ದೇವಲೋಕೊಂದರಿಯದವಗೆ ದೇವರ್ಯಾತಕೋ
ಹರನೆ ದೇವರ‍್ಯಾತಕೋ   ಪಲ್ಲ

ಪರಮನ ಇರವನರಿಯದವಗೆ ಪುಣ್ಯ ಯಾತಕೋ
ಹರನೆ ಪುಣ್ಯ ಯಾತಕೋ  ೧

ಮಾತು ಕೇಳದೆ ಮರತು ನಿಲ್ಲುವ ಮಗ ಇನ್ನ್ಯಾತಕೋ
ಹರನೆ ಮಗನಿನ್ನ್ಯಾತಕೋ ೨

ತಾಗಿ ಬಾಗಿ ನಡಿಯದಂಥ ಸೊಸಿ ಇನ್ನ್ಯಾತಕೋ
ಹರನೆ ಸೊಸಿ ಇನ್ನ್ಯಾತಕೋ         ೩

ಬಂಗಾರ ಬಾವಲುಂಗರುಡದಾರ ಮಂಗ್ಯಾಗ್ಯಾತಕೋ
ಹರನೆ ತಳೀಗೆ ಯಾತಕೋ          ೪

ಎಲ್ಲವ್ವನ ಹೆಸರ ನೆನಿಯದಿದ್ದ ನಾಲಿಗ್ಯಾತಕೋ
ಹರನೆ ನಾಲಿಗ್ಯಾತಕೋ    ೫

ತಾಯಿ ಸೇವಾ ಮಾಡದಿದ್ದ ಕೈಯಾತಕೋ
ಹರನೆ ಕೈ ಯಾತಕೋ     ೬

ದೇವಿ ದರುಶನ ಮಾಡದಿದ್ದ ಕಣ್ಣು ಯಾತಕೋ
ಹರನೆ ಕಣ್ಣು ಯಾತಕೋ   ೭

ದೇವಲೋಕೊಂದರಿಯದವಗೆ ದೇವರ‍್ಯಾತಕೋ
ಹರನೆ ದೇವರ‍್ಯಾತಕೋ   ೮