ಕೋಣಾಣೆ ನಂದಾನೆ ವನವೋ
ಕೊಂತಿ ಪೂಜೆ ಕೊಡಗರ ಮನೆಯಲಿ

ಹೆಣ್ಣು ಮದುವೆ ಭೀಮರ ಮನೆಯಲಿ ಬಿತ್ತರ
ತಾಲಿ ಹೋದ ಹೋದ ಕೊಂತಿ

ಹೋಯಿತ್ತೀನಿ ಅಂದರೆ ಏನು ಶೃಂಗಾರವಿಲ್ಲ
ಬಂಗಾರವಿಲ್ಲ ಬೇಸಿಗೆ ಬಿಸಿಲಲ್ಲಿ ಮಾಗೆ

ಮಳೆಯಲಿ ನಾಕಾಯತ ಹೋಯ್ತೀನಿ
ನಾನು ಬೆಯ್ತತ ಹೋಯ್ತಿನಿ

ನೀನು ಕೇಳೋ ಹೊನ್ನ ಬಗುರ ಮರವೇ
ತಾಲಿ ಅಗಲದ ಕೆರೆಗೆ ನೂಲು ಗಾತ್ರ ಏರಿ ಅಲ್ಲಿ

ಕೊಂತಿಮ್ಮ ಎಲೆ ತೋಟ ಒಳಗಿರುವ
ಕೊಂತಮ್ಮ ಚಿತ್ರವ ಬರೆದಾಳು | ಏನಂತ ಬರೆದಾಳು

ಕಟ್ಟಿದ ಕಪುಲೆ ಕೆರೆಯಲಿ ಧರ್ಮರೆ
ಮೆಟ್ಟಿದ ಭೂಮಿ ಬೆಳೆಯಲಿ | ಅಂಗೈ
ಅಗಲ ಕೆರೆಗೆ ಮುಂಗೈ ಗಾತ್ರ ಏರಿ

ಅಲ್ಲಿ ಕೊಂತಮ್ನ ಎಲೆ ತೋಟ
ಅಲ್ಲಿ ಕೊಂತೆಮ್ಮ ಎಲೆ ತೋಟ ಒಳಗೆ | ಇರುವ
ಕೊಂತಮ್ಮ ಚಿತ್ರವ ಬರೆದಾಳೊ

ಶೇಷಾದ್ರಿ ತಾಯಿ ಸತ್ಯವಂತ ಕೊಂತಮ್ಮ
ಸಾಸಿವೆ ಎಲೆಯಲಿ ಬಿಗಿದಾಳು | ಬುತ್ತಿಯಕಟ್ಟಿ
ಸಹದೇವರ ದಂಡ ತಡೆದಾಳು

ಭೀಮರಾಯ ತಾಯಿ ಬಿತ್ತರಿ ಕೊಂತಮ್ಮ
ಬೇವಿನ ಎಲೆಯಲಿ ಬಿಗಿದಾಳು | ಬುತ್ತಿಯ ಕಟ್ಟಿ
ಭೀಮರಾಯ ದಂಡ ತಡೆದಾಳು

ಒಂದ್ಸೇರು ಮೆಣಸು ತಂದನು ಗೌರಿಯ ಮನೆಗೆ
ಕಾಮನು ಯಾರು ಕರೆದಾವು ಅಮ್ಮ | ಭೀಮನು
ಕಂದನು ಉಡವಿ ಕೆರೆಯ ಒಳಗೆ

ತುಂಬಿದ ಕೆರೆಯ ಉದ್ದವ ಏರಿ ಮೇಲೆ
ಮದವ ನೋಡು ಬನ್ನಿರಿ | ಅಲ್ಲಿ ಇರುವ
ಜನ ನೋಡುವ ಬನ್ನಿರಿ |

ಪಂಚ ಪಾಂಡವರು ಐದು ಜನ
ಮಡದಿಯ ನೋಡು ಬನ್ನಿರಿ | ಒಂದು ಕೊಂಬು
ಅರಿಶಿನ ಒಂದು ಮಾಗೆ ನೀರು

ಅದು ನಮ್ಮ ಕೊಂತೆಗೆ
ಇದು ನಾಮ ಕದಮ್ | ಕಸ್ತೂರಿಯ
ಮಾದಮ್ ಮಾಳಿಗೆಯ

ಅದು ನಮ್ಮ ಕೊಂತಿಗೆ ಇದು ನಾಮ ತುಪ್ಪದ ಓಕುಳಿಯ
ಬನ್ನೂರ ಬಾನೆಂಗವೋ ತಾಯಿ | ಕೊಂತಮ್ಮನಿಗೆ
ಹೊಸಕೇರಿ ಸೋಬಾನವೋ

ಐದು ಕೊಂಬು ಅರಿಶಿನ ಐದು ಮೊಗೆ ನೀರು
ಅದು ನಮ್ಮ ಕೊಂತಿಗೆ ಇದು ನಾಮ | ಕರದವಲೆ
ಕಸ್ತೂರಿಯ ಮಾದವರ ಮಾಳಿಗೆಯ

ಅದು ನಮ್ಮ ಕೊಂತಿಗೆ ಇದು ನಾಮ ತುಪ್ಪದ ಓಕುಳಿಯ
ಬನ್ನೂರು ಬಾಸಿಂಗವೋ ತಾಯಿ | ಕೊಂತಮ್ಮನಿಗೆ
ಹೊಸಕೇರಿ ಸೋಬಾನವೋ

ಒಂದು ತನಿಯ ಮೇಲೆ ಏಲಕ್ಕಿ ಮರಹುಟ್ಟಿ
ಎಳೆನಾಗಿತ್ತಿವು ಸುಳ್ಳಿನಾಗಿತ್ತಿವು | ಸಂಪಂಗಿ
ಸೈಯನೆ ಕೆಂಪಲ್ಲಿವೈನ್

ಚೊಕ್ಕೊತ್ತ ನವಿಲೂರು ಚಾಪೇಲಿ ಗಮನ
ಸಾರೊರು ಪೇಟೆಲಿ ಸಾರಿತ್ತು ಜವನ | ದೊರೆಯ
ಭಂಗಲೇಲಿ ಹೋಗಿ ತೀರುಗಿತ್ತು ಜವನ

ಜಯಕಾಯಿ ಎಂಬೊ ಜಯಪತ್ರೆ ಎಂಬೋ
ಮಾವನ ಮಗಳೆ ಮರು ದುಂಬಿ | ಕಂಡೇಯೋ
ಸೋಗು ನುಲಿಯ ಒಂದು ಚದೀಪಕ್ಕೆ

ಒಂದೇ ಬತ್ತಿಯ ಹಾಕಿ ಒಂದೇ ಮನೆಯ ಎಣ್ಣೆ
ಅಳೆದು ಹುಯ್ಯಿದು ಕತ್ತಲಲ್ಲಿ | ಕಾಳ ಮಾಗರ
ಎಳೆ ಹುಂಜ ಹೊತ್ತಿನಲ್ಲಿ

ಎದ್ದು ಕೋಣೆಗೆ ಹೋಗದು ರಾಜಬೀದಿ ಬಾರದು
ತೆರೆ ಬಣ್ಣ ತಣ್ಣೀರು ಸಾನ್ನವಂತೆ | ನನ್ನ ಐಯ್ಯೇರೆ
ಬಿಸಿ ನೀರು ನೇಮವಂತೆ

ಅಷ್ಟು ನೇಮದಲ್ಲಿ ಇರುವ ಪಾಂಡವರ
ಮಕ್ಕಳಿಗೆ ಬಾಳ ಬಡಸ್ತಾನವಂತೆ |

ಒಂದು ಗುದ್ದಲಿ ಒಂದಾಳು ಉದ್ದ ಬಾವಿತೆಗೆದು
ಬಂದು ನಿಂತು ನೊಡಾವರೆ ಜಾಜಿ ಕಟ್ಟಿ | ಕಡಿಸವರೇ
ನಿಸ್ತ್ರೆ ಕೊಂತಮ್ಮ ಗುಡಿಯ ಬಾಗಿಲ ಮುಂದೆ

ಬಣ್ಣ ತಂದು ನವಿಲು ತುಡೆಯವರೇ
ಹುಳ್ಳಿಯ ಹೊಲಕೆ ಹೋದಳು | ತಿಂಗಳ ಮಾವ
ಹುಳ್ಳಿಯ ಹೋಮ ಉಗುರಲ್ಲಿ ಎತ್ತಿಕೊಂಡು

ನಾರಿಯರ ಮೇಲೆ ಎಡಿದಾವೋ
ಅವರೆಯ ಹೊಲಕೆ ಹೋದಳು | ತಿಂಗಳ ಮಾಮ
ಅವರೆಯ ಹೂವು ಉಗುರಲ್ಲಿ ಎತ್ತಿಕೊಂಡು

ನಾರಿಯರ ಮೇಲೆ ಎಡಿದಾವೋ
ಹಿರೇ ಕುಡಿ ಸೂರಿಗೆ ಹಬ್ಬಿತು | ನೋಡೆ
ಕೊಂತಮ್ಮ ನಿನ್ನ ಮಗನ

ಸಿರಿಗಂಧವ ಸುರಿಯೆ ಸೂರೇಕುಡಿ ಸೂರಿಗೆ
ಹಬ್ಬಿತು ನೋಡಿ ಕೊಂತಮ್ಮ ನಿನ್ನ | ಮಗನ
ಸಿರಿಗಂಧವ ನರಿಯೆ

ಕುಂಬಳ ಕುಡಿ ಅಂಗಳಕ್ಕೆ ಹಬ್ಬಿತು
ನೋಡಿ ಕೊಂತಮ್ಮ ನಿನ್ನ | ಮಗನ
ಸಿರಿಗಂಧವ ನರಿಯೆ

ಗಂಧ ಮಾರುವುದು ಬೆಂಗಳೂರು
ನೋಡಿ ಕೊಂತಮ್ಮ ನಿನ್ನ | ಮಗನ
ಸಿರಿಗಂಧ ನರಿಯೆ

ಒಂದು ಗುದ್ದಲಿ ಒಂದು ಮಕ್ಕರಿ
ಒಂದು ಆಳು ಉದ್ದ ಬಾವಿ | ತೆಗೆದು
ಬಂದು ನಿಂತು ನೋಡುವರೆ

ಬಾಜಿ ಕಟ್ಟಿ ಕಡಿಸುವರೆ
ಬಣ್ಣ ತಂದು ಬಳುಸುವರೆ | ಚಿನ್ನವ
ತಂದು ಹೊರಟವರೆ

ನಿಸ್ತ್ರ ಕೊಂತಮ್ಮ ಗುಡಿಯ ಬಾಗಿಲ ಮುಂದೆ
ಬಣ್ಣ ತಂದು ನವಿಲು ತಿದ್ದವರೇ | ಕೊಂತಮ್ಮ
ಮುತ್ತೈದೆಯರು ಹೋಗಿ ಕರೆ ತನ್ನಿ

ಮುತ್ತೈದೆಯರಿಗೆ ಮತಿಯ ಕೊಡುತ್ತಾಳೆ
ಮೂಗತದಲಿ ಮೂಡವಳೆ | ಕೊಂತಮ್ಮ
ಮುತ್ತೈದೆಯರು ಹೋಗಿ ಕರೆ ತನ್ನಿ

ಮುತ್ತೈದೆಯರು ಮತಿಯ ಕೊಡುತ್ತಾಳೆ
ಮಕ್ಕರಿ ಅಡಿಯಲ್ಲಿ ಮನಗವಳೆ | ಕೊಂತಮ್ಮ
ಮುತ್ತೈದೆಯರು ಹೋಗಿ ಕರೆತನ್ನಿ

ಮುತ್ತೈದೆಯರು ಹೋಗಿ ಕರೆತನ್ನಿ ಕೊಂತಮ್ಮ
ಮುತ್ತೈದೆಯರಿಗೆ ಮತಿಯ ಕೊಡುತ್ತಾಳೆ |