ತಾಲದ ಉತ್ಪತ್ತಿ ಕುರಿತು ಕೆಲವರು ಶಿವನ ತಾಂಡವ ನೃತ್ಯದಿಂದ ‘ತಾ’ ಅಕ್ಷರವನ್ನು ಪಾರ್ವತಿಯ ಲಾಸ್ಯ ನೃತ್ಯದಿಂದ ‘ಲ’ ಅಕ್ಷರವನ್ನು ಜೋಡಿಸಿ ‘ತಾಲ’ ವಾಗಿದೆ ಎಂದು ಹೇಳುತ್ತಾರೆ. ಕೆಲವರು ಫಾರಸಿ ಭಾಷೆಯ ‘ತಬ್ಲ’ ಎಂಬ ಶಬ್ದರಿಂದ ‘ತಾಲ’ ವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ.

ಭರತಮುನಿಯ ಪ್ರಕಾರ ಇದು ‘ತಲ್’ ಎಂಬ ಧಾತುವಿನಿಂದ ನಿರ್ಮಾಣಗೊಂಡಿದೆ ಎನ್ನುವುದರ ಜೊತೆಗೆ ಸಂಗೀತದ ಸಮಯ ಅಳೆಯುವ ಸಾಧನವಾಗಿದೆ ಎಂದೂ ಹೇಳುತ್ತಾರೆ.

ಸಂಗೀತ ರತ್ನಾಕರ‘ದ ಪ್ರಕಾರ ಗಾಯನ ವಾದನ ಮತ್ತು ನರ್ತನ ಈ ಮೂರು ಕಲೆಗಳಿಗೆ ವ್ಯವಸ್ಥಿತವಾಗಿ ಸ್ಥಿರತೆ ನೀಡುವುದೇ ‘ತಾಲ’ ವಾಗಿರುತ್ತದೆ.

ಸಂಗೀತದ ಮಹಾನ್ ವಿದ್ವಾನ್ ಪಂಡಿತ ಅಮರ ಸಿಂಹರವರು ತಮ್ಮ ‘ಅಮರ ಕೋಶ ಗ್ರಂಥದಲ್ಲಿ ……………….. (ತಾಲ: ಕಾಲ: ಕ್ರಿಯಾಮಾನಮ್) ಅಂದರೆ ಸಂಗೀತದ ಸಮಯ ಅಳೆಯುವ ಸಾಧನವಾಗಿದೆ. ಅದಕ್ಕೆ ‘ತಾಲ’ ಎಂದಿದ್ದಾರೆ.

ತಾಲದ ಮಹತ್ವ : ಭಾರತೀಯ ಸಂಗೀತದಲ್ಲಿ ತಾಲದ ಸ್ಥಾನ ಅಂತ್ಯಂತ ಮಹತ್ವದ್ದಾಗಿದೆ. ಭಾಷೆಗಳ ವ್ಯಾಕರಣವು ಅವಶ್ಯವಾಗಿರುವಂತೆ ಸಂಗೀತಕ್ಕೆ ತಾಲವು ಅವಶ್ಯವಾಗಿರುತ್ತದೆ. ಸ್ವರ ಮತ್ತು ತಾಲಕ್ಕೆ ಇರುವ ಸಂಬಂಧವೆಂದರೆ ಶರೀರ ಮತ್ತು ಆತ್ಮದ ಸಂಬಂಧವಿದ್ದ ಹಾಗೆ ಇದೆ.

ಪ್ರಾಚೀನ ಗ್ರಂಥಗಳಲ್ಲಿ ಅನೇಕ ಪ್ರಕಾರದ ತಾಲ ವಾದ್ಯಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ರಾಮಯಣ, ಮಹಾಭಾರತದ ಕಾಲದಲ್ಲಿ ದುಂದುಭಿ, ದುರದುರ, ನಗಾರಿ, ವಾನಪಸ್ತಿ, ಡೋಲ-ಡಮರು, ಡೊಳ್ಳು, ತಾಶೆ ಇತ್ಯಾದಿ ಇದ್ದವು.

ಹಿಂದುಸ್ತಾನಿ  ಸಂಗೀತದಲ್ಲಿ ಹಿಂದಿನ ಕಾಲದಲ್ಲಿ ಧ್ರುಪದ, ಧಮಾರ, ಹಾಡುತ್ತಿದ್ದಾಗ ಪಖವಾಜ್ ಬಳಸುತ್ತಿದ್ದರು. ಆದರೆ ಮುಂದೆ ಯವನಿಕರ ಕಾಲದಲ್ಲಿ ಖ್ಯಾಲ ಗಾಯನದ ಪ್ರಚಾರವಾದಾಗ ತಬಲಾ ವಾದ್ಯವು ಪ್ರಚಲಿತವಾಯಿತು. ಇಂದೂ ತಬಲಾದ ಸ್ಥಾನವು ಪ್ರಮುಖವಾಗಿದೆ.

ಲಯ ಮತ್ತು ಲಯಕಾರಿ: ಸಂಗೀತದಲ್ಲಿ ಸಮ ಪ್ರಮಾಣದಿಂದ ನಡೆಯುವ ನಿಯಮಿತಗಳಿಗೆ ‘ಲಯ ’ ಅನ್ನುತ್ತಾರೆ. ಇದರ ಗತಿಗಳ ಬದಲಾವಣೆಯಿಂದ ಮುಖ್ಯವಾಗಿ ಮೂರು ಪ್ರಕಾರದ ಲಯಗಳನ್ನು ಗೊತ್ತು ಮಾಡಿದ್ದಾರೆ.

1) ವಿಲಂಬಿತ (ಠಾಯಿ) ಲಯ        2) ಮಧ್ಯಲಯ    3) ಧ್ರುತ್ ಲಯ .

1) ವಿಲಂಬಿತ ಲಯ : ವಿಲಂಬಿತ ಅರ್ಥ ತಡ . ಇದರ ಗತಿಯು ಬಹಳ ಸಾವಾಕಾಶವಾಗಿ ನಡೆಯುತ್ತದೆ. ಒಂದು ಮಾತ್ರದಿಂದ ಮತ್ತೊಂದು ಮಾತ್ರಾ ನುಡಿಸುವುದಕ್ಕೆ ಬಹಳ ಸಮಯದ ಅಂತರವಿರುತ್ತದೆ. ವಿಲಂಬಿತ ಲಯದ ಸಂಬಂಧ ಈ ಕೆಳತೆ ಹೇಳಿರುತ್ತದೆ.

ಉದಾ : ಮಧ್ಯಲಯದಲ್ಲಿ ಒಂದು ನಿಮಿಷದಲ್ಲಿ ನಲವತ್ತು ಅಂಕಿಗಳನ್ನು ಎಣಿಸಿದರೆ ವಿಲಂಬಿತ ಲಯದಲ್ಲಿ ಇಪ್ಪತ್ತು ಎಣಿಸಬೇಕು. ಅಂದರೆ ದುಗುನ (ಎರಡು ಕಾಲ ) ಸಾವಕಾಶವಾಗಿರುತ್ತದೆ. ಇದಕ್ಕೆ ವಿಲಂಬಿತ ಲಯ ಅಥವಾ ಠಾಯಿ ಲಯ ಎನ್ನುತ್ತಾರೆ.

2) ಮಧ್ಯಲಯ : ವಿಲಂಬಿತ ಲಯಕ್ಕಿಂತ ವೇಗವಾಗಿ ಹಾಗೂ ದೃತ್ ಲಯಕ್ಕಿಂತ ಸಾವಕಾಶವಾಗಿ ನಡೆಯುವ ಗತಿಗೆ ಮಧ್ಯಲಯ ಎನ್ನುತ್ತಾರೆ. ಇದು ಮಧ್ಯಗತಿಯಾಗಿರುತ್ತದೆ.

3) ದೃತ ಲಯ : ಮಧ್ಯಲಯದ ಗತಿಗಿಂತ ಹೆಚ್ಚೆಚ್ಚು ವೇಗದಿಂದ ನಡೆಯುವ ಗತಿಗೆ ದೃತ್ ಲಯ ಎನ್ನುತ್ತಾರೆ.

ಪಂಡಿತರು ಈ ಮೂರು ಲಯಗಳ ಪಾರಸ್ಪರಿಕ ಸಂಬಂಧವನ್ನು ಈ ರೀತಿ ವಿವರಿಸಿದ್ದಾರೆ. ವಿಲಂಬಿತ ಲಯದ ದುಗುನ ಮಧ್ಯಲಯ, ಮಧ್ಯಲಯದ ದುಗುನ ದೃತಲಯ.

ಉದಾ:

  1
1   2
1  2  3  4

  2
3   4
5  6  7  8

= ವಿಲಂಬಿತ ಲಯ
= ಮಧ್ಯಲಯ
= ದೃತ್ ಲಯ

 

ಲಯಕಾರಿ : ಕಲಾವಿದರು ಕೆಲಸಮಯದವರೆಗೆ ಒಂದೇ ಲಯದಲ್ಲಿ ತಮ್ಮ ಗಾಯನ, ವಾದನ, ನರ್ತನ,ಪ್ರದರ್ಶಿಸಿದ ನಂತರ ಅದೇ ಲಯದಲ್ಲಿ ದುಗುನ, ತಿಗುನ, ಚೌಗುನ, ಕುವಾಡಿ, ಆಡಿ,ಬಿಯಾಡಿ, ಲಯ ಪ್ರದರ್ಶಿಸುತ್ತಾರೆ. ಇದಕ್ಕೆ ಲಯಾಕಾರಿ ಎನ್ನುತ್ತಾರೆ. ಇದರಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳಿರುತ್ತವೆ.

೧) ಸರಳ ಲಯಕಾರಿ       ೨) ಕಠಿಣ ಲಯಕಾರಿ

1) ಸರಳ ಲಯಕಾರಿ: ಒಂದು ಮಾತ್ರಾದಲ್ಲಿ ಒಂದು ಅಂಕಿಯಿಂದ ಎಂಟು ಅಂಕಿಗಳವರೆಗೆ ಬರೆಯುವುದು ಅಥವಾ ಉಚ್ಚರಿಸುವುದಕ್ಕೆ ಸರಳ ಲಯಕಾರಿ ಎನ್ನುವರು . ಬರೆಯುವ ವಿಧಾನ:

1. ಠಾಯಿ ಲಯ : ಒಂದು ಮಾತ್ರಾದಲ್ಲಿ ಒಂದು ಅಂಕಿ ಬರೆಯುವುದು.

2. ದುಗುನ್ ಲಯ: ಒಂದು ಮಾತ್ರಾದಲ್ಲಿ ಎರಡು ಅಂಕಿ ಬರೆಯುವುದು.

1

2

3

4

= ಠಾಯಿ ಲಯ

1,2

3, 4

5, 6

7, 8

= ದುಗುನ್ ಲಯ

 

3. ತಿಗುನ್ ಲಯ: ಒಂದು ಮಾತ್ರಾದಲ್ಲಿ ಮೂ ರು ಅಂಕಿ ಬರೆಯುವುದು.

1

2

3

= ಠಾಯಿ ಲಯ

123

456

789

= ತಿಗುನ್ ಲಯ

 

4. ಚೌಗಿನ್ ಲಯ : ಒಂದು ಮಾತ್ರಾದಲ್ಲಿ ನಾಲ್ಕು ಅಂಕಿ ಬರೆಯುವುದು.

1

2

3

= ಠಾಯಿ ಲಯ

1234

5678

9, 0,11,12

= ತಿಗುನ್ ಲಯ

 

5. ಪಂಚಗುನ್ ಲಯ : ಒಂದು ಮಾತ್ರಾದಲ್ಲಿ ಐದು ಅಂಕಿ ಬರೆಯುವುದು.

1

2

3

= ಠಾಯಿ ಲಯ

12345

678810

11,12,13,14,15

= ತಿಗುನ್ ಲಯ

 

ಇದೇ ಪ್ರಕಾರ ಉಳಿದ ಲಯಗಳನ್ನು ಬರೆಯುವುದನ್ನು ರೂಢಿಸಬೇಕು.

ತಾಲಗಳನ್ನು ಸರಳ ಲಯದಲ್ಲಿ ಬರೆಯುವುದು:

ಮೇಲೆ ವಿವರಿಸಿದ ಠಾಯ್ ಲಯ, ದುಗುನ್ ಲಯ, ತಿಗುನ್ ಲಯ, ಚೌಗುನ್ ಲಯ, ಪಂಚಗುನ್ ಲಯಗಳಲ್ಲಿ ದಾದರಾ ಮತ್ತು ಝುಪತಾಲ್ ಬರೆಯಲಾಗಿದೆ.

1

2

3

4

5

6

ಠಾಯ್ ದಾ ಧೀ ನಾ ಧಾ ತೂ
ದುಗುನ್ ಧಾಧೀ ನಾಧಾ ತೂನಾ ದಧಿ ನಾಧಾ ತೂನಾ
ತಿಗುನ್ ದಾಧೀನಾ ಧಾತೂನಾ ಧಾಧೀನಾ ಧಾತೂನಾ ಧಾದೀನಾ ಧಾತೂನಾ
ಚೌಗುನ್ ಧಾಧೀನಾಧಾ ತೂನಾಧಾಧೀ ನಾದಾತೂನಾ ಧಾಧೀನಾಧಾ ತೂನಾಧಾಧೀ ನಾಧಾತೂನಾ
ಪಾಂಚಗುನ ಧಾಧೀನಾಧಾತೂ ನಾಧಾಧೀನಾಧಾ ತೂನಾಧಾಧೀನಾ ದಾತೂನಾದಾಧೀ ನಾಧಾತೂನಾಧಾ ದೀನಾಧಾತೂನಾ

 

ತಾಳ : ಝಪತಾಲ

೧೦

ಧೀ ನಾ ದೀ ಧೀ ನಾ ತೀ ನಾ ದೀ ಧೀ ನಾ
ಧೀನಾ ದೀದೀ ನಾತೀ ನಾಧೀ ಧೀನಾ ಧೀನಾ ಧೀಧೀ ನಾತೀ ನಾಧೀ ದೀನಾ
ಧೀನಾಧೀ ಧೀನಾತೀ ನಾಧೀಧೀ ನಾಧೀನಾ ಧೀಧೀನಾ ತೀನಾಧೀ ಧಿನಾಧೀ ನಾಧೀಧೀ ನಾತೀನಾ ದೀದೀನಾ
ಧೀನಾಧೀಧೀ ನಾತಿನಾಧೀ ದೀನಾದೀನಾ ಧೀಧೀನಾತಿ ತಾಧೀಧೀನಾ ದೀನಾಧೀಧೀ ನಾತಿನಾಧೀ ಧಿನಾಧೀನಾ ದೀದಿನಾತೀ ನಾದೀದೀನಾ
ಧೀನಾಧೀಧೀನಾ ತೀನಾಧೀಧೀನಾ ದೀನಾಧೀಧೀನಾ ತೀನಾಧೀಧೀನಾ ದೀನಾಧೀಧೀನಾ ತೀನಾಧೀಧೀನಾ ಧೀನಾಧೀಧೀನಾ ತೀನಾಧೀಧೀನಾ ಧೀನಾಧೀಧೀನಾ ತೀನಾಧೀಧೀನಾ

ಸೂಚನೆ : ಇದೇ ರೀತಿಯಾಗಿ ಬೇರೆ ಬೇರೆ ತಾಳಗಳನ್ನು ಬರೆಯುವ ಅಬ್ಯಾಸ ಮಾಡಬೇಕು.

ಕಠಿಣ ಲಯಕಾರಿ : ಈ ಲಯಕಾರಿಯಲ್ಲಿ

1) 2 ಮಾತ್ರಾಗಳನ್ನು 3 ಮಾತ್ರಾಗಳಲ್ಲಿ  ಬರೆಯುವುದು = 2/3
2) 3 ಮಾತ್ರಾಗಳನ್ನು 2 ಮಾತ್ರಾಗಳಲ್ಲಿ  ಬರೆಯುವುದು = 3/2
3) 3 ಮಾತ್ರಾಗಳನ್ನು 4 ಮಾತ್ರಾಗಳಲ್ಲಿ  ಬರೆಯುವುದು = 3/4
4) 4 ಮಾತ್ರಾಗಳನ್ನು 3 ಮಾತ್ರಾಗಳಲ್ಲಿ  ಬರೆಯುವುದು = 4/3
5) 4  ಮಾತ್ರಾಗಳನ್ನು 5 ಮಾತ್ರಾಗಳಲ್ಲಿ  ಬರೆಯುವುದು = 4/5
6) 5 ಮಾತ್ರಾಗಳನ್ನು  4 ಮಾತ್ರಾಗಳಲ್ಲಿ  ಬರೆಯುವುದು = 5/4
7) 5 ಮಾತ್ರಾಗಳನ್ನು 6 ಮಾತ್ರಾಗಳಲ್ಲಿ   ಬರೆಯುವುದು = 5/6
8) 6 ಮಾತ್ರಾಗಳನ್ನು 5 ಮಾತ್ರಾಗಳಲ್ಲಿ   ಬರೆಯುವುದು = 6/5

ಬರೆಯುವ ವಿಧಾನ :

1) 2/3 ಈ ನಿಮ್ಮ ಕಡೆಗಿರುವ 2/3 ದಲ್ಲಿ 2 ಮೇಲೆ ಮತ್ತು 3 ಕೆಳಗೆ ಇರುತ್ತದೆ. ಕಾರಣ ಮೇಲಿದ್ದ 2 ಅಂಕಿಗಳನ್ನು ಮೊದಲು ಬರೆಯಬೇಕು. ನಂತರ ಕೆಳಗಿದ್ದ ಅಂಕಿಯಂತೆ ಭಾಗಗಳನ್ನು ಮಾಡಿಕೊಳ್ಳಲು 5 (ಅವಗ್ರಹ ) ಕೊಟ್ಟುಕೊಳ್ಳಬೇಕು. ಕೆಳಗಿನ ಸಂಖ್ಯೆಯು ಮೂರು ಆಗಿರುವುದರಿಂದ 1ss, 2ss, ಈ ರೀತಿ ಭಾಗಗಳನ್ನು ಮಾಡಲಾಯಿತು. ಮೇಲಿನ ಸಂಖ್ಯೆಯು ಎರಡು ಇರುವುದರಿಂದ ಪ್ರತಿ ಎರಡು ಎರಡು ಅಕ್ಷರಗಳಿಗೆ ಅರ್ದ ಚಂದ್ರ ಗುರ್ತು ಹಾಕಬೇಕು.

ಈಗ  ಇದು       1s)1     s2)2     ss)3      ಈ ರೀತಿಯಾಯಿತು ಇದೇ   2/3     ಲಯಕಾರಿ

2) 3/2 ಲಯಕಾರಿ ಅಂದರೆ ಮೂರು ಮಾತ್ರಾಗಳಲ್ಲಿ ಎರಡು ಮಾತ್ರಾಗಳಲ್ಲಿ ಎರಡು ಮಾತ್ರಾ ಬರೆಯುವುದು. ಇದರಲ್ಲಿ 3 ಮೇಲೆ ಮತ್ತು 2 ಕೆಳಗೆ ಇರುತ್ತದೆ. ಕಾರಣ ಮೇಲಿದ್ದ ಮೂರು ಅಂಕಿಗಳನ್ನು ಮೊದಲು ಬರೆಯಬೇಕು. ನಂತರ ಕೆಳಗಿದ್ದ ಅಂಕಿಯಂತೆ ಭಾಗಗಳನ್ನು ಮಾಡಲು ಅವಗ್ರಡ (s) ಕೊಟ್ಟುಕೊಳ್ಳಬೇಕು. ಕೆಳಗಿನ ಸಂಖ್ಯೆಯು ಎರಡಾಗಿರುವುದರಿಂದ 1s  2s  3s  ಈ ರೀತಿ ಭಾಗಗಳಾಗಿರುತ್ತವೆ. ಮೇಲಿನ ಸಂಖ್ಯೆ ಮೂರಾಗಿರುವುದರಿಂದ ಪ್ರತಿ ಮೂರು ಮೂರಕ್ಕೆ ಅರ್ಧ ಚಂದ್ರ ಗುರ್ತು ಹಾಕಬೇಕು.

ಈಗ ಇದು 1s2)1  s3s)2  ಈ ರೀತಿ ಆಯಿತು

ಆಯಿತು ಇದೇ 3/2 ಲಯಕಾರಿಯು .

ಸೂಚನೆ : ಮೇಲೆ ಬರೆದ 2/3 ಮತ್ತು 3/2 ಲಯಕಾರಿ ಪ್ರಕಾರಗಳಿಂದ ಮುಖ್ಯವಾಗಿ ತಿಳಿಯುವುದೇನೆಂದರೆ ಮೇಲಿದ್ದ ಅಂಕಿಗಳನ್ನು ಮೊದಲು ಬರೆದು ಕೆಳಗಿದ್ದ ಅಂಕಿಯಂತೆ ಅವಗ್ರಡ ಕೊಟ್ಟು ಭಾಗಗಳನ್ನು ಮಾಡಿಕೊಳ್ಳಬೇಕು. ನಂತರ ಕೆಳಗಿದ್ದ ಅಂಕಿಯಂತೆ ಚಂದ್ರಾಕಾರದ ಗುರ್ತುಹಾಕಿ ಭಾಗಗಳನ್ನು ಬರೆಯಬೇಕು. ಈ ರೀತಿ ಕಠಿಣ ಲಯಕಾರಿ ಸರಳವಾಗಿ ಬರೆಯಲು ರೂಢಿಸಿಕೊಳ್ಳಬೇಕು.

3) 3/4 ಲಯಕಾರಿ = 1ss)1  s2s)2  s5s)3  sss)4
4) 4/3 ಲಯಕಾರಿ = 1ss2)1  ss3s)2  s4ss)3
5) 4/5 ಲಯಕಾರಿ = 1sss)1  s2ss)2  ss3s)3  sss4)4  ssss)5
6) 5/4 ಲಯಕಾರಿ = 1sss2)1  sss3)2  ss4ss)3  s5sss)4
7) 5/6 ಲಯಾಕಾರಿ = 1ssss)1 s2sss)2  ss3ss)3  sss4s)4  ssss5)5  sssss)5
8) 6/5 ಲಯಕಾರಿ = 1ssss2)1  ssss3s)2  sss4ss)3  ss5sss)4  s6ssss)5