ಮಳೆಯ ನೀರನ್ನು ಸೆಂ.ಮೀ.ನಲ್ಲಿ ಅಳೆಯುವ ವಾಡಿಕೆ ಇದೆ. ಅದೇ ಹೋಲಿಕೆಗಳಿಗನುಗುಣವಾಗಿ ಮಣ್ಣಿನಲ್ಲಿರುವ ಆರ್ದ್ರತೆಯನ್ನೂ ಆಳದ ರೂಪದಲ್ಲಿ ಹೇಳಬಹುದು. ತೂಕದ ಆಧಾರದ ಮೇಲೆ ಲೆಕ್ಕ ಮಾಡಿದ ನೀರಿನ ಪ್ರಮಾಣದಲ್ಲಿ ಆಳದ ರೂಪಕ್ಕೆ ಪರಿವರ್ತಿಸಲು ಕೆಳಗಿನ ವಿಧಾನವನ್ನು ಅನುಸರಿಸಬಹುದು.

ಶೇಕಡಾವಾರು ನೀರು (ಗಾತ್ರದಲ್ಲಿ)

=

ಶೇಕಡಾವಾರು (ತೂಕದಲ್ಲಿ)

x

ಮಣ್ಣಿನ ಗಾತ್ರ ಸಾಂದ್ರತೆ

ನೀರಿನ ಸಾಂದ್ರತೆ

ಉದಾಹರಣೆಗೆ, ಒಂದು ಮಣ್ಣಿನ ಗಾತ್ರ ಸಾಂದ್ರರತೆಯು ಪ್ರತಿ ಘನ ಸೆಂ.ಮೀಗೆ ೧.೩ ಗ್ರಾಂ ಇದೆಯೆಂದೂ ತೂಕದ ಆಧಾರದ ಮೇ ಆ ಮಣ್ಣಿನಲ್ಲಿ ಶೇಕಡಾ ೨೦ ನೀರಿದೆಯುಂದೂ ತಿಳಿದರೆ,

ಶೇಕಡಾ ನೀರು
(ಗಾತ್ರದ ಆಧಾರದ ಮೇಲೆ)

= ೨೦ x

೧.೯

= ೨೬

ಸೂಚನೆ : ನೀರಿನ ಸಾಂದ್ರತೆಯು ಪ್ರತಿ ಘನ ಸೆಂ.ವೀ.ಗೆ ೧ ಗರ್ರಾಂ ಎಂದು ಪರಿಗಣಿಸಲಾಗಿದೆ.

ಮೇಲಿನ ಉದಾಹರಣೆಯಂತೆ, ಗಾತ್ರದ ಆಧಾರದ ಮೇಲೆ ಶೇಕಡಾ ೨೬ ರಷ್ಟು ಆರ್ದ್ರತೆ (ನೀರು) ಇದೆ ಎಂದರೆ

ಪ್ರತಿ ೧೦೦ ಘನ ಸೆಂ.ಮೀ. ಮಣ್ಣಿನಲ್ಲಿ ೨೬ ಘನ ಸಿಂ.ಮೀ.ನಷ್ಟು ನೀದೆ ಎಂದು ಹೇಇದಂತಾಯಿತು ಅಥವಾ ಪ್ರತಿ ಘನ ಸೆ.ಮೀ.ನಷ್ಟು ನೀರೆದೆ ಎಂದು ಹೇಳಿದಂತಾಯಿತು ಅಥವಾ ಪ್ರತಿ ಘನ ಸೆಂ.ಮೀ. ಮಣ್ಣಿನಲ್ಲಿ ೨೬ / ೧೦೦ ಅಂದರೆ ೦.೨೬ ಘನ ಸೆಂ.ಮೀ. ನೀರಿದೆ ಎಂದೂ ಹೇಳಬಹುದು. ಇದರ ಮೇಲಿಂದ ಒಂದು ನಿರ್ದಿಷ್ಟ ಆಳದ ಮಣ್ಣಿನಲ್ಲಿ ಎಷ್ಟು ಆಳದಷ್ಟು ನೀರಿದೆ ಎಂಬುದನ್ನು ಹೇಳಲು ಸಾಧ್ಯವಾಗುತ್ತದೆ.

ಮೇಲಿನ ಉದಾಹರಣೆಯ ಮಣ್ಣಿನಲ್ಲಿ (ಗಾತ್ರ ಸಾಂದ್ರತೆ ೧.೩ ಗ್ರಾಂ/ಘನ ಸೆಂ.ಮೀ.ಗೆ) ಗಾತ್ರದ ಆಧಾರದ ಮೇಲೆ ಪ್ರತಿ ಘನ ಸೆಂ.ಮೀ. ಮಣ್ಣಿನಲ್ಲಿ ೦.೨೬ ಘನ ಸೆಂ.ಮೀ. ನೀರಿದೆ. ಆದ್ದರಿಂದ ೩೦ ಸೆಂ.ಮೀ. ಆಳದ ಮಣ್ಣಿನವರೆಗೆ ಇರುವ ನೀರನ್ನು ಕೆಳಗಿನಂತೆ ಕಂಡು ಹಿಡಿಯಬಹುದು.

೩೦ x  ೦.೨೬ ಅಂದರೆ ೭.೮ ಸೆಂ.ಮೀ. ನೀರಿದೆ ಎಂದಾಗುತ್ತದೆ.

ಮಣ್ಣಿನಲ್ಲಿರುವ ನೀರನ್ನು ಕಂಡುಹಿಡಿಯು ವಿವಿಧ ವಿಧಾನಗಳು

ನೇರಪದ್ಧತಿ: ಮಣ್ಣಿನಲ್ಲಿರು ನೀರಿನ ಪ್ರಮಾಣವನ್ನು ಈಗಾಗಲೇ ವಿವರಿಸಿದಂತೆ ನೇರ ಪದ್ಧತಿಯಿಂದ ದಂಡುಹಿಡಿಯಬಹುದು. ಸಂಬಂಧಿಸಿದ ಭೂ ಪ್ರದೇಶದಿಂದ ಮಣ್ಣನ್ನು ಬೈರಿಗೆಯ ಸಹಾಯದಿಂದ ಹೊರ ತೆಗೆದು, ಅಲ್ಯೂಮಿನಿಯಂ ಡಬ್ಬದಲ್ಲಿಟ್ಟು ಮುಚ್ಚಳವನ್ನು ಭದ್ರವಾಗಿ ಹಾಕಿ ಪ್ರಯೋಗ ಶಾಲೆಗೆ ತಂದು ತೂಕ ಮಾಡಬೇಕು. ನಂತರ ಮುಚ್ಚಳವನ್ನು ತೆರೆದು, ಪೆಟ್ಟಿಗೆಯನ್ನು ಶಾಖ ಪೆಟ್ಟಿಗೆಯಲ್ಲಿ ಒಣಗಿಸಿ ಪುನಃ ತೂಕ ಮಾಡಬೇಕು. ಎರಡು ತೂಕಗಳ ಅಂರದ ಮೇಲಿಂದ ಮಣ್ಣಿನಲ್ಲಿರುವ ನೀರಿನ ಪ್ರಮಾಣವನ್ನು ಲೆಕ್ಕ ಮಾಡಬಹುದು.

ನೇರ ಪದ್ಧತಿಯಿಂದ ಮಣ್ಣಿನಲ್ಲಿರು ನೀರಿನ ಸರಿಯಾದ ಪ್ರಮಾಣವನ್ನು ಅನುಸರಿಸುವಲ್ಲಿ ಕೆಲವು ಅನಾನುಕೂಲತೆಗಳಿವೆ. ಉದಾ:

  • ಭೂ ಪ್ರದೇಶದಿಂದ ಮಣ್ಣಿನ ನಮೂನೆಗಳನ್ನು ಸಂಗ್ರಹಿಸಲು ಮತ್ತು ಅವುಗಳನ್ನು ಶಾಖ ಪೆಟ್ಟಿಗೆಯಲ್ಲಿ ಒಣಗಿಸಲು ಹೆಚ್ಚು ಸಮಯವು ಬೇಕಾಗುತ್ತದೆ.
  • ಮಣ್ಣಿನ ಮನೂನೆಯನ್ನು ಸಂಗ್ರಹಿಸುವ ಕೆಲಸವು ಶ್ರಮದಾಯಕ ಎನ್ನಬಹುದು.
  • ಮಣ್ಣಿನ ನಮೂನೆಯನ್ನು ಸಂಗ್ರಹಿಸಲು ಮಣ್ಣನ್ನು ಭೂ ಪ್ರದೇಶದಿಂದ ಹೊರತೆಗೆದು ಸ್ಥಾನಕ್ಕೆ ಒಯ್ದಿಡಲು ಬರುವುದಿಲ್ಲ. ಆದ್ದರಿಂದ ಒಂದು ಸ್ಥಳದಲ್ಲಿರುವ ಮಣ್ಣಿನ ಆರ್ದ್ರತೆಯನ್ನು ಮೇಲಿಂದ ಮೇಲೆ ಕಂಡು ಹಿಡಿಯಲು ಸಾಧ್ಯವಿಲ್ಲ. ಈ ಸಮಸ್ಯಯನ್ನು ನಿವಾರಿಸಲು ಹಲವು ಅಪ್ರತ್ಯಕ್ಷ ಪದ್ಧತಿಗಳನ್ನು ಬಳಸಬಹುದು. ಅಂತಹ ಕೆಲವು ಪ್ರಮುಖವಾದ ಪದ್ಧತಿಗಳು ಮುಂದಿನಂತಿವೆ.

ಅಪ್ರತಕ್ಷ ಪದ್ಧತಿಗಳು

ಮಾಪನಗಳು: ಪರಕರ್ಷಣ ಮತ್ತು ಸ್ವಕರ್ಷಣ ಶಕ್ತಿಯಿಂದ ನೀರು ಮಣ್ಣಿನ ಕಣಗಳ ಸುತ್ತ ಅಂಟಿಕೊಂಡಿರುತ್ತದೆ. ಈ ನೀರನ್ನು ಮಣ್ಣಿನಿಂದ ಬೇರ್ಪಡಿಸಬೇಕೆಂದರೆ (ಹೀರಿಕೊಳ್ಳಬೇಕೆಂದರೆ) ಈ ಶಕ್ತಿಗಳಿಗೆ ಸಮನಾಗಿರುವ ಪ್ರತಿ ಶಕ್ತಿಯು (ಋಣ ಶಕ್ತಿಯು) ಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಶಕ್ತಿಯನ್ನು ವಾಯುಭಾರ, ಬಾರ್ ಇಲ್ಲವೇ ಪಾಸ್ಕಲ್‌ಗಳಲ್ಲಿ ಹೇಳುವ ರೂಢಿ ಇದೆ. ಆದರೆ ಕಳೆದ ದಿನಗಳಲ್ಲಿ ಇತರ ಮಾಪನಗಳೂ ಬಳಕೆಯಲ್ಲಿ ಇದ್ದವು. ವಾಯುಭಾರ ಮತ್ತು ಇತರ ಕೆಲ ಪ್ರಮುಖ ಅಳತೆಗಳ ಸಂಬಂಧವನ್ನು ತೋರಿಸುವ ವಿವರಗಳು ಕೆಳಗಿನಂತಿವೆ,

ಒಂದು ವಾಯುಭಾರ = ೧.೦೧೩ x ೧೦­ ಡಾಯನ್ಸ್‌ಪ್ರತಿ ಚ.ಸೆಂ.ಮೀ.ಗೆ
= ೧.೦೧೩ ಬಾರ್
= ೦.೧೦೧ ಮೆಗಾ ಪಾಸ್ಕಲ್‌
= ೧.೦೩೩ ಕಿ.ಗ್ರಾಂ ಪ್ರತಿ ಚ.ಸೆಂ.ಮೀ.ಗೆ
= ೧೦೩೩ ಸೆಂ.ಮೀ. ನೀರು
= ೭೬.೩೯ ಸೆಂ.ಮೀ. ಪಾದರಸ
= ೧೦೧.೩ ಜೂಲ್‌ಪ್ರತಿ ಕಿ.ಗ್ರಾಂಗೆ
= ೩೪.೦೧ ಅಡಿ ನೀರು
= ೧೪.೭೧ ಪೌಂಡು ಪ್ರತಿ ಚ. ಅಂಗುಲಕ್ಕೆ
= ಪಿ.ಎಫ್‌. (pF) ೩.೦೧೪

ಮಣ್ಣಿನಲ್ಲಿರುವ ನೀರನ್ನು ಅಳೆಯಲು ಈಗಾಗಲೇ ವಿವರಿಸಿದ ನೇರ ಪದ್ಧತಿಯಲ್ಲವೇ ಹಲವು ಅಪ್ರತಕ್ಷ ವಿಧಾನಗಳು ಅಭಿವೃದ್ಧಿಗೊಂಡಿವೆ. ಪ್ರಮುಖ ವಿಧಾನಗಳ ಪರಿಚಯವು ಕೆಳಗಿನಂತಿದೆ.

. ಮೃತ್ತಿಕಾ ಜಲಾಕರ್ಷಣ ಮಾಪಕ: ಮೃತಿಕಾ ಜಲಾಕರ್ಷಣ ಮಾಪಕವು ಮಣ್ಣಿನಲ್ಲಿರುವ ಶೇಕಡಾವಾರು ನೀರನ್ನು ನೇರವಾಗಿ ಕಂಡು ಹಿಡಿಯುವುದಿಲ್ಲ. ಅದರ ಬದಲು ಮಣ್ಣು ತನ್ನ ಸುತ್ತಲೂ ನೀರನ್ನು ಹಿಡಿದಿಟ್ಟುಕೊಂಡಿರುವ ಆಕರ್ಷಕ ಶಕ್ತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಈ ಸಾಧನದ ವರ್ಣನೆಯು ಕೆಳಗಿನಂತಿದೆ (ಚಿತ್ರ ೩).

ಒಂದು ಕೊಳವೆಯ ತುದಿಗೆ ವಿಶಿಷ್ಟ ರೀತಿಯಲ್ಲಿ ನಿರ್ಮಿಸಿದ ಸಚ್ಛಿದ್ರವಾದ ಲಂಬಾಕಾರದ ಪಿಂಗಾಣಿಯ ತುಂಡನ್ನು ಜೋಡಿಸಿದೆ. ಈ ಕೊಳವೆಗೆ ಬಾಗಿದ ಇನ್ನೊಂದು ಕೊಳವೆಯನ್ನು ಜೋಡಿಸಿ ಇದರ ತುದಿಯನ್ನು ಪಾದರಸವಿರುವ ಸಣ್ಣ ಪಾತ್ರೆಯಲ್ಲಿ ಮುಳುಗಿಸಿಡುವ ವ್ಯವಸ್ಥೆಯಿದೆ.

ಮೊದಲು ಕೊಳವೆಗಳಲ್ಲಿ ನೀರನ್ನು ತುಂಬಿ, ಒಳಗಿರುವ ಹವೆಯನ್ನು ಹೊರತೆಗೆದು, ಮೊದಲನೆಯ ಕೊಳವೆಯನ್ನು ಗಾಳಿಯಾಡದಂತೆ ಸರಿಯಾಗಿ ಮುಚ್ಚಿ ಮೊಹರು ಮಾಡಬೇಕು. ಪಿಂಗಾಣಿಯ ಭಾಗವನ್ನು ಮಣ್ಣಿನಲ್ಲಿ ಹೂಳಬೇಕು. ಎರಡನೆಯ ಕೊಳವೆಯ ತುದಿಯು ಪಾದರಸದಲ್ಲಿ ಮುಳುಗಿರುತ್ತದೆಯಾದ್ದರಿಂದ ನೀರು ಪಿಂಗಾಣಿಯ ಭಾಗದಿಂದ ಮಾತ್ರ ಒಳ ಬರಲು ಇಲ್ಲವೇ ಹೊರ ಹೋಗಲು ಸಾಧ್ಯವಾಗುತ್ತದೆ. ಹೀಗಾಗುವುದರಿಂದ ಮಣ್ಣಿನಲ್ಲಿರುವ ನೀರಿಗೆ ಮತ್ತು ಕೊಳವೆಯಲ್ಲಿರುವ ನೀರಿಗೆ ಸಂಪರ್ಕವೇರ್ಪಡುತ್ತದೆ. ಮಣ್ಣಿನಲ್ಲಿ ಆರ್ದ್ರತೆಯು ಕಡಿಮೆ ಇದ್ದರೆ ಕೊಳವೆಯೊಳಗಿನ ನೀರು ಹೊರ ಬಂದು ಪಾದರಸವು ಕೊಳವೆಯಲ್ಲಿ ಮೇಲೇರುತ್ತದೆ. ಮಣ್ಣಿನಲ್ಲಿಯ ಆರ್ದ್ರತೆಯು ಹೆಚ್ಚಿದರೆ ನೀರು ಕೊಳವೆಯನ್ನು ಪ್ರವೇಶಿಸಿ ಪಾದರಸವನ್ನು ಕೆಳಗೆ ಇಳಿಸುತ್ತದೆ. ಕೊಳವೆಯಲ್ಲಿರುವ ಪಾದರಸದ ಮಟ್ಟದ ಮೇಲಿಂದ ಮಣ್ಣಿನಲ್ಲಿರುವ ಆರ್ದ್ರತೆಯನ್ನು ಅರಿತುಕೊಳ್ಳಬಹುದು. ಕೊಳವೆಯಲ್ಲಿರುವ ಪಾದರಸದ ಎತ್ತರವು ೨೫ ಸೆಂ.ಮೀ. ಇದ್ದರೆ ಕರ್ಷಣ ಶಕ್ತಿಯು ಸುಮಾರು ೦.೩೪ ವಾಯುಭಾರಕ್ಕೆ ಸಮನಾಗಿರುತ್ತದೆ.

ಮೇಲೆ ವರ್ಣಿಸಿದ ಮಾಪಕವನ್ನು ಪ್ರಯೋಗ ಶಾಲೆಯಲ್ಲಿ ಬಳಸಬಹುದಾದರೂ ಹೊಲದಲ್ಲಿ ಉಪಯೋಗಿಸಲು ಅನುಕೂಲವಾಗಿಲ್ಲ. ಪಾದರಸದ ಬದಲು ನಿರ್ವಾತ ಮಾಪಕವನ್ನು ಬಳಸಿ ಜಲಾಕರ್ಷಣ ಶಕ್ತಿಯನ್ನು ವಾಯುಭಾರದಲ್ಲಿಯೇ ನೇರವಾಗಿ ಓದಲಾಗುವಂತಹ ವ್ಯವಸ್ಥೆ ಇರುವ ಸಾಧನೆಗಳು ನಿರ್ಮಾಣಗೊಂಡಿವೆ.

 ಇಂತಹ ಸಾಧನಗಳು ೦ ದಿಂದ ೦.೮ ವಾಯುಭಾರದವರೆಗಿನ ಜಲಾಕರ್ಷಣೆಯನ್ನು ಮಾತ್ರ ಅಳೆಯಬಲ್ಲವು. ಜಲಾಕರ್ಷಣೆಯು ೦.೮ ವಾಯುಭಾರವನ್ನು ಮೀರಿದರೆ, ಹೊರಗಿನ ಹವೆಯು ಒಳಗೆ ಸೇರಿ, ಸಾಧನವು ನಿಷ್ಕ್ರಿಯಗೊಳ್ಳುತ್ತದೆ.

. ವಿದ್ಯುತ್‌ಪ್ರತಿರೋಧ ಮಾಪಕಗಳು: ಮಣ್ಣಿನಲ್ಲಿಯ ಜಲಾಕರ್ಷಣ ಶಕ್ತಿಯು ಒಂದು ವಾಯುಭಾರವನ್ನು ಮೀರಿದಾಗ ಕಾರ್ಯವನ್ನು ನಿರ್ವಹಿಸಬಲ್ಲ ಜಲಮಾಪಕವನ್ನು ಮಿಚಿಗನ್‌ರಾಜ್ಯ ವಿಶ್ವವಿದ್ಯಾಲಯದ ಬಾಯೋಕಾಸ್‌ಮತ್ತು ಮಿಕ್‌ಎಂಬ ವಿಜ್ಞಾನಿಗಳು ೧೯೪೦ರಲ್ಲಿ ವಿನ್ಯಾಸಗೊಳಿಸಿದರು. ಇದರಲ್ಲಿ ಜಿಪ್ಸಂನಿಂದ ತಯಾರಿಸಿದ ಅಚ್ಚಿನಲ್ಲಿ ಎರಡು ವಿದ್ಯುತ್‌ವಾಹಕ ತಂತಿಗಳನ್ನು ಒಂದಕ್ಕೊಂದು ಸಮಾನಾಂತರದಲ್ಲಿ ಇರುವಂತೆ ಅಳವಡಿಸಲಾಗಿದೆ.

ಆರ್ದ್ರತೆಯನ್ನು ತಿಳಿಯಬೇಕೆಂದಿರುವ ಮಣ್ಣಿನ ಇಚ್ಛಿತ ಆಳದಲ್ಲಿ, ಜಿಪ್ಸಂ ಅಚ್ಚನ್ನು ಹೂತಿಡಬೇಕು. ಅಚ್ಚಿನಿಂದ ಹೊರಬಂದ ತಂತಿಗಳನ್ನು ಮಣ್ಣಿನ ಮೇಲೆಯೇ ಇರಗೊಡಬೇಕು. ಅಚ್ಚು ಸಚ್ಛಿದ್ರವಾಗಿರುತ್ತದೆ. ಮಣ್ಣಿನ ಆರ್ದ್ರತೆಯೊಡನೆ ಸಂಪರ್ಕವು ಏರ್ಪಟ್ಟ ಕೆಲಸಮಯದಲ್ಲಿ ಅಚ್ಚಿನಲ್ಲಿರುವ ಮತ್ತು ಮಣ್ಣಿನಲ್ಲಿರುವ ಆರ್ದ್ರತೆಗಳು ಏಕರೂಪವಾಗುತ್ತದೆ.

ಮಣ್ಣಿನಲ್ಲಿರುವ ಆರ್ದ್ರತೆಯ ಪ್ರಮಾಣವನ್ನು ತಿಳಿಯಬೇಕೆಂದಾಗ, ಮಣ್ಣಿನ ಮೇಲ್ಭಾಗದಲ್ಲಿರುವ ತಂತಿಗಳನ್ನು ಆರ್ದ್ರತಾ ಮಾಪನಕ್ಕೆ ಜೋಡಿಸಬೇಕು. ವಿದ್ಯುತ್ತಿನ ವಹನಕ್ಕೆ, ನೀರಿನಿಂದ ಉಂಟಾಗುವ ಪ್ರತಿರೋಧದ ಪ್ರಮಾಣವು ಗೊತ್ತಾಗುತ್ತದೆ. ಈ ಪ್ರತಿರೋಧವನ್ನು ವಾಯುಭಾರಕ್ಕೆ ಪರಿವರ್ತಿಸಿ ಜಲಾಕರ್ಷಣ ಶಕ್ತಿಯು ಎಷ್ಟು ವಾಯುಭಾರಕ್ಕೆ ಸಮ ಎಂಬುದನ್ನು ನೇರವಾಗಿ ಓದಲು ಬರುವಂತೆ ಆರ್ದ್ರತಾ ಮಾಪಕವನ್ನು ನಿರ್ಮಿಸಲಾಗಿದೆ. ಒಂದೇ ಸ್ಥಳದಲ್ಲಿ ವಿಭಿನ್ನ ಆಳಗಳಲ್ಲಿರುವ ಆರ್ದ್ರತೆಯನ್ನು ತಿಳಿಯಬೇಕೆಂದಾದರೆ ಪ್ರತಿ ಆಳಕ್ಕೆ ಒಂದರಂತೆ ಪ್ರತ್ಯೇಕವಾಗಿ ಜಿಪ್ಸಂ ಅಚ್ಚುಗಳನ್ನು ಹೂತಿಡಬೇಕು. ಈ ಅಚ್ಚುಗಳನ್ನು ಹಲವು ವರ್ಷಗಳವರೆಗೆ ಹಾಗೆಯೇ ಇಡಬಹುದು. ಮಣ್ಣಿನಲ್ಲಿರುವ ಆರ್ದ್ರತೆಯನ್ನು ತಿಳಿಯಬೇಕೆಂದೊಡನೆ ಆರ್ದ್ರತಾ ಮಾಪಕದ ಸಹಾಯದಿಂದ ತಿಳಿಯಲು ಸುಲಭವಾಗುತ್ತದೆ.

ಒಂದು ವಸ್ತುವಿನಲ್ಲಿ (ಇಲ್ಲಿ ಜಿಪ್ಸಂ ಅಚ್ಚು) ಎರಡು ವಿದ್ಯುತ್‌ವಾಹಕ ತಂತಿಗಳನ್ನು ಒಂದಕ್ಕೊಂದು ಸಮಾನಾಂತರದಲ್ಲಿಟ್ಟು, ಆ ತಂತಿಗಳಲ್ಲಿ ವಿದ್ಯುತ್‌ಹರಿಸಿದರೆ ವಿದ್ಯುತ್ತಿನ ವಹನಕ್ಕೆ ಎದುರಾಗುವ ವಿರೋಧವು ಆ ವಸ್ತುವಿನಲ್ಲಿರುವ ಆರ್ದ್ರತೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ ಎಂಬ ತತ್ವದ ಆಧಾರದ ಮೇಲೆ ಆರ್ದ್ರತಾ ಮಾಪಕವನ್ನು ವಿನ್ಯಾಸಗೊಳಿಸಲಾಗಿದೆ. ಸಂಬಂಧಿಸಿದ ವಸ್ತುವಿನಲ್ಲಿಯ ಆರ್ದ್ರತೆಯು ಕಡಿಮೆಯಾದಂತೆ ವಿದ್ಯುತ್‌ವಹನಕ್ಕೆ ಅಧಿಕ ವಿರೋಧವು ಎದುರಾಗುತ್ತದೆ. ಆರ್ದ್ರತೆಯ ಪ್ರಮಾಣವು ಹೆಚ್ಚಾದಂತೆ ಪ್ರತಿರೋಧ ಕಡಿಮೆಯಾಗುತ್ತದೆ.

ಸಾಮಾನ್ಯವಾಗಿ ಜಿಪ್ಸಂ ಅಚ್ಚುಗಳು, ಸುಮಾರು ೫ ವರ್ಷಗಳವರೆಗೆ ಬಾಳುತ್ತವೆ. ಮದ್ಯಸಾರದಲ್ಲಿ ಕರಗುವ ನೈಲಾನ್ ಅಂಟನ್ನು ಜಿಪ್ಸಂ ಅಚ್ಚಿಗೆ ಲೇಪಿಸಿದರೆ, ಅಚ್ಚು ಹೆಚ್ಚುಕಾಲ ಬಾಳುವುದು. ಜಿಪ್ಸಂ ಅಚ್ಚುಗಳ ಬದಲು ನೈಲಾನ್‌ಅಥವಾ ಪೈಬರ್ ಗ್ಲಾಸಿನಿಂದ ನಿರ್ಮಿಸಿದ ಅಚ್ಚುಗಳನ್ನು ಉಪಯೋಗಿಸಬಹುದು.

. ನ್ಯೂಟ್ರಾನ್‌ಪದ್ಧತಿ: ನ್ಯೂಟ್ರಾನ್‌ಗಳನ್ನು ಬಳಸಿ ಮಣ್ಣಿನ ಆರ್ದ್ರತೆಯನ್ನು ಕಂಡು ಹಿಡಿಯುವ ಸಾಧನದಲ್ಲಿ ಕೆಳಗಿನ ಮೂರು ಘಟಕಗಳಿವೆ.

i) ವೇಗದಿಂದ ಚಲಿಸುವ ನ್ಯೂಟ್ರಾನ್‌ಗಳನ್ನು  ಹೊರಹೊಮ್ಮಿಸುವ ಮೂಲ.

ii) ಮಂದಗತಿಯ ನ್ಯೂಟ್ರಾನ್‌ಗಳನ್ನು ಗುರುತಿಸುವ ಸಾಧನ.

iii) ಗುರುತಿಸಿದ ನ್ಯೂಟ್ರಾನ್‌ಗಳನ್ನು ಎಣಿಸುವ ವಿಭಾಗ.

ಮಣ್ಣಿನ ಆರ್ದ್ರತೆಯನ್ನು ಅಳೆಯಬೇಕಾದ ಸ್ಥಳದಲ್ಲಿ ೫ ಸೆಂ.ಮೀ. ವ್ಯಾಸದ ಮತ್ತು ಇಚ್ಛಿತ ಆಳದ ರಂಧ್ರವನ್ನು ಕೊರೆದು, ಮೇಲೆ ಹೇಳಿದ ಮೊದಲಿನವರೆಡು ವಿಭಾಗಗಳಿರುವ ಸಾಧನವನ್ನು ಈ ರಂಧ್ರಕ್ಕೆ ಜೋಡಿಸಬೇಕು. ವೇಗದಿಂದ ಚಲಿಸುವ ನ್ಯೂಟ್ರಾನ್‌ಗಳನ್ನು ಹೊರಬಿಟ್ಟೊಡನೆ, ಅವು ಮಣ್ಣಿನಲ್ಲಿರುವ ಜಲಜನಕ ಅಣುಗಳಿಗೆ ಅಪ್ಪಳಿಸುತ್ತವೆ. ಈ ಕ್ರಿಯೆಯಿಂದ ನ್ಯೂಟ್ರಾನ್‌ಗಳ ವೇಗವು ಕಡಿಮೆಯಾಗುತ್ತದೆ. ಮಂದಗತಿಯ ನ್ಯೂಟ್ರಾನ್‌ಗಳನ್ನು ಸಂಬಂಧಿಸಿದ ವಿಭಾಗವು ಗುರುತಿಸುತ್ತದೆ. ಹೊರಗಿರುವ ಮೂರನೆಯ ವಿಭಾಗವು ಮಂದಗತಿಯ ನ್ಯೂಟ್ರಾನ್‌ಗಳನ್ನು ಎಣಿಸುತ್ತದೆ. ಮಣ್ಣಿನಲ್ಲಿ ನೀರಿನ ಪ್ರಮಾಣವು ಅಧಿಕವಿದ್ದರೆ ಮಂದಗತಿಯ ನ್ಯೂಟ್ರಾನ್‌ಗಳ ಸಂಖ್ಯೆಯೂ ಅಧಿಕವಾಗಿರುತ್ತದೆ. ಈ ಸಂಖ್ಯೆಯ ಆಧಾರದ ಮೇಲೆ, ಮಣ್ಣಿನಲ್ಲಿರುವ ಆರ್ದ್ರತೆಯ ಪ್ರಮಾಣವನ್ನು ಕಂಡು ಹಿಡಿಯಬಹುದು. ಮಣ್ಣಿನಲ್ಲಿ ಜಲನಕದ ಮೂಲವು ಪ್ರಮುಖವಾಗಿ ನೀರೇ ಎಂಬುದನ್ನು ಗಮನಿಸಬೇಕು.

ನ್ಯೂಟ್ರಾನ್‌ಗಳನ್ನು ಹೊರಬಿಟ್ಟ ಸ್ಥಳದಿಂದ ಸುಮಾರು ೧೫ ಸೆಂ.ಮೀ. ವ್ಯಾಸದ ಮಣ್ಣಿನ ವಲಯದಲ್ಲಿ ನ್ಯೂಟ್ರಾನ್‌ಗಳು ಚಲಿಸುತ್ತವೆ. ಆದ್ದರಿಂದ ಈ ವಲಯದಲ್ಲಿರುವ ನೀರಿನ ಸರಾಸರಿ ಪ್ರಮಾಣವನ್ನು ಈ ಉಪಕರಣವು ಕಂಡು ಹಿಡಿಯುತ್ತದೆ. ರಂಧ್ರದಲ್ಲಿ ಈ ಸಾಧನವನ್ನು ಪ್ರತಿ ೧೫ ಸೆಂ.ಮೀ. ಆಳದಲ್ಲಿಟ್ಟು ಮಂದಗತಿಯ ನ್ಯೂಟ್ರಾನ್‌ಗಳನ್ನು ಎಣಿಸುತ್ತ ಕೆಳಗೆ ಸಾಗಿದರೆ, ಮಣ್ಣಿನ ಮೇಲಿನ ಸ್ತರದಿಂದ ಕೆಳಗಿನವರೆಗೆ ಪ್ರತಿ ೧೫ ಸೆಂ.ಮೀ. ಆಳದ ಮಣ್ಣಿನಲ್ಲಿರುವ ಆರ್ದ್ರತೆಯ ಪ್ರಮಾಣವನ್ನು ಕಂಡುಹಿಡಿಯಬಹುದು. ಮಣ್ಣಿನಲ್ಲಿ ನಿರ್ಮಿಸಿದ ರಂಧ್ರಕ್ಕೆ ಆಲ್ಯೂಮಿನಿಯಂ ಕೊಳವೆಯೊಂದನ್ನು ಅಳವಡಿಸಿಕೊಂಡರೆ, ರಂಧ್ರವು ಬಹಳ ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಆಲ್ಯೂಮಿನಿಯಂ ಕೊಳವೆಯಲ್ಲಿಯೇ ನ್ಯೂಟ್ರಾನ್‌ಉಪಕರಣದ ಸಾಧನವನ್ನು ಇಳಿಬಿಟ್ಟು ಆರ್ದ್ರತೆಯನ್ನು ತಿಳಿಯಬಹುದು.

ಮೇಲಿರುವ ಸುಮಾರು ೫ ಸೆಂ.ಮೀ. ಆಳದ ಮಣ್ಣಿನಲ್ಲಿರುವ ಆರ್ದ್ರತೆಯನ್ನು ನ್ಯೂಟ್ರಾನ್‌ಪದ್ಧತಿಯಿಂದ ತಿಳಿಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ “ಪಲ್ಸ್ಡ್‌ನ್ಯೂಕ್ಲಿಯರ್ ಮ್ಯಾಗ್ನೇಟಿಕ್‌ರಿಸೋನನ್ಸ್‌” ಎಂಬ ಉಪಕರಣವನ್ನು ನಿರ್ಮಿಸಲಾಗಿದೆ. ಮಣ್ಣಿನಲ್ಲಿ ರಂಧ್ರವನ್ನು ಕೊರೆಯದೇ, ಮೇಲ್ಮಣ್ಣಿನ ಆರ್ದ್ರತೆಯನ್ನು ಈ ಉಪಕರಣದಿಂದ ಕಂಡು ಹಿಡಿಯಬಹುದು.

ಮೃತ್ತಿಕಾ ಜಲದ (ಮಣ್ಣಿನಲ್ಲಿರುವ ನೀರಿನ) ಚಲನೆ

ನೀರಿನ ಪ್ರಮುಖ ಚಲನೆಗಳು ಕೆಳಗಿನಂತಿವೆ.

೧. ಮಣ್ಣಿನಲ್ಲಿರುವ ಎಲ್ಲ ರಂಧ್ರಗಳು ನೀರಿನಿಂದ ತುಂಬಿ ಮಣ್ಣು ನೀರಿನಿಂದ ಸಂತೃಪ್ತಗೊಂಡಾಗ ನಡೆಯುವ ಚಲನೆ.

೨. ಮಣ್ಣಿನ ದೊಡ್ಡ ದೊಡ್ಡ ರಂಧ್ರಗಳಲ್ಲಿ ತುಂಬಿಕೊಂಡ ನೀರು ಗುರುತ್ವಾಕರ್ಷಣೆಯಿಂದ ಬಸಿದು ಕೆಳಗೆ ಹೋದ ನಂತರ ಆಗುವ ಚಲನೆ.

೩. ಮಣ್ಣಿನ ಪದರುಗಳಲ್ಲಿ ಕಣಗಳ ಗಾತ್ರವು ಭಿನ್ನವಾಗಿದ್ದರೆ ನಡೆಯುವ ಚಲನೆ.

೪. ಬಾಷ್ಪ ರೂಪದಲ್ಲಿ ನೀರಿನ ಚಲನೆ.

ಮಣ್ಣು ನೀರಿನಿಂದ ಸಂತೃಪ್ತಗೊಂಡಾಗ ನಡೆಯುವ ಚಲನೆ: ಮಳೆಯು ಸುರಿಯುತ್ತಿರುವಾಗ ಅಥವಾ ಮಳೆಯು ನಿಂತೊಡನೆ, ಅದರಂತೆಯೇ ನೀರಾವರಿ ಜಲವನ್ನು ಪೂರೈಸುತ್ತಿರುವಾಗ ಅಥವಾ ನೀರಿನ ಪೂರೈಕೆಯನ್ನು ನಿಲ್ಲಿಸಿದೊಡನೆ, ಮಣ್ಣಿನ ಎಲ್ಲ ರಂಧ್ರಗಳು ನೀರಿನಿಂದ ತುಂಬಿರುತ್ತವೆ. ಈ ಪರಿಸ್ಥಿತಿಯಲ್ಲಿ, ನೀರಿನ ಚಲನೆಯ ಮೇಲೆ ಎರಡು ಸಂಗತಿಗಳು ಪರಿಣಾಮವನ್ನು ಬೀರುತ್ತವೆ.

. ನೀರಿನ ಮೇಲಿರುವ ಒತ್ತಡ: ಮಣ್ಣಿನಿಂದ ನೀರನ್ನು ಹೊರ ಹಾಕುವ ಶಕ್ತಿಗಳಲ್ಲಿ ಗುರುತ್ವಾಕರ್ಷಣೆಯೇ ಪ್ರಮುಖವೆಂದು ಹೇಳಬಹುದು. ಮಣ್ಣಿನ ಮೇಲ್ಭಾಗದಲ್ಲಿರುವ ನೀರಿನಿಂದ, ಮಣ್ಣಿನ ಕೆಳಭಾಗದಲ್ಲಿರುವ ನೀರಿನವರೆಗೆ (ಉದಾಹರಣೆಗೆ ಜಲಪಾತಳಿಯವರೆಗೆ) ಇರುವ ಅಂತರವೇ ಈ ಒತ್ತಡದ ಪ್ರಮಾಣವನ್ನು ನಿರ್ಧರಿಸುತ್ತದೆ. ಅಂತರವು ಅಧಿಕವಿದ್ದಂತೆ ಒತ್ತಡದ ಪ್ರಮಾಣವೂ ಹೆಚ್ಚುತ್ತದೆ.

. ನೀರಿನ ವಹನ ಸಾಮರ್ಥ್ಯ: ಮಣ್ಣಿನಲ್ಲಿ ನೀರಿನ ಚಲನೆಗೆ ರಂಧ್ರಗಳು ಎಷ್ಟರಮಟ್ಟಿಗೆ ಅನುಕೂಲವಾಗಿವೆ ಎಂಬ ಸಂಗತಿಯನ್ನು ಈ ಪದವು ಸೂಚಿಸುತ್ತದೆ. ಮಣ್ಣಿನಲ್ಲಿರುವ ರಂಧ್ರಗಳ ಆಕಾರ ಮತ್ತು ಅವು ಒಂದಕ್ಕೊಂದು ಸಂಪರ್ಕಹೊಂದಿದ ರೀತಿ ಇವುಗಳ ಮೇಲೆ ಚಲಿಸುವ ನೀರಿನ ಪ್ರಮಾಣ ಮತ್ತು ವೇಗಗಳು ಅವಲಂಬಿಸಿವೆ.

ಮಣ್ಣಿನಲ್ಲಿರುವ ರಂಧ್ರಗಳ ಆಕಾರದಿಂದುಂಟಾಗುವ ಪರಿಣಾಮವನ್ನು ಕೆಳಗಿನ ವಿವರಣೆಯಿಂದ ತಿಳಿಯಬಹುದು.

  • ಒಂದು ಮೀ.ಮೀ. ತ್ರಿಜ್ಯವಿರುವ ರಂಧ್ರದ ಕ್ಷೇತ್ರ ಫಲವು ೦.೧ ಮಿ.ಮೀ. ತ್ರಿಜ್ಯವಿರುವ ರಂಧ್ರದ ಕ್ಷೇತ್ರಫಲಕ್ಕಿಂತ ೧೦೦ ಪಟ್ಟು ಅಧಿಕವಿರುತ್ತದೆ.
  • ಅಂದರೆ ೧ ಮಿ.ಮೀ. ತ್ರಿಜ್ಯದ ಒಂದು ರಂಧ್ರವು ೦.೧ ಮಿ.ಮೀ. ತ್ರಿಜ್ಯದ ೧೦೦ ರಂಧ್ರಗಳಿಗೆ ಸಮವೆಂದಂತಾಯಿತು.
  • ರಂಧ್ರದೊಳಗಿನಿಂದ ಚಲಿಸುವ ನೀರಿನ ವೇಗವು ತ್ರಿಜ್ಯದ ೪ನೆಯ ಘಾತಕ್ಕೆ ಅನುಗುಣವಾಗಿರುತ್ತದೆ.
  • ಆದ್ದರಿಂದ ೧ ಮಿ.ಮೀ. ತ್ರಿಜ್ಯದ ರಂಧ್ರದೊಳಗಿನಿಂದ ಚಲಿಸುವ ನೀರಿನ ವೇಗವು (೧) ಅರ್ಥಾತ್‌೧ ಆಗುತ್ತದೆಯಾದರೆ ೦.೧ ಮಿ.ಮೀ. ತ್ರಿಜ್ಯದ ರಂಧ್ರದೊಳಗಿನಿಂದ ಚಲಿಸುವ ನೀರಿನ ವೇಗವು (೦.೧) ಅಂದರೆ ೦.೦೦೦೦೧ ಎಂದಂತಾಯಿತು.
  • ಆದ್ದರಿಂದ ನೀರು ಚಲಿಸುವ ವೇಗದ ದೃಷ್ಟಿಯಿಂದ ೧ ಮಿ.ಮೀ. ತ್ರಿಜ್ಯದ ಒಂದು ರಂಧ್ರದಿಂದ ಚಲಿಸುವ ನೀರು, ೦.೧ ಮಿ.ಮೀ. ತ್ರಿಜ್ಯದ ೧೦,೦೦೦ ರಂಧ್ರಗಳಿಂದ ಚಲಿಸುವ ನೀರಿಗೆ ಸಮವೆಂದಾಯಿತು.

ಮರಳು ಮಣ್ಣಿನಲ್ಲಿ ದೊಡ್ಡ ಆಕಾರದ ರಂಧ್ರಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ, ನೀರು ಸುಲಭವಾಗಿ ಮತ್ತು ಅತಿ ವೇಗದಿಂದ ಚಲಿಸಿ, ಕೆಳಸ್ತರಗಳಿಗೆ ಬಸಿದು ಹೋಗುತ್ತದೆ. ಅದರಂತೆಯೇ, ಉತ್ತಮ ಮತ್ತು ಸ್ಥಿರವಾದ ರಚನೆಯುಳ್ಳ ಮಣ್ಣಿನಲ್ಲಿ ನೀರು ವೇಗವಾಗಿ ಚಲಿಸುತ್ತದೆ. ಆದರೆ ಎರೆಮಣ್ಣಿನಲ್ಲಿ ದೊಡ್ಡ ಆಕಾರದ ರಂಧ್ರಗಳ ಸಂಖ್ಯೆಯು ಕಡಮೆ. ಅಲ್ಲದೆ ಅತಿ ಜಿನುಗು ಕಣಗಳು ಕೆಲವು ರಂಧ್ರಗಳಲ್ಲಿ ಸೇರಿಕೊಂಡು ನೀರಿನ ಚಲನೆಗೆ ತಡೆಯನ್ನುಂಟು ಮಾಡುತ್ತವೆ.

ಎರೆ ಮಣ್ಣು ಒಣಗಿದಾಗ ಹಲವು ಬಿರುಕುಗಳು ಕಂಡುಬರುತ್ತವೆ. ಮೊದಲನೆಯ ಮಳೆಯು ಬಂದಿತೆಂದರೆ ನೀರು ಈ ಬಿರುಕುಗಳ ಮೂಲಕ ಬಹುವೇಗದಿಂದ ಚಲಿಸಿದರೂ ಸ್ವಲ್ಪ ಸಮಯದಲ್ಲಿಯೇ ಮಣ್ಣು ಬಿರುಕುಗಳನ್ನು ಪ್ರವೇಶಿಸಿ ಅವು ಮುಚ್ಚಿದಾಗ ಮತ್ತು ಎರೆಕಣಗಳು ಉಬ್ಬುವುದರಿಂದ ನೀರಿನ ಚಲನೆಗೆ ತಡೆಯುಂಟಾಗುತ್ತದೆ.

ಗುರುತ್ವಾಕರ್ಷಣೆಯಿಂದ ನೀರು ಬಸಿದ ನಂತರ ಆಗುವ ಚಲನೆ: ದೊಡ್ಡ ದೊಡ್ಡ ರಂಧ್ರಗಳಿಂದ ನೀರು ಬಸಿದು ಹೋದೊಡನೆ ಆ ಸ್ಥಾನವನ್ನು ಹವೆಯು ಆಕ್ರಮಿಸುತ್ತದೆ. ಸಣ್ಣ ಮತ್ತು ಕೆಲವು ಮಧ್ಯಮಾಕಾರದ ರಂಧ್ರಗಳಲ್ಲಿ ಮಾತ್ರು ನೀರು ಉಳಿದುಕೊಂಡಿರುತ್ತದೆ. ಈ ಸ್ಥಿತಿಯಲ್ಲಿಯೂ ಮಣ್ಣಿನಲ್ಲಿ ನೀರು ಚಲಿಸುತ್ತದೆಯಾದರೂ ಈ ಚಲನೆಗೆ ಗುರುತ್ವಾಕರ್ಷಣೆಯು ಮೂಲ ಶಕ್ತಿಯಲ್ಲ. ಕೆಳಗಿನ ವಿವರಣೆಯಿಂದ ನೀರು ಚಲಿಸುವ ವಿಧಾನವನ್ನು ಅರಿಯಬಹುದು.

ಮಣ್ಣಿನ ಮೇಲ್ಭಾಗದಿಂದ ನೀರು ಆವಿಯ ರೂಪದಲ್ಲಿ ಹೊರ ಹೋಗಲು ಆರಂಭವಾಗುತ್ತದೆ. ಸಸ್ಯಗಳೂ ತಮ್ಮ ಬೇರುಗಳ ಸುತ್ತಲಿರುವ ನೀರನ್ನು ಹೀರಿಕೊಳ್ಳುತ್ತವೆ. ಇದರಿಂದ ಈ ಭಾಗದಲ್ಲಿಯ ಮಣ್ಣಿನ ಕಣಗಳ ಸುತ್ತ ಇರುವ ನೀರಿನ ಪೊರೆಯು ಉಳಿದ ಭಾಗದಲ್ಲಿರುವ ನೀರಿನ ಪೊರೆಗಿಂತ ತೆಳುವಾಗುತ್ತದೆ. ಆಕರ್ಷಣ ಶಕ್ತಿಗಳ ಪ್ರಭಾವದಿಂದ ದಪ್ಪ ಪೊರೆಯಿರುವ ದಿಕ್ಕಿನಿಂದ ನೀರು ತೆಳು ಪೊರೆಯಿರುವ ಕಣಗಳ ದಿಕ್ಕಿಗೆ ಚಲಿಸತೊಡಗುತ್ತದೆ. ಆದ್ದರಿಂದ ಮಣ್ಣಿನಲ್ಲಿರುವ ನೀರು, ಯಾವುದೇ ಕಾರಣಕ್ಕಾಗಿ ವ್ಯಯವಾಯಿತೆಂದರೆ ಆ ಸ್ಥಳಕ್ಕೆ ಅಧಿಕ ನೀರಿರುವಲ್ಲಿಂದ ನೀರು ಚಲಿಸುತ್ತದೆನ್ನಬಹುದು.

ಮಣ್ಣಿನಲ್ಲಿರುವ ನೀರು ಯಾವ ಸ್ಥಳದಲ್ಲಿಯಾದರೂ ವ್ಯಯವಾಗಬಹುದಾದ್ದರಿಂದ ಮೇಲೆ, ಕೆಳಗೆ, ಪಾರ್ಶ್ವಕ್ಕೆ ಹೀಗೆ ಯಾವ ದಿಕ್ಕಿನಲ್ಲಾದರೂ ಚಲಿಸಬಹುದು. ಈ ರೀತಿಯ ಚಲನೆಯು ಆರ್ದ್ರ ಮಣ್ಣಿನಲ್ಲಿ ಸದಾ ನಡೆದಿರುತ್ತದೆಯಲ್ಲದೇ ಉಳಿದೆಲ್ಲ ಬಗೆಯ ನೀರಿನ ಚಲನೆಗೆ ಹೋಲಿಸಿದರೆ ಸಸ್ಯದ ದೃಷ್ಟಿಯಿಂದ ಇದು ಅತಿ ಮಹತ್ವದ ಘಟನೆಯೆನ್ನಬಹುದು.

ಮಣ್ಣಿನಲ್ಲಿ ನೀರಿನ ಪ್ರಮಾಣವು ಅಧಿಕವಾಗಿರುವ ನೀರಿನ ಚಲನೆಯ ವೇಗವು ಎರೆಮಣ್ಣಿಗಿಂತ ಮರಳು ಮಣ್ಣಿನಲ್ಲಿ ಅಧಿಕವಾಗಿರುತ್ತದೆ. ಆದರೆ ನೀರಿನ ಪ್ರಮಾಣವು ಕಡಮೆಯಾದಂತೆ ಚಲನೆಯ ವೇಗವು ಮರಳು ಮಣ್ಣಿಗಿಂತ ಎರೆಮಣ್ಣಿನಲ್ಲಿಯೇ ಅಧಿಕವಾಗಿರುತ್ತದೆ.

ವಿಭಿನ್ನ ಕಣಗಾತ್ರವಿರುವ ಪದರುಗಳಲ್ಲಿ ನೀರಿನ ಚಲನೆ: ಮೇಲೆ ಚರ್ಚಿಸಿದ ನೀರಿನ ಚಲನೆಯು ನಡೆಯುವಾಗ, ಮಣ್ಣಿನ ಕಣಗಳ ಗಾತ್ರ ಮತ್ತು ರಚನೆ ಇವು ಮಣ್ಣಿನಲ್ಲಿ ಒಂದೇ ರೀತಿಯಲ್ಲಿದ್ದವೆಂದು ಪರಿಗಣಿಸಲಾಗಿತ್ತು. ಒಂದೊಮ್ಮೆ ಮಣ್ಣಿನ ಕೆಳಭಾಗದಲ್ಲಿ ವಿಭಿನ್ನವಾದ ಭೌತಿಕ ಗುಣಧರ್ಮಗಳಿರುವ ಮಣ್ಣಿನ ಸ್ತರವಿದ್ದರೆ ನೀರಿನ ಚಲನೆಯು ಬೇರೆ ರೀತಿಯಿಂದ ನಡೆಯುತ್ತದೆ.

ಮಣ್ಣಿನ ಮೇಲ್ಭಾಗದಲ್ಲಿ ಎರೆ ಅಥವಾ ಗೋಡು ಮಿಶ್ರಿತ ಎರೆ ಇದ್ದು ಕೆಳಗಿನ ಸ್ತರದಲ್ಲಿ ಮರಳಿನ ಪ್ರಾಬಲ್ಯವಿರುವ ಮಣ್ಣಿದೆ ಎಂದು ಪರಿಗಣಿಸೋಣ. ಮೇಲಿನ ಪದರದಲ್ಲಿರುವ ಮಣ್ಣಿಗೆ ನೀರನ್ನು ಪೂರೈಸಿದಾಗ ನೀರು ಚಲಿಸುತ್ತ ಎರೆ ಮತ್ತು ಮರಳು ಇವೆರಡು ಸ್ತರಗಳು ಸಂಧಿಸುವ ರೇಖೆಯನ್ನು ಮುಟ್ಟಿ ಅಲ್ಲಿಯೇ ತನ್ನ ಚಲನೆಯನ್ನು ಸ್ಥಗಿತಗೊಳಿಸುತ್ತದೆ. ಮರಳು ಮಿಶ್ರಿತ ಸ್ತರವನ್ನು ನೀರು ಪ್ರವೇಶಿಸುವುದಿಲ್ಲ. ಮರಳು ಮಣ್ಣಿನಲ್ಲಿರುವ ದೊಡ್ಡ ಆಕಾರದ ರಂಧ್ರಗಳಿಗಿಂತ ಎರೆಮಣ್ಣಿನಲ್ಲಿರುವ ರಂಧ್ರಗಳೇ ನೀರನ್ನು ಅಧಿಕ ಶಕ್ತಿಯಿಂದ ಆಕರ್ಷಿಸುತ್ತಿರುವುದೇ ನೀರಿನ ಚಲನೆಯು ಸ್ಥಗಿತಗೊಳ್ಳಲು ಕಾರಣ. ಸಂಧಿ ರೇಖೆಯಲ್ಲಿ ನೀರು ಸಂಗ್ರಹಗೊಳ್ಳುತ್ತಾ ಸಾಗಿ ಎರೆಮಣ್ಣಿನ ಪದರದಲ್ಲಿರುವ ಕಣಗಳ ಪರಕರ್ಷಣ ಮತ್ತು ಸ್ವಕರ್ಷಣ ಶಕ್ತಿಗಳ ಮಿತಿಯನ್ನು ಮೀರಿತೆಂದರೆ, ನೀರು ಕೆಳಗಿನ ಮರಳು ಮಣ್ಣಿನ ಸ್ತರಗಳನ್ನು ಪ್ರವೇಶಿಸುತ್ತದೆ.

ಬಾಷ್ಪ ರೂಪದಲ್ಲಿ ನೀರಿನ ಚಲನೆ

ಮಣ್ಣಿನಲ್ಲಿ ಇರುವ ಬಾಷ್ಪ ರೂಪದಲ್ಲಿರುವ ನೀರು ಬಾಹ್ಯಚಲನೆ ಮತ್ತು ಆಂತರಿಕ ಚಲನೆ ಎಂಬ ಎರಡು ರೂಪಗಳಲ್ಲಿ ಚಲಿಸುತ್ತದೆ.

. ಬಾಹ್ಯ ಚಲನೆ: ಮೇಲ್ಮಣ್ಣಿನಲ್ಲಿರುವ ಆರ್ದ್ರತೆಯು ಆವಿಯಾಗಿ ಮೇಲಿರುವ ವಾಯುಮಂಡಲವನ್ನು ಸೇರಿಕೊಳ್ಳುತ್ತದೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ಅಧ್ಯಾಯದಲ್ಲಿ ಕೊಡಲಾಗಿದೆ.

. ಆಂತರಿಕ ಚಲನೆ: ಮಣ್ಣಿನ ಕಣಗಳ ಮಧ್ಯದಲ್ಲಿರುವ ರಂಧ್ರಗಳಿಂದ ಬಾಷ್ಪ ರೂಪದಲ್ಲಿ ನೀರು ಚಲಿಸುತ್ತದೆ. ಬಾಷ್ಪದಿಂದ ಉಂಟಾಗುವ ಒತ್ತಡವೇ ಇಂತಹ ಚಲನೆಗೆ ಚಾಲನೆಯನ್ನು ನೀಡುತ್ತದೆ. ಬಾಷ್ಪದ ಒತ್ತಡವು ಅಧಿಕವಾಗಿರುವ ಸ್ಥಳದಿಂದ ಒತ್ತಡವು ಕಡಮೆಯಿರುವ ಸ್ಥಳಕ್ಕೆ ಬಾಷ್ಪವು ಚಲಿಸುತ್ತದೆ. ಕೆಳಗಿನ ಎರಡು ಪ್ರಸಂಗಗಳಲ್ಲಿ ಬಾಷ್ಪದ ಚಲನೆಯನ್ನು ಕಾಣಬಹುದು:

i) ಮಣ್ಣು ಸಾಕಷ್ಟು ಹಸಿ ಇರುವಾಗ ಮಣ್ಣಿನಲ್ಲಿ ಇರುವ ಹವೆಯ ಸಾಪೇಕ್ಷ ಆರ್ದ್ರತೆಯು ಶೇಕಡ ನೂರರಷ್ಟಿರುತ್ತದೆ. ಆದ್ದರಿಂದ, ಹವೆಯಲ್ಲಿರುವ ಬಾಷ್ಪದಿಂದ ಉಂಟಾಗುವ ಒತ್ತಡವು ತುಲನಾತ್ಮಕವಾಗಿ ಅತಿ ಹೆಚ್ಚು ತದ್ವಿರುದ್ಧವಾಗಿ ಒಣಮಣ್ಣಿನಲ್ಲಿರುವ ಹವೆಯ ಸಾಪೇಕ್ಷ ಆರ್ದ್ರತೆಯು ಅತಿ ಕಡಮೆ. ಆದ್ದರಿಂದ ಅಲ್ಲಿ ಬಾಷ್ಪದಿಂದುಂಟಾಗುವ ಒತ್ತಡವು ಅತ್ಯಲ್ಪ. ಒಂದು ಭೂ ಪ್ರದೇಶದ ಒಂದು ಭಾಗದಲ್ಲಿ ಹಸಿ ಮಣ್ಣಿದ್ದು ಅದಕ್ಕೆ ಹೊಂದಿಕೊಂಡ ಭಾಗದಲ್ಲಿ ಒಣ ಮಣ್ಣಿದ್ದರೆ ಬಾಷ್ಪದ ಒತ್ತಡವು ಅಧಿಕವಿರುವ ಹಸಿ ಮಣ್ಣಿನಿಂದ ಕಡಮೆ ಒತ್ತಡವಿರುವ ಒಣ ಮಣ್ಣಿಗೆ ನೀರು ಬಾಷ್ಪದ ರೂಪದಲ್ಲಿ ಚಲಿಸುತ್ತದೆ.

ii) ಉಷ್ಣತಾಮಾನವು ಅಧಿಕಗೊಂಡಿತೆಂದರೆ ಬಾಷ್ಪದ ಒತ್ತಡವು ಹೆಚ್ಚುತ್ತದೆ. ಆದ್ದರಿಂದ ಬಾಷ್ಪವು ಇಂತಹ ಸ್ಥಳದಿಂದ ತಂಪು ಸ್ಥಳದೆಡೆಗೆ ಚಲಿಸುತ್ತದೆ.

ಮೇಲೆ ವಿವರಿಸಿದಂತೆ ಚಲಿಸುವ ಬಾಷ್ಪದ ಪ್ರಮಾಣವು ಅತಿ ಕಡಮೆ. ಆದ್ದರಿಂದ ಸಾಮಾನ್ಯ ಪರಿಸ್ಥಿತಿಯಲ್ಲಿ ಈ ರೀತಿ ಚಲಿಸುವ ಬಾಷ್ಪದ ನೀರಿನಿಂದ ಬೆಳೆಗಳಿಗೆ ಹೇಳಿಕೊಳ್ಳುವಷ್ಟು ಪ್ರಯೋಜನವಿಲ್ಲವೆನ್ನಬಹುದು. ಆದರೆ, ಎರೆಮಣ್ಣಿನಲ್ಲಿ ಬೆಳೆದ ಚಳಿಗಾಲದ ಬೆಳೆಯಾದ ಗೋಧಿಗೆ ಮತ್ತು ನೀರಿನ ಬರವನ್ನು ಎದುರಿಸುವ ಸಾಮರ್ಥ್ಯವಿರುವ ಇತರ ಕೆಲವು ಬೆಳೆಗಳಿಗೆ ಬಾಷ್ಪದಿಂದ ದೊರೆಯುವ ನೀರು ಪ್ರಯೋಜನಕಾರಿ ಎಂದು ಕಂಡು ಬಂದಿದೆ.

ಮಣ್ಣಿನಲ್ಲಿರುವ ಲಭ್ಯಜಲ ಮತ್ತು ಸಸ್ಯಗಳ ಸಂಬಂಧ

ಮಣ್ಣಿನ ಜಲಧಾರಣಾ ಶಕ್ತಿ ಮತ್ತು ಸಸ್ಯಗಳನ್ನು ಬಾಡಿಸುವ ಬಿಂದು ಇವೆರಡರ ಮಧ್ಯದಲ್ಲಿರುವ ನೀರಿಗೆ ಲಭ್ಯಜಲ (ನೀರು) ಎನ್ನುತ್ತಾರೆ. ಈ ನೀರನ್ನು ಮಣ್ಣಿನ ಕಣಗಳು ೦.೧ ರಿಂದ ೦.೩ರ ವಾಯುಭಾರಕ್ಕೆ ಸಮನಾದ ಶಕ್ತಿಯಿಂದ ಆರಂಭ ಮಾಡಿ (ಜಲಧಾರಣಾ ಶಕ್ತಿಯಲ್ಲಿದ್ದಾಗ), ೧೫ರ ವಾಯು ಭಾರಕ್ಕೆ ಸಮನಾದ ಶಕ್ತಿಯವರೆಗಿರುವ (ಸಸ್ಯಗಳನ್ನು ಬಾಡಿಸುವ ಬಿಂದು) ಕರ್ಷಣ ಶಕ್ತಿಯಿಂದ ಹಿಡಿದಿಟ್ಟುಕೊಂಡಿರುತ್ತವೆ. ಸಸ್ಯದ ಬೇರುಗಳು ಈ ಶಕ್ತಿಯನ್ನು ಮೀರಿದ ಸಾಮರ್ಥ್ಯದಿಂದ ನೀರನ್ನು ಹೀರಿಕೊಳ್ಳಬೇಕಾಗುತ್ತದೆ.

ಬೇರುಗಳ ಸನಿಹದಲ್ಲಿರುವ ನೀರು ಕಡಿಮೆಯಾದೊಡನೆ ಹೆಚ್ಚು ನೀರಿರುವ ಪಕ್ಕದ ಸ್ಥಳದಿಂದ ನೀರು ಚಲಿಸಿ ಬರುತ್ತದೆ. ಆದರೆ ಈ ರೀತಿ ಚಲಿಸಿ ಬರುವ ದೂರವು ಸುಮಾರು ೧ ಸೆಂ.ಮೀ.ನಷ್ಟು ಮಾತ್ರ ಎನ್ನಬಹುದು. ಇದಕ್ಕಿಂತ ದೂರದಲ್ಲಿರುವ ಮಣ್ಣಿನಿಂದ ನೀರು ಚಲಿಸಿ ಬರುತ್ತದೆಯಾದರೂ ಚಲಿಸುವ ವೇಗವು ತೀರಾ ಕಡಮೆ. ಬೇರುಗಳ ಬೆಳವಣಿಗೆಯ ವೇಗವೇ ದೂರದಿಂದ ಚಲಿಸುವ ನೀರಿನ ವೇಗಕ್ಕಿಂತ ಅಧಿಕವಾಗಿರುತ್ತದೆ.

ನಾವು ಒಂದು ವಿಷಯವನ್ನು ಇಲ್ಲಿ ಗಮನಿಸಬೇಕು. ಮಣ್ಣಿನಲ್ಲಿರುವ ಒಟ್ಟು ನೀರು ಮತ್ತು ಲಭ್ಯಜಲ ಇವುಗಳ ಪ್ರಮಾಣವು ಮಣ್ಣಿನ ಎಲ್ಲೆಡೆ ಒಂದೇ ಸಮನಾಗಿ ಇರುವುದಿಲ್ಲ. ಸಸ್ಯದ ಬೇರುಗಳು ಸಾಮಾನ್ಯವಾಗಿ ಮೇಲಿನ ಕೆಲವು ಸೆಂ.ಮೀ. ಆಳದವರೆಗೆ ಬಹು ಸಂಖ್ಯೆಯಲ್ಲಿ ಇರುತ್ತವೆಯಾದರೂ ಮಣ್ಣಿನ ಕೆಳಗಿನ ಸ್ತರಕ್ಕೆ ಹೋದಂತೆ ಬೇರುಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಇದೂ ಅಲ್ಲದೇ ಮಣ್ಣಿನ ಮೇಲಿನ ಸ್ತರದಿಂದ ನೀರು ಆವಿಯಾಗುತ್ತಲೇ ಇರುವುದರಿಂದ ಈ ಭಾಗದಲ್ಲಿಯ ಆರ್ದ್ರತೆಯು ಕಡಿಮೆಯಾಗುತ್ತಲೇ ಸಾಗುತ್ತದೆ. ಈ ಕಾರಣಗಳಿಂದ ಮಣ್ಣಿನ ಕೆಳಗಿನ ಸ್ತರಗಳಲ್ಲಿ ನೀರು ಜಲಧಾರಣಾ ಶಕ್ತಿಯ ಸಮೀಪದಲ್ಲಿದ್ದರೂ ಮೇಲ್ಮಣ್ಣಿನಲ್ಲಿ ನೀರು ಸಸ್ಯಗಳನ್ನು ಬಾಡಿಸುವ ಬಿಂದುವನ್ನು ಮುಟ್ಟಿರಬಹುದು. ಹೀಗಾಗಿ ಬೇರುಗಳ ಬೆಳವಣಿಗೆಯ ವೇಗವು ಅಧಿಕವಿರುವ ಸಸ್ಯಗಳು ಮೇಲ್ಮಣ್ಣಿನಲ್ಲಿ ನೀರಿನ ಕೊರತೆಯಾದರೂ ಉತ್ತಮ ಇಳುವರಿಯನ್ನು ಕೊಡಬಲ್ಲವು. ಉದಾಹರಣೆಗೆ, ಒಂದು ಮೀಟರಿಗಿಂತ ಆಳವಾದ ಬೇರುಗಳನ್ನು ಹೊಂದಿರುವ ಸೂರ್ಯಕಾಂತಿ ಬೆಳೆಯು, ಕಡಿಮೆ ಆಳದ ಬೇರುಗಳಿರುವ ಸೋಯಾ ಅವರೆಗಿಂತ ಹೆಚ್ಚು ಸಮರ್ಥವಾಗಿ ಮೇಲ್ಮಣ್ಣಿನಲ್ಲಾದ ನೀರಿನ ಕೊರತೆಯನ್ನು ಸಹಿಸಿಕೊಂಡು ಅಪೇಕ್ಷಿತ ಇಳುವರಿಯನ್ನು ಕೊಡಬಲ್ಲದು.

ಮಣ್ಣಿನ ಲಭ್ಯಜಲದ ಮೇಲೆ ಪರಿಣಾಮವನ್ನು ಬೀರುವ ಸಂಗತಿಗಳು

i) ಮಣ್ಣಿನ ಕಣಗಳ ಗಾತ್ರ: ಜಿನುಗು ಎರೆಕಣಗಳ ಹೊರಮೈ ಭಾಗವು ಮರಳು ಕಣಗಳ ಹೊರ ಮೈ ಭಾಗಕ್ಕಿಂತ ಅತ್ಯಧಿಕವಾಗಿರುತ್ತದೆಯಲ್ಲದೆ, ಜಿನುಗು ಕಣಗಳ ಮಣ್ಣಿನಲ್ಲಿ ಸೂಕ್ಷ್ಮ ರಂಧ್ರಗಳ ಸಂಖ್ಯೆಯೂ ಅಧಿಕ. ಹೀಗಾಗಿ ಜಿನುಗು ಕಣಗಳ ಮಣ್ಣಿನಲ್ಲಿ ಸೂಕ್ಷ್ಮ ರಂಧ್ರಗಳ ಸಂಖ್ಯೆಯೂ ಅಧಿಕ. ಹೀಗಾಗಿ ಜಿನುಗು ಕಣಗಳ ಪ್ರಾಬಲ್ಯವಿರುವ ಮಣ್ಣು, ಮರಳು ಮಣ್ಣಿಗಿಂತ ಹೆಚ್ಚು ನೀರನ್ನು ಆಕರ್ಷಿಸಿ ಇಟ್ಟುಕೊಳ್ಳುತ್ತದೆ. ಆದರೆ ಇಂತಹ ಮಣ್ಣುಗಳಲ್ಲಿ ಬಾಡಿಸುವ ಬಿಂದುವೂ ಅಧಿಕವಾಗಿಯೇ ಇರುತ್ತದೆ ಎಂಬುದು ಗಮನಾರ್ಹ.

ಗೋಡು ಮಣ್ಣಿನ ಜಲಧಾರಣಾ ಸಾಮರ್ಥ್ಯವು, ಎರೆ ಮಣ್ಣಿನ ಸಾಮರ್ಥ್ಯಕ್ಕಿಂತ ಕಡಮೆ ಇದ್ದರೂ ಮರಳು ಮಣ್ಣಿಗಿಂತ ಅಧಿಕವಾಗಿರುತ್ತದೆ. ಅದರಂತೆಯೇ ಗೋಡು ಮಣ್ಣನ್ನು ಬಾಡಿಸುವ ಜಲ ಬಿಂದುವು ಮರಳು ಮಣ್ಣಿಗಿಂತ ಅಧಿಕವಿದ್ದರೂ, ಎರೆಮಣ್ಣಿಗಿಂತ ಕಡಮೆ, ಇದರ ಪರಿಣಾಮವಾಗಿ ಗೋಡು ಮಣ್ಣಿನ ಲಭ್ಯ ಜಲವು ಮರಳು ಮತ್ತು ಎರೆಮಣ್ಣುಗಳಿಗಿಂತ ಅಧಿಕವಾಗಿರುತ್ತದೆಂಬುದು ಮಹತ್ವದ ಸಂಗತಿ (ಚಿತ್ರ:೭)

ii) ಕಣಗಳ ರಚನೆ: ಮಣ್ಣಿನ ಕಣಗಳ ರಚನೆಯು ಸರಿಯಾಗಿರಬೇಕು. ದೊಡ್ಡ ರಂಧ್ರಗಳದೇ ಪ್ರಾಬಲ್ಯವಿರುವ ಮಣ್ಣಿನಲ್ಲಿ, ನೀರಿಗಿಂತ ಹವೆಯೇ ಹೆಚ್ಚು ಸ್ಥಳವನ್ನು ಆವರಿಸುತ್ತದೆ. ನೀರಿಗೆ ಆಶ್ರಯವನ್ನು ಕೊಡುವ ಸೂಕ್ಷ್ಮ ಮತ್ತು ಮಧ್ಯಮಾಕಾರದ ರಂಧ್ರಗಳೂ ಹಾಗೂ ಹವೆಗೆ ಇರಲು ಸ್ಥಾನವನ್ನೊದಗಿಸುವ ದೊಡ್ಡ ರಂಧ್ರಗಳೂ ಸೂಕ್ತ ಪ್ರಮಾಣದಲ್ಲಿದ್ದರೆ, ಲಭ್ಯ ನೀರಿನ ಉತ್ತಮ ಸಂಗ್ರಹಕ್ಕೆ ಅನುಕೂಲವುಂಟಾಗುತ್ತದೆ.

iii) ನಿರವಯವ ಖನಿಜಗಳ ಪ್ರಕಾರ: ಮಣ್ಣಿನಲ್ಲಿರುವ ಖನಿಜಗಳ ಪ್ರಕಾರಕ್ಕೂ ಲಭ್ಯ ನೀರಿನ ಪ್ರಮಾಣಕ್ಕೂ ನೇರವಾದ ಮತ್ತು ಪರೋಕ್ಷವಾದ ಸಂಬಂಧವಿದೆ.

iv) ಸಾವಯವ ಪದಾರ್ಥ: ಹ್ಯೂಮಸ್‌ರೂಪದಲ್ಲಿದ್ದ ಸಾವಯವ ಪದಾರ್ಥವು ತನ್ನ ತೂಕದ ೧.೫ ಪಟ್ಟು ಅಥವಾ ಅದಕ್ಕಿಂತಲೂ ಅಧಿಕ ನೀರನ್ನು ಆಕರ್ಷಿಸಿ ಹಿಡಿದಿಟ್ಟುಕೊಳ್ಳಬಹುದು. ಸಾವಯವ ಪದಾರ್ಥವು ಎರೆಮಣ್ಣಿಗಿಂತ ಮರಳುಮಣ್ಣಿನಲ್ಲಿ ಹೆಚ್ಚು ಪರಿಣಾಮಕಾರಿ ಎನಿಸುತ್ತದೆ.