ಕರುಣಾಯಿಟ್ಟು ಕಾಯ್ಬೇಕು ಮಾದೇವಿ
ನಿಮ್ಮ ಕರುಣದಿಂದ ನಮ್ಮ ಹರಣ ಮಾದೇವಿ
ಸುತ್ತಮುತ್ತ ಏಳುಕೊಳ್ಳ ಮಾದೇವಿ
ಅಲ್ಲೆ ನಟ್ಟನಡುವೆ ಗಚ್ಚಿನ ಗುಡಿಯು ಮಾದೇವಿ
ನಿನ್ನ ಗುಡಿಯ ಮೇಲೆ ಬಂಗಾರ ಕಳಸ ಮಾದೇವಿ
ನಿನ್ನ ಹಣಿಯ ಮೇಲೆ ಕುಂಕುಮ ಬಟ್ಟು ಮಾದೇವಿ
ನಿನ್ನ ಹಣಿಯ ಮೇಲೆ ಭಂಡಾರ ಬಟ್ಟ ಮಾದೇವಿ
ನಿನ್ನ ಕೊರಳಲ್ಲಿ ಕವಡಿ ಸರ ಮಾದೇವಿ
ನಿನ್ನ ನಡುವಿನಲ್ಲಿ ಬೆಳ್ಳಿ ಡಾಬ ಮಾದೇವಿ
ನಿನ್ನ ತೊಡಿಯ ಮೇಲೆ ಎಳಿಯ ರಾಮ ಮಾದೇವಿ
ನಿನ್ನ ಪಾದದ ಮೇಲೆ ಪರುಮವೈತೆ ಮಾದೇವಿ
ಅಲ್ಲಿ ನಿನ್ನ ಪವಳ್ಯಾಗ ಜೋಗ್ಯಾರ ಮ್ಯಾಳ ಮಾದೇವಿ
ಕರುಣಾಯಿಟ್ಟು ಕಾಯಬೇಕ ಮಾದೇವಿ
ನಿಮ್ಮ ಕರುಣದಿಂದ ನಮ್ಮ ಹರಣ ಮಾದೇವಿ