ಕಂಡ್ರಾs ಕೋಣಲ್ಲೀsss ಕಂಡೀರೆ ನಂ ಬಾsವ್ನೋರಾsss?
ಮುಂದಿನಾs ಮೂರ್ ಹಲ್ಲೂss ಸಿರ್‌ಮುಕ್ಕುss || ನಮ್ ಬಾವ್ನೋರಾss
ಕೊಕ್ಕೀಯಾs ಬಳ್ಳೀsss ಉಡಿಬಳ್ಳೀsss || ||೨೫೯||

ಬಾವಾs ಬಾವಾsನೇss ಬೊಗ್ರಿಗಡ್ಡದ ಬಾವಾsss
ಮೂಗಾಗೇ ಮೂರೂsss ಕವಣೀಯಾss || (ಣೀ) ಇಟ್ಟಿಕಂಡೀss
ಸೂಳೀರ್ಗೆ ಹುಬ್ಬಾssss ಜಡವsನೇssss || ||೨೬೦||

ಆಚೀಚೀ ಕಯ್ಯೀಗೇsss ಕೆಂಡsನೀಲದ ಬಳೇss
ಚಂಡಾಡೂs ಕಯ್ಯೀಗೇss ಮುರಗೀಯೇss || ತಂಗಮ್ಮಾನಾss
ಗಂಡಾs ಸಿಕ್ಕನ್ಯೇsss ಅರಜೂನಾssss || ||೨೬೧||

“ಹರಹರಾ” ನಂದೀsss ಹಾದೀs ನಾs ತೊಲುಗೀದೇss
ಅರುಸಾssನಂದಿ ಕಯ್ಯಾss ಮುಗದೀದೇ || ಲಕ್ಕಮ್ಮನಾss
ಪುರುಸಾssನಂದಿ ನಾನೂsss ಲರಿಯsನೇsss || ||೨೬೨||

ಬಾವಯ್ಯ ಬರುತsನೇss ಬಾsಣಾsದ್ ಮರ್ಣದಿಂsದೇss
ಕುಂsದಾsಣದ ಮೇನೇsss ಕುದುರೀಯಾss|| (ರೀ) ಹೇರಿಕಂsಡೀss
ಬಾವಯ್ಯಾs ಬರುತಾನೇsss ಬಯ್ಲಲ್ಲೀsss ||೨೬೩||