ಬೆಳದಿಂಗ್ಳ ಬೆಳಕಿನಲ್ಲಿ – ಕೊಂತ್ಯಮ್ಮ
ತೊಗರಿನೇ ಬಿತ್ತಿ ಹೋದೋ
ತೊಗರಿಯಾ ಸಾಲೆಲ್ಲ ಸರಮುತ್ತು ಆದಾವು
ಬಾರಪ್ಪ ಬೆಳದಿಂಗಳೇ

ಬೆಳದಿಂಗ್ಳ ಬೆಳಕಿನಲ್ಲಿ – ಕೊಂತ್ಯಮ್ಮ
ಅವರೆಯಾ ಬಿತ್ತಿ ಹೋದೋ
ತೊಗರಿಯಾ ಸಾಲೆಲ್ಲ ಸರಮುತ್ತು ಆದಾವು
ಬಾರಪ್ಪ ಬೆಳದಿಂಗಳೇ

ಹುಚ್ಚೆಳ್ಳ ಸಾಲ ನೋಡೇ – ಕೊಂತ್ಯವ್ವ
ಅವು ಹುಟ್ಟಿರುವ ಬೆಡಗ ನೋಡೇ
ಹುಚ್ಚೆಳ್ಳು ಸಾಲೆಲ್ಲ ಸರಮುತ್ತು ಆದಾವು
ಬಾರಪ್ಪ ಬೆಳದಿಂಗಳೇ

ಹುರುಳಿಯ ಸಾಲ ನೋಡೇ – ಕೊಂತ್ಯವ್ವ
ಅವು ಹುಟ್ಟಿರುವ ಬೆಡಗ ನೋಡೇ
ಹುರುಳಿಯ ಸಾಲೆಲ್ಲ ಸರಮುತ್ತು ಆದಾವು
ಬಾರಪ್ಪ ಬೆಳದಿಂಗಳೇ