ವಂದೊಳ್ಳಕ್ಕೀಗೇsss ಲಕ್ಕ ಮೇಲೂss ತಂಗ್ ಮೇಲೂsss
ಜಂಗಮ್ಮರು ಮೇಲೂsss ಜಗುಳಾಕೇss || ಗೋಕರುಣಾs
ಸೂಳೀರು ಮೇಲೂsss ಕೊಣುತಕೇsss || ||೩೩೨||

ಅಕ್ಕಾs ತಂಗಿ ಕೇಳೂss ವಳುಗಿದ್ದ ನಾದುನಿಗ್ಹೇಳೂsss
ವಾದೀsದರಿಗ್ಹೇಳೂsss ಉಡುಪೀಲಿs || ಗೋಕಣುs
ಸೂಳೀsರಿಗ್ಹೇಳೂsss ಕೊಣುವಲ್ಲೀsss || ನಮ್ಮsನೀs
ಮುದ್ದೂs ಬಾಲಯ್ನಾsss ಮದವಿಗೇsss || ||೩೩೩||

ಒಳ್ಳೊಳ್ಳೆ ಬಬ್ರುದೇವ್ರು ಗ್ರಾಮದಿಂದ ಹೋಗುವಾಗs
ಬೀರಿ ಬೆದ್ದದ್ಯೇsss ಬೆಳಿಯೆಲೆ || ಸೂಳ್ಯರುs
ಕ್ಯಾದುಗಿ ಹೂಗೆಂದು ಹೆಕ್ಕಾsssರುsss || ||೩೩೪||

ಗೇರ್‌ಸೊಪ್ಪೀ ಹೆಣ್ಣೂsss ಜಾರೀ ಬೆದ್ರ ಮಣ್ಣೂs
ಆ ಸೋಳೀs ಹೆಣ್ಣೂsss ಗಟಬೀಯೇsss || ನಮ್ಮೂರಾsss
ಹಾಳೀ ಮೆನ್‌ ಹ್ಯಾಂಗೇsss ತಿರುಗೂವೇsss ?|| ||೩೩೫||

ಬಟ್‌ಕೊಳ್‌ ಸೋಳೀರೀಗೆss ಹೊಟ್ಟೀಲಿ ಕಳ್ಳಿಲ್ಲಾsss
ಬಿಟ್ಟಿ ಬರುವಂದ್ರೂsss ಮನಸಿಲ್ಲಾss || (ಸೆಲ್ಲಾ) ಲಣ್ಣಯ್ಯಗೇs
ಕೊಟ್ಟಿ ಬರುವಂದ್ರೂsss ಹಣವಿಲ್ಲಾsss || ||೩೩೬||

ಬುದ್ದೀ ಬಲ್ಲದರೂss ಕೋಳೀs ಕೊಲ್ಲಲ್‌ ಬೇಡಾsss
ಕೋಳ್ಯೇನಾs ಬಲ್ಲಾsss ಬಡತನಾsss ?|| ಗೋಕಣುದಾss
ಸೋಳ್ಯೇನಾs ಬಲ್ಲಾsss ಸೊಕುದುಕ್ಕಾsss ? || ||೩೩೭||

ಊರ ಮೇನ್ನ ಸೋಳೀsss ಯಾರಿಗು ನದರಿಟ್ಟೀದೇsss ?
ತೇರಿನ ಮಿಳಿ ಹಿಡವಾsss ಚೆಲವಾsಗೇ || (ವಾs) ತಮ್ಮಯ್ಯಗೇs
ದೋರಿದ್ದೀ ಕಣ್ಣಾssss ಜಡವsಳೂsss || ||೩೩೮||

ದೋರಿದ್ದೀ ಕಣ್ಣಾsss ಯೇನಂsದೀss ಜಡವsಳೂss ?
“ದೋರ್‌ ಹಾದೀಯೇನೋsss ನನುಮೇನೇsss ?
“ದೋರಾಗsಲಿಲ್ಲಾsss ದೀರನಾಗಿದ್ದೇನೇsss
ಸಂಜೀ ಕಾಲೀಗೇssss ಬರತೀನೇsss || ||೩೩೯||

ಸಣ್ಣ ಕಣ್ಣಿನೋಳೇs, ಸಮ್ತಿ ಮುಚ್ಚಿಲದsಳೇ,
ನನ್ನs ಕಂಡೀ (ಕಂಡು) ಮೋರೀ ತಿರಗ್ವಳೇ, || ಸುರತ್ನ ಸೋಳೀ
ನನ್ನರು ಮಾಡೀದಾsss ಹಗ್ಯೇನೇsss ? ||೩೪೦||

ತಮ್ಮsನ ಪಂಜೀssಗೇsss ಯಾಲಕ್ಕಿs ಪರಿಮಾsಳs
ಯಾವ್ ಸೂsಳೆ ನೀನ್ನಾsss ತಡದೀತೋss | ಕೇಳೂತನಕಾs
ತಮ್ಮಾsರುಲಾssಗೇsss ನುಡಿದsನೇsss ||೩೪೧||

“ಅಲ್ಲಾs ಕಾಣಕ್ಕss, ಸುಳ್ಳ ಹೇಳಲು ಬೇಡಾs
ಜಾಣರ್ ಹೂಡೀsರೇ ಪಗಡೀಯs || (ಪಗಡೀ) ಮೆತ್ತಿನ ಮೇನೇss
ಯಾಲಕ್ಕಿ ಗಿಡವೇsss ತಡದೀssತೂsss || ||೩೪೨||