ಉಳ್ಳಿಯ ವಲುಕೆ ಓದರೊ ಕೊಂತಿ
ಉಳ್ಳಿಯ ಕುಸುಮೆ ಉಗುರಲ್ಲಿ
ಅಕ್ಕಯ್ಯಾs ಪಂಜರುದಾs ರವಕಯ್ಯ
ಗಿಣಿಯೇ ನೋಡ ಗಿಣಿಯೆ

ಉಳ್ಳಿಯ ಕುಸುಮೆ ಉಗರಲ್ಲೆತಿಕೊಂಡು
ನಾಡಿನ ಮೇಲೆ ಬಿಡತಿದರೊ
ಅಕ್ಕಯ್ಯಾs ಪಂಜರುದಾs ರವಕಯ್ಯ
ಗಿಣಿಯೇ ನೋಡ ಗಿಣಿಯೆ

ತಗರಿಯ ವಲುಕೆ ಓದರೊ ಕೊಂತಿ
ತಗರಿಯ ಕುಸುಮೆ ಉಗುರಲ್ಲಿ
ಅಕ್ಕಯ್ಯಾs ಪಂಜರುದಾs ರವಕಯ್ಯ
ಗಿಣಿಯೇ ನೋಡ ಗಿಣಿಯೆ

ತಗರಿಯ ಕುಸುಮೆ ಉಗರಲ್ಲೆತಿಕೊಂಡು
ನಾಡಿನ ಮೇಲೆ ಬಿಡತಿದರೊ
ಅಕ್ಕಯ್ಯಾs ಪಂಜುರುದಾs ರವಕಯ್ಯ
ಗಿಣಿಯೇ ನೋಡ ಗಿಣಿಯೆ

ಬಿಡುತಾ ಬಿಡುತಾಲೀ ಮನೆತಂಕ ಬರಹೇಳಿ
ಹಾಕಾ ವಂದೆರಡೂ ಸಣಮಂಚ
ಅಕ್ಕಯ್ಯಾs ಪಂಜರುದಾs ರವಕಯ್ಯ
ಗಿಣಿಯೇ ನೋಡ ಗಿಣಿಯೆ

ಹಾಕಾ ವಂದೆರಡೂ ಸಣಮಂಚುದ್ ಮುಂದುಗಡೆ
ಆಡಾ ವಂದೆರಡೂ ರಾಯುಪಗಡೆ
ಅಕ್ಕಯ್ಯಾs ಪಂಜುರುದಾs ರವಕಯ್ಯ
ಗಿಣಿಯೇ ನೋಡ ಗಿಣಿಯೆ