ದೇವಿ ಜಯಾ ಜಯಾ ಭವಾನೀ | ನೀ
ಭಕ್ತರ ಜಯಾ ಜಯಾ ಭವಾನಿ      ಪಲ್ಲ

ಹರಿಯಾಗಳೇಳುವವರು
ಶಿವಧ್ಯಾನ ಮಾಡುವವರು
ಹರಿಯಾಗಳೇಳುವವರು ಭವಾನಿ | ನೀ
ಗುರುಧ್ಯಾನ ಮಾಡುವವರು         ೧

ಗಂಡಂತ ಭಗತರಿಗೆ
ನಗತ ಮಾತ ಹೇಳಿದಿ ದೇವಿ
ಜಯಾ ಜಯಾ ಭವಾನೀ | ನೀ
ಭಕ್ತರ ಜಯಾಜಯಾ ಭವಾನಿ       ೨

ಕೈಯೊಳು ತಂಬುರಿ ಹಿಡಿದು
ಕೊರಳೊಳು ಜಪಮಣಿ ಧರಿಸಿ
ಚರಣಕ್ಕೆರಗಿದ ಭಕ್ತರ ಭವಾನಿ | ನೀ
ಜಯಾ ಜಯಾ ಭವಾನಿ    ೩

ದೇಶದೊಳು ವಾಸುಳ್ಳ ಶಿಶುನಾಳ
ಶರೀಫರ ಸೇವಾ ಮಾಡಿದಾಕಿ
ದೇವಿ ಜಯಾ ಜಯಾ ಭವಾನಿ | ನೀ
ಭಕ್ತರ ಜಯಾ ಜಯಾ ಭವಾನಿ      ೪