ನೀರುಳ್ಳೀಲಿರವಾsss ನೀರುಳ್ಳಿಯೆಲಿ ಚೆಂದಾss
ದೇವsರುs ಚೆಂದಾsss ತಿರುಪsತೀss || ಗೋಯ್ದರಾಯನs
ವಾಲಂsಗss ಚೆಂದಾsss ಗಿರಿ ಮೇನೇsss || ||೩೪೩||

ಹರವಾss ಹಾವೀಗಂಜೇsss ಉರವಾss ಜೋತಿಗಂಜೇss
ಹುಲಿಗಂಜೇss ಹುಲಿಯಾsss ಮರಿಗಂಜೇsss || ಸಿರಸೀಯs
ಸೇವಮ್ಮ, ನಿನಗಂಜಿss ನಡವೇನೇsss||  ||೩೪೪||

ನಾs ವಬ್ಬಳ್ಹುಟ್ಟೀsss ಯಲ್ಲರೀಗ್ ಹಂಗಾದೇsss
ಕಲ್ಲಂಬೂs ಬನವೇsss, ಕಲಿಯಾಗೂsss | ಬಾsಡsದಾss
ಅಮ್ನರ್ ಮನಿ ಬಾಗಲಕೇsss ಕದವಾಗುsss || ||೩೪೫||

ಮಲ್ಲಯ್ಯಲಿರುವದೂssss ಮಲ್ಲೂsಗಿ ಮನುದಲ್ಲೀss
ಮಲ್ಲsಯ್ಯನ ಮಡುದೀsss ಗೌರಮ್ಮss
ಮಲ್ಲಯ್ಯನ ಮಡುದೀss ಗೌರಮ್ಯೆಲ್ಲಿರುವsದೂss ?
ಬೆಲ್ಲsಪತ್ತುರಿಯಾsss ಹೊನುದಲ್ಲೀsss || || ೩೪೬||

ಹೋಯ್ದರಾಯರೂsss ಮಡ್ಡೀss ಕೂಡ್ಯೇನಂದಾsss?
“ಹುಲ್ಲಾss ಮಾರ್ ಹೊಟ್ಟೀsss ಹೊರಕೊಳ್ಳೇsss” ||೩೪೭||

“ಹುಲ್ಲಾ ಮಾರುಕೇsss ಗೊಲ್ಲಾರ್‌ ಹುಡ್‌ ಗ್ಯಲ್ಲಾsss
ಮೇನಿರುವನೆ ನನ್ನಾsss ಮೈದುನೀsss || ಕೇಳಿದ್ರೇsss
“ಹಾಲ್ಲಾss ಮಾರ್ ಹೊಟ್ಟೀsss ಹೊರಕೊಳ್ಳೇsss” ||೩೪೮||

ಸ್ವಾಮೀs ಗೋವಿಂದಾsss ಮಡ್ಡೀss ಕೂಡ್ ಯೇನಂದಾsss ?
“ಹೆಣ್ಣಾss ಮಾರ್ ಉಣ್ಣಾsss ಅಡ ವೀಲೀssss” || ||೩೪೯||

“ಹಣ್ಣಾsss ಮಾರ್ ಉಂಡರೇss ನಿನ್ ಗೊಡುವೇs ನನಗೇನು ?
ಅಣ್ಣಾss ಗೋವಿಂದಾsss ಗಿರಿಮೇನೆsss || (ನ್) ಕುಂತಿ ಕಂಡೀss
ತೂಗೀss ಮಾರನಿಯೇsss ತೊಳಚೀಯಾsss || ||೩೫೦||

“ಸ್ವಾಮೀss ನಾರೈಣಾss ಗಾರೇಳ ಮಂದಿ ಹೆಂಡsರೂsss
ಹ್ಯಾಂಗsವ್ರಾss ಹೊಟ್ಟೀss ಹೊರಿಯಾsಲಿss ? || ತಿರುಮಲೇsss
ಕೇಸಕ್ಕಿಲುಂಬವ್ರೇsss ಗಿರಿಮೇನೇsss” || ||೩೫೧||

“ನಮ್ಮಂsತವರೆಲ್ಲಾsss ಕೆsಸsಕ್ಕಿ ಉಂಬಾರೂss
ಬಡವರಿನ್ಹ್ಯಾಂಗೇsss ಬದಕೂರೂsss || ಗೋವಿಂದಾss
ಬಡವರಿಗೆ ಪಡಿಯಾsss ಯೆಳವಾssನೇsss || ||೩೫೨||

ಮಲ್ಲುಗಿ ಮುಡುದಮ್ಮಾss, ಜಲ್ಲೀsಸೆ ನಮ್ಮೂರಾss
ಚಿನ್ನದ ಕ್ಯಾದುಗೀsss ಮುಡ್ದಮ್ಮಾsss, || ಶಿರುಸಿ ಅಮ್ಮs,
ಸಲುಗಿಸೆ ನಮ್ಮಂತಾsss ಬಡವರsss || ||೩೫೩||