ಉತ್ತುಮ ನಿನುಗ್ಯಾಕೋsss ಮುತ್ತೀನಾss ಹೇರೂssಗೀss ?
ಪಟಸಾಲೀ ನಿನುಗ್ಯಾಕೋss ಬಿಡ ಮುತ್ತೂss || ಗಂಡನ ಬಿsಟ್ಟಾsss
ಬಸವೀs ನಿನುಗ್ಯಾಕೇssss ಶರಿಮಾರತುssss ? || ||೨೯೯||

ಕಾಸಾs ಕೊಡ್ತೇನಂದೀsss ದೋಸೀss ಮುರ್‌ಕಂಡ್ ತಿಂದೀss
ಕಾಸಾssರಂಗುಡಿಯಾsss ತೆನ್ಯಲ್ಲೀss || ಕುಂತೀಕಂಡೀsss
ತಾಸೀಗ್ ವಬ್ಬವ್ನಾssss ಕರsವssದೇsss || ||೩೦೦||

ಹಾದರಗಿತ್ತಿಗೆsss ಹಗಳಾsದಾs ಬಾಂಬೂಲೀssss
ಯಾವ್ ಮಿಂಡs ನಿನ್ನಾsss ಗೈಸೀನೇssss ? || ಕೊಮಟಿ ಪೇಟೀss
ಹನ್ನೈsಡಂsಗುಡಿಯಾsss ಯೆಳಿ ಮಿಂಡಾsss || ||೩೦೧||

ಕುರುಬೇರ್ ಹುಡುಗೀ ನಂsಬಿsss ಕುರುಬಾs ಗಟ್ಟಕ್ಹೋsಗೀss
ಅರುದಾss ಗಟ್ಟದಲ್ಲೀsss ಹಸುಬಾsಳುsss || ಕುರುಬೇರ್ ಹುಡುಗಾs,
ನೂರs ಬಿತ್ತಿ ನೂರಾsss ಬೆಳವರುsss || ಪುರಿsಸರ ಬಿಟ್ಟೀss
ನಾs ಬಂದೆನೊ ಜಾಣಾsss ನಿನ್ ನೆರುಳಿಗೇsss || ||೩೦೨||

ಗಂಡಗೇs ಬಡ್ಸ್‌ವಳೂsss ಗಂಡೀಲಿ ನೋಡ್ವsಳೂss
ಮಿಂಡಗೇs ಪತ್ರsss ಬರವಳುss ||
ಮೀಂಡಗೇs ಪತ್ರsss ಯೇನಂದ್ಹೇಳಿ ಬರವsದೂss?
“ಹುಬ್ಬಳ್ಳೀs ವಸ್ತ್ರಾsss ಬರಲಂ”ದೀsss || ||೩೦೩||

ಗಂಡೊಳ್ಳ ಗುರುತಿಗೇsss ಕೊಂಡೀs ಮೆನೆ ಶೆರುಗೆಲ್ಲಾssss
ಗಂಡೆಲ್ಲಾssವೇನೆsss ಮನಿsಯಲ್ಲೀsss || ನೆರೂsಮsನೀss
ಪುಂಡsಗಾರ್ನ ಕೋಡೇsss ಪಗುಡಿಯೇsss || ||೩೦೪||

ಈ ಊರ ಹೆಣುಮಕ್ಕsಳೂss ತಾವೂs ಜಾಣಿರಂದೀss
ನೇರೀಲಾss ಸಪ್ಪಾsss ನೆರದುಟ್ಟೀss || ಹೆಣುಮಕ್ಕsಳೂss
ಮಿಳಿ ಹತ್ತಿ ಮಿಂಡಾssನಾsss ಕರವssರೂsss || ||೩೦೫||

ಅಳಕುತೆ ಬಳಕೂsತೇsss ಬರಬೇಡ ರಾಗಿs ಕsಲ್ಲೇsss
ನಿನಗಾಗಿ ಕುಂತssನೇsss ಮೇನೊಬ್ಬಾsss || ರಾಗೀ ಕssಲ್ಲೆss,
ನನಗಾಗಿ ನೀನು ಜೇವಾssss ಲಳಿಬೇಡಾssss || ||೩೦೬||

ತಂದಾs ಮೊಟ್ಟಿಯಾsss ತೊಂಡೀs ಚಪ್ರಕ್ಕಿರಸೂsss
ಬಂದಾss ಹಾದೀಯಾsss ಹಿಡ್ದ್ ಹೋಗೂss || ||೩೦೭||

ಅತ್ತೆ: ಆತರ ಪಾತ್ರಸೋಳೇsss, ದಾತ್ರೇss ಬಂದಾವ್ಯಾssರೇss ?
ಕರಿಯಾs ಕಂಬುಳಿಯಾsss ಮುಸುಕಿಟ್ಟೀsss || ಬಂದವಾsss
ದಾತ್ರೇss ಬಂದವ್ನಾsss ಹೆಸರ್ಹೇಳೇssss || ||೩೦೮||

ಸೊಸೆ: ಹೆಸುರಾss ಹೇಳುಕೇsss ನಾ ಯೇನಾs ಹೇಳಲಿss ?
ಕರಿಯಾss ಕಂಬುಳಿಯಾsss ಮುಸುಕಿಟ್ಟೀss || ಬಂದವಾss
ಸಾಸಯ್ಯಾssಗಾರಾsss ಸಬಿಗಾರಾsss || ||೩೦೯||

“ಕರ್ಯs ಕಂಬುಳಿ ಹೊರದಿs ಕಡತಿಂssಗಳ ಬೆಳಕೀಗೇsss
ಬಂದ್ಹತ್ತಿದವನ್ಯಾರೂssss ಜಗಲೀಯಾ ? ||
“ಮರಳೇsನೇ ತಂಗೀsss, ಇರಳೇದ್ದಿ ಅವ ಬಂದಾsss
ಚಂಬೂss ತಡವಲ್ಲೀsss ಇವ ಬಂದಾsss ” || ||೩೧೦||

“ತಾಟುಗ್ತಿ ತಂದೀsss ತೋಟದಲ್ವೊರಗೀಸೀsss
ಯಾsಕಣ್ಣ ನೆsದ್ದುರಿಯಾsss ಗೈಲೆಲ್ಲಾsss ?” || ತೋಟಾsದಾss
ತಾಟೂಗ್ತಿ ನೆದ್ದುರೀssss ಕೊಡೂಲೆಲ್ಲಾssss “|| ||೩೧೧||

ಕೈಕೀs ಮಾತ ಕೇಳೀsssss ಕಲ್ಲೇsದ್ದಿ ಕುಣವದೂss
ಹುಬ್ಬೂ ತಾಟಕತೀsss ಹೊಯ್ಮಲೆss || (ಹೊಯ್ಮಾsಲಿ) ಮಾತೀಗೇss
ನುಗ್ಗೀs ಬೇರೆದ್ದೀsss ಕೊಣ್ವದೂsss ||೩೧೨||

ನೀರೆಲ್ಲದ ಕೆರೆಲೀsss ಬೇರೆಲ್ಲದ ಹೆಡ ಹುಟ್ಟೀsss
ತೊಟ್ಟೆಲ್ಲದೆ ಹೂಂಗೂsss ಅಲದೀದೇsss
ತೊಟ್ಟೆಲ್ಲದೆ ಹೂಂಗೂsss ಲಲದೂsss ಸ್ವಾಮಿss ತಂssಗೀsss
ಮಡ್ಲೆಲ್ಲದೆ ಹೂಂಗಾsss ಕೊಯ್ವಾsಳೂsss || ಸ್ವಾಮಿs ತಂssಗೀsss ||
ಬಳ್ಳೆಲ್ಲದೆ ದಂಡೀssss ಶರದಾಳೂsss || ಸ್ವಾಮಿs ತಂsಗೀsss
ಮಂಡೆಲ್ಲದೆ ದಂಡೀsss ಮುಡ್ದಾಳೂsss || ಸ್ವಾಮಿs ತಂಗೀsss
ಗಂಡೆಲ್ಲದೆ ಕುಮರನಾsss ಪಡದsಳೂsss || ||೩೧೩||

“ಕುಟುಕು ತಂಬೇಕೂsss ನಿಂಬೀ ಹೆಣ್ಣಿನ ಸೋಳೆsss
ನಂಬರ ಬಿsದ್ದದ್ಯೇsss ನಿನು ಮೆನೇsss ”
“ನಂಬರ ಬಿದ್ದರೆ ಬೀಳ್ಲೀsss ಹಂಬೀಲs ಮರಿಬೇಡಾsss ” ||೩೧೪||

“ಯೆಂಟೆಂಟೇ ದಿನಕೇsss ಬಂದ್ ಹೋತೇs || ಲತ್ತೂsಗೀss,
ನೀ ಮಾಡೀದಡಗೀsss ಲುಂಡ್ ಹೋತೇsss || ||೩೧೫||

ತೆಂಗಳಾs ಬೆಳುಕೀಗೇsss ಅಂಗsಳಾs ಬಳಗೂsದೂs
ಜಂಗsಮ್ಮನ ಮಡದೀsss ಜವನಾರೀss || ತನು ಗಂಡನಾs
ಮಂಗಾsನಾs ಮಾಡೀsss ಕುಳಸೂದೇss ||೩೧೬||

ತೆಂಗಿಳ ಬೆಳಕೀಗೇsss ಉಂಬಕ್ಕೀs ತರಸೂದೂss
ಜಂಗಮ್ನಾs ಮಡದೀsss ಜಗನಾಡೀss || ಗಂಡನಾs
ಮಂಗಾsನಾs ಮಾಡೀsss ಕುಳಸೂದೂ || ||೩೧೭||

ತೆಂಗಿಳ ಬೆಳಕೀಗೇss ತೊಂಡಿಯಾs ಚಪ್ಪರಾs
ತಮ್ಮನರ ಅಪ್ಪಾsss ವಳಗೀವಾss || ಯೆಲು ಹೆಣ್ಣೇs,
ನಾಚೂಕೀಯೆಲ್ಲಾsss ನಜವೆಲ್ಲಾss | ||೩೧೮||

ಹೆಣ್ಣೂ ವಳ್ಳೇದಂದೀs ಅಲ್ಲೇ ಬೇಡುಕಿ ಬಿಟ್ಟಾss
ಅಣ್ಣsನಮದ್ಹಾಕೀsss ಕರುದಳೇss || ಈ ಹೆಣ್ಣಿನಾss
ಹುಕುಮತೀ ನಮುಗೇsss ತೆಳಿಯವೇss || ಮನಾಡs
ಹೆಣ್ಣೇ, ನಿನು ಮಹಿಮss (ಮಾಯಾs) ತೆಳ್ಯವೇss || ||೩೧೯||

ಕಾರಂಬೂs ಕತ್ತೂಲೇs ಕೈಯಲ್ಲೀ ದೀವೂಗೀss
ಯೇನಾsಲರಸುತೇs ಯಲನಾರೀ || ಕಬ್ಬೀನಾs
ಚಿಳ್ಳೊsಳಗಿರವಾsss ಚೆಲವಾsನsss || ||೩೨೦||

ಕುಮಟಿ ಪ್ಯಾಟಿ ಸೋಳೇsss ಬಿಂಗೂ ಬೇಗುಡಿ ಸೋಳೇs
ಬಂತಲೇ ಲೀಮನ್ಯಾsss ಕಲಿಯಾಗೀ || ಈ ಬಾವೀs
ಹಾವಿಸಾ ಬಿದ್ದಿ ನೀರೂsss ಕೆಡವಾsದೂs || ||೩೨೧||

ಬೆಂಡೂ ಸೌದೀs ತಂದೀsss ಲಂಡೂ ಬೂದಿಮಾsಡೀs
ಲೆಂಗsಸsರೊಳಿಗೇsss ನಜಬಂಡೂss || ಲೀ ಹೆಣ್ಣಾss
ಸಬ್ಯಾsದಾs ಮುಂದೇsss ತರುಬೇಡೀsss || ||೩೨೨||