ಯಾವ ಸೀಮೆ ವಾಲಿಕಾರ  ತುಮ್ಮೀದs
ಬಂದಾನೆ ಊರೀಗೆ ಮುಂದಿಗೆ       ”
ಊರು ಮುಂದೆ ಇಳುದಾನೆ         ”
ಊರಾಕ್ಕ ಏಳಿ ಕಳಿಸಿದಾನೆ          ”
ಯೀ ಊರೊಳಗೆ ತೋಟಿಗನ ಕರಿಸಿದಾನೆ    ”
ತೋಟಿಗನ್ನ ಕರಿಸಿದಾನೆ   ”
ಏನೋ ತೋಟಿ ರಾಮ ಎಲಿ ತೋಟಿ ರಾಮ  ”
ಈ ಊರಾಕ್ಕ ನೀನಿನ್ನ ವೇಳಪ್ಪ      ”
ಈ ಸಾವಡಿನ್ನ ಗುಡಿಸಂತ ವೇಳೋ ”
ಊರಾಕ್ಕ ಬಂದಾನೆ ಎಲಿತೋಟಿ ರಾಮ      ”
ಊರಾಕ ವೇಳಿದಾನೆ       ”
ಏನು ರೈತುರು ನೀವು      ”
ಯಾವ ಸೀಮೆ ವಾಲಿಕಾರ  ”
ಈ ಊರ ಮುಂದೆ ಇಳುದಾನೇ     ”
ಈ ಸಾವಡಿನ್ನ ಗುಡಿಸೀರಿ ಸ್ವಾಮಿ   ”
ಬಂದಾನೆ ಊರ ಮುಂದಿಗೆ ”
ಈ ಎಲಿ ತೋಟ ರಾಮಾsನು       ”
ಯಾವ ಸೀಮೆ ವಾಲಿಕಾರ  ”
ಈ ಊರಾಕ್ಕ ಏಳುದೇನೋ         ”
ಸಾವಡಿನ್ನ ಗುಡಿಸೀದಾರೋ         ತುಮ್ಮೀದs
ರಂಗೋಲಿ ಹಾಕಿದಾರೋ  ”
ಏನೋ ತೋಟಿ ಎಲಿ ತೋಟಿ ರಾಮ          ”
ಈ ಊರಾಗ ಊಟಕ್ಕೆ ವೇಳೋ     ”
ಯಾರ ಮನೆಗೆ ಯೇಳುತೀಯೋ    ”
ನನಗಿನ್ನ ವೇಳೋ          ತುಮ್ಮೀದs
ಏನು ಸ್ವಾಮಿ ರೈತರು ಮನೆ ಊಟಕ್ಕೆ ವೇಳುತೀನಿ    ”
ರೈತುರು ಮನಿಗೆ ಬ್ಯಾಡೋ ತೋಟಿ ”
ಆ ವೊನ್ನಿ ಮನೆಗೆ ಪೇಳೋ ನೀನು  ”

ಸುತ್ತುಮುತ್ತ ಸುಣ್ಣಾದ ಗೋಡಿ       ”
ನಟ್ಟ ನಡಿವೀಲಿ ವೊನ್ನಿ ಮನೆ        ”
ಓದಾನೆ ವೊನ್ನಿ ಮನಿಗೆ ಈ ಎಲಿ ತೋಟಿ ರಾಮಾನು   ”
ಅಮ್ಮವೇನೆ ಹೊನ್ನಲಾ ದೇವಿ       ”
ಯಾವ ಸೀಮೆ ವಾಲಿಕಾರನೋ      ”
ನಮ್ಮೂರ ಸಾವಡಿಲ್ಲಿ       ”
ಇಳುದಾನೆ ವಾಲಿಕಾರ     ”
ನಿನ್ನ ಮನಿಗೆ ಊಟಕ್ಕೆ ವೇಳೆಂದ    ”
ವಾಲಿಕಾರನಿಗೆ ಊಟಕ್ಕೆ ಹಾಕಮ್ಮ  ”
ಅಗಲು ಬೇಸಿದ್ದು ಅಣ್ಣೇ ಸೊಪ್ಪು      ”
ಇರುಳು ಬೇಸಿದ್ದು ಸೋಮಕ್ಕ ಕೂಳು         ”
ಇಳುದಾರೆ ತಿನ್ನಾಲೆ ರಾಮ          ”
ಇಳದಿದ್ರೆ ವೋಗಾಲಿ ರಾಮ          ”
ಅಲ್ಲಿಂದ ಬಂದಾನೆ ಎಲೆ ತೋಟಿ ರಾಮ      ”
ಏನಂತ ಪೇಳಿದಾನೋ    ”
ಏನು ಸ್ವಾಮಿ ವಾಲಿಕಾರ   ”
ಆ ವೊನ್ನಮ್ಮ ಮನೆನಲ್ಲಿ    ”
ಅಗಲು ಬೇಸಿದ್ದು ಅಣ್ಣೆ ಸೊಪ್ಪಂತೆ   ”
ಇರುಳು ಬೇಸಿದ್ದು ನಾಮಕ್ಕಿ ಕೂಳಂತೆ        ”
ಇಳುದಾರೆ ತಿನ್ನಲಿ ರಾಮ  ”
ಇಳಿದಿದ್ರ ವೋಗಾಲಿ ಅಂತ ವೇಳಿದಾಳೊ     ”
ಸಾವಡಿಯಿಂದ ವೊರಟಾನೆ         ”
ಮನೆಗಿನ್ನ ವೋದಾನೋ   ”
ಏನೆ ವೊನ್ನೇ ವೊನ್ನಾಲಾ ದೇವಿ     ”
ಕೈಗಿನ್ನ ನೀರು ತಾರೆ       ”
ಮುಕ್ಕ ಗಡಿಗೇಲಿ ನೀರು ತಂದಾಳೊ ತುಮ್ಮೀದs
ಕೈಗಿನ್ನ ಅಟ್ಟಿದಾಳೆ         ”
ಏನೆ ವೊನ್ನೇ ವೊನ್ನಲಾ ದೇವಿ       ”
ನಾನು ಸಂಪಾದಿಸಿದ್ದಿ ತಂಬೀಗೆ      ”
ಏನು ಮಾಡಿದೆ ಏನು ಮಾಡಿದೆ      ”
ಈ ಮುಕ್ಕ ಗಡಿಗೇಲಿ ನೀರು ಕೊಟ್ಟಿದೆ         ”
ಕೈ ಇನ್ನು ತೊಳೆದಾನೋ  ”
ಮುಖವಿನ್ನ ತೊಳೆದಾನೋ          ”
ಮನಿಯಾಕ್ಕ ಬಂದಾನೆ    ”
ಮನಿವಳಿಗೆ ಗಡಿಗೆ ಮಡಿಗ್ಯಾನೆ      ”
ಒಲಿನಾಗಿಂದು ಬೂದಿ ಕೊಟ್ಟಾಳೆ    ”
ನೀನಿನ್ನ ಧರಿಸಂತ ವೇಳಿದಾಳೊ    ”
ಏನೇ ವೊನ್ನೆ ವೊನ್ನಲಾದೇವಿ        ”
ಈ ಒಲಿಯಾಗನ ಬೂದಿ ಕೊಡತೀಯಾ       ”
ನಾನು ತಂದಿದ್ದ ನಾಮ ಬುರ್ರಿ       ”
ಯಾರೀಗ ಕೊಟ್ಟಿದ್ದೆ         ”
ಇಸ್ತ್ರೇಲೆ ಹಾಕಿದಾಳೆ       ”
ಅಗಲು ಬೇಸಿದ್ದು ಅಣ್ಣೆ ಸೊಪ್ಪು       ”
ಇರಳು ಬೇಸಿದ್ದು ಸೋಮಕ್ಕಿ ಕೂಳು ”
ಆಕೀದಾಳೆ ಊಟಕ್ಕ        ”
ಏನಂತ ಕೇಳಿದಾನೋ     ”
ಏನೇ ವೊನ್ನೆ ವೊನ್ನಲಾ ದೇವಿ       ”
ಈ ಸಣ್ಣಕ್ಕಿ ಮೂಟೆ ಏನು ಮಾಡಿದೇ ”
ಈ ತಗರಿ ಪೊರುಪು ಮೂಟೇಗಳ   ”
ಯಾರು ತಿಂದು ವೋದಾರೇ         ”

ಆ ಮಾತು ಕೇಳಿಸಿಕೊಂಡೋ        ”
ವೊರುಟಾಳೋ ಶಿಕ್ಕಮ್ಮನವರ ಮನಿಕೆ       ”
ಅಮ್ಮ ದೇನೆ ಶಿಕ್ಕುಮ್ಮ ಅಕ್ಕಮ್ಮ ನೋರೇ    ”
ಅವನು ಯಾರೊ ವಾಲಿಕಾರನು ಬಂದವ್ನೆ     ”
ನಮ್ಮ ಮನಿಯಾಕೆ ಬಂದವ್ನೆ ತಾಯಿ          ತುಮ್ಮೀದs
ಅಣ್ಣೆ ಸೊಪ್ಪು ಆಮ್ರ ಆಕಿದೀನಿ        ”
ಸೋಮಕ್ಕಿ ಕೂಳು ಆಕಿದೀನಿ        ”
ಅವನಿನ್ನ ಕೇಳಿದಾನೇ      ”
ತಗರಿ ಪೊರುಪು ಮೂಟೆಗಳ         ”
ಸಣ್ಣಕ್ಕಿ ಮೂಟೆಗಳ         ”
ಯಾರು ತಿಂದು ವೋದಾರೇ ವೊನ್ನೀ          ”
ನೀನು ಯಾರಿಗೇ ಮಾಡಿ ಆಕೀದೆ ಅಂದಾನೋ         ”
ಶಿಕ್ಕಮ್ಮನು ಏನಂತ ಹೇಳಿಯಾಳೋ         ”
ಅಮ್ಮ ಅವನು ನಿಮ್ಮ ಅಮ್ಮನಾ ತಮ್ಮಾನೋ         ”
ನಿಮ್ಮ ಅಪ್ಪನಿಗೇ ಅವ್ನು ಇನ್ನು ಅಳಿಯಾನೋ ”
ನಿನಕಿನ್ನ ಗಂಡನಮ್ಮ ವೊನ್ನಲು ದೇವಿ        ”
ಮೂರು ತಿಂಗಳು ಮಗುವೀಗೆ       ”
ತೊಟ್ಲ ಬಾಸಿಂಗ ಕಟ್ಟಿದಾನೋ      ”
ಆವೊತ್ತು-ವೋದಾನೇ     ”
ಆವೊತ್ತು ವೋದವ್ನೆ ಅವ್ನು  ”
ಈವೊತ್ತು ಬಂದವ್ನೆ ಅವ್ನು  ”
ದಂಡು ಸಂಬಳ್ಕ ವೋದಾನೋ     ”
ಈ ಊರಾಕಿನ್ನ ಬಂದಾನೋ        ”
ನಿನ್ನ ಮನೀಗೆ ಒಂದವ್ನೆ ಅವ್ನು        ”
ನಿನಿನ್ನ ಸರಿಯಾಗಿ ಊಟಕ್ಕೆ ಬಡಿಸೋ        ”

ಆ ಮಾತು ಕೇಳಿದಾಳೇ    ”
ಈ ವೊನ್ನಲಾ ದೇವಿ ಕೇಳಿರಾಳೋ  ”
ಅಲ್ಲಿನಿಂದ ಬಂದಾಳೆ ವೊನ್ನೆ         ”
ಗುಂಡಿ ಬಿರ‍್ನ ವೆತ್ತಿಕೊಂಡು  ”
ಸೇದೋ ಬಾಯಿ ಅಗ್ಗವಾ ತಕೊಂಡು         ತುಮ್ಮೀದs
ವೊರುಬಾಳೆ ಬಾಯಿಕಿನ್ನ   ”
ಬಾಯಿ ಮೂರು ಸುತ್ತು ಆಕೀದಾಳೋ        ”

ಬಾಯಿ ವಳಕ್ಕ ದುಮುಕಿದಾಳೆ       ”
ಅಲ್ಲಿ ಪ್ರಾಣವಿನ್ನ ಬಿಟ್ಟಾಳೆ ಅವ್ಳು      ”
ಈ ಮನಿವಳಗ ಇದ್ದ ವಾಲಿಕಾರನೋ         ”
ಒಂದು ಎರಡು ಗಂಟೇ ಟೈಮು      ”
ನೋಡಿದಾನೆ ನೀರುಕೋದ ವೊನ್ನೆ  ”
ಆ ಮನಿಗಿನ್ನ ಬರಲಿಲ್ಲ      ”
ಆ ಬಾಯಿ ಅತ್ತರಕ ವೋದಾನೋ   ”
ಆ ಬಾಯಿ ಕಡೆ ನೋಡಿದಾನೋ    ”
ಆ ಬಾಯಿ ತಾವ ನೋಡಿದಾನೋ   ”
ಆ ಬಾಯಿ ವಳಗ ತಗ್ಗಿ ನೋಡಿದಾನೋ       ”
ಆ ಬಾಯಿಯಲ್ಲಿ ಬಿದ್ದಾಳೆ ಅವ್ಳು      ”
ಪ್ರಾಣಾವ ಬಿಟ್ಟಾಳೆ ಅವ್ಳು ವೊನ್ನೆ    ”
ಏನೇ ವೊನ್ನಲಾ ದೇವಿ     ”
ನಾನು ಎಷ್ಟು ಕಷ್ಟಪಟ್ಟು ಬಂದಿದ್ನೆ ವೊನ್ನೇ    ”
ಏನು ಅನ್ಯಾಯ ಮಾಡೀದೀನೆ ನಿನಗೇ        ”
ಈ ಬಾಯಿಯಲ್ಲಿ ಪ್ರಾಣ ಬಿಟ್ಟಿದೀಯಾ         ”
ನಾನು ತಂದಿದ್ದ ಸೀರೇಗಳಾ         ”
ಯಾರು ವುಟ್ಟು ನೋಡೋರಿನ್ನ      ”
ನಾನು ತಂದಿದ್ದ ಕುಬುಸುಗೋಳ    ”
ಯಾರು ತೊಟ್ಟು ಕಣ್ಣಾಗೆ ನೊಡಾಲೇ          ”
ಅಂತು ಪೇಳಿ ದುಃಖಾವ ಪಡುತಾನೆ ”
ನಾನು ತಂದಿರೋ ವಾಲೆಗಳಾ      ”
ಯಾರ ಕಿರಿಗಳ್ಕ ಇಕ್ಕಿ ನೋಡಾವೆ   ”
ಅಂತವೇಳಿ ಆ ವಾಲೀಕಾರ          ”
ದುಃಖಾವ ಪಡುತಾನಾ     ”
ನಾನು ತಂದಿರುವೋ ನಡುವೀಗೆ ಡಾಬು      ತುಮ್ಮೀದs
ನಾನು ಯಾರ ನಡುವೀಗೆ ಆಕೊನೆ ವೊನ್ನೀ   ”
ಕಾಲಿಗೆ ಸೈನಾಗಾಳೋ    ”
ನಿನಗಂತ ನಾನು ತಂದೀನಲ್ಲೇ      ”
ಅಂತವೇಳಿ ಕೊಂಡು ವಾಲಿಕಾರ    ”
ಈ ದುಃಖಾ ಪಡುತಾನಾ   ”
ದುಕ್ಕಾವ ಮಾಡೀದಾನೆ    ”
ಈ ವಾಲೀಕಾರ ಮನಿಗೆ ಬಂದಾನೋ         ”
ಮನಿವಳಿಗ ಬಂದು ಮಲಿಗ್ಯಾನ      ”
ಏಳು ದಿನ ಮಲಿಗಿದ್ದಾನೆ   ”
ಅನ್ನ ನೀರೂs ಇಲ್ದಂತೆ    ”
ಗೋಳನ್ನ ಮಾಡಿದಾನೋ ”
ಈ ಮನಿವಳಗ ಯಿಂಗುಳ್ಸಿತಾ       ”
ನಾನೆಷ್ಟು ಅನ್ಯಾಯ        ”
ಮಾಡಿದೆನೋ ಜನ್ಮದಲ್ಲಿ   ”
ಏಳು ದಿನ ಆದ ಮ್ಯಾಲೆ    ”
ಎಂಟನೆಯ ದಿನದಲ್ಲಿ ಎದ್ದಾನೋ    ”
ಬಾಯಿ ಅತ್ತರಿಗೆ ವೋದಾನೋ      ”
ಬಾಯಿ ಮೂರಾ ಸುತ್ತೇಹಾಕಿದಾನೆ  ”
ಬಾಯಿ ಮೂರು ಸುತ್ತೇ ತಿರುಗಿ      ”
ನಾನು ಕಣ್ಣಲ್ಲಿ ನೋಡಲಿಲ್ಲೆ ”
ನಿನ್ನಲ್ಲಿ ಇನ್ನ ನಾನು        ”
ಯಾವ ಸೌಖ್ಯ ನೋಡಾಲಿಲ್ಲೇ       ”
ನಿನಗೇನು ಅನ್ಯಾಯ ಮಾಡಿದ್ದೀನಿ   ”
ನಾನು ಬಂದ ಒಂದು ದಿನದಲ್ಲಿ ನೀನು        ”
ನನ್ನ ಸೌಕರ‍್ಯ ಒಂದು ದಿನ ”
ನೀನಿನ್ನ ನೋಡಲಿಲ್ಲಲ್ಲೇ    ”
ಯಾಕೆ ವೊನ್ನೆ ನೀನು ಬಿದ್ದಿದ್ದು       ”
ಈ ಬಾಯಿಯಲ್ಲಿ ಪ್ರಾಣಾವ ತಕಂಡಿದ್ದು        ”

ಇಷ್ಟು ಸೋಕ ಮಾಡಿಕೊಂಡು       ತುಮ್ಮೀದs
ಈ ಬಾಯಿವಳಕ್ಕ ಶಂಬು ಬಿಟ್ಟಾನೋ         ”
ದ್ರಾಂಬಿ ವುವುs ಆಗಿ ಅವ್ಳು ಹುಟ್ಟಿದಾಳೊ     ”
ಆ ಬಾಯಿನಲ್ಲಿ ತಾಂಡಾವ ಮಾಡಿದಾಳೋ   ”
ನೀರಿಗೋದ ಅಕ್ಕನೋರು  ”
ಮನೆಕಿನ್ನ ಬಂದಾರೆ ಅವ್ರು  ”
ಯಾವ ಸೀಮೆ ವಾಲಿಕಾರ  ”
ಈ ಬಾಯಿನಲ್ಲಿ ದಾಂಬರಿ ವೂವ     ”
ಆಗಿ ವುಟ್ಟಿ ತಾಂಡವಾ ಮಾಡುತ್ತಾಳೋs     ”
ನಿನ್ನ ಸೋಕ ಏನಪ್ಪ       ”
ಆ ವೂವ್ನ ತಂದು ಮನೆಯಲ್ಲಿ ಮಡುಗೋ     ”
ನಿನ್ನ ಕಷ್ಟವೆಲ್ಲ ಪರಿಹಾರವಾಗುತಾದೋ      ”
ತೋಟಿಗ್ಯಾನೆ ಕರೀಸ್ಯಾನೆ ”
ಆ ತೊಟ್ಟಿಗನ್ನಿಗೆ ವೇಳಿದಾನೋ     ”
ಏನೋ ತೋಟಿ ಎಲಿ ತೋಟಿ ರಾಮ          ”
ಬಾಯಿವಳಕ ಇಳಿದು ನೀನು         ”
ಆ ದ್ರಾಂಬ್ರಿವುವ ಎತ್ತಿಕೊಂಡು       ”
ನಮ್ಮ ಮನಿವಳಕ ಎತ್ತಿ ತಾರೋ    ”
ಅವ್ನು ವೋದಾನೆ ಬಾಯಾಕ್ಕ ಇಳಿದಾನೋ   ”
ಆ ವೂವನ್ನೆತ್ತಿ ಕೊಂಡೂ    ”
ಅವ್ನು ಮನಿಗೆ ತಂದು ಕೊಟ್ಟಾನೆ     ”
ಅವ್ನು ಮನಿಗೆ ಅವ್ನು ವೋದಾನೇ     ”
ಗೂಡುನಲ್ಲಿ ಪೂವ ಮಡಿಗ್ಯಾನೋ   ”
ಈ ವಾಲಿಕಾರ ಪೂಜಿಗಳು ಮಾಡಿದಾನೋ   ”

ಆ ವುವನ್ನಲ್ಲಿ ದೇವುಕನ್ನಿಕ್ಯಾಗಿ
ಈ ಬಂಗಾರು ಬೊಮ್ಮೆಮಾದ್ರಿಗೆ     ”
ವುಟ್ಟಿದಾಳೆ ವೊನ್ನಾಲಾ ದೇವಿ       ”
ಆ ಮನಿವಳಗ ನಿಂತಾಳೋ         ”
ಆ ಮನಿವಳಗೆ ನಿಂತಾಳೋ ವೊನ್ನಿ ”
ಅವಳ್ಕ ಅವನ್ಕ ಲಾಗ್ಲಾವಾ ಮಾಡಿದಾರೊ    ”
ಬೇಕಂದಷ್ಟು ಮದೀವೀಗೆ   ”
ಬೇಕಂದಷ್ಟು ರತ್ನ ಮುತ್ತುಗಳೊ     ”
ಕೋಸಿದ ಮುತ್ನ ತಲಬಾಕಲುಹಾಕಿ ”
ಕೋಸದಾ ಮುತ್ತು ಸಪ್ಪರಕಾಕಿ      ”
ಆ ವೂರನಲ್ಲಿ ಆ ಮನಿವಳಗ         ”
ಬಲು ಸೌಕ್ಯವಾಗಿವಿದ್ದಾರೋ         ”*      “”ದಾಂಬ್ರಿವುವು ಆಗಿ ಅವ್ಳು ವುಟ್ಟಿದಾಳೊ”; ಅಂದನೂರು ಶೋಭ, ಕೊಂಬೆ ರೆಂಬೆಲ್ಲ ಎಳೆಗಾಯಿ. ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ.

ಪಾಠಾಂತರ ಪಠ್ಯ

ವುಟ್ಟಿದ ಮಲ್ಲೀಗೆ ವುಟ್ಟಿದಂತೆ ಇರುವೆನು; ಅಂದನೂರು ಶೋಭ, ಕೊಂಬೆ ರೆಂಬೆಲ್ಲ ಎಳಗಾಯಿ. ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು. ೧೯೭೮ ಪು.ಸಂ. ೮೬-೮೮.