ಒಕ್ಕಲಗೇರಿಯ ಒತ್ತಿ ಚೆಂಡಾಡೋನೆ
ಬಾರಪ್ಪ ಮಗನೇ ಬಲಭೀಮ – ನಿಮ್ಮ ತಾಯಿ
ಕಾಳುಗದರೆಂದು ಕರೆದಾಳೋ – ಹೆತ್ತಮ್ಮ
ರನ್ನ ಕೋಟೆಯ ರವೆಸುಣ್ಣ – ತಂದಿರುವೆ
ನಾ ಕೊಂತಮ್ಮ ಮಗನಲ್ಲವೇ

ಕುಂಬಾರ್ರ ಕೇರೀಲಿ ಕುಂತು ಚೆಂಡಾಡೋನೆ
ಬಾರಪ್ಪ ಮಗನೇ ಬಲಭೀಮ – ನಿಮ್ಮ ತಾಯಿ
ಕಾಳುಗದರೆಂದು ಕರೆದಾಳೋ – ಹೆತ್ತವ್ವ
ರನ್ನದ ಕೋಟೇಯ ರವೆಸುಣ್ಣ – ತಂದಿರುವೆ
ನಾ ಕೊಂತಮ್ನ ಮಗನಲ್ಲವೇ