ಸತ್ಯದ ಶರಣೀಯ
ನನದೇವಿ ನೆತ್ತೀಯ ಮ್ಯಾಲ ಹೊತ್ತೀವಿ
ನೆತ್ತ ಉರದರ
ಬಿಡಲಿಲ್ಲ ಸತ್ಯವ ತೋರಮ್ಮ ಪಲ್ಲ
ಆಡು ಮಕ್ಕಳ ಕೂಡ
ನನದೇವಿ ತೂಗುತೊಟ್ಟಿಲ್ ಕೊಡ
ಭಾಗ್ಯವ ಕೊಡು ತಾಯಿ
ಭಕುತರಿಗೆ ಸಾಗಿ ಬರತಾರ ನಿನಗ ೧
ಭಗತರ ಭಾಗ್ಯೇವ
ದೇವಿ ಬೇಡಿದ ಭಾಗ್ಯ ಕೊಡ
ಬಂಗಾರ ಕಳಸಾಖ
ನನತಾಯಿ ಹೆಸರನು ಬಳಸ್ಯಾರ ೨
ಮುತ್ತೀನ ಸರಗ
ನನತಾಯಿ ಸರಣೆಂದು ಕರದಾರ
ಶೀಲವಂತರ ಮನೀಗಿ
ನನಶರಣಿ ಹ್ಯಾಂಗಹೋದೆ ಜಗದಮ್ಮ ೩
ಶೀಲೊಂದ ನೀ ರೂಪ
ನನದೇವಿ ಶಿವರೂಪ ನನತಾಯಿ
ಮಳಲಾಗ ನೀ ವರತಿ
ಜಗದಂಬ ತಗದಾಳ ಜಗದಂಬ ೪
ತಗದಾಳ ಜಗದಂಬ
ರೇಣುಕದೇವಿ ಶಿವನ ಸೀತಾಳದೇವಿ
ಶಿವನ ಸೀತಾಳ ದೇವಿ
ಎರದಾಳ ಜೈ ಅಂತ ನಿಂತಾಳ
Leave A Comment