ಇಡಗುಂಜಿ ಬಯ್ಲಲ್ಲೀsss ಗಿಡು ಚಣ್ಣಲಮಬರ್ಯಾರೋ ?
ಗಿಡುವಿಗೆ ತಕ್ಕದಾsss ಯಳುಗಾಯಿ || ಲಕ್ಕಮ್ಮಗೇss
ನೆಡುವಿಗೆ ತಕ್ಕದಾsss ಗರಬೂssಣೇsss || ||೨೭೦||

ಆರೂ ತೆಂಗಳ ಬಸುರೀs ಮೂರೂs ತೆಂಗಳ ಬಯಕೇss
ತೌರೀಗೇ ನಾನೂss ಹೋನಾರೇss
ತೌರೀಗೇ ಹೋಗನಾರೆ ತೊಪ್ಪನ್ನ ಉಣನಾsರೇ
ತಪ್ಪೀದ ಕೆಲಸಾsss ಗೆಯನಾರೇsss || ||೨೭೧||