ಎಲ್ಲವ್ವ ತಾಯಿ ನಡೆದಾಳ ಊರಿಗೆ
ಹೋಗಿ ಮಾತಾಡ್ಸಿ ಕಳವೂನು ದಾರಿಗೆ
ಎಲ್ಲವ್ವ ತಾಯಿ ನಡೆದಾಳ ಊರಿಗೆ            ಪಲ್ಲ

ಹಸರ ಬಳಿ ಹಸರ ಕುಬಸ ದೇವಿಗೆ
ಭಸಮ ಭಂಡಾರ ಕುಂಕುಮ ಹಣಿಗೆ           ೧

ಮಂಟಪ ಕಟ್ಟ್ಯಾರ ಚಂದಚಂದ ನಿನಗೆ
ಪ್ಯಾಟಿ ಪ್ಯಾಟೆಲ್ಲ ನಮಿಸ್ಯಾರೆ ದೇವಿಗೆ         ೨

ನಮ್ಮ ಮನೋಹರ ಕಣ್ಣೀರ‍್ತಂದ ದೇವಿಗೆ
ಹೋಗಿ ಮಾತಾಡ್ಸಿ ಕಳವೂನು ದಾರಿಗೆ       ೩

ಎಲ್ಲವ್ವ ತಾಯಿ ಲಕುಮವ್ವ ತಾಯಿ ಜೋಡಿಗೆ
ರೇವಣಸಿದ್ದೇಶ್ವರ ಪಾದ ದೇವಿಗೆ     ೪

ನಮ್ಮ ಬೆಲ್ಲದ ಕೊನ್ನೂರ ಊರಿಗೆ
ಕೆಂಪಯ್ಸ್ವಾಮಿ ಹೋಗಿ ಬರೋ ದಾರಿಗೆ      ೫

ನಮ್ಮ ಹಿರಿಹೊಳೆ ಕೊಣ್ಣುರ ಕವಿಗೆ
ಬಾಲಿಯಮನವ್ವ ಕೈಯ ಮುಗದಾಳ ದಾರಿಗೆ          ೬