ರಾಗಿ ಬೀಸಂದರೇss ರೋಗs ಬಂತಂಬೂದೇss
ರಾಗೀಯಾss ರೊಟ್ಟೀss ತೆನಮೊಸರೂss ||
ರಾಗೀಯಾ ರೊಟ್ಟೀsss ತೆನಮೊಸರಾss ತಿಂಬಾಗೇss
ಆಗೇs ನೋಡವಳಾsss ಕೈ ಬಾಯೀss || ||೨೩೫||

ಸೊಸುದಿರಲಾಳಿಸೂsss ಕುಸುಲದಿಂದಾsಳಿಸುss
ಇಟ್ಟೀದs ಸಿರಿಗಂದಾsss ಲಳೀಯsದೇs
ಇಟ್ಟೀದ ಸಿರಿಗಂದಾss ಲಳಿಯದೇss ತಾsಯವ್ವಾsss,
ಸೊಸುದಿರಲಾsಳಿಸುs ವಳುಗಿದ್ದೀsss || ||೨೩೬||

ಅತ್ತ್ಯಮ್ಮಾs, ನಾs ನಿನ್ನs ಹೆತ್ತಮ್ಮಾs ಅಂಬೂನೇsss
ಬೆಟ್ಟೂs ತಾಗಿದ್ರೆsss ಸೆರಣಂಬೇsss || ಅತ್ಯಮ್ಮsss,
ಮೆಟ್ಟೀದಾss ಪಾsಪಾssss ಬಯ್ಲಂಬೇsss|| ||೨೩೭||

ಸಪ್ ಹೊತ್ತೆ ಸದಿ ಹೊತ್ತೇsss ಬೆಕ್ಕೀನಾs ತಲಿ ಹೊತ್ತೇss
ಮತ್ತೂ ನಮ್ಮಲ್ಲೀsss ಕೊಟುಕೊಟೇss || ಕೇಳಿದ್ರೆs
ಚೆಚ್ಚೀದಾs ಕೊಡವಾsss ಕೈಬಿಟ್ಟೇsss || ||೨೩೮||

ಅಕ್ಕಿ ಕಣಜಕ್ಕು ಬೀಗಾss ಬತ್ತಾs ಕಣಜಕು ಬೀಗಾss
ಮತ್ತೂs ನಮ್ಮತ್ತೇsss ಕೈಬೇಗಾs || ಆದಾsರೇss
ಮತ್ತೂs ಕೊಟಕೊಟೀsss ತಡಿನಾರೇsss || ||೨೩೯||

ಕುಂಟಾಣಗಿರುತೀಗೇss ಕುಳ್ಳೂಕೇ ಮಣಿ ಕೊಡೀss
ಸಮಬಾಗದೆಲಿಯsss ಹರಕೊಡೀss || (ಡೂ) ಅತ್ತೂಗೆ,
ಕುಂಟೂಣಿ ಬಯ್ಸತೀss ಕುಳ್ವsದುsss || ||೨೪೦||

“ಕೆರ್ಯೇರಿ ಮೇನೇss ಯರುಗೂs ಪೌಜಿಗsಟ್ಟೀsss
ಅರಿಯನೇಲತ್ತೆsss, ಕೆಲುಸವಾsss || ತಾsಯಿ ತಂsದೇss
ಸರುದರ ಮುತ್ತಂದೀsss ಸಲುಗಿರುsss” ||೨೪೧||

ಸರುದರ ಮುತ್ತಾದಾsರೇss ಸುರುದೀs ಕೊರುಳೀಗಿsಡುss
ಯಳುದೀs ಬಾs ಕೊಟುಗೇss ಸಗುಣಿಯsss” ||೨೪೨||

“ಸಾವಿರಾs ಕೊಟ್ಟರೂss ಸೋsದರುತ್ತೆ ಬೇಡಾsss
ಸಾವೀsರದ ಮೇನೇssss ಲೈನೂರಾss || ಕೊಟ್ಟಾರೂss
ಸೋದಾsರತ್ತೀಯಾsss ಮಗು ಬೇಡಾsss” || ||೨೪೩||

ಕೆನ್ನೀ ಕಿರುಜಡೇsss ಬೆನ್ನೀಗೆ ಇಳ್ವದೂsss
ಉತ್ತುಮರೆ ನನ್ನಾsss ಹಳ್ಯೋರುss || ಅತ್ತೆ ಮಾವs
ಹೊನ್ನೀನ್ಹಾ ಸೂಗೀss ತಲದಿಂಬೂ || ||೨೪೪||

ಹತುಕೊಳ್ಗ ಬತ್ತಕೇsss ಬತುಬಾವಿ ನೀರ್ ಹೊರವಾಗೇss
ಮತ್ತೂ ನನ್ನತ್ತೇssss ಕೊಟುಕsಟ|| ಮಾತೀಗೇss
ಚೊಚ್ಚಿದಾss ಕೊಡುನಾsss ಕೈsಬಿಟ್ಟೇsss || ||೨೪೫||

ಉಂಡರೂ ಸಂಗಾಟಾss ಉಣದೀರೂ ಬಳ್ಳೂಕೀss
ಸುಗ್ಗೀ ಸಿವ್‌ ರಾತ್ರೀss ವೈಸಾಕಾs || ದೆನದಲ್ಲೀss ||
ಹೇಳಾsಬೇಡತ್ತೇsss, ಕೆಲಸಾವಾsss || ||೨೪೬||

ಕೇಸಕ್ಕಿ ಅನ್ನsಕೇss ಬತ್ ಬಾವಿ ನೀರಿಗೇss
ಸುತ್ತೇ ಬಾsಗವಂತಾsss ಕೊಟಗೀಗೇs || (ಗೀ) ಸೆಗುಣಿ ತೆಗದೀs
ಕಲ್‌ನಂತಾs ಜೇವಾsss ಕರಗಿsತುs|| ||೨೪೭||

ಆರಂಬೊ ಅಡವೀಲಿs ಮೂರಂsಬು ಗಿಡಗಳುs
ಗಿಡವಿಗೆ ತಕ್ಕಾsದಾss ಗಿಳಿಗಳುs || ನಮ್ಮನೆಯs
ಅತ್ತೆಗೆ ತಕ್ಕಾsದsss ಸೊಸದಿರುsss || ||೨೪೮||

ಮಡ್ಕೀ ಸಂದೀಲೀsss ಮಿಡ್‌ಕಾಡ್ವದದುವೇನೇ?
ಲಡ್‌ಗತ್ರೀsಲಡ್ಕೀsss ವಡುದಂತೇss || ಲವ್ರತ್ತೇss
ಮಿಡ್‌ಕಾsಡುತೆ ತೊಡ್ಯಾssss ಕೊವ್ವದೂssss || ||೨೪೯||