ಮುತ್ತೀನಾssss ಶೆಟ್ಟೀssss ಮುತ್ತsss ಮಾರ್ವಲಿ ಬಂದಾsss
ಅತ್ತೀಮರನಡಗೇsss ಹಸsssರಿಟ್ಟssss
ಅತ್ತೀಮರನಡಗೇsss ಲ್ಹಸರಿಟರಟ ಮುತ್ತಿನ ಶಟ್ಟೀsss
ನೀರೀಗ್ಹೊದ ನಾssರೀsss ಕssರssದಾನೇss
ನೀರೀಗ್ಹೊದ ನಾರೀsss ಯೇನಂದೀss ಕರದಾನೇss ?
“ನಿನ್ನಪ್ಪs ಮುತ್ತssss ಕssಳೂsಗಾನೇsss” ||೨೮೧||

“ಮುತ್ತ ಕಳುಗೂಕೇsss ಲಣ್ಣುಂಟು ತಮ್ಮುಂಟುsss
ನಿನ್ನ ಕೂಡ್ಯಾssssಕೇssss ಕssಳೂssಗೀssದಾsss ?” ||೨೮೨||

“ಅಣ್ಣsss ದಂಡೀಗ್ಹೋದಾssss ತಮ್ಮsss ತೇರೀಗ್ಹೋದಾsss
ನನ್ನ ಹತ್ತರ ಮುತ್ತssss ಕssಳೂssಗೀದಾssss ||” ||೨೮೩||

ಬಳಗರ ಬಳಿಯss ತಂದಾss “ಅತ್ತೆಲ್ಲಾss ಮಾsವೆಲ್ಲಾss
ಮತ್ತೂ ಕೈಹಿಡುದಾsss ಸಿರಯssಲ್ಲಾsss” ||೨೮೪||

“ಬಳಿಯ ಇಡುಲೀsಕೇsss ಅತ್ಯಾಕೇs ಮಾವ್ಯಾಕೇss?
ಮತ್ತು ಕೈ ಹಿಡದಾsss ಸಿssರಿsssಯಾಕೆsss ?
ಮತ್ತು ಕೈ ಹಿಡಿದಾsss ಸಿರಯಾsಕೆ || ಯೆಳಿ ಹೆಣ್ಣೇs,
ಮಚ್ಚೀದೇ ನಿನ್ನಾsss ಗುಣೂಕಾಗೀssss” || ||೨೮೫||

ಯಳ್ಳೂs ಗಾಣಗರ್ ಹುಡಿಗೀss ಯಳ್ಳಾss ಕೊಂಬಲ್ಹೋದೇss
ಯಳ್ಳುಂಟೇ ನಿನ್ನಾsss ಮsನುssದಲ್ಲೀs?” ||೨೮೬||

“ಯಳ್ಳೀಗ್ ಯಳ್ಳುಂಟೂss ಯಳ್ಳಾs ಕೊಂಬಲ್ಲುಂssಟುss
ರಾಯರು ಕಟ್ಟssದೂsss ಹೊsಸುsಪೇಟೇss
ರಾಯರು ಕಟ್ಟsದೂsss ಹೊಸುಪೇಟೇದಲ್ ಹೋಗೀs
ಯೆಳ್ಳೀಗೇs ದರವಾsss ಕೇಳಿsss ಬನ್ನೀssss” ||೨೮೭||

ಕಡುಗದಾs ಕೈ ಚಂದಕೇss ಹಿಡುದನೇss ಮುಂಗಯ್ಯಾss
ಬಿಡು ನನ್ನಾs ಕಯ್ಯಾssss ದರುವsಳೀss || ಕುಮುಟೀಯಾss
ಲಂಗೂಡೀಲಿರುವಾsss ಹೆರಿಯಣ್ಣಾssss || ||೨೮೯||

ಕಣ್ಣಾ ಕಾಣ್ದೇ ಕೆಟ್ಟಾsss ಕೆಮ್ಯೂs ಕೇಳ್ದೆ ಕೆಟ್ಟಾsss
ಸನ್ನೇಸೀss ಕೆಟ್ಟಾssss ಜಪದಿಂದೇss || ಪರರ‍್ಹಿಂಡರಾss
ಮೊಕು ನೋಡಿssss ಕೆಟ್ಟಾssss ಕುಲಗೇಡೀsss || ||೨೯೦||

ಹೆಣ್ಣೀs, ನಿನು ಬಣ್ಣಾsss ಸಾಸಿಮಿ ಕಣ್ಣಿನ ಬಣ್ಣಾsss
ಹೆಣ್ಣೀs, ನಿನು ಮೇನೇsss ಮನುಸಿಟ್ಟೇss || ಮೆಣುಸೀಯಾs
ಮೆಣಸಾss ಕೊವ್ವಲ್ಲೀsss ಮನುಸಿsಟ್ಟೇss || ಲೂಬ್ಬಳ್ಳೀss
ಚಾಕೂssರೀsಬೆಟ್ಟೀsss ಬರುಲೇನೇsss ? || ||೨೯೧||

ಅತ್ತಿ ಮಗುನಲ್ಲಾsss ಮತ್ತೂs ಸೋದರವಲ್ಲss
ಯಲ್ಲಿದ್ದೀ ಬಂದೇsss ಯಡಪುಂಡಾss ? || ನಮ್ಮsನೀs
ಮುತ್ತುs ಬೆಂದಾssದೇsss ಉಣ ಬಾsರೋss || ಕೊಟ್ಟೂಗೀs
ಕತ್ತೆ ಸsತ್ತsರೇss ಯೆಳಿsಬಾರೋsss || ||೨೯೨||

ಸೋಳೀಯಾs ಮನ್ಯಾsss ಸುಡುಮೂರೀss ಗೊಂಬssವಾsss
ಕಾಲಾssಡss ತನ್ನಾss ಕೈಪಂಜೀsss || ಮೋರೀss ಹಳ್ಳೂsss
ತೋರಿssಟ್ಟನೆ ಸೋಳೀss ಮನಿಮುಂದೇsss || ||೨೯೩||

ಅಂಜೂsಕೆಲ್ದಿದ್ದವ್ನೇsss ಸಂಜ್ಯಾಕೇss ಬಂದೇsಯೋss?
ಅಂಗೆಲ್ಲವೇನೋsss ಮೈಮೆನೇsss? || ನಮ್ಮಂತಾsss
ತಂಗ್ಯರೆಲ್ಲವೇನೋsss ಮನಿಯಲ್ಲೀsss? || ||೨೯೪||

ಹಿಡಿ ಹಿಡಿಯಂದssರೇsss ಹಾದೀಲ್ ಹೋದವ ನಿssತ್ತಾss
ನಿನ್ಯಾರು ಕರದೀರೋsss ದರವೇಶೀsss ? || ನಮ್ಮssನೀss
ಅಂಗಳ ಕಸ ತೆಗವಾssss ಕಸಬಗರೀssss || ||೨೯೫||

ವಲ್ಲೀss ಸೆರಗೀssಗೇss ಮಲ್ಲೂssಗೀs ಕಟ್ಟಿದ್ದಾss
ಯೆಲ್ಲೂss ನೋಡಿದರೂss ಸುಗುಣೀsನೇss || ಸೂsಳಿಮನಿಯಾss
ಚೆಲ್ಲಾssಡೂತ್ ಹೋssದಾss ಹೊಸಮುssತ್ತುss || ||೨೯೬||

ಬತ್ತಕೇ ಬಣಜಿಗ ಬಂದಾsss ಯೆಳ್ಳಿಗೆ ಗಾಣಿಗ ಬಂದಾsss
“ಯಳ್ಳುಂಟೇ ತಂಗೀsss ಮನ್ಯಲ್ಲೀsss ?” ||೨೬೭||

ಇರನಕ್ ಇದ್ದಿತ್ತೋsss ರಾಯರು ಮನಿಯಲ್ಲಿಲ್ಲs
ರಾಯ್ ಕಟ್ಸರೆಯೋsss ಹೊಸಪೇಟೇ || ಅಲ್ಹೋಗೀss
ಯೆಳ್ಳಿಗೆ ದಾರುಣಿಯಾsss ಕೇಳಬೇಕೋ || ಗಾಣಿಗ ಸೆಟ್ಟೀs
ತಗಟೇsಯಲಿ ತೂಗೀsss ಕೊಡವಾನೋss || ||೨೯೮||

ಹಣ್ಣಡಕೀ ಕೊನಿಗೇsss ಕಣ್ಣಾs ಇಟ್ಟವ ಯಾರೋ?
ಹಣ್ಣಲ್ಲವೊ ರಾsಯಾsss ಮೆಲಿsವssಕೋs
ಹಣ್ಣಲ್ಲವೊ ರಾsಯಾss ಮೆಲಿವಾsಕೇs ಸಂಪೂಗೀs
ಹೂಗಲವೋ ರಾಯಾss ಮುಡಿsವಾಕೋss || ||೨೯೮||