ಅತ್ತಿ ಮನಿಗ್ಹೋಗುಕೇss ಕೈ ಯಲಿ ರೊಕ್ಕಬೇಕುss
ತಕ್ಕತೈಯಂಬೂss ಕುದ್ರಿಯೇss
ತಕ್ಕತೈಯಂಬೂss ಕುದ್ರಿಹೇರಿಕಂಡೀss
ಅತ್ತಿಮನಿಗಳ್ಯಾss ಬರವನೇsss || ||೨೫೦||

ಅಳ್ಯಾs ಬಂದಾರೇsss ಅರಸೂ ಬಂದರಪ್ಪಂತೇss
ಅರ್ಸಗೊಳ ಅಂಗಡಿಯsss ಬೆಳಿಯೆಲೆ || ತೆಗುತಂದೀss
ಲಾಯದಲ್ ಒಂದ್ ವೀಳ್ಯssss ಮೆಲುವರೇsss || ||೨೫೧||

ಸಂಪುಗಿ ಹೂವಿನಾsss ಸರವssss ಮಾsಡಂsದsರೇss
ಬರವsss ನೋಡದ್ಯೇsssಲಳಿಯssನಾsss || ಬೆನ್ನಿಗ್ ಬರವಾss
ಮಗಳೂsಲಿನಾಕೇsss ಬರಲಿಲ್ಲsss ? ||೨೫೨||

ಸಾವಂತಿ ಸಾಕಡಬೂsss ಬೇಕಾದ ಕಜ್ಜಾಯೀss
ಯಾಕೇs ನಿನ್ನಳಿಯಾssss ಉಣಲೆಲ್ಲಾss ? || ತಾಯವ್ವೀss,
ನೈಚಿಕೀಯೇ ಬಾಳೇsss ನೆsಗೂಬಾಳೇsss || ||೨೫೩||

ಅಳ್ಯಾssಗೊಡ್ಯಾಣಾsss ಮಗಳಿಗೆ ಕ್ಯಾದೂಗೇss
ಆಡುಂಬೂss ಮಗಳೂsss ಅಳಿಯಾಗೇss || ಕೊಟ್ಟೂಗೀs
ಕೀಳಾನಾsದ್ಯೆಮ್ಮೇssss ಮಗುಳೀಗೇsss ||೨೫೪||

ಅತ್ತೆ, ಅತ್ತೆ, ಅಂಬೂss ಅಳಿಯಲುದೀರ್ ಹೆಚ್ಚಲಿs,
ಪಂಚಲು ಪಾಂಡೋರೂsss ಕೌಲೋರೂsss ||
ಪಂಚಲು ಪಾಂಡೋರೂsss ಕೌಲೋರ್ ಹಿಂಡೀನಂತೆsss
ಹೆಚ್ಚಲಿ ಅಣ್ಣಯ್ಯಾssss ಮಗುದೀರುsss || ||೨೫೫||

ಅಳಿಯನಂಲ್ಲತೀದೇss ವಳಗೇs ಉಂಬವ್ಯಾರೇss ||
ಬೆಳುಗೀದಾss ಬೆಳ್ಳೀss ಹರಿಯಾಳಾss || ದುಂಬವ್ಯಾರೇss ?
ಇರುಳೂs ತಂಗಮ್ಮಾsss ಪುರಿಶಾನೇsss || ||೨೫೬||

ಬೆಳ್ಳೂss ಮೂಡುತನ್ನಾsss ಬೆಳ್ಳssಗಾಗುತನ್ನಾsss
ಮಾವನ ಮನಿಗ್ಹೋದಾsss ಮಗು ಬಂದಾss || ಮಗುವೇ, ಕೇಳೊs
ಲಾsದಲು ಬೋನಂಗೀss ನನುಗ್ಹೇಳುs” || ||೨೫೭||

“ಪಾsಯಿಸ ಪರುಮನ್ನs ಹೋಳುಗಿ ಕಜ್ಜಾಯ್ಯ
ಲಿಂದೊಂದ್ವೊಪ್ಪತ್ತೇsss ಉಳಿಯಂತೂss || ನಮ್ಮತ್ತೇss
ಮಾತss ಮೀರssದೇsss ಉಳಿದೀದೇss” || ||೨೫೮||