಡ ಬಾಲ, ಕಳುಬೇಡ ಅವ್ರು ನಿನಗೇ
ಗುಂಡು ಗುಂಡಿನಲ್ಲೇ ಹೊಡುವರು
ರಾಗೀ ಕುಮಾರಿಯ ಮಾಡೀ ಮುಳ್ಳು ಬೇಲಿಯ ಮಾಡೀ

ಹೊsಗಬೇಡ ಬಾssಲs ಕಳುಬೇsಡ
ಹೊsಗsಬೇಡ ಬಾssಲs ಕಳುಬೇsಡ ಲವ್ರು ನಿನುಗೇ
ಕಣ್ಣೇ ಕಷ್ಣ್ಯಲ್ಲಿ ಹೊಡುವsರು”*      ಸಿರಿಕವಲಿ; ಹೆಗಡೆ ಎಲ್.ಆರ್. ಪರಮೇಶ್ವರಿಯ ಪದಗಳು. ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೧೯೯೨ ಪು.ಸಂ. ೧೬೬-೧೭೧.