ಸಂರಕ್ಷಿಸಿದ ಆಹಾರದ ಬಣ್ಣವನ್ನು ಸುಧಾರಿಸಲು ಕೆಲವು ಕೃತಕ ಬಣ್ಣಗಳು ಬಳಕೆಯಲ್ಲಿವೆ. ಈ ಬಣ್ಣಗಳಲ್ಲಿ ಕೆಲವು ನೀರಿನಲ್ಲಿ ಕರಗಿದರೆ ಇನ್ನು ಕೆಲವು ಎಣ್ಣೆಯಲ್ಲಿ ಕರಗುತ್ತವೆ, ಮತ್ತೆ ಕೆಲವು ಆಮ್ಲ ಇಲ್ಲವೇ ಕ್ಷಾರಗಳಲ್ಲಿ ಕರಗುತ್ತವೆ. ಆಹಾರದ ಉತ್ಪನ್ನಗಳಲ್ಲಿ ಉಪಯೋಗಿಸುವ ಬಣ್ಣಗಳಲ್ಲಿ ಯಾವುದೇ ದೋಷವಿರಬಾರದು : ಈ ಬಣ್ಣಗಳು ಸ್ಥಿರವಾಗಿ ನಿಲ್ಲಬೇಕು. ಇವುಗಳನ್ನು ಯಾವ ಪದಾರ್ಥಕ್ಕೆ ಸೇರಿಸುತ್ತೇವೆಯೋ ಆ ಪದಾರ್ಥದ ನೈಜಬಣ್ಣದ ವೈಶಿಷ್ಟ್ಯತೆಯನ್ನು ಪಡೆದಿರಬೇಕು ಈ ದೃಷ್ಟಿಯಿಂದ ಇಂಥ ಬಣ್ಣಗಳನ್ನು ಆಯ್ದುಕೊಳ್ಳುವಾಗ ಅತ್ಯಂತ ಜಾಗರೂಕತೆ ವಹಿಸಬೇಕು.

ಆಹಾರ ಪದಾರ್ಥಗಳಿಗೆ ಅನುಮತಿ ನೀಡಿದ ಟಾರೆಣ್ಣೆಯ ಬಣ್ಣಗಳನ್ನೇ ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಈ ಬಣ್ಣಗಳ ಬಗ್ಗೆ ವಿವಿಧ ದೇಶಗಳಲ್ಲಿ ವಿಶಿಷ್ಟವಾದ ಕಾನೂನು ಜಾರಿಯಲ್ಲಿದೆ. ಪರದೇಶಗಳಿಗೆ ಆಹಾರ ಪದಾರ್ಥಗಳನ್ನು ರಫ್ತು ಮಾಡಲು ಇಚ್ಛಿಸುವವರು ಪದಾರ್ಥಗಳನ್ನು ಉತ್ಪಾದಿಸುವ ಮೊದಲು ಆ ಕಾಯಿದೆಗಳನ್ನೆಲ್ಲ ಅರಿತಿರುವುದು ಅಗತ್ಯ. ಆಹಾರಕ್ಕೆ ಉಪಯೋಗಿಸುವ ಪ್ರಮುಖ ಬಣ್ಣಗಳ ಛಾಯೆಗಳೆಂದರೆ ಕೆಂಪು, ಕಿತ್ತಳೆ, ಹಳದಿ, ಹಸುರು ಮತ್ತು ನೀಲಿ. ಕೆಂಪು ಬಣ್ಣಗಳಲ್ಲಿ ಪಾನ್ಸಿಯ ೩ R, ಪಾನ್ಸಿಯ XS ಮತ್ತು ಎರಿತ್ರೋಸಿನ್‌ಗಳು ಖಾದ್ಯಯೋಗ್ಯ ಬಣ್ಣಗಳು. ಕಿತ್ತಳೆ ೧ ಮತ್ತು ಕಿತ್ತಳೆ SS ಮುಖ್ಯವಾದ ಕಿತ್ತಳೆ ಬಣ್ಣಗಳು. ಟಾರ್ಟರ್‌ಜೈನ್ ಮತ್ತು ಸನ್‌ಸೆಟ್ ಹಳದಿ FSF ಗಳು ಪ್ರಚಾರದಲ್ಲಿರುವ ಹಳದಿ ಬಣ್ಣಗಳು. ತಿಳಿಹಸರು SF ಮತ್ತು ಬಟಾಣಿ ಹಸುರು H ಗಳು ಹಸುರು ಬಣ್ಣಗಳಲ್ಲಿ ಮುಖ್ಯವಾದವುಗಳು.

ಪ್ರಮಾಣಿಕ ಬಣ್ಣಗಳು

ಲೋಸೆಕ್‌ರ ಹೇಳಿಕೆ ಪ್ರಕಾರ ಅಮೇರಿಕದ ರಾಜ್ಯಗಳ ಆಹಾರ ಮತ್ತು ಔಷಧಗಳ ಆಡಳಿತದವರು ೧೯೪೯ರವರೆಗೆ ಕೆಳಗೆ ಕೋಷ್ಟಕ ೧೫ ರಲ್ಲಿ ಕೊಟ್ಟ ಬಣ್ಣಗಳನ್ನು ಪ್ರಮಾಣೀಕರಿಸಿದ್ದಾರೆ :

ಕೋಷ್ಟಕ ೧೫ : ಆಹಾರಕ್ಕೆ ಪ್ರಮಾಣೀಕರಿಸಿದ ಬಣ್ಣಗಳ ಪಟ್ಟಿ

ಹೊಸ ಹೆಸರುಗಳು   ಹಳೆಯ ಹೆಸರು
ಕೆಂಪು ಛಾಯೆಗಳು
F D ಮತ್ತು C ಕೆಂಪು ಸಂಖ್ಯೆ ೧ ಪಾನ್ಸಿಯ ೩ R
F D ಮತ್ತು C ಕೆಂಪು ಸಂಖ್ಯೆ ೨ ಅಮರಾಂತ್
F D ಮತ್ತು C ಕೆಂಪು ಸಂಖ್ಯೆ೩ ಎರಿತ್ರೋಸಿನ್
F D ಮತ್ತು C ಕೆಂಪು ಸಂಖ್ಯೆ೪ ಪಾನ್ಸಿಯ XS
F D ಮತ್ತು C ಕೆಂಪು ಸಂಖ್ಯೆ ೩೨ ಎಣ್ಣೆಗೆಂಪು XO
ಕಿತ್ತಳೆ ಛಾಯೆಗಳು
F D ಮತ್ತು C ಕಿತ್ತಳೆ ಸಂಖ್ಯೆ೧ ಕಿತ್ತಳೆ I
F D ಮತ್ತು C ಕಿತ್ತಳೆ ಸಂಖ್ಯೆ ೨ ಕಿತ್ತಳೆ S
ಹಳದಿ ಛಾಯೆಗಳು
F D ಮತ್ತು C ಹಳದಿ ಸಂಖ್ಯೆ ೧ ನ್ಯಾಫ್ತಾಲ್ ಹಳದಿ S
F D ಮತ್ತು C ಹಳದಿ ಸಂಖ್ಯೆ ೨ ನ್ಯಾಫ್ತಾಲ್ ಹಳದಿ S
ಪೊಟ್ಯಾಸಿಯಂ ಉಪ್ಪು
F D ಮತ್ತು C ಹಳದಿ ಸಂಖ್ಯೆ ೩ ಹಳದಿ AB
F D ಮತ್ತು C ಹಳದಿ ಸಂಖ್ಯೆ ೪ ಹಳದಿ OB
F D ಮತ್ತು C ಹಳದಿ ಸಂಖ್ಯೆ ೫ ಟಾರ್ಟ್ರಜೈನ್
F D ಮತ್ತು C ಹಳದಿ ಸಂಖ್ಯೆ ೬ ಸನ್‌ಸೆಟ್ ಹಳದಿ FCF
ಹಸುರು ಛಾಯೆಗಳು
F D ಮತ್ತುC ಹಸುರು ಸಂಖ್ಯೆ ೧ ಗಿನಿಹಸುರು B
F D ಮತ್ತು C ಹಸುರು ಸಂಖ್ಯೆ ೨ ತಿಳಿಹಸರು SF ಹಳದಿ
F D ಮತ್ತು C ಹಸುರು ಸಂಖ್ಯೆ ೩ ಫಾಸ್ಟ್ ಹಸುರು FCF
ನೀಲಿ ಛಾಯೆಗಳು
F D ಮತ್ತು C ನೀಲಿ ಸಂಖ್ಯೆ ೧ ಪ್ರಕಾಶ ನೀಲಿ FOF
F D ಮತ್ತು C ನೀಲಿ ಸಂಖ್ಯೆ ೨ ಇಂಡಿಗೋಟೈನ್

 

ಯುನೈಟೆಡ್ ಕಿಂಗ್‌ಡಮ್‌ದ ಇಂಪಿರಿಯಲ್ ಕೆಮಿಕಲ್ ಇಂಡಸ್ಟ್ರೀಸ್‌ನವರು ಎಡಿಕಾಲ್ ಬಣ್ಣಗಳೆನ್ನುವ ಅನೇಕ ವಿಧದ ಆಹಾರದ ಬಣ್ಣಗಳನ್ನು ಒದಗಿಸಿರುತ್ತಾರೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಈ ಮುಂದೆ ಕೊಟ್ಟಿರುವ ಪಟ್ಟಿಯಲ್ಲಿ ಕೊಟ್ಟಿದೆ. ಇವುಗಳಲ್ಲಿ ಕೆಲವನ್ನು ಹಣ್ಣು ಮತ್ತು ತರಕಾರಿ ಸಂಸ್ಕರಣೆಯ ಕಾರ್ಖಾನೆಗಳಲ್ಲಿ ಉಪಯೋಗಿಸಿದರೆ ಇನ್ನು ಕೆಲವು ಮಿಠಾಯಿ, ಮಾಂಸ ಮತ್ತು ಮೀನುಗಳ ಉತ್ಪನ್ನ ಇವೇ ಮೊದಲಾದುವುಗಳಲ್ಲಿ ಬಳಕೆಯಲ್ಲಿದೆ.

ನಿಷೇಧಿತ ಬಣ್ಣಗಳು

ಇಂಗ್ಲೆಂಡಿನ ಆರೋಗ್ಯ ಮಂತ್ರಿ ಶಾಖೆಯ ೧೯೨೫ನೇ ಇಸವಿಯ ಸಾರ್ವಜನಿಕ ಆರೋಗ್ಯ (ಆಹಾರದಲ್ಲಿ ಸಂರಕ್ಷಕಗಳು ಇತ್ಯಾದಿ) ಕಾಯಿದೆ ಭಾಗ ೨ರ ಪ್ರಕಾರ (೧೯೨೬ ಮತ್ತು ೧೯೨೭ರ ತಿದ್ದುಪಡಿಗಳೊಂದಿಗೆ, ಈ ಮುಂದೆ ನಮೂದಿಸಿದ ಬಣ್ಣದ ವಸ್ತುಗಳನ್ನು ಆಹಾರ ಪದಾರ್ಥಗಳಿಗೆ ಸೇರಿಸಬಾರದು :

. ಲೋಹ : ಈ ಮುಂದೆ ಕಾಣಿಸಿದ ಯಾವುದೇ ಲೋಹದ ಸಂಯುಕ್ತ ವಸ್ತುಗಳು: ಎಂಟಿಮನಿ, ಆರ್ಸೆನಿಕ್, ಕ್ಯಾಡ್‌ಮಿಯಂ, ಕ್ರೋಮಿಯಂ, ತಾಮ್ರ, ಪಾದರಸ, ಸೀಸ, ಸತುವು.

ಸಂಖ್ಯೆ

ಬಣ್ಣದ ಹೆಸರು

ಉಪಯೋಗಿಸುವ ಹಣ್ಣು ಮತ್ತು ತರಕಾರಿಗಳ ಉತ್ಪನ್ನಗಳು

೧. ನ್ಯಾಫ್ತಾಲ್ ಹಳದಿ FYS
೨. ಟಾರ್ಟ್ರಿಜೈನ್ NNS ನಿಂಬೆ, ಜೆಲ್ಲಿ, ನಿಂಬೆರಸ ಕಾರ್ಡಿಯಲ್
೩. ಮೊಟ್ಟೆ ಹಳದಿ N
೪. ಮೊಟ್ಟೆ ಹಳದಿ A
೫. ಸನ್‌ಸೆಟ್ ಹಳದಿ FCF ಏಪ್ರಿಕಾಟ್ ಜಾಮ್, ಕಿತ್ತಳೆ ಸ್ಕ್ವಾಷ್
೬. ಕಿತ್ತಳೆ AG ಕಿತ್ತಳೆ ಜೆಲ್ಲಿ, ಕಿತ್ತಳೆ ಸ್ಕ್ವಾಷ್
೭. ಕಿತ್ತಳೆ INS
೮. ಪಾನ್ಸಿಯ RNS ಡಬ್ಬಿಯಲ್ಲಿ ಸಂಸ್ಕರಿಸಿದ ಸ್ಟ್ರಾಬೆರ್ರಿ, ಕೆಂಪು ಕ್ಯೂರೆಂಟ್, ಚೆರ್ರಿ, ಸ್ಟ್ರಾಬೆರ್ರಿ, ಜಾಮ್ ಮತ್ತು ಜೆಲ್ಲಿ, ಕೆಂಪು ದ್ವೀಪ ದ್ರಾಕ್ಷಿ ಜಾಮ್
೯. ರಾಸ್ಟ್ ಬೆರ್ರಿ A ಡಬ್ಬಿಯಲ್ಲಿ ಸಂಸ್ಕರಿಸಿದ ರಾ‌ಸ್ಪ್‌ಬೆರ್ರಿ, ರಾಸ್ಪ್‌ಬೆರ್ರಿ ಜಾಮ್ ಮತ್ತು ಜೆಲ್ಲಿ, ರಾಸ್ಪ್‌ರ್ರಿ ಸಿರಪ್
೧೦. ಕಾರ್‌ಮೈಸೈನ್ WNS ರಾಸ್ಪ್‌ಬೆರ್ರಿ ಜೆಲ್ಲಿ
೧೧. ಅಮರಾಂತ್ ANS
೧೨. ಅಮರಾಂತ್ YS
೧೩. ಜರಾನೈನ್ ೨ GNS ಕಪ್ಪು ಕ್ಯೂರೆಂಟಿನ ಜಾಮ್
೧೪. ರೋಸ್ BS
೧೫. ಕಂದುಬಣ್ಣ OHNS
೧೬. ಕ್ಯಾರಮೆಲ್ W ವಿನಿಗರ್ ಸಾಸ್
೧೭. ಚಾಕಲೇಟ್ NS ಚಾಕಲೇಟ್ ಸಿರಪ್
೧೮. ಚಾಕಲೇಟ್ M ಚಾಕಲೇಟ್ ಸಿರಪ್
೧೯. ಇಂಡಿಗೊಕ್ಯಾರಮೈನ್ XNS
೨೦. ನೀಲಿ EGS
೨೧. ಹಸುರು SFS
೨೨. ಕಪ್ಪು ಕ್ಯೂರೆಂಟ್ A ಡಬ್ಬಿಯಲ್ಲಿ ಸಂಸ್ಕರಿಸಿದ ಕಪ್ಪು ಕ್ಯುರೆಂಟ್ ಕಪ್ಪುಕ್ಯುರೆಂಟ್‌ನ ಜಾಮ್ ಮತ್ತು ಜೆಲ್ಲಿ
೨೩. ಎರೆತ್ರೋಸಿನ್ AS ಡಬ್ಬಿಯಲ್ಲಿ ಸಂಸ್ಕರಿಸಿದ ಚೆರ್ರಿಗಳು ಮತ್ತು ವಿಕ್ಟೋರಿಯಾ ದ್ವೀಪದ್ರಾಕ್ಷಿಗಳು
೨೪. ಬಟಾಣಿ ಹಸುರು H ಆಗತಾನೆ ಕಿತ್ತ ಡಬ್ಬಿಯಲ್ಲಿ ಸಂಸ್ಕರಿಸಿದ ಮತ್ತು ಸಂಸ್ಕರಿಸಿದ ಬಟಾಣಿ
೨೫. ಕೆಂಪು BR ಡಬ್ಬಿಯಲ್ಲಿ ಸಂಸ್ಕರಿಸಿದ ಬೀಟ್ ಗೆಡ್ಡೆರ್ರಿ
೨೬. ಗ್ರೀನ್‌ಗಾಜ್ A ಗ್ರೀನ್‌ಗಾಜ್ ಜೆಲ್ಲಿ

 

. ತರಕಾರಿಯ ಬಣ್ಣ ಕೊಡುವ ವಸ್ತು : ಗೆಂಬೋಜ್

. ಟಾರೆಣ್ಣೆ ಬಣ್ಣಗಳು

ಹೆಸರು ಪರ್ಯಾಯ ಪದ
ಪಿಕ್ರಿಕ್ ಆಮ್ಲ ಕಾರ್ಬೆಜೋಟಿಕ್ ಆಮ್ಲ
ವಿಕ್ಟೋರಿಯಾ ಹಳದಿ ಕುಂಕುಮ ಕೇಸರಿಯ ಬದಲು ಡೈನೈಟ್ರೊಕಿಸಾಲ್
ಮೆಂಚೆಸ್ಟರ್ ಹಳದಿ ನ್ಯಾಫ್ತಾಲ್ ಹಳದಿ, ಮಾರಶಿಯಾಸ್ ಹಳದಿ
ಆರೆಂಟಿಯಾ ಇಂಪಿರಿಯಲ್ ಹಳದಿ
ಆರಿನ್ ರೊಸೊಲಿಕ್ ಆಮ್ಲ, ಹಳದಿ ಕೊರಾಲಿನ್

 

ನಮ್ಮ ಕೇಂದ್ರ ಸರಕಾರದ ೧೯೫೫ನೆಯ ಹಣ್ಣಿನ ಉತ್ಪನ್ನಗಳ ಆಜ್ಞೆಯ ಪರಿಷ್ಕೃತ ನಮೂದನೆಯ ಪ್ರಕಾರ ಹಣ್ಣು ಮತ್ತು ತರಕಾರಿಯ ಉತ್ಪನ್ನಗಳಲ್ಲಿ ಕೇವಲ ಕೆಲವು ಆಹಾರದ ಬಣ್ಣಗಳನ್ನು ಮಾತ್ರ ಸೇರಿಸಲು ಅನುಮತಿ ನೀಡಿರುತ್ತಾರೆ.

ನಿಷೇಧಿತ ಬಣ್ಣಗಳನ್ನು ಕಂಡುಹಿಡಿಯುವುದು : ಕಾಕ್ಸ್‌ರ ಹೇಳಿಕೆ ಪ್ರಕಾರ, ನಿಷೇಧಿತ ಬಣ್ಣಗಳನ್ನು ಪತ್ತೆಹಚ್ಚುವ ಸಾಮಾನ್ಯ ಕ್ರಮ ಈ ರೀತಿ ಇದೆ : ಸಾಧಾರಣ ೧೦೦ ಮಿ.ಲೀ.ನಷ್ಟು ಆಹಾರದ ದ್ರವ ಅಥವಾ ಆಹಾರವನ್ನೊಳಗೊಂಡಿರುವ ನೀರಿನ ಮಿಶ್ರಣವನ್ನು ತೆಗೆದುಕೊಳ್ಳಬೇಕು. ಇದಕ್ಕೆ ೧ ಮಿ.ಲೀ. ಹೈಡ್ರೊಕ್ಲೋರಿಕ್ ಆಮ್ಲ ಸೇರಿಸಿ ಆಮ್ಲೀಕರಿಸಬೇಕು. ಅನಂತರ ಇದರಲ್ಲಿ ಉಣ್ಣೆಬಟ್ಟೆಯ ತುಂಡನ್ನು ೫ ನಿಮಿಷ ಕಾಲ ಕುದಿಸಬೇಕು. ಆಗ ಉಣ್ಣೆಗೆ ಬಣ್ಣ ಬರುತ್ತದೆ. ಅದನ್ನು ತೆಗೆದು ತಣ್ಣೀರಿನಲ್ಲಿ ಅದ್ದಿ ಶೇಕಡಾ ೨ ರ ಅಮೋನಿಯಾದಲ್ಲಿ ಕೆಲವು ನಿಮಿಷ ಇಡಬೇಕು. ಆಗ ಉಣ್ಣೆಯಿಂದ ಬಣ್ಣ ಬೇರ್ಪಡುತ್ತದೆ. ಈ ಉಣ್ಣೆಯನ್ನು ತೆಗೆದು ಇನ್ನೊಂದು ಹೊಸ ಉಣ್ಣೆಯ ತುಂಡನ್ನು ಹಾಕಿ ಈ ದ್ರಾವಣಕ್ಕೆ ಆಮ್ಲವನ್ನು ಸೇರಿಸಿ ಕುದಿಸಬೇಕು. ಇದರಿಂದ ಹೊಸ ಉಣ್ಣೆಗೆ ಬಣ್ಣ ಬರುತ್ತದೆ. ಹಣ್ಣಿನರಸ ಮತ್ತು ಜಾಮ್‌ನಲ್ಲಾದರೆ ಇದೇ ರೀತಿ ಇನ್ನೊಂದು ಬಾರಿ ಉಣ್ಣೆಗೆ ಬಣ್ಣ ಬದಲಾಯಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಅನಂತರ ಉಣ್ಣೆಯಲ್ಲಿಯ ಬಣ್ಣವನ್ನು ಗೊತ್ತುಮಾಡಬೇಕು. ನಿಕೋಲ್ಸರು ಇದಕ್ಕೆ ಒಂದು ವ್ಯಾಪಕ ವಿಧಾನವನ್ನು ಸಿದ್ಧಪಡಿಸಿದ್ದಾರೆ, ಈ ಬಣ್ಣಗಳ ಪತ್ತೆಹಚ್ಚಲು ಈಗ ವರ್ಣಮುದ್ರಕ ವಿಧಾನಗಳು ಬಳಕೆಯಲ್ಲಿವೆ.

ಸ್ಥಳದಲ್ಲೇ ಪರೀಕ್ಷಿಸುವುದು : ಬಣ್ಣ ಪಡೆದ ಉಣ್ಣೆಯನ್ನು ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ, ಸಲ್ಫ್ಯೂರಿಕ್ ಆಮ್ಲ, ಶೇಕಡಾ ೧೦ ರ ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಪ್ರಬಲ ಅಮೋನಿಯಾದಲ್ಲಿ ಪರೀಕ್ಷಿಸಿ ಬಣ್ಣದಲ್ಲಾಗುವ ಬದಲಾವಣೆಯನ್ನು ನೋಡಬೇಕು. ಈ ಮುಂದೆ ಕೊಟ್ಟ ಪಟ್ಟಿಯಿಂದ ಬಣ್ಣಗಳ ಪತ್ತೆ ಹಚ್ಚಬಹುದು. ಒಂದೇ ಬಣ್ಣವಿದ್ದರೆ ಪತ್ತೆ ಹಚ್ಚುವುದು ಸ್ವಲ್ಪಮಟ್ಟಿಗೆ ಸುಲಭ. ಆದರೆ ಆಹಾರ ಪದಾರ್ಥಕ್ಕೆ ಒಂದಕ್ಕಿಂತ ಹೆಚ್ಚು ಬಣ್ಣ ಸೇರಿಸಿದಾಗ ಇದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಇಂಥ ಸಂದರ್ಭಗಳಲ್ಲಿ ಗೊತ್ತಾದ ಬಣ್ಣಗಳಿಂದ ಈ ಪರೀಕ್ಷೆಗಳನ್ನು ಪುನರಾವರ್ತಿಸಿ ದೃಢಪಡಿಸಿಕೊಳ್ಳಬೇಕು.

ಬಣ್ಣಗಳ ಆಯ್ಕೆ : ಬಣ್ಣಗಳನ್ನು ಆಯ್ದುಕೊಳ್ಳುವಾಗ ಹೆಚ್ಚು ಕರಗುವಂಥವುಗಳನ್ನು ನೋಡಿ ಆರಿಸಬೇಕು. ಇದರಿಂದ ಹೆಚ್ಚು ಸಾಂದ್ರತೆಯ ದ್ರಾವಣವನ್ನು ಪಡೆಯಲು ಸಾಧ್ಯ. ಕ್ಷಾರೀಯ ಬಣ್ಣಗಳಿಗಿಂತ ಆಮ್ಲೀಯ ಬಣ್ಣಗಳು ದ್ರವರೂಪದಲ್ಲಿ ಹೆಚ್ಚು ಸ್ಥಿರವಾಗಿ ನಿಲ್ಲುತ್ತವೆ. ಪದಾರ್ಥಗಳಿಗೆ ಬಣ್ಣ ಕೊಟ್ಟಮೇಲೆ ಮಾಸುವ ಮತ್ತು ಛಾಯೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿರುವುದರಿಂದ ಪದಾರ್ಥಕ್ಕೆ ಸರಿಯಾಗಿ ಹೊಂದವಂಥ ಬಣ್ಣವನ್ನು ಆರಿಸಿಕೊಡಬೇಕು. ತೀವ್ರವಾದ ಸೂರ್ಯರಶ್ಮಿ, ತವರ ಮತ್ತು ಸತುವಿನಂಥ ಲೋಹಗಳ ಉತ್ಕರ್ಷಣ ಮತ್ತು ಅಪಕರ್ಷಣ, ಸೂಕ್ಷ್ಮಜೀವಿಗಳ ಚಟುವಟಿಕೆ, ಇವೇ ಮೊದಲಾದವುಗಳು ಬಣ್ಣ ಕೆಡಿಸಲು ಕಾರಣವಾಗುತ್ತವೆ. ತವರದ ಸಂಪರ್ಕದಲ್ಲಿ ಎಜೋ ಜಾತಿಯ ಬಣ್ಣಗಳಾದ ಅಮರಾಂತ್, ಪಾನ್ಸಿಯ, ಸನ್‌ಸೆಟ್ ಹಳದಿ ಮುಂತಾದವುಗಳು ಸುಲಭವಾಗಿ ಮಾಸಿಹೋಗುತ್ತವೆ. ಜ್ರೈಫಿನೈಲ್ ಮೀಥೈನ್‌ನ ಬಣ್ಣಗಳಾದ ಗಾಢಹಸುರು, ತಿಳಿಹಸುರು ಇತ್ಯಾದಿಗಳು ತವರದ ಪ್ರಭಾವಕ್ಕೆ ಒಳಗಾಗುವುದಿಲ್ಲ. ಹಣ್ಣುಗಳ ಸ್ಕ್ವಾಷ್‌ಗಳಿಗೆ ಎಜೊ ಬಣ್ಣಗಳನ್ನು ಸೇರಿಸಿದಾಗ ಸಂರಕ್ಷಕವಾಗಿ ಉಪಯೋಗಿಸುವ ಗಂಧಕದ ಡೈ ಆಕ್ಸೈಡ್ ಬಣ್ಣದ ಮೇಲೆ ಯಾವುದೇ ಪರಿಣಾಮವನ್ನು ಉಂಟುಮಾಡುವುದಿಲ್ಲ; ಪಾನ್ಸಿಯ ೨ R ಮತ್ತು ಎರಿತ್ರೋಸಿನ್‌ಗಳು ಕೂಡ ಗಂಧಕದ ಡೈ ಆಕ್ಸೈಡ್‌ನೊಡನೆ ಸ್ಥಿರವಾಗಿ ನಿಲ್ಲುತ್ತವೆ. ಕಿತ್ತಳೆ ಸ್ಕ್ವಾಷ್‌ಗೆ ಸನ್‌ಸೆಟ್ ಹಳದಿ ಜೊತೆಗೆ ಟಾರ್ಟ್ರಜೈನ್ ಪಾನ್ಸಿಯ ಮತ್ತು ಕಿತ್ತಳೆ ಬಣ್ಣಗಳ ಮಿಶ್ರಣವನ್ನು ಸೇರಿಸಿ ಹೆಚ್ಚು ಕಾಲ ದಾಸ್ತಾನಿಟ್ಟರೆ ಮಾಸಿಹೋಗುತ್ತದೆ. ಬಣ್ಣ ಕೊಟ್ಟ ವಸ್ತುಗಳನ್ನು ಹೆಚ್ಚು ಕಾಲ ಬಿಸಿಮಾಡಿದರೆ ಬಣ್ಣ ಕೆಡಬಹುದು. ಈ ದೃಷ್ಟಿಯಿಂದ ಪದಾರ್ಥಗಳನ್ನು ಕುದಿಸಿ ಅಂತ್ಯದಲ್ಲಿ ಬಣ್ಣ ಸೇರಿಸುವುದು ಸೂಕ್ತವಾದುದು. ಆಹಾರಕ್ಕೆ ಬೆರಕೆ ಮಾಡುವ ಕೃತಿಮ ಬಣ್ಣಗಳ ಮೇಲೆ ಇರುವ ಕಾನೂನು ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಪರದೇಶಕ್ಕೆ ರಫ್ತು ಮಾಡಲು ಹಣ್ಣಿನ ಉತ್ಪನ್ನಗಳನ್ನು ತಯಾರಿಸುವಾಗ ಆ ದೇಶದಲ್ಲಿ ಯಾವ ಬಣ್ಣಗಳಿಗೆ ಅನುಮತಿ ನೀಡಿದ್ದಾರೆಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

ಬಣ್ಣದ ದ್ರಾವಣಗಳ ತಯಾರಿಕೆ : ಸಾಮಾನ್ಯವಾಗಿ ಎಲ್ಲ ಬಣ್ಣಗಳು ಪುಡಿಯ ರೂಪದಲ್ಲಿ ಸಿಗುತ್ತವೆ. ಆದರೆ ಬಳಕೆದಾರರು ತಕ್ಷಣ ಉಪಯೋಗಿಸಬೇಕಾದರೆ ದ್ರಾವಣ ರೂಪದಲ್ಲಿಯೂ ಪಡೆಯಬಹುದು. ಬಣ್ಣದ ಪುಡಿಯನ್ನು ತಣ್ಣೀರಿನಲ್ಲಿ ಬೆರೆಸಿ ಗಂಜಿಯಂತೆ ಮಾಡಬೇಕು. ಅನಂತರ ಅಗತ್ಯವಿದ್ದಷ್ಟು ಪ್ರಮಾಣವನ್ನು ಕುದಿಯಲು ಸಮೀಪಿಸಿದ ನೀರಿಗೆ ಬೆರೆಸಿ, ಎಡೆಬಿಡದೆ ಕದಡುತ್ತ ಇರಬೇಕು. ಸರಿಯಾಗಿ ಬೆರಕೆಯಾದ ಈ ಮಿಶ್ರಣವನ್ನು ತಣಿಸಬೇಕು. ತಳದಲ್ಲಿ ತಂಗಿದ ಮಡ್ಡಿಯ ಭಾಗವನ್ನು ಶೋಧಿಸಿ ಬೇರ್ಪಡಿಸಬೇಕು. ಬಣ್ಣದ ದ್ರಾವಣದ ಸಾಂದ್ರತೆ ಅಧಿಕವಾದರೆ ಧಾರಕದ ತಳದಲ್ಲಿ ಒತ್ತರಿಸಲ್ಪಡುತ್ತದೆ. ಇದರಿಂದ ದ್ರಾವಣದ ಮೇಲ್ಭಾಗದ ಬಣ್ಣದ ತೀವ್ರತೆ ಕಡಮೆಯಾಗುತ್ತದೆ. ಕಾರ್ಖಾನೆಗಳಲ್ಲಿ ತಯಾರಿಸಿದ ಪದಾರ್ಥಗಳಲ್ಲಿ ಆಗಾಗ್ಗೆ ಬಣ್ಣದ ವೈವಿಧ್ಯತೆ ಕಾಣಿಸಿಕೊಳ್ಳಲು ಇದೇ ಕಾರಣವಾಗಿರುತ್ತದೆ. ಈ ದೃಷ್ಟಿಯಿಂದ ಬಣ್ಣ ಸೇರಿಸುವಾಗ ಹೆಚ್ಚು ಜಾಗರೂಕತೆ ವಹಿಸಬೇಕಾಗುತ್ತದೆ. ದ್ರಾವಣವನ್ನು ಸಾಂದ್ರೀಕರಿಸಲು ಗ್ಲಿಸರೀನ್ ಬಳಸಬಹುದು. ಇದನ್ನು ಶೇಕಡಾ ೧೦ ರಷ್ಟು ಉಪಯೋಗಿಸಿದರೆ ದ್ರಾವಣ ಮಡ್ಡಯಂತಾಗುವುದು ಬಹುಮಟ್ಟಿಗೆ ಕಟಮೆಯಾಗುತ್ತದೆ. ಐಸೊಪ್ರೊಪೈಲ್ ಆಲ್ಕೋಹಾಲ್ ಬೆರೆಸಿದರೆ ಬಣ್ಣದ ಪುಡಿಯು ಪಕ್ಕನೆ ಕರಗುತ್ತದೆ; ಬಣ್ಣದ ದ್ರಾವಣ ತಯಾರಿಸಿದ ಮೇಲೆ ಅದನ್ನು ಸಂಗ್ರಹಿಸಿಡುವಾಗ ಕೆಡದಂತೆ ಜಾಗರೂಕತೆ ವಹಿಸಬೇಕು. ಇದನ್ನು ಬಣ್ಣದ ದ್ರಾವಣದ ಶೇಕಡಾ ೧೦ ರಷ್ಟು ಮದ್ಯಸಾರವನ್ನು ಸೇರಿಸಿ ನಿಯಂತ್ರಿಸಬಹುದು. ಗ್ಲಿಸರೀನನ್ನು ಸ್ವಲ್ಪ ಅಧಿಕ ಪ್ರಮಾಣದಲ್ಲಿ ಬೆರೆಸಿದರೆ ಉತ್ತಮ ಸಂರಕ್ಷಕಕಾರಿಯಾಗಬಲ್ಲದು. ಮಾರ್ಗನರ ಹೇಳಿಕೆ ಪ್ರಕಾರ ಶೇಕಡಾ ೨೫ ರಷ್ಟು ಗ್ಲಿಸರೀನನ್ನು ಸೇರಿಸಿದ ದ್ರಾವಣವನ್ನು ಸ್ವಲ್ಪ ಕಾಲ ಸಂರಕ್ಷಿಸಿಡಬಹುದು. ಇದನ್ನೇ ಶೇಕಡಾ ೫೦ಕ್ಕೆ ಹೆಚ್ಚಿಸಿದರೆ ಬಣ್ಣದ ದ್ರಾವಣವನ್ನು ಹೆಚ್ಚು ಸಮಯ ಸಂರಕ್ಷಿಸಬಹುದು. ಸಿಟ್ರಿಕ್ ಮತ್ತು ಟಾರ್‌ಟಾರಿಕ್ ಆಮ್ಲಗಳೂ ಉತ್ತಮ ಸಂರಕ್ಷಕಗಳು. ಒಂದು ಗ್ಯಾಲನ್ ಬಣ್ಣದ ದ್ರಾವಣಕ್ಕೆ ಇದನ್ನು ೨ – ೨.೫ ಔನ್ಸಿನಷ್ಟು ಸೇರಿಸಬಹುದು. ಆದರೆ ಎರಿತ್ರೋಸಿನ್, ಕಿತ್ತಳೆ ೧ ನಸುಹಸುರು, ಗಿಣಿಹಸುರು ಮುಂತಾದ ಬಣ್ಣಗಳಿಗೆ ಈ ಆಮ್ಲಗಳನ್ನು ಸೇರಿಸಬಾರದು. ಇವು

ಬಣ್ಣ ಪದಾರ್ಥ ಪರಿಣಾಮ
ಪಾನ್ಸಿಯ ೨ಆರ್ ಡಬ್ಬಿಯಲ್ಲಿ ಸಂಸ್ಕರಿಸಿದ ಸ್ಟ್ರಾಬೆರ್ರಿ ೨ ಗ್ರಾಮ್/ಗ್ಯಾಲನ್ ಸಕ್ಕರೆ ಪಾಕಕ್ಕೆ
”          ”    ಲೋಗನ್ ಬೆರ್ರಿ ೧        ”             “
”          ”    ರಾಸ್ಟ್ ಬೆರ್ರಿ ½        ”           “
”          ”    ವಿಕ್ಟೋರಿಯಾ
                ವಿಕ್ಟೋರಿಯಾ ದ್ವೀಪ ದ್ರಾಕ್ಷಿ ೦.೫
ಬಟಾಣಿ ಹಸುರು ಡಬ್ಬಿಯಲ್ಲಿ ಸಂಸ್ಕರಿಸಿದ ಬಟಾಣಿ ೧೦ ಘ.ಸೆ.ಮೀ. / ಗ್ಯಾಲನ್ ಉಪ್ಪು
ಬಣ್ಣದ ದ್ರಾವಣಕ್ಕೆ
ಶೇಕಡಾ ೫ ರ
ದ್ರಾವಣ ”   ”  ಹಸುರು ಬೀನ್ಸ್ ೭ – ೮    ”         ”    “
”    ”  ಒಣ ಬಟಾಣಿ ೭ – ೮    ”         ”    “
ಸನ್‌ಸೆಟ್ ಹಳದಿ ಕಿತ್ತಳೆ ಸ್ಕ್ವಾಷ್ ೨.೫ – ೩ ಗ್ರಾಮ್ / ೧೦೦ ಪೌಂಡ್ ಸ್ಕ್ವಾಷ್‌ಗೆ
ಸುಪ್ರಾರೋಜ್
ಬಿಎಸ್ ೨೦
ಭಾಗಗಳು ಟೊಮೆಟೊ ೦.೮೫ ಗ್ರಾಮ್ / ೧೦೦ ಪೌಂ.
ಟಾರ್ಟ್ರಜೈನ್
ಹಳದಿ ೨೦
ಭಾಗಗಳು ಟೊಮೆಟೊ ರಸ ೦.೯೦ ಗ್ರಾಮ್ / ೧೦೦ ಪೌಂ.

ಬಣ್ಣದ ದ್ರಾವಣವನ್ನು ಪ್ರಕ್ಷೇಪಿಸುತ್ತವೆ. ಶೇಕಡಾ ೦.೧ ರಷ್ಟು ಸೋಡಿಯಂ ಬೆಂಜೊವೇಟ್‌ನ್ನು ಸೇರಿಸಿಯೂ ಬಣ್ಣದ ದ್ರಾವಣವನ್ನು ಸಂರಕ್ಷಿಸಬಹುದು. ಇದರ ಪರಿಮಾಣವು ಕಾನೂನಿನ ಪ್ರಕಾರ ನಿರ್ದಿಷ್ಟಪಡಿಸಿದ ಮಿತಿಯನ್ನು ಮೀರಬಾರದು.

ಬಣ್ಣದ ದ್ರಾವಣವನ್ನು ಕತ್ತಲಾದ, ತಂಪಾದ, ಒಣ ಪ್ರದೇಶದಲ್ಲಿ ದಾಸ್ತಾನಿಡಬೇಕು. ಅಗತ್ಯವಿದ್ದಷ್ಟು ದ್ರಾವಣವನ್ನು ಹೊರತೆಗೆದು ಉಪಯೋಗಿಸಬೇಕು. ಈ ಬಣ್ಣಗಳಿಂದ ಉತ್ತಮ ಫಲಿತಾಂಶ ಪಡೆಯಲು ಕೇವಲ ಅಲ್ಪ ಪ್ರಮಾಣದಲ್ಲಿ ಸೇರಿಸಿದರೂ ಸಾಕಾಗುತ್ತದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ಈ ಮುಂದೆ ಕೊಟ್ಟಿದೆ :

ದಾಸ್, ಸಿದ್ಧಪ್ಪ ಮತ್ತು ಗಿರಿಧಾರಿಲಾಲ್‌ರವರು ಕಿತ್ತಳೆ ಸ್ಕ್ವಾಷ್‌ಗೆ ಯೋಗ್ಯ ಬಣ್ಣವನ್ನು ನಿರ್ಣಯಿಸಲು ಅನೇಕ ಬಣ್ಣಗಳನ್ನು ಪ್ರತ್ಯೇಕವಾಗಿ ಮತ್ತು ಜೊತೆಯಾಗಿ ಬೆರೆಸಿ ಸಂಶೋಧನೆ ನಡೆಸಿದ್ದಾರೆ. ಇದಲ್ಲದೆ ಇದನ್ನು ವಿವಿಧ ಪರಿಸ್ಥಿತಿಯಲ್ಲಿ ತಯಾರಿಸಿದಾಗ ಮತ್ತು ದಾಸ್ತಾನಿಡುವಾಗ ಬಣ್ಣದ ಸ್ಥಿರತೆಯ ಮೇಲೆ ಆಗುವ ಪರಿಣಾಮವನ್ನು ಕುರಿತು ಸಾಕಷ್ಟು ಅನ್ವೇಷಣೆ ನಡೆಸಿದ್ದಾರೆ. ಇದರಿಂದ ಕಿತ್ತಳೆ ಸ್ಕ್ವಾಷ್‌ಗೆ ಯೋಗ್ಯವಾದ ಬಣ್ಣಗಳ ಸಂಯೋಗವನ್ನು ನಿರ್ಧರಿಸಲು ಸಾಧ್ಯವಾಯಿತು.

ಬಣ್ಣ ಬೆರೆಸಿದ ಆಹಾರ ಪದಾರ್ಥಗಳು ಆಕರ್ಷಕವಾಗಿ ಕಾಣುವುದು ಸಹಜ. ಆದರೆ ಇವುಗಳ ಉಪಯೋಗವನ್ನು ಆದಷ್ಟು ಮಟ್ಟಿಗೆ ಕಡಮೆ ಮಾಡುವುದೇ ಒಳ್ಳೆಯದು. ಈ ಬಣ್ಣಗಳನ್ನು ಅನೇಕ ವೇಳೆ ಪದಾರ್ಥದ ನೈಜವಾದ ಕೊರತೆಯನ್ನು ಮರೆಮಾಚಲು ದುರುಪಯೋಗಪಡಿಸಲಾಗುತ್ತದೆ. ಅಂತೂ ಮುಂದೆ ಸಮಯಾಂತರದಲ್ಲಿಯಾದರೂ ಬಳಕೆದಾರರು ಆಹಾರ ಪದಾರ್ಥಗಳಲ್ಲಿರುವ ನೈಜವಾದ ಬಣ್ಣದ ಮಹತ್ವವನ್ನು ತಿಳಿಯುವರೆಂದು ಭಾವಿಸೋಣವೇ?