ಸಂಪೂಗಿ ಹೋಂಗಿನ ಮಂಚಾsss ಮಲ್ಲುಗಿ ಹೂಂಗಿನ ಲೋಡೂss
ಜಾಜೀs ಜೂಜೀಯಾsss ತಲದಿಂಬೂsss
ಜಾಜೀs ಜೂಜೀಯಾsss ತಲದಿಂಬಿನ ಮ್ಯೇನಿನ್ನೇsss ||
ಮೈದುನಿ ಜಾದೊರಿಗೇsss ಹಗಲ್ ನಿದ್ದೀsss ||೨೬೪||

ಹಾಸ್ರಗಲ್ಲಿನ ಮೇsನೇsss ವಸ್ತ್ರ ಸೆಳ್ವವ ಯಾರೆss?
ತಂಗೀsಯ ಗಂಡಾsss ಮೈದೂನೀsss || ಶಳ್ದವಸ್ತ್ರಾsss
ತುಂಬಿ ಹೂಂಗಿನಂತೇsss ಪರಿಮಾಳಾsss || ||೨೬೫||

ಕಯ್ಯಾಳಗಿನ ಚಂಚೀssss ಕೈತssಪ್ಪಿ ಬಿದ್ದಿತೂsss
ಬೆಳಿಯೆಳ್ಳಾsss ಬೆಳವಾsss ಬಯ್ಲಲ್ಲೀsss || ಲತ್ತೂಗೇss,
ಕೈದೀssವುಗೆ ತಾರೇsss ಬೆಳುಕಿಗೇsss || ||೨೬೬||

ಬೆಳ್ಳಿs ಬೆsತ್ತ ತಟ್ಟೀsss ತಯ್ಲಲ್ಲೀs ಬರವನ್ಯಾರುss ?
ಅರಸೂss ಕಾಣೆ ನನ್ನಾsss ಮೈದುನೀsss ಬೆನ್ನಿಗ್ ಬರುವಾsss ||
ಸೀತೇss ಕಾಣೆ ನನ್ನಾsss ಕಿರಿತಂಗೀssss || ||೨೬೭||

ತಂಗೀ ಗಂಡಗೇss ನಾ ಯೇನ್ಹೇಳಿ ಕರಿಯಲಿss?
“ಗಂಗಾದರಯ್ಯಾsss, ಗೌರಯ್ಯಾsss, || ಕೊಮುಟಿsಯಾs
ಮುಂಬೈಯಾss ದೊರಿಯೇsss, ಮೈದೂನೀsss, || ||೨೬೮||

ಕಾಲುಂಗಿಲ ನೆಡುಗೇsss ಮತ್ತುಂಗಿಲಲಿಟ್ಟಂತೇsss
ಅತ್ತುಗುದಿರ ನೆಡುಗೇssss ಮೈದುನೀss
ಅತ್ತೂsಗದಿರ ನೆಡುಗೇsss ಮೈದುನೀ ನಾs ವಬ್ಬಳೂss
ಮುತ್ತss ಕಂಡಂತೇssss ಸಲುಗೂರುsss || ||೨೬೯||