ಕಂಚೀ ಕಾಯ್ನ ಕೈಮರ್ಗೀsss ನಿಂಬಿಕಾಯ್ನ ಸುಳ್‌ಮರ್ಗೀss
ಬೊಂಬೈದಲ್ಲಿರವಾsss ಅರಗಲುss
ಬೊಂಬೈದಲ್ಲಿರವಾsss ಅರssಗಲ್ಲಿನ ಮೇನೇss
ರಂಬೆ ಸಂಬರವಾsss ಅರವದುsss || ||೩೨೩||

ಹಾಳಂಗ್ಡೀ ಹೊಗಿಸಪ್ಪೂsss ದೂಳಂಗ್ಡೀss ತೆನಿಸುಣ್ಣಾsss
ರಾಯಾsರಂಗೂಡೀsss ಬೆಳಿಯೆಲೆsss || ಬೆಟ್ಟಿನಡಕೇsss
ಮರಳಾss ಮಾಡದ್ಯೇssss ಚೆಲವನಾssss || ||೨೩೪||

ಬಾಳಿಯಾs ಹೆಣ್ಣೇsss, ಬಾs ನನ್ನ ಬಾಯೀಗೇsss
ಯೇಳೂ ಸುತ್ತೀನಾssss ಕೆರಬಾವಿ|| ಕ್ಯಾದುಗಿ ಹೂಂಗೂsss
ಅಲುದಿ ಬಾs ನನ್ನಾssss ಮುಡಿಮೇನೇssss || ||೩೨೫||

ಬಾವೀs ಬುಡುತಾಗೇsss ನೀರುಳ್ಳೀsss ಬೆಳ್ಳುಳ್ಳೀsss
ಸಾಲss ಮೇಲಂಗೀsss ಗಜನಿಂಬೀsss || ಲಣ್ಣಯ್ಯನಾsss
ಸೂಳೆ ಬಿತ್ತದೆಯೇsss ಸುರಗೀಯಾsss || ||೩೨೬||

ಹೆಣ್ಣೇ, ಹೆಣ್ಣೆ, ನೀನುss ಹಲವಾss ಜಾತಿಕ್ದ ಹೆಣ್ಣಾsss
ಮುಡ್ಯಾಳಾssದೊಳಗೇ ಗರುಡಾsನಾss || ಸಾದಕ ಮಾಡೀsss
ಮರಳಾss ಮಾಡದ್ಯೇssss ಪುರುಶಾನಾssss || ||೩೨೭||

ಬಣ್ಣಕೆ ಬಾಡ್‌ದೂರೂsss ಸುಣ್ಣಕೆ ನೀರೆಲ್ಲಾsss
ಸಣ್ಣಾsss ಮುಂಡಸದಾsss ದೊರಗೊಳೂss || ಬರುವಾಗೇss
ಬಣ್ಣಿಸೀss ಬಗ್‌ತಲಿss ತೆಗವsಳುsss || ||೩೨೮||

ನೋಡಿರಿ ನೋಡೀsರೀsss ಅದು ವಂದು ಚೋಜೀಗಾsss
ಯೇಳು ಸುತ್ತಿನಾsss ಕೆರುಬಾಮಿsss || ಕ್ಯೇದುಗಿ ಕೊನಿಯೆsss
ವಡ್‌ದಿ ಬಾರೆ ನಾರೀsss ಮುಡಿಮೇsನೇss || ||೩೨೯||

ಬೆದುರ್ಯಲಿ ಮೇನೇssss ಚದುರ್ಯಾರು ಚಂಡಾಡ್ಯಾssರೆs
ಬೆದುರ್ಯೆಲಿ ಬಣ್ಣssss ಹಿಡಿಲಿಲ್ಲss || ನಮ್ಮೂsರಾಗೆs
ಚದುರ್ಯರು ಚಂಡಾssಡೀsss ದಣಿದಾssರುsss || ||೩೩೦||

ಸೆರಸೀ ಪೇಂಟಿ ಸೂಳೇss ಬಿಂಗೂs ಬೇಗುಡಿ ಸೂsಳೇss
ಬಂತಲ್ಲೇss ಈ ಮನಿಗೇsss ವರಣಾಗೀs || ಈ ಬಾವೀಯಾss
ಹಾವೀsಸ ಬಿದ್ದಿ ನೀರೂsss ಕೆಡ್ವದೇsss || ||೩೩೧||