ಬಂದೇವಿ ನಾವು ಉಡಿಯ ತುಂಬಲಾಕ
ಎಲ್ಲಮ್ಮ ದೇವಿ ನಿನ್ನ ಪಾದಕ್ಕ
ಹರಿಸಿ ಕಳಸವ್ವ ನೀ ನಮಗ ಮನಿತನಕ ೧
ತೋರ್ದೆವ್ವ ನಿನ್ನ ಮಹಿಮಾ ಲೋಕಕ್ಕ
ಚಣ ಚಣಕ ನಿನ್ನ ಮನ ಮನಕ
ಸುತ್ತು ಕಡೆ ನೋಡವ್ವ ನಿನ್ನ ಬೆಳಕ ೨
ಸಾವಿರಜನ ಬರತಾರ ಗುಡ್ಡಕ
ನಿನ್ನ ದರ್ಶನ ಪಡಿಲಾಕ
ತಂತಮ್ಮ ಕಷ್ಟ ನಷ್ಟ ನೀಗಲಾಕ ! ೩
ಹರಕೆ ಹೊತ್ತು ಬಂದೇವಿ ನಾವು ನಿನ್ನ ತನಕ
ಉದೋಕ ಬಿದ್ದೇವಿ ನಿನ್ನ ಪಾದಕ
ಸುಕಾ ನೀಡ ರೇಣವ್ವ ನಮ್ಮ ಜೀವಕ ೪
ಮತ್ತೆ ಬರ್ತೇವಿ ತಾಯಿ ನಿನ್ನ ಗುಡ್ಡಕ
ಇನ್ನ ಮ್ಯಾಲೆ ವರ್ಷ ವರ್ಷಕ್ಕ
ಹರಿಸಿ ಕಳಸವ್ವ ನೀ ನಮಗ ಮನಿತನಕ ೫
ಬಂದೇವಿ ನಾವ್ ಉಡಿಯ ತುಂಬಲಾಕ
ಯಲ್ಲಮ್ಮ ದೇವಿ ಪ್ರಸಾದ ಬೇಡಾಕ
ಹರಿಸಿ ಕಳಸವ್ವ ನಮ್ಮ ಮಕ್ಕಳ ಮರಿಯನ್ನ ೬
ily:”TiX�NwP� �5� color:black’>
ರೇಣುಕದೇವಿ ಶಿವನ ಸೀತಾಳದೇವಿ
ಶಿವನ ಸೀತಾಳ ದೇವಿ
ಎರದಾಳ ಜೈ ಅಂತ ನಿಂತಾಳ
Leave A Comment