ವಂದs ತಾಯೀಗೆsssss ವಂದೇಯ ಮಗಲ್ಹುಟ್ಟೀ
ಶಿದ್ದೆಣ್ಣೇಲ್ಹಾ ಕೇsssss ಶsಲಗಿದ್ದೇ
ಶಿದ್ದೆಣ್ಣೇಲ್ಹಾ ಕೇsssss ಶಲಗಿದ್ದ ಮಗಲೀಗೇ
ಹಾಲು ತುಪ್ಪ್ಹಾsಕೇ ಶsಲಗಿತ್ತೇ

ಲಾಲು ತುಪ್ಪ್ಹಾsಕೇsssss ಶಲಗಿದ್ದ ಮಗಲೀಗೇ
ಮಗನೇ ಯೇನಂದೇsssss ನಡುದೀನೇ?
“”ಕೇಲಲೆ ಕೇಲಾಲೇsssss ತಾಯೀ, ನೀ ಕೇಲೇ
ಪಲವೋರಿಗೆ ತಂಗೀsssss ಕೊಡು ಕಾಗ

ಪಲವೋರಿಗೆ ತಂಗೀsssss ಕೊಡುಕಾಗ ತಾಯಿ, ಕೇಲೆ
ನನ್ನ ಶಾಕಿದ್ದಾಗೇsssss ಶಲಗುಬೇಕೇ
ನನ್ನ ಶಾಕಿದ್ದಾಗೇsssss ಶಲಗುಬೇಕು ತಾಯೀ, ಕೇಲೇ
ಹೆಣ್ಣಲ್ಲ ಗಂಡsssss ಮಗನಂತೇ

“”ಕೇಲಲ್ನೆ ಕೇಲಾಲೋsssss ಮಗನೇ, ನೀನಾರು ಕೇಲೋ
ತಂಗೀಗನ್ನೈಡೂsssss ವsರುಶಾದೋss
ತಂಗೀಗನ್ನೈಡೂsssss ವರುಶಾದೊ ಮಗನೇ, ಕೇಲು
ತುತ್ತೆಲ್ಲಾ ನೆಂಟೇsssss ಬsರsತೀದೋsssss

ತುತ್ತೆಲ್ಲಾ ನೆಂಟೇ ಬರತೀದು ಮಗನೇ, ಕೇಲೋ
ಶೋದುರುದ ಮಾವಾ ಬರುತೀನೋ
ಶೋದುರುದ ಮಾವಾ ಬರುತ ಮಗನೇ, ಕೇಲೋ
ತಂಗೀ ನಗ್ಗನವೇ ಯೆರೇಬೇಕೊ”

“”ಯಾರಿಗೆನ ಕೊಟ್ಟರೂ ಶೋದುರಕೇ ಕೊಡುದಿಲ್ಲs
ತಂಗಿ ನಗ್ಗನವೇsssss ಮಾಡೂದಿಲ್ಲs
ತಂಗಿ ನಗ್ಗನವೇsssss ಮಾಡೂದಿಲ್ಲ ತಾಯಿ, ಕೇಲೇ
ನನ್ನ ಶಾಕಿದ್ದಾಂಗೇsssss ಶಲಗೂಬೇಕೇ”

ತಾಯೀ ಹೇಳಿದ ಮಾತೇsss ಮಗನೇ ಕೇಲೂಲಿಲ್ಲ
“”ತಂಗೀ ಮೈನೆರುದೇsssss ಕುಲೂತೀದು
ತಂಗೀ ಮೈನೆರುದೇsssss ಕುಲೂತೀಲು ಮಗನೇ, ಕೇಲೋ
ಹೇಗೆ ಮಾಡಿ ತಂಗೀsssss ಶಲಗೂಬೇಕೋ?

“”ಕುಮಟೆಗ್ಹೋತೀನೇssss ಹೊಚಪಂಜೀ ತರುತೀನಿ
ತಂಗೀ ಕಣ್ ಕಟ್ಟೇsssss ಬಿsಡsತೀನೇ
ತಂಗೀ ಕಣ್ ಕಟ್ಟೇsssss ಬಿಡುತೀನೆ ತಾಯೀ, ಕೇಲೇ
ಲದುಕಾಗೇ ಶಿಂತೇssss ಬಿಡುಬೇಡ

“”ಕೇಲಲೊ ಕೇಲಾಲೊ ಕೇಲಾಲೊ ಯಲೆ ಮಗನೇ, ನೀ ಕೇಲೋ
ಬೆನ್ನಿಗ್ಹೇಗೆ ತಂಗೀsssss ಕsರುಕಂತೇs
ಬೆನ್ನಿಗ್ಹೇಗೆ ತಂಗೀsssss ಕುರುಕಂತೆ ಮಗನೇ, ಕೇಲೋ
ಹೇಗೆ ಮಾಡಿ ತಂಗೀsssss ಬಿಟ್ಟೇ ಬರ್ತೇ?”

ಕೇಲಲೆ ಕೇಲಾಲೇ ತಾಯೀ, ನೀನಾರೂ ಕೇಲೋ
ತಂಗಿಗು ಶುದ್ದೀsssss ಮಾಡುಬೇಡುವೆ
ತಂಗಿಗು ಶುದ್ದೀsssss ಮಾಡುಬೇಡವೆ ತಾಯಿ, ಕೇಲೇ
ಲಜ್ಜೀ ಮನಿಯಲ್ಲೇsssss ಮದಿವ್ಯಂತೇ

ಲಜ್ಜೀ ಮನಿಯಲ್ಲೇsssss ಮದಿವ್ಯಂತೆ ತಾಯೀ, ಕೇಲೇ
ಲಾಗಂದೆ ಬೆನ್ನೇರುಗೇsssss ಕರುಕಂತೇs”
ನೆರೆಮನೆ ಹಂದರದಲ್ಲೇ ಲಾಡೂವ ನನ ತಂಗೀ,
ಲಜ್ಜೀ ಮನಿಯಲ್ಲೇsssss ಮದುವ್ಯಲ್ಲೇ

ಲಜ್ಜಿ ಮನೆಯಲ್ಲೇsssss ಮದುವ್ಯಲ್ಲೆ ತಂಗಿ, ಕೇಲೇ
ನಾ ನೀನು ವಟ್ಟೀಗೆsssss ಹೋಗುಬೇಕೇ”
ಲಣ್ ಹೇಲಿದ ಮಾತೇsssss ಕೆಮಿಯಲ್ಲಾಲಿಶಿಕಂಡೀ
ತಾಯಿ ಕೂಡ್ಯೇನsssss ನಡುದೀಲೇ?

“”ಕೇಲೆ ಕೇಲಾಲೇsssss ತಾಯೀ ನೀನರು ಕೇಲೇ
ಮುತ್ತು ಕಟ್ಟಿದ್ದsssss ಹೊಸಶಾಲೇ
ಮುತ್ತು ಕಟ್ಟಿದsssss ಹೊಸಶಾಲೆ ತಾಯೀ ಕೇಲೇ
ಲೇ ಶಾಲೇ ನನಗೇsssss ಕೊಡುಬೇಕೇ

ಲಾ ಶಾಲೇ ನನಗೇsssss ಕೊಡುಬೇಕೆ ತಾಯೀ ಕೇಲೇ
ಲಜ್ಜೀ ಮನಿಯಲ್ಲೇsssss ಮದುವಿಯೇss
ಲಜ್ಜಿ ಮನೆಯಲ್ಲೇsssss ಮದುವಿಯೇ ತಾಯೀ, ಕೇಲೇ
ಲಣ್ಣನ ಬೆನ್ ಹೆರಗೇsssss ಲೋಗಿ ಬತ್ತೇ”

ಬಣ್ಣಲುಟ್ಟವಲೇsssss ಮಂಡೇಯ ಬಾಶವಲೇs
ಲಬ್ಬರಗೀ ಹೂಗsssss ಮುಡುದೀಲೇss
ಲಬ್ಬರಗೀ ಹೊಗsssss ಮುಡುದೀಲೆ ತಂಗಮ್ಮsನೇ
ಲಣ್ಣನ ಕೂಡ್ಯೇನsssss ನುಡುದೀಲುs?

ಲಣ್ಣನ ಕೂಡ್ಯೇನsssss ನುಡುದಿಲು ತಂತಮ್ಮsನೇ
“”ಲಿನ್ನಾರೂ ಯೇಲೋsssss ಮsದುವೀಗೇss
“”ಲಿನ್ನಾರೂ ಯಲೋsssss ಮದುವೀಗೇ ಲಣ್ಣಾ, ಕೇಲೋ
ಶಂಗಡದಲ್ಲೇ ನಾಮೇsssss ಹೊಗುಬೇಕೋs”

“”ಕೇಲಲೆ ಕೇಲಾಲೇsssss ತಂಗೀ, ನೀನಾರು ಕೇಲೇsss
ಹೊತ್ತು ಮಜ್ಜನವೇsssss ಗsಲುದಿತ್ತೇs
ಹೊತ್ತು ಮಜ್ಜನವೇsssss ಗಲುದಿತ್ತು ತಂಗೀ, ಕೇಲೇ
ಲೂಟಾ ಮಾಡಿ ನಾವೇsssss ನೆsಡೆಬೇಕೇss

ಲೂಟಾ ಮಾಡಿ ನಾವೇsssss ನೆಡೆಬೇಕೆ ತಂಗೀ, ಕೇಲೇ
ಲಶುವಾsದರೆ ನೀನೇsssss ತsಡೆsನಾsರೇs
ಕೇಲಲೆ ಕೇಲಾಲೆsssss ತಾಯೀ, ನೀನಾರು ಕೇಲೇs
ನಮಗಿಟ್ಟsಶನುವೇsssss ಬಡ್ಯುಬೇಕೇsss

ನಮಗಿಟ್ಟಶನುವೇ ಬಡ್ಯುಬೇಕೆ ತಾಯೀ ಕೇಲೇ
ಲಜ್ಜಿಮನೆಯಾಗೇ ಹೋಗಬೇಕೇ”
ಮಗ ಹೇಲಿದ ಮಾತೇ ಕೆಮ್ಯುಲ್ಲಾಲುಶಿಕಂಡೀ
ಮಾಲೂಗೀ ವಲುಗೇ ನೆಡುದೀಲೇ

ಮಾಲೂಗೀ ವಲುಗೇsssss ನೆಡುದಿಲೆ ನಿನ ತಾಯಿಯೇ
ಶಣ್ಣಕ್ಕಿ ಶೈಬೋನsssss ಬಡುಶೀಲುs
ಶಣ್ಣಕ್ಕಿ ಶೈಬೋನsssss ಬಡುಶಿಲು ನಿನ ತಾಯಿಯೇ
ಲದುರ ಮೆನೆ ತುಪ್ಪsssss ಯರದೀಲೇ

ಲದುರ ಮೆನೆ ತುಪ್ಪsssss ಯರದೀಲು ನಿನ ತಾಯಿಯೇ
“”ಲೂಟಿಕೆ ಬಾ” ಲಂದೇsssss ಕsರದೀಲುs
ಲಣ್ಣನೂ ತಂಗೀನೂsssss ಒಂದೇ ವಟ್ಟಿನ ಮೇನೇ
ಲೂಟಕೂ ತಾಮೂsssss ನಡೆದೀರುs

ಲೂಟಕೂ ತಾಮೇsssss ನಡೆದಿರು ರಣ್ಣ ತಂಗೀನೂ
ಮಾಯಿನ ಮಣೆ ಮೇನೇsssss ಕುಲತೀರುss
ಮಾಯಿನ ಮಣೆ ಮೇನೇsssss ಕುಲುತೀರಣ್ಣ ತಂಗೀನೇ
ವಂದಂಬೂ ತುತ್ತೇsssss ಕಲಶೀದೋss

ವಂದಂಬೂ ತುತ್ತೇsssss ಕಲಶೂ ಹೊತ್ತಿನಲ್ಲೇ
ಕಡಗಣ್ಣಲೆ ನೀರsssss ತರುತೀನೇsss
ಕಡಗಣ್ಣಲೆ ನೀರsssss ತುರವಂತಾ ಹೊತ್ತೀಗೇ
“”ಯೇನಾಗಿತೂಲಣ್ಣsssss ನsನಗ್ಹೇಲೋs

ಯೇನೂಲಾಗೂನಿಲ ತಂಗೀ, ಯಂತೂ ಲಾಗುಲಿಲ್ಲ ತಂಗೀ
ಹೊಗೆ ಬಂದೇ ಕಣ್ಣೀಗೇsssss ಶುಲುದಿತ್ತೇs
ಹೊಗೆ ಬಂದೇ ಕಣ್ಣೀಗೇsssss ಶುಲುದಿತ್ತು ತಂಗೀ, ಕೇಲೇ
ಲದರಿಂದೇ ನೀರೇsssss ಬರುತಿತ್ತೇs

ಲಟ್ಟೆಲ್ಲ ಮಾತೇsssss ತಂಗೀ ಕೂಡ್ಹೇಲೀರೇ
ಉಂಡೆಂಜಲ ಬಾಯsssss ತೊಲೆದೀರೇs
ಉಂಡೆಂಜಲ ಬಾಯsssss ತೊಲೆದೀರಣ್ಣ ತಂಗೀನೂ
ಹೊಲ್ಲಿ ಮೆನೆ ಬಂದೇsssss ಕುಲುತೀರೇ

ಹೊಲ್ಲಿ ಮೆನೆ ಬಂದೇsssss ಕುಲುತೀರಣ್ಣ ತಂಗೀನೂ
ಆರಿಶಿದಣ್ಣಡಕೇsssss ಮsಡsದೀರೇ
ಆರಿಶಿದಣ್ಣಡಕೇsssss, ವಡದಿರಣ್ಣ ತಂಗೀನೂ
ಮುರದೊಂದೆಲೆಯೇ ಮೆಲಿದೀರೇs ಮೇಲಿದೀರೇ

ಹಾಲಲ್ಲೇ ಬೆಂದsssss ರವೆ ಶುಣ್ಣss ತಿಂದೀಕಂಡೇ
ಜಾಣನಂಗುಡಿಯೇsssss ಹೊಗೆಶಪ್ಪೇs
ಜಾಣನಂ ಗುಡಿಯೇsssss ಹೊಗೆಶಪ್ಪ ತಿಂದಿಕಂಡೇ
ಕೆಂಡsದಂತ ರೊಂಡsssss ಉಲುಗಿವ್ವೇs

ಕೆಂಡsದಂತ ರೊಂಡsssss ಉಲುಗಿವ್ನೆ ನಿನ್ನಣ್ಣsನೇ
ತಂಗೀ ಕೂಡೇನsssss ನಡುದೀನೇ?
ತಂಗೇ ಕೂಡೇನsssss ನುಡುದಿನೆ ನಿನ್ನಣ್ಣsನೇ
“”ಇನ್ನಾರೂ ಏಲೇsssss ಮsದುವೀಗೇs”

ಲಟ್ಟೆಲ್ಲ ಮಾತೇsssss ತಂಗೀ ಕೂಡೇಲುsವಾಗೇ
ಒಡಲೊಡೆದೇ ದುಕ್ಕsssss ಬsರುತ್ತಿತ್ತೇs
ಒಡಲೊಡೆದೇ ದುಕ್ಕsssss ಬರುವಂತs ಹೊತ್ತಿಗೇ
ಯೇನಾಗಿತ್ತೊ ಲಣ್ಣsssss, ನನಗ್ಹೇಲೋs?

“”ಯೇನೂನಾಗನಿಲ್ಲ ತಂಗೀ ಯಂತೂಲಾಗನಿಲ್ಲ ತಂಗೀ,
ಕಣ್ಣಿಗೇ ಕಶಿಯೇsssss ಹೊಡುದಿತ್ತೇs
ಕಣ್ಣಿಗೇ ಕಶಿಯೇsssss ಹೊಡುದುತ್ತು ತಂಗೀ, ಕೇಲೇ
ಲದುಕಾಗೇ ನೀರೇsssss ಶಲುಶಿದ್ದೇ

ಲದುಕಾಗೇss ನೀರೆsssss ಶಲಶಿದ್ದೇ ತಂಗೀ, ಕೇಲೇ
ಲಿನ್ನಾರೂ ಯೇಲೇssss ಮದುವೀಗೇs
ಮಾಲೂಗೀ ವಲಗೇsssss ಲಾಲುಕಾಶುವ ತಾಯಿ,
ತಂಗೀ ಬೆನ್ನರಗೇsssss ಕsರಕಂತೇs

ತಂಗೀ ಬೆನ್ನರಗೇsssss ಕರಕಂತೆ ತಾಯೀ, ಕೇಲೇ
ಅಜ್ಜಿಮನೆ ಮದುವೀಗೇsssss ಹೋಗೇ ಬತ್ತೇ”
ಅಜ್ಜಿಮನೆ ಮದುವೀಗೇsssss ಹೋಗೇಬತ್ತೇಂದ್ಹೇಲುವಾಗೇ
ತಾಯೀಗೂ ದುಕ್ಕsssss ಬsರುತ್ತಿತ್ತೇ

ತಾಯೀಗೂ ದುಕ್ಕsssss ಬರುವಂತಾ ಹೊತ್ತೀಗೇ
ತಾಯೀ ಕೂಡ್ಯೇನsssss ನುಡುದೀಲು?
“”ಕೇಲಲೆ ಕೇಲಾಲೇsssss ತಾಯೀ, ನೀನಾರು ಕೇಲೇ
ಯಾಕೇ ಮಾಡೆ ದುಕ್ಕsssss ಬಿಡುತಿದಿಯೇ?”

“”ಯೇನೂಲಾಗನಿಲ ಮಗುಲೇ, ಯಂತೂ ಲಾಗನಿಲ ಮಗುಲೇ,
ಹುಟ್ಟಿದsssss ವಂದೇsssss ಮಗುಲsಲೇ
ಹುಟ್ಟಿದsssss ವಂದೇsssss ಮಗುಲಲೆ ಮಗುಲೇ, ಕೇಲು
ಲಜ್ಜಿಮನೆ ಮದುವೀಗೇsssss ಶವಣಿದ್ದೇ

ಲಜ್ಜಿಮನೆ ಮದುವೀಗೇsssss ಶವಣೆದ್ದಿ ಮಗಲೇ, ಕೇಲೇ
ಲಿನ್ಯಾರೇ ನನ್ನsssss ಬುಡುದಲ್ಲೀs?”
ಕೇಲಲೆ ಕೇಲಾಲೇsssss ತಾಯೀ, ನೀನಾರು ಕೇಲೇ
ಲಿಂದ್ಹೋಗೇ ನಾಲೇsssss ಬರುತೀನೆ”

ಲಟ್ಟಲ್ಲಾ ಮಾತೇsssss ತಾಯೀ ಕೂಡ್ಹೇಲೀಲೇ
ಲಣ್ಣನ ಬಲಗೇsssss ನಡದೀಲೇ
ಲಣ್ಣನೂ ಮುಂದಾಗೇ ತಂಗೀನೂ ಹಿಂದಾಗೇ
ನಡೆದವರೇ ತಮ್ಮssss ನಡಗೆಲ್ಲೀ

ನಡೆದವರೇ ತಮ್ಮssss ನಡಗ್ಯಲ್ಲಣ್ಣ ತಂಗೀನೂ
“”ಹೊತ್ತು ಮಜ್ಜನವೇsssss ಗsಲುದಿತ್ತುs
“”ಹೊತ್ತು ಮಜ್ಜನವೇsssss ಗಲುದಿತ್ತು ಲಣ್ಣ, ಕೇಲೋ,
ನಡೆದೀ ನೆಡದಿ ನನಗೇsssss ದಣುವಾದೋ

ನೆಡದೀ ನೆಡದಿ ನನಗೇsssss ದಣುವಾದೊ ಲಣ್ಣs, ಕೇಲೋ
ಲೆಟ್ಟದೂರs ಲಜ್ಜಿsssss ಮನೆಗೋಲು?”
“”ಆಗುಡೆ ಹತ್ತು ಬೇಕೇsssss ಲೀಗುಡ್ಡೆ ಲಿಲಿsಬೇಕೇ
ಆಗುಡೆ ಮರಿಯಲ್ಲೇsssss ಲಜ್ಜೀಮನೆ”

“”ಕೇಲಲೊ ಕೇಲಾಲೋ ಲಣ್ಣs, ನೀನರು ಕೇಲೋ
ಶಂಜೀಯs ಕಾಲsssss ಬsರುತೀದೋs
ಶಂಜೀಯs ಕಾಲsssss ಬರುತೀದು ಲಣ್ಣs, ಕೇಲೋ
ಕತ್ತಲೆ ಹೊತ್ತೀಗೇsssss ನಡೆsನಾರೇs

ಕತ್ತಲೆ ಹೊತ್ತೀಗೇsssss ನಡೆನಾರೆ ಲಣ್ಣs, ಕೇಲೋ
ಕಣ್ಣಿಗೆ ನಿದ್ದುರಿಯೇsssss ಬsರುತೀದೋs
ಕಣ್ಣಿಗೆ ನಿದ್ದುರಿಯೇsssss ಬರುತಿದು ಲಣ್ಣ, ಕೇಲೋ
ಗೋರಂಬೂ ಲಡವೀsssss ನಮುಗಲೋs”

“”ಕೇಲಲೆ ಕೇಲಾಲೆsssss ತಂಗೀ, ನೀನಾರು ಕೇಲೆ
ಈ ಅಡವ್ಯಲ್ಲೆ ನಾವೇsssss ವಲಿಬೇಕೇss
ಈ ಅಡವ್ಯಲ್ಲೇ ನಾವೇsssss ವಲಿಬೇಕು ತಂಗೀ, ಕೇಲೇ
ಬೆಲ್ಗು ಜಮಿಯಾಗೇsssss ನಡೇಬೇಕೇs”

“”ಕೇಲಲೊ ಕೇಲಾಲೋsssss ಲಣ್ಣs ನೀನಾರು ಕೇಲೋ
ಹುಲಿಯು ನೆರಿಯಗುಲೇsssss ಬsರsತೀದೋs
ಹುಲಿಯು ನೆರಿಯಗುಲೇsssss ಬsರತೀದು ಲಣ್ಣs, ಕೇಲೋ
ಹೇಗೇ ಮಾಡಿ ನಾವೇsssss ವsಲಿಬೇಕೋs?

ಹೇಗೇ ಮಾಡಿ ನಾವೇsssss ವಲಿಬೇಕು ಲಣ್ಣ, ಕೇಲೋ
ಕಣ್ಣಿಗೆ ನಿದ್ದರಿಯೇsssss ಬsರsತಿದೋ”
ತಂಗೀ ಹೇಲಿದ ಮಾತೇssss ಲಣ್ಣs ಕೇಲಿಶಿಕಂಡೇs
ಜೋಗೀಲs ನೀಡೇsssss ಕುಲಿತೀನೇs

ಜೋಗಿಲs ನೀಡೇsssss ಕುಲುತಿನೆ ನಿನ್ನಣ್ಣsನೇ
“”ನಿದ್ದುರೆ ಬಂದಾರೇsssss ಮsನೀಕsಣೇ
ಲಟ್ಟಾ ಹೇಲುವಾಗೇsssss ಕಣ್ಣಿಗೆ ನಿದ್ದುರೆ ಬಂದೇ
ಯೇನಂದೇ ಲಣ್ಣsssss ನುಡುದೀನೇ?

ಯೇನೆಂದೇ ಲಣ್ಣsssss ನುಡುದಿನೆ ತಂಗೀ ಕೂಡೇ
“”ಕಾಲs ಮೆನೆ ನೀನೇsssss ಮನಗೂ ಬೇಕೇ
“”ಕಾಲs ಮೆನೆ ನೀನೇsssss ಮನಗು ಬೇಕು ತಂಗೀ, ಕೇಲೇ
ಕೂತಿಕಂಡೆ ನಾನೇsssss ವಲಿತೀನೇ”

ಲಣ್ ಹೇಲಿದ ಮಾತೇsssss ತಂಗೀ ಕೇಲಿಶಿಕಂಡೇs
ಲಣ್ಣನ ಕಾಲಮೇನೇsssss ವsರುsಗೀಲೇ
ಲಣ್ಣನ ಕಾಲುಮೇನೇsssss ವರಗೂ ಹೊತ್ತೀನಲ್ಲೀ
ನಿದ್ದೂರೇ ಬಂದೇsssss ಲರುಗಿತ್ತೇs

ನಿದ್ದೂರೇ ಬಂದೇsssss ವರಗೂ ಹೊತ್ತೀನಲ್ಲಿ
ಹೊಚಪಂಜಿ ಕಣ್ಣಕಟ್ಟೇsssss ಮನುಗೀಶೀ
ಹೊಚಪಂಜಿ ಕಣ್ಣಕಟ್ಟೇ ಮನುಗಿಶಿ ನಿನ್ನಣ್ಣsನೇ
ಲಿಂದೊಮ್ಮೆs ಮನೆಗೇsss ಬsರುವೋನೇ

ಲಿಂದೊಮ್ಮೆs ಮನೆಗೇsssss ಬರುವನೆ ನಿನ್ನಣ್ಣsನೇ
ತಾಯೀ ಕೂಡ್ಯೇನsssss ನುಡಿದೀನೇss?
ತಾಯೀ ಕೂಡ್ಯೇನsssss ನುಡಿದಿನೆ ನಿನ್ನಣ್ಣsನೇ
“”ತಂಗೀ ಕಣ ಕಟ್ಟೇsssss ಬಿಟ್ಟೇಬಂದೇs

ತಂಗೀ ಕಣ ಕಟ್ಟೇsssss ಬಿಟ್ಟೇಬಂದೆ ತಾಯೀ, ಕೇಲೇ
ಲಾರಣದಡವೆಲ್ಲೇsssss ವsರಗೀಲೇ”
ಲಾರಣದಡವೆಲ್ಲೇsssss ವsರಗೀಲು ತಂಗಮ್ಮsನೇ
ಎಚ್ಚರಕೇಲಾಗೀssss ಕುಲತೀಲು

“”ಹರಹರsಂದಾಲೇ “”ಶಿವಶಿವ”ಲೆಂದಾಲೇ
“”ನೆರಿಯೂ ಹುಲಿಗsಲೇssss ಬರತಿದವೋ
ನೆರಿಯೂ ಹುಲಿಗsಲೇssss ಬರುವಂತಾ ಹೊತ್ತೀಗೇ
ನನ್ನಣ್ಣs ಬಿಟ್ಟೇsssss ನೆಡದಿದನೇs”

ನನ್ನಣ್ಣs ಬಿಟ್ಟೇsssss ನೆಡದೀನಂದೇಲೀಲೇ
ದುಕ್ಕ ಮಾಡುತ್ತೇsssss ಕುಲುತೀಲು
ದುಕ್ಕ ಮಾಡುತ್ತೇsssss ಕುಲುವಂತಾ ಹೊತ್ತೀಗೇ
ಶಾಲ ಕಣ್ಣನ್ ನೆರಿಯೇsssss ಬರತೀದೋ

ಶಾಲ ಕಣ್ಣನ್ ನೆರಿಯೇsssss ಬರುವಂತಾ ಹೊತ್ತೀಗೇ
ಕುತ್ತೀಗಿ ಮುರದೇsssss ತಿನsತೀದೋ*      ತೋಳನಿಗೆ ಬಲಿ; ಹೆಗಡೆ ಎಲ್.ಆರ್. ಗುಮ್ಮನ ಪದಗಳು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೧೯೭೩. ಪು.ಸಂ. ೪೫-೫೩.